ಉಡುಪಿ ಜಿಲ್ಲೆಯಲ್ಲಿ ಮತ್ತೆರಡು ದಿನ ಮಳೆ ಮುಂದುವರಿಯುವ ಸಾಧ್ಯತೆ – ಅರೆಂಜ್ ಅಲರ್ಟ್!

ಕುಡಿದ ಮತ್ತಿನಲ್ಲಿ ಹೊಡೆದು ಸಾಯಿಸಿದ ಕುಡುಕ ಗಂಡ

ಆನೇಕಲ್(ಅ​.26): ಕುಡಿದ ಮತ್ತಿನಲ್ಲಿ ಹೆಂಡತಿಗೆ ಗಂಡನೊಬ್ಬ ಕಪಾಳಕ್ಕೆ ಹೊಡೆದು ಹತ್ಯೆ ಮಾಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬೇಗಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೊಲೆಯಾದವಾರನ್ನು ಗೌರಮ್ಮ(42)ಎಂದು ಗುರುತಿಸಲಾಗಿದೆ. ಕುಮಾರ್(48) ಹೆಂಡತಿಯನ್ನೇ ಕೊಂದ ಪಾಪಿ...

ಶಿವಮೊಗ್ಗ : ಮಳೆಯಿಂದ ಮುರಿದು ಬಿದ್ದ ಬನ್ನಿ ಮಂಟಪ

ಶಿವಮೊಗ್ಗ, (ಅ.26): ಮಳೆಯಿಂದಾಗಿ ನಗರದ ಹಳೇ ಜೈಲಿನ ಬಳಿ ನಿರ್ಮಿಸಲಾಗಿದ್ದ, ದಸರಾ ಉತ್ಸವದ ಬನ್ನಿ ಮಂಟಪ ಕುಸಿದು ಬಿದ್ದಿದೆ. ಸಂಜೆ ವೇಳೆ ಸುರಿದ ಧಾರಾಕಾರ ಮಳೆಯಿಂದಾಗಿ ಬನ್ನಿ ಮಂಟಪ ಕುಸಿದು ಬಿದ್ದಿದೆ. ನವರಾತ್ರಿಯ ಕೊನೆಯ...

ಮಾಜಿ ಶಾಸಕ ಗೋಪಾಲ ಪೂಜಾರಿ ನೇತೃತ್ವ 50ಕ್ಕೂ ಅಧಿಕ ಬಿಜೆಪಿ ಯುವ ಕಾರ್ಯಕರ್ತರು ಕಾಂಗ್ರೆಸ್ ತೆಕ್ಕೆಗೆ

ಕುಂದಾಪುರ : ಬೈಂದೂರು ಕ್ಷೇತ್ರದ ಮಾಜಿ ಶಾಸಕ ಗೋಪಾಲ ಪೂಜಾರಿ ನೇತೃತ್ವದಲ್ಲಿ ಬಿಜೆಪಿಯ ಐವತ್ತು ಕಾರ್ಯಕರ್ತರು ಕಾಂಗ್ರೆಸ್'ಗೆ ಸೇರ್ಪಡೆಗೊಂಡರು.   ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಕಟ್ ಬೆಲ್ತೂರು ನಿವಾಸದಲ್ಲಿ ಕಟ್ ಬೆಲ್ತೂರು, ಹೆಮ್ಮಾಡಿ...

ಶಿವಸೇನೆ ಮುಖಂಡ ರಾಹುಲ್ ಶೆಟ್ಟಿ ಬರ್ಬರ ಹತ್ಯೆ

ಮುಂಬೈ: ಪುಣೆಯ ಬಳಿ ಲೊನವಾಲದ ಶಿವಸೇನೆಯ ಮುಖಂಡ ರಾಹುಲ್ ಶೆಟ್ಟಿಯವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಇವರುಮಾಜಿ ಶಿವಸೇನಾ ಮುಖಂಡ ಉಮೇಶ್ ಶೆಟ್ಟಿಯವರ ಪುತ್ರ ಎಂದು ತಿಳಿದು ಬಂದಿದೆ. ಮೂಲತಃ ಮಂಗಳೂರಿನವರಾದ ರಾಹುಲ್ ಶೆಟ್ಟಿಯನ್ನು...

ಗೋಹತ್ಯಾ‌ ನಿಷೇಧ ಕಾಯಿದೆ; ಅಲಹಾಬಾದ್ ಕೋರ್ಟ್ ಆರೋಪಿಯೊಬ್ಬರಿಗೆ ಜಾಮೀನು ನೀಡಿ ಹೇಳಿದ್ದೇನು?

ಅಲಹಾಬಾದ್: ಉಚ್ಚ ನ್ಯಾಯಾಲಯ ಅಲಹಾಬಾದ್ ಇಂದು ಗೋಹತ್ಯಾ ನಿಷೇಧ ಕಾಯಿದೆ ಪ್ರಕರಣದ ಅಡಿಯಲ್ಲಿ ಬಂಧಿತರಾಗಿದ್ದ ಆರೋಪಿಯೊಬ್ಬರಿಗೆ ಜಾಮೀನು ಮಂಜೂರು ಮಾಡಿ, ಸರಕಾರ ಈ ಕಾಯಿದೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆಯೆಂದು ಎಚ್ಚರಿಸಿದ್ದಾರೆ. ಮಾಡದ ಕೃತ್ಯಕ್ಕೆ...

ಸಾಂದರ್ಭಿಕ ಚಿತ್ರ

ಉಡುಪಿ, ಕೋಸ್ಟಲ್ ಮಿರರ್ ನ್ಯೂಸ್:ಜಿಲ್ಲೆಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು ಹವಾಮಾನ ಇಲಾಖೆಯ ಮಾಹಿತಿಯ ಪ್ರಕಾರ ಇನ್ನೆಡರು ದಿನ ಮುಂದುವರಿಯುವ ಸಾಧ್ಯತೆ ಇದೆ. ಈಗಾಗಲೇ ಜಿಲ್ಲೆಯಲ್ಲಿ ಅರೆಂಜ್ ಅಲರ್ಟ್ ಘೋಷಿಸಲಾಗಿದೆ.

ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ಇದ್ದು, ಇನ್ನೆರಡು ದಿನ ಭಾರೀ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟ ಪ್ರಕಾರ ಅರಬ್ಬಿ ಸಮುದ್ರದ ತೀರದ ತಾಲೂಕುಗಳಲ್ಲಿ ಗಾಳಿ ಸಹಿತ ಮಳೆಯಾಗುತ್ತಿದ್ದು, ಇನ್ನು ಎರಡು ಮೂರು ದಿನ ಮುಂದುವರಿಯಲಿದೆ.

ಕಳೆದ 24 ಗಂಟೆ ಜಿಲ್ಲೆಯಲ್ಲಿ 89 ಮಿಲಿಮೀಟರ್ ಸರಾಸರಿ ಮಳೆ ಬಿದ್ದಿದೆ. ಉಡುಪಿ ತಾಲೂಕಿನಲ್ಲಿ 82 ಮಿ.ಮೀ, ಕುಂದಾಪುರ 108 ಮಿ.ಮೀ, ಕಾರ್ಕಳ ತಾಲೂಕಿನಲ್ಲಿ 76 ಮಿ.ಮೀ ಮಳೆ ಬಿದ್ದಿದೆ. ಕುಂದಾಪುರ ತಾಲೂಕಿನ ಬಳ್ಕೂರು ಗ್ರಾಮದ ವ್ಯಾಪ್ತಿಯಲ್ಲಿ 111 ಮಿಲಿಮೀಟರ್ ಮಳೆಯಾಗಿದೆ.

ಸೋಮವಾರ ಯೆಲ್ಲೋ ಅಲರ್ಟ್ ಇದ್ದು, ಸುಮಾರು 60ರಿಂದ 110 ಮಿಲಿಮೀಟರ್ ಮಳೆ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ಕೊಟ್ಟಿದೆ.

ಮಳೆಯಿಂದಾಗಿ ಮೀನುಗಾರರ ಚಟುವಟಿಕೆಯ ಮೇಲೆ ಸ್ವಲ್ಪ ಮಟ್ಟಿನ ಪ್ರಭಾವ ಬೀರಿದೆ. ಇನ್ನು ರೈತರು ಕೂಡ ಸ್ವಲ್ಪ ಆತಂಕದಲ್ಲಿದ್ದು ಭತ್ತದ ತೆನೆಯಲ್ಲಿ ಹೂವಿನಲ್ಲಿ ನೀರು ನಿಂತು ಕೊಳೆತು ಹೋಗುವ ಸಾಧ್ಯತೆಯಿದೆ‌.

LEAVE A REPLY

Please enter your comment!
Please enter your name here