ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರೇ ಶಾಸಕ ಜ್ಞಾನೇಂದ್ರರವರಿಗೆ ಯಾವ ಶಿಕ್ಷೆಯನ್ನು ನೀಡುತ್ತೀರಾ?

ಕುಡಿದ ಮತ್ತಿನಲ್ಲಿ ಹೊಡೆದು ಸಾಯಿಸಿದ ಕುಡುಕ ಗಂಡ

ಆನೇಕಲ್(ಅ​.26): ಕುಡಿದ ಮತ್ತಿನಲ್ಲಿ ಹೆಂಡತಿಗೆ ಗಂಡನೊಬ್ಬ ಕಪಾಳಕ್ಕೆ ಹೊಡೆದು ಹತ್ಯೆ ಮಾಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬೇಗಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೊಲೆಯಾದವಾರನ್ನು ಗೌರಮ್ಮ(42)ಎಂದು ಗುರುತಿಸಲಾಗಿದೆ. ಕುಮಾರ್(48) ಹೆಂಡತಿಯನ್ನೇ ಕೊಂದ ಪಾಪಿ...

ಶಿವಮೊಗ್ಗ : ಮಳೆಯಿಂದ ಮುರಿದು ಬಿದ್ದ ಬನ್ನಿ ಮಂಟಪ

ಶಿವಮೊಗ್ಗ, (ಅ.26): ಮಳೆಯಿಂದಾಗಿ ನಗರದ ಹಳೇ ಜೈಲಿನ ಬಳಿ ನಿರ್ಮಿಸಲಾಗಿದ್ದ, ದಸರಾ ಉತ್ಸವದ ಬನ್ನಿ ಮಂಟಪ ಕುಸಿದು ಬಿದ್ದಿದೆ. ಸಂಜೆ ವೇಳೆ ಸುರಿದ ಧಾರಾಕಾರ ಮಳೆಯಿಂದಾಗಿ ಬನ್ನಿ ಮಂಟಪ ಕುಸಿದು ಬಿದ್ದಿದೆ. ನವರಾತ್ರಿಯ ಕೊನೆಯ...

ಮಾಜಿ ಶಾಸಕ ಗೋಪಾಲ ಪೂಜಾರಿ ನೇತೃತ್ವ 50ಕ್ಕೂ ಅಧಿಕ ಬಿಜೆಪಿ ಯುವ ಕಾರ್ಯಕರ್ತರು ಕಾಂಗ್ರೆಸ್ ತೆಕ್ಕೆಗೆ

ಕುಂದಾಪುರ : ಬೈಂದೂರು ಕ್ಷೇತ್ರದ ಮಾಜಿ ಶಾಸಕ ಗೋಪಾಲ ಪೂಜಾರಿ ನೇತೃತ್ವದಲ್ಲಿ ಬಿಜೆಪಿಯ ಐವತ್ತು ಕಾರ್ಯಕರ್ತರು ಕಾಂಗ್ರೆಸ್'ಗೆ ಸೇರ್ಪಡೆಗೊಂಡರು.   ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಕಟ್ ಬೆಲ್ತೂರು ನಿವಾಸದಲ್ಲಿ ಕಟ್ ಬೆಲ್ತೂರು, ಹೆಮ್ಮಾಡಿ...

ಶಿವಸೇನೆ ಮುಖಂಡ ರಾಹುಲ್ ಶೆಟ್ಟಿ ಬರ್ಬರ ಹತ್ಯೆ

ಮುಂಬೈ: ಪುಣೆಯ ಬಳಿ ಲೊನವಾಲದ ಶಿವಸೇನೆಯ ಮುಖಂಡ ರಾಹುಲ್ ಶೆಟ್ಟಿಯವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಇವರುಮಾಜಿ ಶಿವಸೇನಾ ಮುಖಂಡ ಉಮೇಶ್ ಶೆಟ್ಟಿಯವರ ಪುತ್ರ ಎಂದು ತಿಳಿದು ಬಂದಿದೆ. ಮೂಲತಃ ಮಂಗಳೂರಿನವರಾದ ರಾಹುಲ್ ಶೆಟ್ಟಿಯನ್ನು...

ಗೋಹತ್ಯಾ‌ ನಿಷೇಧ ಕಾಯಿದೆ; ಅಲಹಾಬಾದ್ ಕೋರ್ಟ್ ಆರೋಪಿಯೊಬ್ಬರಿಗೆ ಜಾಮೀನು ನೀಡಿ ಹೇಳಿದ್ದೇನು?

ಅಲಹಾಬಾದ್: ಉಚ್ಚ ನ್ಯಾಯಾಲಯ ಅಲಹಾಬಾದ್ ಇಂದು ಗೋಹತ್ಯಾ ನಿಷೇಧ ಕಾಯಿದೆ ಪ್ರಕರಣದ ಅಡಿಯಲ್ಲಿ ಬಂಧಿತರಾಗಿದ್ದ ಆರೋಪಿಯೊಬ್ಬರಿಗೆ ಜಾಮೀನು ಮಂಜೂರು ಮಾಡಿ, ಸರಕಾರ ಈ ಕಾಯಿದೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆಯೆಂದು ಎಚ್ಚರಿಸಿದ್ದಾರೆ. ಮಾಡದ ಕೃತ್ಯಕ್ಕೆ...

ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರೇ ಶಾಸಕ ಜ್ಞಾನೇಂದ್ರರವರಿಗೆ ಯಾವ ಶಿಕ್ಷೆಯನ್ನು ನೀಡುತ್ತೀರಾ?

ಲೇಖಕರು – ಶಾರೂಕ್ ತೀರ್ಥಹಳ್ಳಿ

ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಈಗಾಗಲೇ ಒಂದು ಲಕ್ಷದ ಗಡಿ ದಾಟಿದೆ. ಕಳೆದ 24 ಗಂಟೆಗಳಲ್ಲಿ 4,970 ಮಂದಿಯಲ್ಲಿ ಹೊಸದಾಗಿ ಕೊರೊನಾ ಸೋಂಕು ಪತ್ತೆಯಾಗಿರುವ ವರದಿಗಳು ಸಹ ಮಾಧ್ಯಮಗಳಲ್ಲಿ ಬಿತ್ತರಿಸಿದೆ. ಈ ಮೂಲಕ ಒಟ್ಟಾರೆ ಪಾಸಿಟಿವ್ ಪ್ರಕರಣಗಳ ಸಂಖ್ಯೆ 1,01,139ಕ್ಕೆ ಏರಿಕೆಯಾಗಿದೆ. ಕೇಂದ್ರ ಸರ್ಕಾರ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ, ಕಳೆದ 24 ಗಂಟೆಗಳಲ್ಲಿ 134 ಮಂದಿ ಮೃತಪಟ್ಟಿದ್ದು, ಒಟ್ಟಾರೆ 3,163 ಮಂದಿ ಕೊರೊನಾ ಮಹಾಮಾರಿಗೆ ಬಲಿಯಾಗಿದ್ದಾರೆ. ಇನ್ನೆಷ್ಟು ಜೀವಗಳು ಬಲಿಯಾಗಲಿದೆಯೋ ಎಂಬ ಪ್ರಶ್ನೆ ಸಾರ್ವಜನಿಕರಲ್ಲಿ ಭಯವನ್ನು ಹುಟ್ಟಿಸುತ್ತಿದೆ. ಪ್ರಸ್ತುತ ದಿನಗಳಲ್ಲಿ ಇಡಿ ಜಗತ್ತು ಕೊರೋನ ಎಂಬ ಭೀಕರ ಮಹಾಮಾರಿಯ ಬಗ್ಗೆ ಚಿಂತೆಗೀಡಾಗಿದ್ದರೆ, ನಮ್ಮ ದೇಶದಲ್ಲಿ ಮಾತ್ರ ಕೊರೋನ ಮಹಾಮಾರಿಯನ್ನು ರಾಜಕೀಯವಾಗಿ ಬಳಸಿಕೊಂಡು ಅದನ್ನು ಕೋಮು ವೈರಸ್ ಆಗಿ ಬದಲಾವಣೆ ಮಾಡಿ, ಧರ್ಮಗಳ ಮಧ್ಯೆ ಸಂಶಯಗಳನ್ನು ಉಂಟು ಮಾಡುವಲ್ಲಿಗೆ ಬಂದು ತಲುಪಿತ್ತು, ದೇಶಾದ್ಯಂತ ಸಂಚರಿಸಿ, ರಾಜ್ಯಗಳಲ್ಲಿ ಪಸರಿಸಿದ ಈ ಕೋಮು ವೈರಸ್ ಇದೀಗ ಮಲೆನಾಡಿನ ತೀರ್ಥಹಳ್ಳಿಗೂ ಕೂಡ ಆಗಮಿಸಿದೆ. ತಬ್ಲೀಕ್ ಜಮಾತ್ ಮತ್ತು ಮುಸ್ಲೀಮರ ಬಗ್ಗೆ ತೀರ್ಥಹಳ್ಳಿಯ ಶಾಸಕರಾದ ಆರಗ ಜ್ಞಾನೇಂದ್ರ ತಮ್ಮ ಅಭಿಪ್ರಾಯವನ್ನು ಮುಂದಿಟ್ಟು ಒಂದು ಕೋಮಿನ ಬಗ್ಗೆ ಮಾತನಾಡಿರುವುದು ಮಲೆನಾಡಿನ ನಾಗರೀಕರಲ್ಲಿ ಬೇಸರವನ್ನು ಉಂಟು ಮಾಡಿದೆ. ಒಬ್ಬ ಜನಪ್ರತಿನಿಧಿಯಾಗಿ ಆಯ್ಕೆಯಾದ ಜವಾಬ್ದಾರಿಯುತ ಸ್ಥಾನದಲ್ಲಿರುವ ವ್ಯಕ್ತಿ, ಪರಸ್ಪರ ಕೋಮು ಸೌಹಾರ್ದತೆಯಿಂದ  ಬದುಕಿತ್ತಿದ್ದ ಸಮಾಜದಲ್ಲಿ ಸೌಹಾರ್ದತೆಗೆ ಧಕ್ಕೆ ತರುವಂತೆ ಒಂದು ಕೋಮಿನ ಜನರ ಬಗ್ಗೆ ಮಾತನಾಡಿದರುವುದು ನಿಜಕ್ಕೂ ಬೇಸರದ ಸಂಗತಿ, ಈಗಾಗಲೇ ಮುಸ್ಲೀಮ್ ಜಮಾತ್ ನವರು ಶಾಸಕರ ಹೇಳಿಕೆಯನ್ನು ಖಂಡಿಸಿ ಪತ್ರಿಕಾ ಪ್ರಕಟಣೆಯನ್ನು ಹೊರಡಿಸಿದ್ದಾರೆ.

ಕೊರೋನ ಸೋಂಕು ಹರಡುತ್ತಿರುವ ಸಂದರ್ಭದಲ್ಲಿ ತಬ್ಲೀಕ್ ಜಮಾತ್ ನವರು ದೆಹಲಿಯ ನಿಝಾಮುದ್ದೀನ್ ನಲ್ಲಿ ಧಾರ್ಮಿಕ ಸಭೆ ನಡೆಸಿದ್ದು ತಪ್ಪು ಆದರೆ ಧಾರ್ಮಿಕ ಸಭೆ ನಡೆಸಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು ಏಕೆ ಎಂಬುದು ಇಂದಿಗೂ ಪ್ರಶ್ನೆಯಾಗಿಯೇ ಉಳಿದಿದೆ. ಹೊರ ದೇಶಗಳಿಂದ ಬಂದ ತಬ್ಲೀಕಿಗಳನ್ನು ಯಾವುದೇ ಪರೀಕ್ಷೆಗೊಳಪಡಿಸದೆ ದೇಶದ ಒಳಗೆ ಬರ ಮಾಡಿಕೊಟ್ಟದ್ದು ಯಾರ ತಪ್ಪು? ಗುಜರಾತ್ ನಲ್ಲಿ ಟ್ರಂಪ್ ನಮಸ್ತೆ ಕಾರ್ಯಕ್ರಮದಿಂದ ಹರಡದ ಕೊರೋನ ಸೋಂಕು ತಬ್ಲೀಕ್ ಜಮಾತ್ ಧಾರ್ಮಿಕ ಸಭೆಯಿಂದ ಹರಡಿದ್ದು ವಿಪರ್ಯಾಸ, ತಬ್ಲೀಕ್ ಜಮಾತ್ ನವರು ಲಾಕ್ ಡೌನ್ ವಿಷಯವನ್ನು ತಿಳಿದು ದೆಹಲಿಯ ನಿಝಾಮುದ್ದೀನ್ ನಿಂದ ತಮ್ಮ ತವರುಗಳಿಗೆ ತೆರಳಿದಾಗ ಕೊರೋನ ಸೋಂಕು ಹರಡಿದ್ದು ನಿಜವೇ ಇರಬಹುದು ಆದರೆ ಅದನ್ನು ಒಂದು ಸಮುದಾಯದ ಮೇಲೆ ಆರೋಪಿಸಿ ಇಡೀ ಸಮುದಾಯವನ್ನು ನಿಂದಿಸಿರುವುದು ಎಷ್ಟು ಸರಿ, ಹಳೆಯ ವಿಡಿಯೋಗಳನ್ನು ಸಾಮಾಜಿಕ ತಾಣಗಳಲ್ಲಿ ಹರಿಯಬಿಟ್ಟು, ಅದಕ್ಕಿಷ್ಟು ಸುಳ್ಳು ಸುದ್ದಿಗಳನ್ನು ಸೇರಿಸಿ ಒಂದು ಸಮುದಾಯದವರು ಕೊರೋನ ಸೋಂಕು ಹರಡುತ್ತಿದ್ದಾರೆ ಎಂದು ಬಿಂಬಿಸಲು ಪ್ರಯತ್ನಿಸಲಾಯಿತು. ಅಲ್ಪಸಂಖ್ಯಾತರು ಹಾಗೂ ಮುಸ್ಲಿಂ ಬಂಧುಗಳು ಈ ಕೊರೋನ ಹರಡಲು ಕಾರಣ ಎಂದು ಯಾರಾದರೂ ಅಪಪ್ರಚಾರ ಮಾಡಿದರೆ ಅವರ ವಿರುದ್ಧ ಕ್ರಮ ಜರುಗಿಸುತ್ತೇನೆ ಹುಷಾರ್ ಎಂದು ಮಾನ್ಯ ಮುಖ್ಯಮಂತ್ರಿ ಯಡಿಯೂರಪ್ಪನವರು ಎಚ್ಚರಿಗೆ ನೀಡಿದ್ದರು. ಇಂದು ನಿಮ್ಮದೇ ಪಕ್ಷದ ಶಾಸಕರಾದ ಆರಗ ಜ್ಞಾನೇಂದ್ರರವರು ಮುಸ್ಲೀಮರು ಕೊರೋನ ಸೋಂಕನ್ನು ಹರಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಅವರಿಗೆ ನೀವು ಯಾವ ಶಿಕ್ಷೆಯನ್ನು ನೀಡುತ್ತೀರ?

ನಮ್ಮ ಮುಂದಿರುವ ಈ ದಿನಗಳು ರಾಜಕೀಯ, ದ್ವೇಷ, ಹಗೆತನ, ಕೋಮು ಪ್ರಚಾರ ಮಾಡಿ ಒಬ್ಬರನ್ನೊಬ್ಬರ ಬಗ್ಗೆ ಪರಸ್ಪರ ಕೆಸರೆರೆಚಿಕೊಳ್ಳುವ ಸಮಯವಲ್ಲ, ಎಲ್ಲಾ ರಾಜಕೀಯ, ಧರ್ಮ, ಜಾತಿ, ದ್ವೇಷ, ಹಗೆತನವನ್ನು ಬದಿಗಿಟ್ಟು ಧರ್ಮಾತೀತವಾಗಿ ಇಡೀ ಪ್ರಪಂಚಕ್ಕೆ ಒಂದು ದೊಡ್ಡ ತಲೆನೋವಾಗಿರುವ ಕೊರೋನ ಎಂಬ ಮಹಾಮಾರಿಯ ವಿರುದ್ದ ಹೋರಾಡಲು ನಾವು ಸಿದ್ದರಾಗಬೇಕಾದ ಕಾಲ, ಒಂದು ವೇಳೆ ಇದೇ ರೀತಿ ಕೋಮುಗಳ ಮಧ್ಯೆ ದ್ವೇಷ ಹಗೆತನ ಮುಂದುವರೆದರೆ ಕೊರೋನಕ್ಕಿಂತ ಹೆಚ್ಚು ಸಾವು ನೋವುಗಳು ಈ ಕೋಮು ದ್ವೇಷದಿಂದ ಉಂಟಾಗುವುದರಲ್ಲಿ ಯಾವುದೇ ಸಂಶಯ ಪಡಬೇಕಾಗಿಲ್ಲ, ಮಲೆನಾಡು ಶಾಂತ, ಸೌಹಾರ್ದತೆಯ ನಾಡು, ಚಿಂತಕರು, ವಿಮರ್ಶಕರು, ಸಾಹಿತಿಗಳು, ಕವಿಗಳನ್ನು ನೀಡಿದಂತಹ ತವರೂರು. ಇಂತಹ ನಾಡಿನಲ್ಲಿ ಶಾಂತಿ ಸೌಹಾರ್ದತೆಗೆ ಎಂದು ಕೂಡ ಭಂಗ ಬಾರದಿರಲಿ, ಸಹೋದರರಂತೆ ಬಾಳಿ ಬದುಕಿತ್ತಿರುವ ನಾವು ಕೊನೆಯವರೆಗೂ ಹೀಗೆ ನಮ್ಮ ವ್ಯವಹಾರ, ಸಹಕಾರ ಮುಂದುವರೆಯಲಿ. ಉಜ್ವಲ ಭಾರತದಲ್ಲಿ ತೀರ್ಥಹಳ್ಳಿ ಇನ್ನಷ್ಟು ಉಜ್ವಹಿಸಲಿ ಎಂಬುದೇ ನಮ್ಮೆಲ್ಲರ ಹಾರೈಕೆ.

LEAVE A REPLY

Please enter your comment!
Please enter your name here