ಮುಚ್ಚಲಿದೆ ಯಾಹೂ ಮೇಲ್ – ನೀವೇನು ಮಾಡುತ್ತಿರಾ?

ಕುಡಿದ ಮತ್ತಿನಲ್ಲಿ ಹೊಡೆದು ಸಾಯಿಸಿದ ಕುಡುಕ ಗಂಡ

ಆನೇಕಲ್(ಅ​.26): ಕುಡಿದ ಮತ್ತಿನಲ್ಲಿ ಹೆಂಡತಿಗೆ ಗಂಡನೊಬ್ಬ ಕಪಾಳಕ್ಕೆ ಹೊಡೆದು ಹತ್ಯೆ ಮಾಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬೇಗಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೊಲೆಯಾದವಾರನ್ನು ಗೌರಮ್ಮ(42)ಎಂದು ಗುರುತಿಸಲಾಗಿದೆ. ಕುಮಾರ್(48) ಹೆಂಡತಿಯನ್ನೇ ಕೊಂದ ಪಾಪಿ...

ಶಿವಮೊಗ್ಗ : ಮಳೆಯಿಂದ ಮುರಿದು ಬಿದ್ದ ಬನ್ನಿ ಮಂಟಪ

ಶಿವಮೊಗ್ಗ, (ಅ.26): ಮಳೆಯಿಂದಾಗಿ ನಗರದ ಹಳೇ ಜೈಲಿನ ಬಳಿ ನಿರ್ಮಿಸಲಾಗಿದ್ದ, ದಸರಾ ಉತ್ಸವದ ಬನ್ನಿ ಮಂಟಪ ಕುಸಿದು ಬಿದ್ದಿದೆ. ಸಂಜೆ ವೇಳೆ ಸುರಿದ ಧಾರಾಕಾರ ಮಳೆಯಿಂದಾಗಿ ಬನ್ನಿ ಮಂಟಪ ಕುಸಿದು ಬಿದ್ದಿದೆ. ನವರಾತ್ರಿಯ ಕೊನೆಯ...

ಮಾಜಿ ಶಾಸಕ ಗೋಪಾಲ ಪೂಜಾರಿ ನೇತೃತ್ವ 50ಕ್ಕೂ ಅಧಿಕ ಬಿಜೆಪಿ ಯುವ ಕಾರ್ಯಕರ್ತರು ಕಾಂಗ್ರೆಸ್ ತೆಕ್ಕೆಗೆ

ಕುಂದಾಪುರ : ಬೈಂದೂರು ಕ್ಷೇತ್ರದ ಮಾಜಿ ಶಾಸಕ ಗೋಪಾಲ ಪೂಜಾರಿ ನೇತೃತ್ವದಲ್ಲಿ ಬಿಜೆಪಿಯ ಐವತ್ತು ಕಾರ್ಯಕರ್ತರು ಕಾಂಗ್ರೆಸ್'ಗೆ ಸೇರ್ಪಡೆಗೊಂಡರು.   ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಕಟ್ ಬೆಲ್ತೂರು ನಿವಾಸದಲ್ಲಿ ಕಟ್ ಬೆಲ್ತೂರು, ಹೆಮ್ಮಾಡಿ...

ಶಿವಸೇನೆ ಮುಖಂಡ ರಾಹುಲ್ ಶೆಟ್ಟಿ ಬರ್ಬರ ಹತ್ಯೆ

ಮುಂಬೈ: ಪುಣೆಯ ಬಳಿ ಲೊನವಾಲದ ಶಿವಸೇನೆಯ ಮುಖಂಡ ರಾಹುಲ್ ಶೆಟ್ಟಿಯವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಇವರುಮಾಜಿ ಶಿವಸೇನಾ ಮುಖಂಡ ಉಮೇಶ್ ಶೆಟ್ಟಿಯವರ ಪುತ್ರ ಎಂದು ತಿಳಿದು ಬಂದಿದೆ. ಮೂಲತಃ ಮಂಗಳೂರಿನವರಾದ ರಾಹುಲ್ ಶೆಟ್ಟಿಯನ್ನು...

ಗೋಹತ್ಯಾ‌ ನಿಷೇಧ ಕಾಯಿದೆ; ಅಲಹಾಬಾದ್ ಕೋರ್ಟ್ ಆರೋಪಿಯೊಬ್ಬರಿಗೆ ಜಾಮೀನು ನೀಡಿ ಹೇಳಿದ್ದೇನು?

ಅಲಹಾಬಾದ್: ಉಚ್ಚ ನ್ಯಾಯಾಲಯ ಅಲಹಾಬಾದ್ ಇಂದು ಗೋಹತ್ಯಾ ನಿಷೇಧ ಕಾಯಿದೆ ಪ್ರಕರಣದ ಅಡಿಯಲ್ಲಿ ಬಂಧಿತರಾಗಿದ್ದ ಆರೋಪಿಯೊಬ್ಬರಿಗೆ ಜಾಮೀನು ಮಂಜೂರು ಮಾಡಿ, ಸರಕಾರ ಈ ಕಾಯಿದೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆಯೆಂದು ಎಚ್ಚರಿಸಿದ್ದಾರೆ. ಮಾಡದ ಕೃತ್ಯಕ್ಕೆ...

ನವದೆಹಲಿ: ಈಗ ಇ-ಮೇಲ್​ ಎಂದರೆ ಜಿ-ಮೇಲ್​ ಎನ್ನುವ ಪರಿಸ್ಥಿತಿ ಇದೆ. ಆದರೆ ಇದಕ್ಕೂ ಪೂರ್ವದಲ್ಲಿ ಅಬ್ಬರಿಸಿದ ಮೇಲ್​ಗಳಲ್ಲಿ ಒಂದು ಯಾಹೂ ಡಾಟ್​ ಕಾಮ್​. ಆದರೆ ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಇದೀಗ ಇದು ತೀವ್ರ ನಷ್ಟ ಅನುಭವಿಸುತ್ತಿದೆ. ಈ ಹಿನ್ನೆಲೆಯಲ್ಲಿ ಇದನ್ನು ಇನ್ನೆರಡು ತಿಂಗಳಿನಲ್ಲಿ ಮುಚ್ಚಲಾಗುತ್ತಿದೆ.

ಯಾಹೂ ಡಾಟ್​ ಕಾಮ್​ ಒಡೆತನದಲ್ಲಿ ಇರುವ ವೆರಿಜೋನ್​ ಈ ವಿಷಯವನ್ನು ಪ್ರಕಟಿಸಿದೆ. ಕಳೆದ ಹಲವಾರು ವರ್ಷಗಳಿಂದ ಬಳಕೆದಾರರ ಕೊರತೆಯಿಂದಾಗಿ ನಷ್ಟ ಅನುಭವಿಸುತ್ತಿರುವ ಹಿನ್ನೆಲೆಯಲ್ಲಿ, ಡಿಸೆಂಬರ್ 15ರಿಂದ ಈ ಇ- ಮೇಲ್​ ಸ್ಥಗಿತಗೊಳಿಸಲಾಗುವುದು ಎಂದು ಹೇಳಿದೆ.

2017ರಲ್ಲಿ ವೆರಿಜೋನ್​ ಕಂಪೆನಿ ಯಾಹೂವನ್ನು ಖರೀದಿ ಮಾಡಿತ್ತು. ಹಿಂದೊಮ್ಮೆ ಅತಿದೊಡ್ಡ ಸಂದೇಶ ಬೋರ್ಡ್ ಎಂದೇ ಪ್ರಸಿದ್ಧಿ ಪಡೆದಿದ್ದ ಯಾಹೂ ಇದೀಗ ತನ್ನ ಆಟ ಮುಗಿಸಲಿದೆ.

ಅನೇಕ ಹಳೆಯ ಬಳಕೆದಾರರು ಇದುವರೆಗೂ ಯಾಹೂ ಡಾಟ್​ ಕಾಮ್​ ಬಳಸುತ್ತಿದ್ದಾರೆ. ಅವರು ಬೇರೆ ಯಾವುದೇ ಬೇರೆ ಇ-ಮೇಲ್​ಗೆ ವರ್ಗಾವಣೆಗೊಂಡಿಲ್ಲ. ಅಂಥವರ ವಿಶ್ವಾರ್ಹತೆಯನ್ನು ಕಾಪಾಡಿಕೊಂಡು ಹೋಗುವುದು ನಮ್ಮ ಕರ್ತವ್ಯವಾಗಿತ್ತು. ಆದರೆ ಇದೀಗ ಕಠಿಣ ನಿರ್ಧಾರ ತೆಗೆದುಕೊಳ್ಳಲೇಬೇಕಾಗಿದೆ ಎಂದು ವೆರಿಜೋನ್​ ಕಂಪೆನಿ ಹೇಳಿದೆ. ಇದಾಗಲೇ ತುಂಬಾ ನಷ್ಟ ಅನುಭವಿಸಿದ್ದೇವೆ. ಆದ್ದರಿಂದ ತಮಗೆ ಬೇರೆ ದಾರಿ ಇಲ್ಲ ಎಂದು ಕಂಪೆನಿ ಹೇಳಿಕೊಂಡಿದೆ.

ಇದಾಗಲೇ ನೀವು ಸ್ವೀಕರಿಸಿರುವ ಅಥವಾ ನಿಮ್ಮ ಇನ್​ಬಾಕ್ಸ್​ನಲ್ಲಿ ಬೇರೆಯವರು ಕಳುಹಿಸಿರುವ ಮೆಸೇಜ್​, ವಿಡಿಯೋ, ಫೋಟೋಗಳು ಯಾವುದೇ ಕಾರಣಕ್ಕೂ ಡಿಲೀಟ್​ ಆಗುವುದಿಲ್ಲ. ಅವು ಸುರಕ್ಷಿತವಾಗಿ ಇರುತ್ತವೆ. ಆದರೆ ಡಿಸೆಂಬರ್​ 15ರ ನಂತರ ನೀವು ಮೇಲ್​ ಕಳುಹಿಸುವುದು ಹಾಗೂ ಸ್ವೀಕರಿಸುವುದು ಸಾಧ್ಯವಾಗುವುದಿಲ್ಲ ಎಂದಿದೆ.

ಅಮೆರಿಕನ್ ವೈರ್‌ಲೆಸ್ ಸಂವಹನ ಸೇವಾ ಪೂರೈಕೆದಾರ ವೆರಿಜೋನ್​ ಯಾಹೂನ ಇಂಟರ್​ನೆಟ್​ ವ್ಯವಹಾರವನ್ನು 84.8 ಬಿಲಿಯನ್‌ ಡಾಲರ್​ಗೆ 2017ರಲ್ಲಿ ಖರೀದಿ ಮಾಡಿತ್ತು. 2001ರಲ್ಲಿ ಯಾಹೂ ಇಂಟರ್​ನೆಟ್​ ಸೇವೆಯನ್ನು ಆರಂಭಿಸಿದೆ.

LEAVE A REPLY

Please enter your comment!
Please enter your name here