ಗುಂಡಿನ ಪ್ರಭುತ್ವ ಮತ್ತು ಪ್ರತಿಭಟನೆ!

-

ಜಾಹೀರಾತು

ಅಲ್ಪ ಸಂಖ್ಯಾತರನ್ನು ಗುರಿಯಾಗಿಸಿಕೊಂಡು ಈ ದೇಶದ ‘ವ್ಯವಸ್ಥೆ’ ನಡೆಸುತ್ತಿರುವ ದೌರ್ಜನ್ಯ ಇದೀಗ ಭಾರತದಲ್ಲಿ ಬೀದಿಯಲ್ಲಿ ಬಂದು ಪ್ರತಿಭಟಿಸುವ ಹಂತಕ್ಕೆ ಬಂದಿದೆ. ಈ ದೇಶದ ಸಂವಿಧಾನದ ಮೂಲ ಆಶಯಗಳನ್ನು ಬದಿಗೊತ್ತಿ ಮುಖ್ಯವಾಗಿ ಮುಸ್ಲಿಮರನ್ನು ಎರಡನೇ ದರ್ಜೆಯ ಪ್ರಜೆಗಳನ್ನಾಗಿಸುವ ಪ್ರಕ್ರಿಯೆಗಳು ಅತ್ಯಂತ ವೇಗವಾಗಿ ಕಾನೂನುಗಳ ಮುಖಾಂತರ ಜಾರಿಗೆ ತರಲಾಗುತ್ತಿದೆ. ಪ್ರಜಾಪ್ರಭುತ್ವದ ಆತ್ಮದ ಮೇಲೆ ‘ಪೌರತ್ವ ತಿದ್ದುಪಡಿ ಕಾಯಿದೆ’ ಯಂತಹ ಸಂವಿಧಾನ ಬಾಹಿರ ಕಾನೂನುಗಳಿಂದ ಪ್ರಹಾರ ಮಾಡಲಾಗುತ್ತಿದೆ. ಈ ದೇಶದ ಪ್ರಜ್ಞಾವಂತ ಮಂದಿ ಈ ಕಾನೂನನ್ನು ವಿರೋಧಿಸಿದಾಗಲೆಲ್ಲ ಅವರ ಸಂವಿಧಾನ ಬದ್ಧ ಹಕ್ಕುಗಳನ್ನು ಮೊಟಕುಗೊಳಿಸುವ ಎಲ್ಲ ಪ್ರಯತ್ನವನ್ನು ಈ ದೇಶದ ಸರಕಾರ ಮಾಡುತ್ತಿದೆ, ಮಾಡಿದೆ ಕೂಡ.

ಬೀದಿಗಿಳಿದು ಹೋರಾಡಿದ ವಿದ್ಯಾರ್ಥಿಗಳ ಮೇಲೆ ದೆಹಲಿಯ ಜಾಮಿಯಾ ಮಿಲ್ಲಿಯಾ ವಿಶ್ವವಿದ್ಯಾಲಯ, ಅಲಿಘಢ ಮುಸ್ಲಿಮ್ ವಿಶ್ವವಿದ್ಯಾಲಯಗಳಲ್ಲಿ ನಡೆಸಿದ ಬರ್ಬರ ದಾಳಿಗಳೇ ಇದಕ್ಕೆ ಸಾಕ್ಷಿ. ಶಾಂತಿಯುತ ಪ್ರತಿಭಟನೆಯನ್ನು ಸಂಘರ್ಷದ ಮಟ್ಟಿಗೆ ತಂದಿಟ್ಟ ಪೊಲೀಸರು ಪ್ರಜಾಪ್ರಭುತ್ವದ ಅತ್ಯಂತ ಪ್ರಬಲ ಅಸ್ತ್ರ ‘ಪ್ರತಿಭಟನೆ’ ಯನ್ನು ಅಶ್ರುವಾಯು, ಬಂದುಕೂ ದಾಳಿಯಿಂದ ಹತ್ತಿಕ್ಕಲು ಪ್ರಯತ್ನಿಸಲಾಗುತ್ತದೆ.

ದೇಶದ ಜನತೆ ಪೌರತ್ವ ತಿದ್ದುಪಡಿ ಕಾಯಿದೆ ಮತ್ತು ವಿದ್ಯಾರ್ಥಿಗಳ ಮೇಲಿನ ದಾಳಿ ಖಂಡಿಸಿ ದೇಶದಾದ್ಯಂತ ಪ್ರತಿಭಟನೆಗೆ ಕರೆ ನೀಡಿದರೆ ಶಾಂತಿಯುತ ಪ್ರತಿಭಟನೆಗೆ ಅವಕಾಶ ನೀಡಿದಾಗ ಪ್ರತಿಭಟಿಸಲು ಅವಕಾಶ ನೀಡಬೇಕಾದ ಸರಕಾರ ತನ್ನ ಸರ್ವಾಧಿಕಾರ ಧೋರಣೆಯ ಮೂಲಕ ಪ್ರತಿಭಟನೆಗಳನ್ನು ಹತ್ತಿಕ್ಕಲು ಪ್ರಯತ್ನಿಸಿದೆ. ಬಿಜೆಪಿ ಆಡಳಿತದ ಬಹುತೇಕ ರಾಜ್ಯಗಳಲ್ಲಿ ಪ್ರತಿಭಟನೆ ಹತ್ತಿಕುವ ಭರದಲ್ಲಿ ಸಿ.ಆರ್.ಪಿ.ಸಿ ಸೆಕ್ಷನ್ 144 ಜಾರಿ ಮಾಡಿ ಸಂವಿಧಾನ ಬದ್ಧ ಪ್ರತಿಭಟನೆಗಳ ಮೇಲೆ ನಿರ್ಬಂಧ ಹೇರುವ ಪ್ರಯತ್ನ ಸಾಗುತ್ತಿದೆ. ಕರ್ನಾಟಕದಲ್ಲಿ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ 144 ಸೆಕ್ಷನ್ ಜಾರಿ ಮಾಡಿ ಜನರ ದನಿ ಅಡಗಿಸುವ ಪ್ರಯತ್ನ ಮಾಡಲಾಗುತ್ತದೆ. ಆದರೆ ಜನ ಮಾತ್ರ ಬಹುತೇಕ ಕಡೆಗಳಲ್ಲಿ ತಮ್ಮ ಸಂವಿಧಾನ ಬದ್ಧ ಹಕ್ಕು ಚಲಾಯಿಸಲು ನಿಷೇಧಾಜ್ಞೆಯನ್ನು ಲೆಕ್ಕಿಸದೆ ಶಾಂತಿಯುತ ಪ್ರತಿಭಟನೆ ಮುಂದಾಗಿದೆ ಈ ಸಂದರ್ಭದಲ್ಲಿ ಪೊಲೀಸರು ಬೆಂಗಳೂರಿನಂತಹ ನಗರಗಳಲ್ಲೂ ಆರಂಭದಲ್ಲಿ ಬೀದಿಗಿಳಿದ ಜನರ ಮೇಲೆ ದಬ್ಬಾಳಿಕೆ ತೋರಲು ಮುಂದಾಗಿದೆ. ಶಾಂತಿಯುತವಾಗಿ ಪ್ರತಿಭಟಿಸುತ್ತ ಸರಕಾರದ ದೌರ್ಜನ್ಯದ ವಿಚಾರಗಳನ್ನು ಮಾಧ್ಯಮಗಳೊಂದಿಗೆ ಹಂಚಿಕೊಳ್ಳುತ್ತಿದ್ದ ರಾಮಚಂದ್ರ ಗುಹಾರಂತಹ ಖ್ಯಾತ ಇತಿಹಾಸಕಾರರನ್ನು ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದಮನಿಸಿ ವಶಕ್ಕೆ ತೆಗೆದುಕೊಳ್ಳಲಾಗುತ್ತದೆ. ನಂತರ ಜನಾಕ್ರೋಶ ಹೆಚ್ಚಾಗಿ ಸಾವಿರ ಸಾವಿರ ಸಂಖ್ಯೆಯಲ್ಲಿ ಜನ ಬೀದಿಗೆ ಇಳಿದು ಪೌರತ್ವ ತಿದ್ದುಪಡಿ ಕಾಯಿದೆ ಮತ್ತು ಪೊಲೀಸ್ ಕ್ರಮದ ಬಗ್ಗೆ ಬೀದಿಗಿಳಿದಾಗ ಸರಕಾರದ ಪೊಳ್ಳು ಜಂಭ ಮತ್ತು ಪೊಲೀಸರ ದಬ್ಬಾಳಿಕೆ ಜನರ ಶಾಂತಿಯುತ ಪ್ರತಿಭಟನೆಯ ಮುಂದೆ ಮಂಡಿಯೂರುತ್ತದೆ.

ಮಂಗಳೂರಿನಲ್ಲೂ ಇದೇ ರೀತಿ ಸರಕಾರದ ನೀತಿಗಳಿಂದ ಬೆಸತ್ತ ಜನರು, ಪೊಲೀಸರು ಕಿತ್ತುಕೊಂಡ ಸಂವಿಧಾನ ಬದ್ದ ಹಕ್ಕಿನ ಬಗ್ಗೆ ಪ್ರಶ್ನಿಸಲು ಕೆಲವು ನೂರು ಮಂದಿ ಬೀದಿಗಿಳಿದಿದ್ದಾರೆ. ಮೊದಲೇ ಅಲ್ಪಸಂಖ್ಯಾತರ ಬಗ್ಗೆ ಕಾಮಾಲೆ ಕಣ್ಣನ್ನು ಹೊಂದಿರುವ ವ್ಯವಸ್ಥೆಗೆ 144 ಸೆಕ್ಷನ್ ಲೆಕ್ಕಿಸದೆ ಬೀದಿಗಿಳಿದು ಪ್ರತಿಭಟಿಸಿದ್ದು ಸರಕಾರದ ಅಹಂಕಾರಕ್ಕೆ ಬಿದ್ದ ಕೊಡಲಿಯೇಟು. ಈ ಸಂದರ್ಭದಲ್ಲಿ ಜವಾಬ್ದಾರಿಯುತ ಸರಕಾರವಾಗಿದ್ದರೆ 144 ಸೆಕ್ಷನ್ ಉಲ್ಲಂಘಿಸಿದ ಪ್ರತಿಭಟನಾಕಾರರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದನ್ನು ಬಿಟ್ಟು ಅವರು ಕಲ್ಲು ಎಸೆದರೆಂದು (ಪೊಲೀಸರೇ ಹೇಳುವಂತೆ) ನೀವು ಗುಂಡು ಹಾರಿಸುವುದು ಎಂದರೆ ಅದು ಪೊಲೀಸ್ ವ್ಯವಸ್ಥೆಯ ದೌರ್ಜನ್ಯಕ್ಕೆ ಹಿಡಿದ ಕೈಗನ್ನಡಿಯಾಗಿದೆ. ದೇಶದಲ್ಲಿ ಲಕ್ಷಗಟ್ಟಲೆ ಸಂಖ್ಯೆಯಲ್ಲಿ ಜನರು ಬೀದಿಗಿಳಿದು ಪ್ರತಿಭಟಿಸಿದ ಸಂದರ್ಭದಲ್ಲೂ ಅವರನ್ನು ನಿಯಂತ್ರಿಸುವ ಸಾಮರ್ಥ್ಯವಿರುವ ಪೊಲೀಸರು ಪ್ರತಿಭಟನಾಕಾರರು ಪೊಲೀಸರನ್ನು ಹತ್ಯೆ ಮಾಡಲು ಬಂದಾಗ ಅನಿವಾರ್ಯವಾಗಿ ಬಲ ಪ್ರಯೋಗಿಸಲಾಯಿತು ಎಂಬ ಮಂಗಳೂರು ನಗರ ಆಯುಕ್ತರ ಮಾತು ಬಹಳಷ್ಟು ಅನುಮಾನ ಸೃಷ್ಟಿಸುತ್ತಿದೆ. ಯಾಕೆಂದರೆ ಈಗಾಗಲೇ ಈ ಘಟನೆಯ ಕುರಿತು ಹರಿದಾಡುತ್ತಿರುವ ಹಲವು ವೀಡಿಯೋ ಫುಟೇಜ್ ಗಳು ಪೊಲೀಸರ ದೌರ್ಜನ್ಯ ಮತ್ತು ದಬ್ಬಾಳಿಕೆ ಸಾಕ್ಷ್ಯದಂತಿದೆ. ಗುಡಾಂಗಡಿಯ ಮೇಲಿನ ದಾಳಿ, ಅಮಾಯಕ ವಿದ್ಯಾರ್ಥಿಗಳ ಮೇಲಿನ ದಾಳಿ, ನೇರವಾಗಿ ಗುಂಪಿನ ಮೇಲೆ ಪೊಲೀಸರ ಗುಂಡಿನ ದಾಳಿ ಇವೆಲ್ಲವೂ ಕೂಡ ವೀಡಿಯೋ ಗಳಲ್ಲಿ ದಾಖಲಾದ ಸತ್ಯಗಳು. ಈ ದೇಶದಲ್ಲಿ ಪೊಲೀಸ್ ಇಲಾಖೆ ಇರುವುದು ಜನರನ್ನು ರಕ್ಷಿಸಲು. ಆದರೆ ಈ ಘಟನೆಯು ಬೇಲಿಯೇ ಎದ್ದು ಹೊಲ ಮೇಯ್ದದಂತೆ ಎಂಬಂತಾಗಿದೆ.

ಪೊಲೀಸರ ಮೇಲೆ ನಿಯಂತ್ರಿಸಬಹುದಾದ ಪ್ರತಿಭಟನಾಕಾರರು ಕಲ್ಲು ತೂರಿದ್ದಾರೆಂಬ ಕಾರಣಕ್ಕೆ ಸಾರ್ವಜನಿಕರ ಮೇಲೆ ನೇರವಾಗಿ ಗುಂಡು ಹಾರಿಸಿದ್ದನ್ನು ಪ್ರಶ್ನಿಸಲೇ ಬೇಕಾಗಿದೆ. ಈ ಬಗ್ಗೆ ನಾಗರಿಕ ಸಮಾಜ ಸ್ವತಂತ್ರ ನ್ಯಾಯಾಂಗ ತನಿಖೆಗೆ ಆಗ್ರಹಿಸಬೇಕು. ಪೊಲೀಸರ ಹೇಳಿಕೆಗಳು ಸಾಕಷ್ಟು ಅನುಮಾನ ಸೃಷ್ಟಿಸಿದ್ದು ಇದರ ಹಿಂದಿನ ಸತ್ಯಾಸತ್ಯತೆಗಳು ಹೊರ ಬರಬೇಕು. ಅಲ್ಲಿಯವರೆಗೆ ಈ ಘಟನೆಗೆ ಕಾರಣರಾದ ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಬೇಕು. ಆಗ ಮಾತ್ರ ಪೊಲೀಸರು ನಡೆಸಿರುವ ಈ ಕೃತ್ಯದ ಹಿಂದಿನ ಕಾಣದ ಮುಖ ಬೆಳಕಿಗೆ ಬರಲಿದೆ.

ಇನ್ನು ಅತೀ ಮುಖ್ಯವಾಗಿ ಸೆಕ್ಷನ್ 144 ಹಾಕಿದಂತಹ ಸಂದರ್ಭದಲ್ಲಿ ಸಾರ್ವಜನಿಕರು ಬೀದಿಗಿಳಿದು ಪ್ರತಿಭಟಿಸಿದ ಉದಾಹರಣೆ ಬೇರೆ ಬೇರೆ ಸಂದರ್ಭದಲ್ಲಿ ಸಾಕಷ್ಟಿವೆ. ಅವರನ್ನು ವಶಕ್ಕೆ ಪಡೆದು ಸೆಕ್ಷನ್ 144 ಉಲ್ಲಂಘನೆಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದು ರೂಢಿ.‌ ಅದಕ್ಕಾಗಿ ಸೂಕ್ತ ಬಂದೋಬಸ್ತು. ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸ್ ನಿಯೋಜನೆ ಇವೆಲ್ಲ ಕ್ರಮಗಳನ್ನು ಪೊಲೀಸ್ ಇಲಾಖೆ ಕೈಗೊಳ್ಳಬೇಕು. ಬೆಂಗಳೂರಿನಲ್ಲಿ ಪೊಲೀಸರು ಕೈಗೊಂಡ ಕ್ರಮಕ್ಕೂ ಮಂಗಳೂರು ಪೊಲೀಸ್ ಕ್ರಮಕ್ಕೂ ಅಜಗಜಾಂತರ ವ್ಯತ್ಯಾಸವಿದೆ. ಕೆಲವು ನೂರು ಪ್ರತಿಭಟನಕಾರರು ಬೀದಿಗಿಳಿದಾಗ ಅದನ್ನು ನಿಯಂತ್ರಿಸಲು ಬೇಕಾದ ಕ್ರಮ, ಪೊಲೀಸ್ ಸಂಖ್ಯೆ ನಿಯೋಜನೆ ಮಾಡದೆ ಪ್ರತಿಭಟನಾಕಾರರು ತಮ್ಮ ನಿಯಂತ್ರಣಕ್ಕೆ ಬಾರದಾಗ ಗುಂಡು ಹೊಡೆದು ಕೊಲ್ಲುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ, ಅದು ಪೊಲೀಸರ ವೈಫಲ್ಯದ ಲಕ್ಷಣ!

LEAVE A REPLY

Please enter your comment!
Please enter your name here

Latest news

ಎರಡನೆಯ ದಿನವೂ ಮುಂದುವರೆದ ಆಶಾ ಕಾರ್ಯಕರ್ತೆಯರ ಪ್ರತಿಭಟನೆ

ಹೊಸಪೇಟೆ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘ, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ ಎರಡನೇ ದಿನವೂ ಪ್ರತಿಭಟನೆ...

ಪಿಯು ಫಲಿತಾಂಶ :ಉಡುಪಿಯ ಅಭಿಜ್ಞಾ ರಾವ್ ರಾಜ್ಯಕ್ಕೆ ಪ್ರಥಮ

ಉಡುಪಿ, ಜುಲೈ 14: ಕೊರೊನಾ ವೈರಸ್ ಸೋಂಕಿನಿಂದ ವಿಳಂಬವಾಗಿದ್ದ ಬಹು ನಿರೀಕ್ಷಿತ ದ್ವಿತೀಯ ಪಿಯುಸಿ ಫಲಿತಾಂಶ ಇಂದು ಮಧ್ಯಾಹ್ನ ಪ್ರಕಟವಾಗಿದ್ದು, ವಿಜ್ಞಾನ ವಿಭಾಗದಲ್ಲಿ ಉಡುಪಿಯ ಅಭಿಜ್ಞಾ...

ಕೋರೊನಾ ಸೋಂಕು: ಉಡುಪಿ ನಗರ ಸಭೆ ಸಿಲ್’ಡೌನ್!

ಉಡುಪಿ ನಗರ ಪಾಲಿಕೆ ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟ ಕಾರಣದಿಂದಾಗಿ ಉಡುಪಿ ನಗರ ಪಾಲಿಕೆ ಕಚೇರಿ ಸೀಲ್‌ಡೌನ್ ಮಾಡಲಾಗಿದೆ. ಇನ್ನು ಈ ಸಿಬ್ಬಂದಿ ಕಳೆದ ಹಲವು ದಿನಗಳಿಂದ...

ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆಗೆ ಬಂದರೆ ಕೂಡಲೇ ಚಿಕಿತ್ಸೆ ನೀಡಲು ಆಸ್ಪತ್ರೆಗೆ ಆದೇಶ

ಬೆಂಗಳೂರು: ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ರೋಗಿಗಳನ್ನು 108 ಆಂಬುಲೆನ್ಸ್ ಗಳಲ್ಲಿ ಕರೆದು ತಂದಾಗ, ಬಿ.ಬಿ.ಎಂ.ಪಿ ಯ ಪತ್ರ / ಲ್ಯಾಬ್ ...

ಶಮನವಾಗದ ಭಿನ್ನಮತ; ಸಚಿನ್ ಪೈಲೆಟ್ ಸೇರಿದಂತೆ ಇಬ್ಬರು ಸಚಿವರು ಕ್ಯಾಬಿನೆಟ್ ನಿಂದ ವಜಾ!

ಜೈಪುರ:ಶಮನವಾಗದ ಭಿನ್ನಮತ ಹಿನ್ನಲೆಯಲ್ಲಿ ಇಂದು ಶಾಸಕಾಂಗ ಸಭೆಗೆ ಹಾಜರಾಗದ ಸಚಿನ್ ಪೈಲೆಟ್ ಸೇರಿದಂತೆ ಇಬ್ಬರು ಸಚಿವರು ಕ್ಯಾಬಿನೆಟ್ ನಿಂದ ವಜಾಗೊಂಡಿದ್ದಾರೆ. ರಾಜಸ್ತಾನ ಕಾಂಗ್ರೆಸ್ ವಲಯದಲ್ಲಿ ಭುಗಿಲೆದ್ದಿರುವ ಭಿನ್ನಮತ...

ಉಡುಪಿಯಲ್ಲಿ ಲಾಕ್’ಡೌನ್ ಇಲ್ಲ, ಜಿಲ್ಲಾ ಗಡಿ ಬಂದ್ – ಜಿಲ್ಲಾಡಳಿತ

ಇಂದು ದಿನಾಂಕ 14-07-2020 ರಂದು ಶಾಸಕರಾದ ಶ್ರೀ ಕೆ. ರಘುಪತಿ ಭಟ್ ರವರು ಮಾನ್ಯ ಜಿಲ್ಲಾಧಿಕಾರಿಯವರ ಅಧ್ಯಕ್ಷತೆಯಲ್ಲಿ ಕೋವಿಡ್ 19 ತಡೆಗಟ್ಟುವಿಕೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳ...

Must read

ಆರಾಧನ ಸ್ಥಳ (ವಿಶೇಷ ಕಾಯಿದೆ) – 1991 ಯ ಸುತ್ತ ಮುತ್ತ.

ಲೇಖಕರು: ಯಾಸೀನ್ ಕೋಡಿಬೆಂಗ್ರೆ (ಕಾನೂನು ಪದವೀಧರ ಮತ್ತು ರಾಜಕೀಯ ಶಾಸ್ತ್ರ, ಸ್ನಾತ್ತಕೋತರ...

You might also likeRELATED
Recommended to you

error: Content is protected !!