ಬಾಲಪ್ರತಿಭೆ, ಕೊಳಲುವಾದಕ, ಹಾಡುಗಾರ ಮಾಸ್ಟರ್ ಯಶಸ್ ಪಿ.ಸುವರ್ಣ ಕಟಪಾಡಿ

ಕುಡಿದ ಮತ್ತಿನಲ್ಲಿ ಹೊಡೆದು ಸಾಯಿಸಿದ ಕುಡುಕ ಗಂಡ

ಆನೇಕಲ್(ಅ​.26): ಕುಡಿದ ಮತ್ತಿನಲ್ಲಿ ಹೆಂಡತಿಗೆ ಗಂಡನೊಬ್ಬ ಕಪಾಳಕ್ಕೆ ಹೊಡೆದು ಹತ್ಯೆ ಮಾಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬೇಗಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೊಲೆಯಾದವಾರನ್ನು ಗೌರಮ್ಮ(42)ಎಂದು ಗುರುತಿಸಲಾಗಿದೆ. ಕುಮಾರ್(48) ಹೆಂಡತಿಯನ್ನೇ ಕೊಂದ ಪಾಪಿ...

ಶಿವಮೊಗ್ಗ : ಮಳೆಯಿಂದ ಮುರಿದು ಬಿದ್ದ ಬನ್ನಿ ಮಂಟಪ

ಶಿವಮೊಗ್ಗ, (ಅ.26): ಮಳೆಯಿಂದಾಗಿ ನಗರದ ಹಳೇ ಜೈಲಿನ ಬಳಿ ನಿರ್ಮಿಸಲಾಗಿದ್ದ, ದಸರಾ ಉತ್ಸವದ ಬನ್ನಿ ಮಂಟಪ ಕುಸಿದು ಬಿದ್ದಿದೆ. ಸಂಜೆ ವೇಳೆ ಸುರಿದ ಧಾರಾಕಾರ ಮಳೆಯಿಂದಾಗಿ ಬನ್ನಿ ಮಂಟಪ ಕುಸಿದು ಬಿದ್ದಿದೆ. ನವರಾತ್ರಿಯ ಕೊನೆಯ...

ಮಾಜಿ ಶಾಸಕ ಗೋಪಾಲ ಪೂಜಾರಿ ನೇತೃತ್ವ 50ಕ್ಕೂ ಅಧಿಕ ಬಿಜೆಪಿ ಯುವ ಕಾರ್ಯಕರ್ತರು ಕಾಂಗ್ರೆಸ್ ತೆಕ್ಕೆಗೆ

ಕುಂದಾಪುರ : ಬೈಂದೂರು ಕ್ಷೇತ್ರದ ಮಾಜಿ ಶಾಸಕ ಗೋಪಾಲ ಪೂಜಾರಿ ನೇತೃತ್ವದಲ್ಲಿ ಬಿಜೆಪಿಯ ಐವತ್ತು ಕಾರ್ಯಕರ್ತರು ಕಾಂಗ್ರೆಸ್'ಗೆ ಸೇರ್ಪಡೆಗೊಂಡರು.   ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಕಟ್ ಬೆಲ್ತೂರು ನಿವಾಸದಲ್ಲಿ ಕಟ್ ಬೆಲ್ತೂರು, ಹೆಮ್ಮಾಡಿ...

ಶಿವಸೇನೆ ಮುಖಂಡ ರಾಹುಲ್ ಶೆಟ್ಟಿ ಬರ್ಬರ ಹತ್ಯೆ

ಮುಂಬೈ: ಪುಣೆಯ ಬಳಿ ಲೊನವಾಲದ ಶಿವಸೇನೆಯ ಮುಖಂಡ ರಾಹುಲ್ ಶೆಟ್ಟಿಯವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಇವರುಮಾಜಿ ಶಿವಸೇನಾ ಮುಖಂಡ ಉಮೇಶ್ ಶೆಟ್ಟಿಯವರ ಪುತ್ರ ಎಂದು ತಿಳಿದು ಬಂದಿದೆ. ಮೂಲತಃ ಮಂಗಳೂರಿನವರಾದ ರಾಹುಲ್ ಶೆಟ್ಟಿಯನ್ನು...

ಗೋಹತ್ಯಾ‌ ನಿಷೇಧ ಕಾಯಿದೆ; ಅಲಹಾಬಾದ್ ಕೋರ್ಟ್ ಆರೋಪಿಯೊಬ್ಬರಿಗೆ ಜಾಮೀನು ನೀಡಿ ಹೇಳಿದ್ದೇನು?

ಅಲಹಾಬಾದ್: ಉಚ್ಚ ನ್ಯಾಯಾಲಯ ಅಲಹಾಬಾದ್ ಇಂದು ಗೋಹತ್ಯಾ ನಿಷೇಧ ಕಾಯಿದೆ ಪ್ರಕರಣದ ಅಡಿಯಲ್ಲಿ ಬಂಧಿತರಾಗಿದ್ದ ಆರೋಪಿಯೊಬ್ಬರಿಗೆ ಜಾಮೀನು ಮಂಜೂರು ಮಾಡಿ, ಸರಕಾರ ಈ ಕಾಯಿದೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆಯೆಂದು ಎಚ್ಚರಿಸಿದ್ದಾರೆ. ಮಾಡದ ಕೃತ್ಯಕ್ಕೆ...

ಬಾಲ್ಯದಲ್ಲಿ ಹಿರಿಯರ ಪ್ರೇರಣೆ ಮಕ್ಕಳ ಬಾಳಿನ ಆಶಾಕಿರಣವಾಗಿ ಹೊರಹೊಮ್ಮಿ ಅವರ ಆಸಕ್ತಿ ಮತ್ತು ಹವ್ಯಾಸಗಳಿಗೆ ಹುಮ್ಮಸ್ಸು ನೀಡಿ ಭವಿಷ್ಯದ ಚಿಂತನೆಗೆ ಹಾದಿಯಾಗಿ, ಈ ಹಾದಿಯಲ್ಲಿ ಗುರು-ಹಿರಿಯರು ದಾರಿದೀಪಗಳಾಗಿ ಮಕ್ಕಳ ಬಾಳು ಬೆಳಗಿ ಅವರಲ್ಲಿ ಆತ್ಮವಿಶ್ವಾಸ ತುಂಬಬೇಕಾಗಿದೆ.ಕೋವಿಡ್ ಪರಿಣಾಮದಿಂದ ಶಾಲೆ ಪ್ರಾರಂಭವಾಗದೆ ಸಮಯ ಹಾಳು ಮಾಡುತ್ತಿದ್ದಾರೆ. ತಂತ್ರಜ್ಞಾನಕ್ಕೆ ಆಕರ್ಷಿತರಾಗುತ್ತಿದ್ದಾರೆ ಎಂದು ಕೇಳಿ ಬರುತ್ತಿರುವ ಹೆತ್ತವರ ಮಾತುಗಳ ಮಧ್ಯೆ ತಮಗೆ ದೊರೆತ ಸಮಯವನ್ನು ಉತ್ತಮವಾಗಿ ಉಪಯೋಗಿಸುತ್ತಿರುವ ಬಾಲಪ್ರತಿಭೆ ಯಶಸ್ ಪಿ.ಸುವರ್ಣ. ಕೊಳಲು ವಾದನ ಮತ್ತು ಸಂಗೀತವನ್ನು ಎಳೆಯ ವಯಸ್ಸಿನಲ್ಲೇ ಆಸಕ್ತಿಯಿಮದ ಕಲಿತು ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿರುವ ಈ ಪೋರ ಕೊಳಲ ನಿನಾದದೊಂದಿಗೆ ಸಂಗೀತದ ಅಲೆ ಹೊಮ್ಮಿಸಿದ್ದಾನೆ.

ಉಡುಪಿ ಜಿಲ್ಲೆಯಾದ್ಯಂತ ವಿವಿಧ ಕಾರ್ಯಕ್ರಮಗಳಲ್ಲಿ ತನ್ನ ಪ್ರತಿಭೆಯನ್ನು ಮೆರೆದಿರುವ ಯಶಸ್ ಪಿ.ಸುವರ್ಣ ಯೂ ಟ್ಯೂಬ್ ಮೂಲಕ ಸಂಗೀತದ ಜ್ಞಾನವನ್ನು ವೃದ್ಧಿಸುವತ್ತ ಗಮನ ಹರಿಸುತ್ತಿದ್ದಾನೆ. ಕೊರೊನ ಲಾಕ್‍ಡೌನ್ ಅವಧಿಯಲ್ಲಿ ಶಾಲೆಗೆ ರಜೆ ಇರುವುದರಿಂದ ಕೊಳಲು ಮತ್ತು ಸಂಗೀತಾಭ್ಯಾಸವನ್ನು ನಡೆಸುತ್ತಿದ್ದಾನೆ. ಬಾಲ ಕಲಾವಿದನಾಗಿ ಮಿಂಚುತ್ತಿರುವ ಯಶಸ್ ಗಾನ ಪ್ರತಿಭೆಯಾಗಿ ಕೂಡಾ ಗುರುತಿಸಿಕೊಂಡು,ಜಾನಪದ,ಭಕ್ತಿಗೀತೆ,ಭಾವಗೀತೆ,ಚಿತ್ರಗೀತೆಗಳನ್ನು ಅಭ್ಯಸಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಜನಮನ ಗೆದ್ದಿದ್ದಾನೆ.

ರಾಷ್ಟ್ರ ಪ್ರಶಸ್ತಿ ವಿಜೇತ ಚಿತ್ರ ನಿರ್ದೇಶಕ ಪ್ರಕಾಶ ಸುವರ್ಣ ಕಟಪಾಡಿ ಹಾಗೂ ಪ್ರೀತಿ ಪಿ.ಸುವರ್ಣ ದಂಪತಿಯ ಪುತ್ರನಾಗಿರುವ ಯಶಸ್ ಪಿ.ಸುವರ್ಣ ಪ್ರಸ್ತುತ ಕಿನ್ನಿಮೂಲ್ಕಿ ಸಂತ ಮೇರಿ ಆಂಗ್ಲಮಾಧ್ಯಮ ಶಾಲೆಯಲ್ಲಿ 7ನೇ ತರಗಿ ಕಲಿಯುತ್ತಿದ್ದಾನೆ. ಶಾಲೆಯಲ್ಲಿ ಸಂಗೀತದೊಂದಿಗೆ ಛದ್ಮವೇಷ, ನಾಟಕಗಳಲ್ಲಿ ಅಭಿನಯಿಸಿ ಸೈ ಎನಿಸಿಕೊಂಡಿದ್ದಾನೆ. ಪುಟ್ಬಾಲ್, ವಾಲಿಬಾಲ್, ಸ್ಕೇಟಿಂಗ್ ಕ್ರೀಡೆಯಲ್ಲೂ ಆಸಕ್ತಿ ತಳೆದು ಬಹುಮುಖ ಪ್ರತಿಭೆಯಾಗಿ ಮಿಂಚಿದ್ದಾನೆ.

ಯಶಸ್ ಪಿ ಸುವರ್ಣ ಅವರು ಸಂಗೀತಾಭ್ಯಾಸವನ್ನು ಕಟಪಾಡಿಯ ಸಂಗೀತ ಗುರು ತುಳಸೀದಾಸ್ ಹಾಗೂ ಉಡುಪಿ ಹಿರಿಯ ಸಂಗೀತ ನಿರ್ದೇಶಕ ನಾದವೈಭವಂ ವಾಸುದೇವ ಭಟ್ ಅವರಲ್ಲಿ ಅಭ್ಯಸಿರುತ್ತಾನೆ. ಕೊಳಲುವಾದನವನ್ನು ಉಡುಪಿಯ ಮುಕುಂದ ಕೃಪಾ ಸಂಗೀತ ಶಾಲೆಯಲ್ಲಿ ಬಾಲಕೃಷ್ಣ ಅವರಿಂದ ಕಲಿಯುತ್ತಿದ್ದಾನೆ. ಮಾತ್ರವಲ್ಲದೆ ಸ್ವತ: ಹಾಡುಗಾರರಾದ ತಂದೆ ಹಾಗೂ ಯೂಟ್ಯೂಬ್ ಮೂಲಕವೂ ಸಂಗೀತಾಭ್ಯಾಸ ನಡೆಸುತ್ತಿದ್ದಾನೆ. ಸಿನೆಮಾ ಸಂಗೀತ,ಕೊಳಲು ವಾದನ,ಹಾಡುಗಾರಿಕೆಯಲ್ಲಿ ಮಿಂಚಿರುವ ಯಶಸ್ ಅವರು, ಉಡುಪಿ ರಥಬೀದಿ ಸಾರ್ವಜನಿಕ ಗಣೇಶೋತ್ಸವ,ಉಡುಪಿ ಪವರ್ ಪರ್ಬ-2020,ಮಕ್ಕಳ ದಿನಾಚರಣೆ ಪ್ರಯುಕ್ತ ಮಲಬಾರ್ ಗೋಲ್ಡ್ ಅಂಡ್ ಡೈಮಂಡ್ ಕಾರ್ಯಕ್ರಮ,ಮಾರ್ಕೆಟ್ ಫ್ರೆಂಡ್ಸ್ ವೇದಿಕೆ ಪರ್ಯಾಯ ಉತ್ಸವ-2020, ಬಾಲಭವನ ಬಾಲಪ್ರತಿಭಾ ಪ್ರದರ್ಶನ-2020, ಸ್ವಾತಂತ್ರೋತ್ಸವ ಕಾರ್ಯಕ್ರಮ,ಉಡುಪಿ ಶಾಮಿಲಿ ಸಭಾಂಗಣದಲ್ಲಿ ಮಹಿಳಾ ಸಮಾವೇಶ, ದಶಮಾನೋತ್ಸವ ಕಾರ್ಯಕ್ರಮ,ರೋಟರಿ ಕ್ಲಬ್, ಸೈಂಟ್ ಮೇರಿಸ್ ಶಾಲಾ ಸಂಸ್ಕøತಿ ಹಬ್ಬ,ಕಾಪು ಪ್ರೆಸ್ ಕ್ಲಬ್ ಸೇರಿದಂತೆ ವಿವಿದೆಢೆ ಕಾಯಕ್ರಮ ನೀಡಿ ಜನಮೆಚ್ಚುಗೆ ಗಳಿಸಿದ್ದಾನೆ. ಕಳತ್ತೂರು ಸಮಾಜಸೇವಾ ವೇದಿಕೆಯ ವತಿಯಿಂದ ಸನ್ಮಾನವನ್ನು ಸ್ವೀಕರಿಸಿದ್ದಾನೆ.

LEAVE A REPLY

Please enter your comment!
Please enter your name here