ಉಡುಪಿಯಲ್ಲಿ ಮರಳಿಗೆ ದರ ನಿಗದಿ ಮಾಡಿ ಜಿಲ್ಲಾಧಿಕಾರಿ ಆದೇಶ

ಕುಡಿದ ಮತ್ತಿನಲ್ಲಿ ಹೊಡೆದು ಸಾಯಿಸಿದ ಕುಡುಕ ಗಂಡ

ಆನೇಕಲ್(ಅ​.26): ಕುಡಿದ ಮತ್ತಿನಲ್ಲಿ ಹೆಂಡತಿಗೆ ಗಂಡನೊಬ್ಬ ಕಪಾಳಕ್ಕೆ ಹೊಡೆದು ಹತ್ಯೆ ಮಾಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬೇಗಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೊಲೆಯಾದವಾರನ್ನು ಗೌರಮ್ಮ(42)ಎಂದು ಗುರುತಿಸಲಾಗಿದೆ. ಕುಮಾರ್(48) ಹೆಂಡತಿಯನ್ನೇ ಕೊಂದ ಪಾಪಿ...

ಶಿವಮೊಗ್ಗ : ಮಳೆಯಿಂದ ಮುರಿದು ಬಿದ್ದ ಬನ್ನಿ ಮಂಟಪ

ಶಿವಮೊಗ್ಗ, (ಅ.26): ಮಳೆಯಿಂದಾಗಿ ನಗರದ ಹಳೇ ಜೈಲಿನ ಬಳಿ ನಿರ್ಮಿಸಲಾಗಿದ್ದ, ದಸರಾ ಉತ್ಸವದ ಬನ್ನಿ ಮಂಟಪ ಕುಸಿದು ಬಿದ್ದಿದೆ. ಸಂಜೆ ವೇಳೆ ಸುರಿದ ಧಾರಾಕಾರ ಮಳೆಯಿಂದಾಗಿ ಬನ್ನಿ ಮಂಟಪ ಕುಸಿದು ಬಿದ್ದಿದೆ. ನವರಾತ್ರಿಯ ಕೊನೆಯ...

ಮಾಜಿ ಶಾಸಕ ಗೋಪಾಲ ಪೂಜಾರಿ ನೇತೃತ್ವ 50ಕ್ಕೂ ಅಧಿಕ ಬಿಜೆಪಿ ಯುವ ಕಾರ್ಯಕರ್ತರು ಕಾಂಗ್ರೆಸ್ ತೆಕ್ಕೆಗೆ

ಕುಂದಾಪುರ : ಬೈಂದೂರು ಕ್ಷೇತ್ರದ ಮಾಜಿ ಶಾಸಕ ಗೋಪಾಲ ಪೂಜಾರಿ ನೇತೃತ್ವದಲ್ಲಿ ಬಿಜೆಪಿಯ ಐವತ್ತು ಕಾರ್ಯಕರ್ತರು ಕಾಂಗ್ರೆಸ್'ಗೆ ಸೇರ್ಪಡೆಗೊಂಡರು.   ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಕಟ್ ಬೆಲ್ತೂರು ನಿವಾಸದಲ್ಲಿ ಕಟ್ ಬೆಲ್ತೂರು, ಹೆಮ್ಮಾಡಿ...

ಶಿವಸೇನೆ ಮುಖಂಡ ರಾಹುಲ್ ಶೆಟ್ಟಿ ಬರ್ಬರ ಹತ್ಯೆ

ಮುಂಬೈ: ಪುಣೆಯ ಬಳಿ ಲೊನವಾಲದ ಶಿವಸೇನೆಯ ಮುಖಂಡ ರಾಹುಲ್ ಶೆಟ್ಟಿಯವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಇವರುಮಾಜಿ ಶಿವಸೇನಾ ಮುಖಂಡ ಉಮೇಶ್ ಶೆಟ್ಟಿಯವರ ಪುತ್ರ ಎಂದು ತಿಳಿದು ಬಂದಿದೆ. ಮೂಲತಃ ಮಂಗಳೂರಿನವರಾದ ರಾಹುಲ್ ಶೆಟ್ಟಿಯನ್ನು...

ಗೋಹತ್ಯಾ‌ ನಿಷೇಧ ಕಾಯಿದೆ; ಅಲಹಾಬಾದ್ ಕೋರ್ಟ್ ಆರೋಪಿಯೊಬ್ಬರಿಗೆ ಜಾಮೀನು ನೀಡಿ ಹೇಳಿದ್ದೇನು?

ಅಲಹಾಬಾದ್: ಉಚ್ಚ ನ್ಯಾಯಾಲಯ ಅಲಹಾಬಾದ್ ಇಂದು ಗೋಹತ್ಯಾ ನಿಷೇಧ ಕಾಯಿದೆ ಪ್ರಕರಣದ ಅಡಿಯಲ್ಲಿ ಬಂಧಿತರಾಗಿದ್ದ ಆರೋಪಿಯೊಬ್ಬರಿಗೆ ಜಾಮೀನು ಮಂಜೂರು ಮಾಡಿ, ಸರಕಾರ ಈ ಕಾಯಿದೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆಯೆಂದು ಎಚ್ಚರಿಸಿದ್ದಾರೆ. ಮಾಡದ ಕೃತ್ಯಕ್ಕೆ...

ಉಡುಪಿ : ಮರಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ವಿವಾದಗಳು ನಡೆಯುತ್ತಿರುವ ಬೆನ್ನಲ್ಲೇ ಜಿಲ್ಲಾಧಿಕಾರಿಗಳು ಮರಳಿಗೆ ದರ ನಿಗದಿ ಮಾಡಿ ಆದೇಶ ಹೊರಡಿಸಿದ್ದಾರೆ.

ಕರ್ನಾಟಕ ಉಪ ಖನಿಜ ರಿಯಾಯಿತಿ ನಿಯಮಾವಳಿ 1994 ರ ತಿದ್ದುಪಡಿ ನಿಯಮಗಳು2020 ರನ್ವಯ ದರ ನಿಗದಿ ಮಾಡಿ ಆದೇಶ ಹೊರಡಿಸಲಾಗಿದ್ದು,ಸರ್ಕಾರವು ಪ್ರತಿ ಮೆ.ಟನ್ ಮರಳಿಗೆ ರೂ.60 ರಿಂದ ರಾಜಧನವನ್ನು ಪ್ರಸ್ತುತ ರೂ. 80 ಕ್ಕೆ ಹೆಚ್ಚಿಸಿರುವುದರಿಂದ, ರಾಜಧನದೊಂದಿಗೆ ಇತರೆ ಶುಲ್ಕಗಳನ್ನು ಹೆಚ್ಚುವರಿಯಾಗಿ ಪರವಾನಿಗೆದಾರರು ಸರ್ಕಾರಕ್ಕೆ ಪಾವತಿಸಬೇಕಾಗಿರುವುದರಿಂದ, ಶನಿವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಕರಾವಳಿ ನಿಯಂತ್ರಣ ವಲಯ ಪ್ರದೇಶದಲ್ಲಿ ಮರಳು ದಿಬ್ಬಗಳನ್ನು ತೆರವುಗೊಳಿಸಲು ಇರುವ ಜಿಲ್ಲಾ 7 ಸದಸ್ಯರ ಸಮಿತಿ ಸಭೆಯಲ್ಲಿ ಚರ್ಚಿಸಿ ತೀರ್ಮಾನಿಸಿರುವಂತೆ ಈ ಹಿಂದೆ ನಿಗಧಿಪಡಿಸಿದ್ದ ದರವನ್ನು ಪುನರ್ ಪರಿಶೀಲಿಸಿ ಈ ಕೆಳಕಂಡಂತೆ ಕರಾವಳಿ ನಿಯಂತ್ರಣ ವಲಯ ವ್ಯಾಪ್ತಿಯಲ್ಲಿ ತೆರವುಗೊಳಿಸುವ ಮರಳಿಗೆ ದರ ನಿಗಧಿ ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ 7 ಸದಸ್ಯರ ಸಮಿತಿ, ಜಿಲ್ಲಾ ಮರಳು ಉಸ್ತುವಾರಿ ಸಮಿತಿ ಅಧ್ಯಕ್ಷರಾದ ಜಿ.ಜಗದೀಶ್ ತಿಳಿಸಿದ್ದಾರೆ.

ಮರಳು ದರ:

ಕರಾವಳಿ ನಿಯಂತ್ರಣ ವಲಯ ಪ್ರದೇಶದಲ್ಲಿನ (ಸಿಆರ್‌ಝಡ್ ಪ್ರದೇಶದ ಸ್ವರ್ಣಾ, ಸೀತಾ ಮತ್ತು ಪಾಪನಾಶಿನಿ ನದಿ ವ್ಯಾಪ್ತಿಗಳಲ್ಲಿ) ಮರಳು ದಿಬ್ಬಗಳೊಂದಿಗೆ ತೆರವುಗೊಳಿಸಿದ ಮರಳಿನ ದರ ಪ್ರತಿ ಟನ್ ಗೆ (ಸಾಗಾಟ ಪರವಾನಗಿಯೊಂದಿಗೆ) ರೂ.600 (ಹಳೆಯ ದರ 550) ಅಂದರೆ 10 ಮೆ.ಟನ್ ಗೆ 6000 ಹಾಗೂ ಲೋಡಿಂಗ್ ವೆಚ್ಚ ,8 ರಿಂದ10 ಮೆ.ಟನ್ ವಾಹನಕ್ಕೆ ರೂ. 700, 4 ರಿಂದ 8 ಮೆ.ಟನ್ ವಾಹನಕ್ಕೆ ರೂ. 500, 1 ರಿಂದ 4 ಮೆ.ಟನ್ ವರೆಗೆ ರೂ. 300.

ದೊಡ್ಡ ಲಾರಿಗೆ : 20ಕಿ.ಮೀಟರ್‌ವರೆಗೆ ಸಾಗಾಣಿಕೆ ದರ ರೂ.3000,(8 ರಿಂದ 10 ಮೆ.ಟನ್) ನಂತರದ ಪ್ರತಿ ಕಿಲೋ ಮೀಟರ್‌ಗೆ ರೂ. 50/- (20 ಕಿ.ಮೀಟರ್ ಹೊರತುಪಡಿಸಿದ ನಂತರದ ಪ್ರತಿ ಕಿ.ಮೀಟರ್‌ಗೆ ಹೋಗುವ ಮತ್ತು ಬರುವ ಕಿ. ಮೀಟರ್ ಒಳಗೊಂಡಂತೆ)
ಮಧ್ಯಮ ಗಾತ್ರದ ವಾಹನಗಳಿಗೆ : 20 ಕಿ.ಮೀಟರ್‌ವರೆಗೆ ಸಾಗಾಣಿಕೆ ದರ ರೂ. (4 ರಿಂದ 8 ಮೆ.ಟನ್) 2000/-, ನಂತರದ ಪ್ರತಿ ಕಿ.ಮೀಟರ್‌ಗೆ ರೂ. 40-(20 ಕಿ.ಮೀಟರ್ ಹೊರತು ಪಡಿಸಿದ ನಂತರದ ಪ್ರತಿ ಕಿ. ಮೀಟರ್‌ಗೆ ಹೋಗುವ ಮತ್ತು ಬರುವ ಕಿ. ಮೀಟರ್ ಒಳಗೊಂಡಂತೆ)
ಸಣ್ಣ ವಾಹನಗಳಿಗೆ : 20 ಕಿ.ಮೀಟರ್‌ವರೆಗೆ ಸಾಗಾಣಿಕೆ ದರ ರೂ. (1 ರಿಂದ 4 ಮೆ.ಟನ್ ವರೆಗೆ) 1500/- ಮತ್ತು ನಂತರದ ಪ್ರತಿ ಕಿಲೋ ಮೀಟರ್‌ಗೆ ರೂ. 35/-(20 ಕಿ.ಮೀಟರ್ ಹೊರತುಪಡಿಸಿದ ನಂತರದ ಪ್ರತಿ ಕಿ. ಮೀಟರ್‌ಗೆ ಹೋಗುವ ಮತ್ತು ಬರುವ ಕಿ. ಮೀಟರ್ ಒಳಗೊಂಡಂತೆ)

ನಿಗಧಿಪಡಿಸಿದ ದರಕ್ಕಿಂತ ಹೆಚ್ಚಿನ ದರ ವಿಧಿಸಿ ಸಂಗ್ರಹಿಸಿದಲ್ಲಿ, ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ನೀಡಬಹುದಾಗಿದೆ. ಹಿರಿಯ ಭೂವಿಜ್ಞಾನಿಯವರ ಕಛೇರಿ, ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಡುಪಿ ಜಿಲ್ಲೆ, ಉಡುಪಿ ದೂರವಾಣಿ ಸಂಖ್ಯೆ: 0820-2572333, ಜಿಲ್ಲಾ ನಿಯಂತ್ರಣಾ ಕೊಠಡಿ ದೂರವಾಣಿ ಸಂಖ್ಯೆ: 0820-2574802 1077 (ಟೋಲ್ ಫ್ರೀ) ಅಧಿಕಾರಿಗಳ ಮೊಬೈಲ್ ಸಂಖ್ಯೆಗಳು: ಆರ್. ಪದ್ಮಶ್ರೀ, ಭೂವಿಜ್ಞಾನಿ : 9980951087, ಗೌತಮ್ ಶಾಸ್ತಿç ಹೆಚ್, ಭೂವಿಜ್ಞಾನಿ :6361286320, ಸಂಧ್ಯಾಕುಮಾರಿ, ಭೂವಿಜ್ಞಾನಿ : 9901370559 ಹಾಜಿರಾ ಸಜಿನಿ ಎಸ್, ಭೂವಿಜ್ಞಾನಿ : 9663836959

LEAVE A REPLY

Please enter your comment!
Please enter your name here