ನಾಳೆ ಉಡುಪಿ ಖಾಝಿ ಸ್ವೀಕಾರ ಸಮಾರಂಭ ಹಾಗೂ ಅನುಸ್ಮರಣಾ ಮಜ್ಲಿಸ್

ಪರ್ಕಳ ಬಳಿ ಟೆಂಪೊ ಢಿಕ್ಕಿ: ಬೈಕಿನಲ್ಲಿದ್ದ ಮಗು ಮೃತ್ಯು

ಉಡುಪಿ, ಅ.19: ಮಣಿಪಾಲ ಪೊಲೀಸ್ ಠಾಣಾ ವ್ಯಾಪ್ತಿಯ ಪರ್ಕಳ ಬಡಗುಬೆಟ್ಟು ರಸ್ತೆಯಲ್ಲಿರುವ ಪಾಂಚಜನ್ಯ ಅಪಾರ್ಟ್‌ಮೆಂಟ್ ಸಮೀಪ ಟೆಂಪೊ ಮತ್ತು ಬೈಕ್ ಮಧ್ಯೆ ಸಂಭವಿಸಿದ ಅಪಘಾತದಲ್ಲಿ ಮಗು ಮೃತಪಟ್ಟಿರುವ ಬಗ್ಗೆ ವರದಿಯಾಗಿದೆ. ಕುಕ್ಕುಂದೂರು ಅಯ್ಯಪ್ಪ ನಗರದ...

ಯಡಿಯೂರಪ್ಪ ಅವರದು ಪರ್ಸಂಟೇಜ್ ಸರ್ಕಾರ, ಲಂಚ ನೀಡದೆ ನಯಾಪೈಸೆ ಬಿಡುಗಡೆಯಾಗಲ್ಲ – ಸಿದ್ದರಾಮಯ್ಯ

ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರದು ಪರ್ಸಂಟೇಜ್ ಸರ್ಕಾರ, ಲಂಚ ನೀಡದೆ ಇಲ್ಲಿ ನಯಾಪೈಸೆ ಬಿಡುಗಡೆಯಾಗಲ್ಲ. ಕಾಂಗ್ರೆಸ್ ಶಾಸಕರು ಪ್ರತಿನಿಧಿಸುವ ಕ್ಷೇತ್ರಗಳಿಗೆ ಹೊಸ ಅನುದಾನವಂತೂ ಇಲ್ಲ, ಇದರ ಜೊತೆಗೆ ಹಿಂದೆ ಘೋಷಿಸಿದ್ದ ಅನುದಾನವನ್ನೂ ತಡೆಹಿಡಿಯಲಾಗಿದೆ...

ಕೊಲೆ ಪ್ರಕರಣದ ಮಹಿಳಾ ಆರೋಪಿ ಮೇಲೆ ಪೊಲೀಸರಿಂದಲೇ ಸಾಮೂಹಿಕ ಅತ್ಯಾಚಾರ

ಭೋಪಾಲ್ : ಐವರು ಪೊಲೀಸರು ಲಾಕಪ್‍ನಲ್ಲಿಯೇ 20 ವರ್ಷದ ಮಹಿಳೆ ಮೇಲೆ ಹತ್ತು ದಿನಗಳ ಕಾಲ ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂಬ ಗಂಭೀರ ಆರೋಪ ಕೇಳಿ ಬಂದಿದೆ. ಮಧ್ಯ ಪ್ರದೇಶದ ರೇವಾ ಜಿಲ್ಲೆಯಲ್ಲಿ...

ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದರೆ ಹುಷಾರ್ ! ಸಾರಿಗೆ ಇಲಾಖೆಯಿಂದ ಹೊಸ ನಿಯಮ ಜಾರಿ

ಬೆಂಗಳೂರು:ದ್ವಿಚಕ್ರ ವಾಹನ ಸವಾರರಿಗೆ ಶಾಕಿಂಗ್ ನ್ಯೂಸ್ ಒಂದು ಹೊರ ಬಿದ್ದಿದೆ. ಹೆಲ್ಮೆಟ್ ಧರಿಸದೆ ಬೈಕ್ ಚಲಾಯಿಸಿದರೆ 3 ತಿಂಗಳ ಕಾಲ ವಾಹನ ಪರವಾನಗಿ ಅಮಾನತುಗೊಳಿಸಿ ಎಂದು ಸಾರಿಗೆ ಇಲಾಖೆ ಆಯುಕ್ತರ ಕಚೇರಿಯಿಂದ ಆದೇಶ...

ನ.1 ರಿಂದ ಗ್ರಾಮೀಣ ಪ್ರದೇಶದಲ್ಲಿ ಕಡ್ಡಾಯ ಪ್ಲಾಸ್ಟಿಕ್ ನಿಷೇಧ ಜಾರಿ- ದಿನಕರ ಬಾಬು

ಉಡುಪಿ, ಅಕ್ಟೋಬರ್ ೧೯ : ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್‌ಗಳಲ್ಲಿ ನವೆಂಬರ್ ೧ ರಿಂದ ಕಡ್ಡಾಯವಾಗಿ ಪ್ಲಾಸ್ಟಿಕ್ ಬಳಕೆ ನಿಷೇಧಿಸುವ ಕುರಿತಂತೆ ಎಲ್ಲಾ ಪಿಡಿಓಗಳು ಹಾಗೂ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳು ಅಗತ್ಯ ಕ್ರಮಗಳನ್ನು...

ಉಡುಪಿ: ಮುಸ್ಲಿಂ ಸಮುದಾಯದ ಪರಮೋಚ್ಚ ನಾಯಕ,ಕನ್ನಡ ನಾಡಿನ ಹಿರಿಯ ವಿದ್ವಾಂಸ ,ಕರ್ನಾಟಕ ಉಲಮಾ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಝೈನುಲ್ ಉಲಮಾ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಉಸ್ತಾದರ ಉಡುಪಿ ಜಿಲ್ಲಾ ಸುನ್ನೀ ಸಂಯುಕ್ತ ಜಮಾಅತ್ ನ ನೂತನ ಖಾಝಿಯ ಸ್ವೀಕಾರ ಸಮಾರಂಭ ಹಾಗೂ ತಾಜುಲ್ ಫುಖಹಾಅ್ ಬೇಕಲ ಉಸ್ತಾದ್ ರವರ ಅನುಸ್ಮರಣಾ ಮಜ್ಲಿಸ್ ಅಕ್ಟೋಬರ್ 10 ಶನಿವಾರ (ನಾಳೆ) ಕೇಂದ್ರ ಜುಮ್ಮಾ ಮಸೀದಿ ಮೂಳೂರಿನಲ್ಲಿ ಸಂಯುಕ್ತ ಜಮಾಅತ್ ಅಧ್ಯಕ್ಷರಾದ ಹಾಜಿ ಪಿ ಅಬೂಬಕ್ಕರ್ ನೇಜಾರ್ ರವರ ಅಧ್ಯಕ್ಷತೆಯಲ್ಲಿ ಜರುಗಲಿದೆ.

ಅಸ್ಸಯ್ಯಿದ್ ಜಾಪರ್ ಅಸ್ಸಖಾಫ್ ತಂಙಳ್ ಕೋಟೇಶ್ವರ ರವರ ದುಅದೊಂದಿಗೆ ಪ್ರಾರಂಭವಾಗುವ ಈ ಕಾರ್ಯಕ್ರಮವನ್ನು ಇಸ್ಲಾಮಿಕ್ ಎಜುಕೇಶನ್ ಬೋರ್ಡ್ ಆಫ್ ಇಂಡಿಯಾ ಇದರ ಅದ್ಯಾಪಕ ಒಕ್ಕೂಟದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ ಮುಹಮ್ಮದ್ ಪಾಝಿಲ್ ರಿಝ್ವಿ ಕಾವಳಕಟ್ಟೆ ಹಝ್ರತ್ ಉದ್ಘಾಟಿಸಲಿರುವರು *ಖಾಝಿ ಪದಗ್ರಹಣ* ನೇತ್ರತ್ವವನ್ನು ಕರ್ನಾಟಕ ಉಲಮಾ ಒಕ್ಕೂಟದ ಕೋಶಾದಿಕಾರಿ,ಕೊಡಗು ಜಿಲ್ಲಾ ಸಹಾಯಕ *ಖಾಝಿ ಎಡಪ್ಪಾಲ ಮಹ್ಮೂದ್ ಮುಸ್ಲಿಯಾರ್ ನಿರ್ವಹಿಸಲಿದ್ದಾರೆ*
ಕರ್ನಾಟಕ ಉಲಮಾ ಒಕ್ಕೂಟದ ಉಪಾಧ್ಯಕ್ಷರಾದ ಕೆ ಪಿ ಹುಸೈನ್ ಸಅದಿ ಕೆ.ಸಿ. ರೋಡ್ ಮುಖ್ಯ ಪ್ರಭಾಷಣ ನಡೆಸಲಿದ್ದಾರೆ ಕಾರ್ಯಕ್ರಮದಲ್ಲಿ ಮುಖ್ಯ ಅಥಿತಿಗಳಾಗಿ ಕರ್ನಾಟಕ ಸುನ್ನೀ ಕೋರ್ಡಿನೇಶನ್ ಅಧ್ಯಕ್ಷರಾದ ಎಸ್. ಪಿ ಹಂಝ ಸಖಾಫಿ ಬಂಟ್ವಾಳ, ಕಾರ್ಯದರ್ಶಿ ಪಿ ಪಿ ಅಹ್ಮದ್ ಸಖಾಫಿ ಕಾಶಿಪಟ್ನ, ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್ ಕೆ ಎಮ್ ಶಾಫಿ ಸಅದಿ ಬೆಂಗಳೂರು ಎಸ್ ವೈ ಎಸ್ ರಾಜ್ಯಾದ್ಯಕ್ಷರಾದ ಉಸ್ಮಾನ್ ಸಅದಿ ಪಟ್ಟೋರಿ,ಎಸ್ಸೆಸ್ಸೆಪ್ ರಾಜ್ಯದ್ಯಕ್ಷರಾದ ಅಸ್ಸಯ್ಯಿದ್ ಉಮರ್ ಅಸ್ಸಖಾಪ್ ಮದನಿ ತಂಙಳ್ , ಎಸ್ ಎಮ್ ಎ ರಾಜ್ಯಾದ್ಯಕ್ಷರಾದ ಅಸ್ಸಯ್ಯಿದ್ ಜಲಾಲುದ್ದೀನ್ ಅಲ್ ಹಾದಿ ತಂಙಳ್ ಮಲ್ಜ್ಅ, ಎಸ್ ಜೆ ಎಮ್ ರಾಜ್ಯಾಧ್ಯಕ್ಷರಾದ ಆತೂರು ಸಅದ್ ಮುಸ್ಲಿಯಾರ್, ಎಸ್ ಇ ಡಿಸಿ ರಾಜ್ಯಾಧ್ಯಕ್ಷರಾದ ಕೆ.ಕೆ.ಎಂ ಮುಹ್ಯದ್ದೀನ್ ಕಾಮಿಲ್ ಸಖಾಫಿ, ಕೆಸಿಎಫ್ ಐಎನ್ ಸಿ ಅದ್ಯಕ್ಷರಾದ ಹಾಜಿ ಶೈಖ್ ಬಾವ, ಡಿಕೆಎಸ್ ಸಿ ನಾಯಕರಾದ ಹಾಜಿ ಇಸ್ಮಾಯಿಲ್ ಕಿನ್ಯ ಎಸ್ ಡಿ ಐ ರಾಜ್ಯ ಮುಬಲ್ಲಿಗ್ ಮೌಲಾನಾ ಸಾದಿಖುಲ್ಲಾ ರಝ್ವಿ,ಬೇಕಲ್ ಉಸ್ತಾದರ ಸುಪುತ್ರ ಅಬ್ದುಲ್ ಜಲೀಲ್ ಮೋಂಟುಗೋಳಿ ಹಾಗೂ ಜಂಇಯ್ಯತುಲ್ ಉಲಮಾ ಮುಶಾವರ ಸದಸ್ಯರೂ,ರಾಜ್ಯದ ವಿವಿಧ ಸುನ್ನೀ ಸಂಘಟನೆಗಳ ಪ್ರಮುಖರೂ ಹಾಗೂ ಮತ್ತಿತರ ಉಮರಾ ನಾಯಕರು ಭಾಗವಹಿಸಲಿರುವರು

LEAVE A REPLY

Please enter your comment!
Please enter your name here