ಉಡುಪಿ ಮೂಲದ ಬಾರ್ ಮಾಲಿಕ ಮನೀಶ್ ಶೆಟ್ಟಿ ಹತ್ಯಾ ಪ್ರಕರಣ; ಬಂಧನದ ವೇಳೆ ಪರಾರಿಯಾಗಲು ಯತ್ನ, ಗುಂಡು ಹಾರಿಸಿ ಅರೆಸ್ಟ್!

ಕುಡಿದ ಮತ್ತಿನಲ್ಲಿ ಹೊಡೆದು ಸಾಯಿಸಿದ ಕುಡುಕ ಗಂಡ

ಆನೇಕಲ್(ಅ​.26): ಕುಡಿದ ಮತ್ತಿನಲ್ಲಿ ಹೆಂಡತಿಗೆ ಗಂಡನೊಬ್ಬ ಕಪಾಳಕ್ಕೆ ಹೊಡೆದು ಹತ್ಯೆ ಮಾಡಿರುವ ಘಟನೆ ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನ ಬೇಗಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೊಲೆಯಾದವಾರನ್ನು ಗೌರಮ್ಮ(42)ಎಂದು ಗುರುತಿಸಲಾಗಿದೆ. ಕುಮಾರ್(48) ಹೆಂಡತಿಯನ್ನೇ ಕೊಂದ ಪಾಪಿ...

ಶಿವಮೊಗ್ಗ : ಮಳೆಯಿಂದ ಮುರಿದು ಬಿದ್ದ ಬನ್ನಿ ಮಂಟಪ

ಶಿವಮೊಗ್ಗ, (ಅ.26): ಮಳೆಯಿಂದಾಗಿ ನಗರದ ಹಳೇ ಜೈಲಿನ ಬಳಿ ನಿರ್ಮಿಸಲಾಗಿದ್ದ, ದಸರಾ ಉತ್ಸವದ ಬನ್ನಿ ಮಂಟಪ ಕುಸಿದು ಬಿದ್ದಿದೆ. ಸಂಜೆ ವೇಳೆ ಸುರಿದ ಧಾರಾಕಾರ ಮಳೆಯಿಂದಾಗಿ ಬನ್ನಿ ಮಂಟಪ ಕುಸಿದು ಬಿದ್ದಿದೆ. ನವರಾತ್ರಿಯ ಕೊನೆಯ...

ಮಾಜಿ ಶಾಸಕ ಗೋಪಾಲ ಪೂಜಾರಿ ನೇತೃತ್ವ 50ಕ್ಕೂ ಅಧಿಕ ಬಿಜೆಪಿ ಯುವ ಕಾರ್ಯಕರ್ತರು ಕಾಂಗ್ರೆಸ್ ತೆಕ್ಕೆಗೆ

ಕುಂದಾಪುರ : ಬೈಂದೂರು ಕ್ಷೇತ್ರದ ಮಾಜಿ ಶಾಸಕ ಗೋಪಾಲ ಪೂಜಾರಿ ನೇತೃತ್ವದಲ್ಲಿ ಬಿಜೆಪಿಯ ಐವತ್ತು ಕಾರ್ಯಕರ್ತರು ಕಾಂಗ್ರೆಸ್'ಗೆ ಸೇರ್ಪಡೆಗೊಂಡರು.   ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಕಟ್ ಬೆಲ್ತೂರು ನಿವಾಸದಲ್ಲಿ ಕಟ್ ಬೆಲ್ತೂರು, ಹೆಮ್ಮಾಡಿ...

ಶಿವಸೇನೆ ಮುಖಂಡ ರಾಹುಲ್ ಶೆಟ್ಟಿ ಬರ್ಬರ ಹತ್ಯೆ

ಮುಂಬೈ: ಪುಣೆಯ ಬಳಿ ಲೊನವಾಲದ ಶಿವಸೇನೆಯ ಮುಖಂಡ ರಾಹುಲ್ ಶೆಟ್ಟಿಯವರನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದಾರೆ. ಇವರುಮಾಜಿ ಶಿವಸೇನಾ ಮುಖಂಡ ಉಮೇಶ್ ಶೆಟ್ಟಿಯವರ ಪುತ್ರ ಎಂದು ತಿಳಿದು ಬಂದಿದೆ. ಮೂಲತಃ ಮಂಗಳೂರಿನವರಾದ ರಾಹುಲ್ ಶೆಟ್ಟಿಯನ್ನು...

ಗೋಹತ್ಯಾ‌ ನಿಷೇಧ ಕಾಯಿದೆ; ಅಲಹಾಬಾದ್ ಕೋರ್ಟ್ ಆರೋಪಿಯೊಬ್ಬರಿಗೆ ಜಾಮೀನು ನೀಡಿ ಹೇಳಿದ್ದೇನು?

ಅಲಹಾಬಾದ್: ಉಚ್ಚ ನ್ಯಾಯಾಲಯ ಅಲಹಾಬಾದ್ ಇಂದು ಗೋಹತ್ಯಾ ನಿಷೇಧ ಕಾಯಿದೆ ಪ್ರಕರಣದ ಅಡಿಯಲ್ಲಿ ಬಂಧಿತರಾಗಿದ್ದ ಆರೋಪಿಯೊಬ್ಬರಿಗೆ ಜಾಮೀನು ಮಂಜೂರು ಮಾಡಿ, ಸರಕಾರ ಈ ಕಾಯಿದೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದೆಯೆಂದು ಎಚ್ಚರಿಸಿದ್ದಾರೆ. ಮಾಡದ ಕೃತ್ಯಕ್ಕೆ...

ಬೆಂಗಳೂರು : ನಗರದಲ್ಲಿ ಕೆಲವು ದಿನಗಳ ಹಿಂದೆ ‌ನಡೆದ ಬಾರ್ ಮಾಲೀಕ ಮನೀಶ್ ಶೆಟ್ಟಿ ಕೊಲೆ ನಡೆದಿತ್ತು. ಹತ್ಯೆಯ ಆರೋಪಿಗಳ ಬೆನ್ನಟ್ಟಿದ ಪೊಲೀಸರು ಆರೋಪಿಗಳು ತಪ್ಪಿಸಲು ಯತ್ನಿಸಿದಾಗ ಗುಂಡು ಹೊಡೆದು ಆರೋಪಿಗಳನ್ನು ಬಂಧಿಸಿದ್ದಾರೆ‌.

ಆರೋಪಿಗಳಾದ ಶಶಿಕಿರಣ್ ಅಲಿಯಾಸ್ ಮುನ್ನಾ (45), ಗಣೇಶ್ (39), ನಿತ್ಯ (29) ಮತ್ತು ಅಕ್ಷಯ್ (32) ಅವರು ಗಾಂಧಿನಗರದ ಲಾಡ್ಜ್​ವೊಂದರಲ್ಲಿ ಅಡಗಿದ್ದರೆನ್ನಲಾಗಿದೆ. ಖಚಿತ ಮಾಹಿತಿ ಮೇರೆಗೆ ಕಬ್ಬನ್ ಪಾರ್ಕ್ ಠಾಣೆಯ ಪೊಲೀಸರು ಕಾರ್ಯಾಚರಣೆ ನಡೆಸಿ ಶನಿವಾರ ಬೆಳಗ್ಗೆ 11:30ರ ಸುಮಾರಿಗೆ ಆರೋಪಿಗಳನ್ನ ಬಂಧಿಸಿದರೆಂದು ಮಾಹಿತಿ ತಿಳಿದುಬಂದಿದೆ.

ಇಬ್ಬರು ಆರೋಪಿಗಳು ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ತಿಳಿದು ಬಂದಿದೆ. ಪ್ರಾಥಮಿಕ ಮಾಹಿತಿಯ ಪ್ರಕಾರ ಪೊಲೀಸರು ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದಾರೆ.

ಬಂಧನದ ಸಮಯದಲ್ಲಿ ಇಬ್ಬರು ತಪ್ಪಿಸಿಕೊಳ್ಳಲು ಪ್ರಯತ್ನ ಪಟ್ಟಿದ್ದಾರೆ‌ ಎನ್ನಲಾಗಿದೆ. ಆಗ ಪೊಲೀಸರು ಗುಂಡಿನ ದಾಳಿ‌ ನಡೆಸಿದ್ದಾರೆ.ಆರೋಪಿ ಅಕ್ಷಯ್ ಹಾಗೂ ಇನ್ನೊಬ್ಬನ ಕಾಲಿನ ಮೇಲೆ ಗುಂಡಿನ ದಾಳಿ ನಡೆದಿದೆ.

ಗಾಯಗೊಂಡವರಲ್ಲಿ ಒಬ್ಬನಾದ ಎ1 ಆರೋಪಿ ಶಶಿಕಿರಣ್ ಅಲಿಯಾಸ್ ಮುನ್ನಾ ಈ ಕೊಲೆ ಪ್ರಕರಣದ ಮಾಸ್ಟರ್​ಮೈಂಡ್ ಎನ್ನಲಾಗಿದೆ. 2000 ರಲ್ಲಿ ಮಂಗಳೂರಿನ ಉಲ್ಲಾಳದಲ್ಲಿ ನಡೆದ ಡಬಲ್ ಮರ್ಡರ್, 2002ರಲ್ಲಿ ಕಾರ್ಕಳ ಹಲ್ಲೆ ಪ್ರಕರಣ, 1998ರಲ್ಲಿ ಕದ್ರಿ ಠಾಣಾ ವ್ಯಾಪ್ತಿಯಲ್ಲಿ 307ರ ಅಡಿಯಲ್ಲಿ ದಾಖಲಾದ ಪ್ರಕರಣ ಸೇರಿ ಹಲವು ಪ್ರಕರಣಗಳಲ್ಲಿ ಆತ ಆರೋಪಿಯಾಗಿದ್ದಾನೆ.

ಮನೀಶ್ ಶೆಟ್ಟಿ ಹತ್ಯಾ ಘಟನೆ:

ಅ. 15, ಗುರುವಾರ ರಾತ್ರಿ ಬ್ರಿಗೇಡ್ ರಸ್ತೆಯಲ್ಲಿರುವ ಡುಯೆಟ್ ಬಾರ್​ನ ಮಾಲೀಕ ಮನೀಶ್ ಶೆಟ್ಟಿ ಅವರನ್ನು ನಾಲ್ವರು ಆರೋಪಿಗಳು ಹತ್ಯೆಗೈದಿದ್ದರು. ಬ್ರಿಗೇಡ್ ರಸ್ತೆ ಬಳಿಯ ರೆಸ್ಟ್ ಹೌಸ್ ಪಾರ್ಕ್ ರಸ್ತೆಯಲ್ಲಿ ಮನೀಶ್ ಶೆಟ್ಟಿ ಮೇಲೆ ಸಿಂಗಲ್ ಬ್ಯಾರಲ್ ಲೋಡಿಂಗ್ ಗನ್​ನಿಂದ ಆರೋಪಿಗಳು ಮೊದಲಿಗೆ ಫೈರಿಂಗ್ ಮಾಡಿದ್ದರು. ಬಳಿಕ ವಾಪಸ್ ಬಂದು ಮಚ್ಚಿನಿಂದ ನಾಲ್ಕು ಬಾರಿ ಕೊಚ್ಚಿ ಹೊರಟು ಹೋದರು. ಕೊಲೆಗೆ ಬಳಸಿದ್ದ ಮಚ್ಚನ್ನು ಅವರು ಹೊಸೂರು ರಸ್ತೆಯ ಸ್ಮಶಾನದಲ್ಲಿ ಎಸೆದು ಹೋಗಿದ್ದರು. ಈ ಮಾರಕಾಸ್ತ್ರವನ್ನು ಪರಿಶೀಲಿಸುವಾಗ ಮತ್ತು ಸ್ಥಳದ ಮಹಜರು ಮಾಡುವಾಗ ಆರೋಪಿಗಳು ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದರೆನ್ನಲಾಗಿದೆ.

LEAVE A REPLY

Please enter your comment!
Please enter your name here