ಅನಿವಾಸಿ ಭಾರತೀಯರು ನಮ್ಮವರು; ನಮ್ಮ ಹೋರಾಟ ರೋಗದೊಂದಿಗೆ ಹೊರತು ರೋಗಿಯೊಂದಿಗಲ್ಲ!

ಸೋಮವಾರದಿಂದ ಶಾಲೆ ತೆರೆದರೂ, ಕ್ಲಾಸ್ ಇಲ್ಲ – ಇಲ್ಲಿದೆ ಡಿಟೈಲ್ಸ್!

ಬೆಂಗಳೂರು: ಸೋಮವಾರದಿಂದ ಶಾಲೆಗಳ ಬಾಗಿಲು ತೆರೆದರೂ ತರಗತಿಗಳು ನಡೆಯುವುದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್‌ಕುಮಾರ್‌ ಸ್ಪಷ್ಟಪಡಿಸಿದ್ದಾರೆ. ಕೇಂದ್ರ ಸರಕಾರದ ಆದೇಶದ ಪ್ರಕಾರ 9, 10, 11, 12ನೇ ತರಗತಿ ವಿದ್ಯಾರ್ಥಿಗಳಿಗೆ ಸೆ. 21ರಿಂದ ಶಾಲೆಗೆ ಹೋಗಿ...

ಬೆಳ್ತಂಗಡಿ: ಸ್ಕೂಟರ್ ಕಳವು, ಮೂವರು ಆರೋಪಿಗಳ ಬಂಧನ

ಬೆಳ್ತಂಗಡಿ : ದಕ್ಷಿಣ ಕನ್ನಡ ಜಿಲ್ಲೆಯ ಉಜಿರೆ ಗ್ರಾಮದಲ್ಲಿ ನಡೆದ ಸ್ಕೂಟರ್ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಸ್ಕೂಟರ್ ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.ಉಜಿರೆ ಗ್ರಾಮದ ಅರುಣ್ ಶೆಟ್ಟಿ,ಹೇಮಂತ್ ಯಾನೆ ಹರ್ಷಿತ್,ಸಂಪತ್...

ವಿವಾದಾತ್ಮಕ ಎನ್’ಕೌಂಟರ್: ಸೈನ್ಯದಿಂದಲೇ ತನಿಖೆ, ತಪ್ಪಿತಸ್ಥರ ವಿರುದ್ಧ ಕ್ರಮದ ಭರವಸೆ!

ಜಮ್ಮು ಮತ್ತು ಕಾಶ್ಮೀರ: ವಿಶ್ವದಲ್ಲೇ ಅತೀ ಹೆಚ್ಚು ಸೈನ್ಯವನ್ನು ನಿಯೋಜಿಸಿರುವ ರಾಜ್ಯ ಕಾಶ್ಮೀರ. ಇಲ್ಲಿ ದಾಳಿ-ಪ್ರತಿದಾಳಿಗೆ ಸಾವಿರಾರು ಜೀವ ಹಾನಿಗಳು ಸಂಭವಿಸಿವೆ. ಇದೀಗ ಜುಲೈ 18 ರಂದು ಸೈನ್ಯದಿಂದ ಹತರಾದ ಮೂವರ ಎನ್'ಕೌಂಟರ್...

ಫೋನ್ ಟ್ರೇಡರ್ಸ್: OPPO F17 ಬುಕ್ ಮಾಡಿ ಆಕರ್ಷಕ ಉಡುಗೊರೆ ಗೆಲ್ಲಿ!

ಸಂತೆಕಟ್ಟೆ: ಜನಪ್ರಿಯ ಒಪ್ಪೊ ಸಂಸ್ಥೆ ವಿನೂತನ ಮಾದರಿಯ ಮತ್ತು ತಂತ್ರಜ್ಞಾನ ಒಳಗೊಂಡ OPPO f17 ಮೊಬೈಲ್'ನ್ನು ಹೊರ ತಂದಿದೆ. ಸಂತೆಕಟ್ಟೆಯಲ್ಲಿರುವ ಖ್ಯಾತ ಮೊಬೈಲ್ ಶಾಪ್ ಫೋನ್ ಟ್ರೇಡರ್ಸ್' ನಲ್ಲಿ ಪ್ರಿ ಬುಕ್ ಮಾಡಿ ಆಕರ್ಷಕ...

ಕೃಷಿ ಮಸೂದೆಯ ಬಗ್ಗೆ ಸುಳ್ಳು ಹಬ್ಬಿಸಬೇಡಿ – ಪ್ರಧಾನಿ ನರೇಂದ್ರ ಮೋದಿ

ನವದೆಹಲಿ: ಲೋಕಸಭೆಯಲ್ಲಿ ಕೇಂದ್ರ ಸರ್ಕಾರ ಕೃಷಿ ಕ್ಷೇತ್ರ ಕುರಿತಾದ ಮಂಡಿಸಿದ್ದ ಮೂರು ಮಸೂದೆಗಳನ್ನು ವಿರೋಧಿಸುತ್ತಿರುವ ವಿಪಕ್ಷಗಳ ವಿರುದ್ಧ ಆಕ್ರೊಶ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ಕೃಷಿ ಕ್ಷೇತ್ರದ ಮಸೂದೆಗಳ ಬಗ್ಗೆ ರಾಜಕೀಯ ಪಕ್ಷಗಳು...

ಸಂಪಾದಕೀಯ

ಕೋವಿಡ್ -19 ಸೋಂಕು ದೇಶದಲ್ಲಿ ಆತಂಕ ಸೃಷ್ಟಿಸಿರುವ ನಡುವೆ ಜನರ ಅಜ್ಞಾನ ಮತ್ತಷ್ಟು ಚಿಂತೆಗೆ ಎಡೆ ಮಾಡಿಕೊಟ್ಟಿದೆ. ಕೋವಿಡ್ 19 ಸೋಂಕುಗಳಿಗೆ ಬಾಧಿತರಾಗಿರುವವರ ಕುರಿತು ಜನರು ತೋರುತ್ತಿರುವ ತಾರತಮ್ಯ ಒಂದು ದೊಡ್ಡ ಸಮಸ್ಯೆಯಾಗಿ ಮಾರ್ಪಟ್ಟಿದೆ. ಜಗತ್ತಿನಲ್ಲಿ ಮನುಷ್ಯನು ಹುಟ್ಟಿದ ಮೇಲೆ ಪ್ರಕೃತಿದತ್ತವಾಗಿ ಹಲವಾರು ರೋಗಗಳಿಗೆ ತುತ್ತಾಗುತ್ತಾನೆ. ರೋಗವೊಂದು ಬರುವ ಸಂದರ್ಭದಲ್ಲಿ ಆತನ ಜಾತಿ, ಧರ್ಮ,ಬಣ್ಣ,ವರ್ಗ, ಭಾಷೆ, ಪ್ರಾದೇಶಿಕತೆಯನ್ನು ಪರಿಗಣಿಸಿ ಬರಲು ಅದು ರಾಜಕೀಯದ ನೇತಾರನಲ್ಲ. ದೈವದತ್ತವಾಗಿ ಬಂದಿರುವ ವೈರಸ್.ಮಾನವರೆಂದ ಮೇಲೆ ಒಂದಲ್ಲ ಒಂದು ಸೋಂಕು ಬರುವುದು ಸಾಮಾನ್ಯ. ಇಂತಹ ಪರಿಸ್ಥಿತಿಯಲ್ಲಿ ಸೋಂಕಿತರ ಬಗ್ಗೆ ಮನಸ್ಸಿನಲ್ಲಿ ತಾರತಮ್ಯ ತೋರದೆ ಅವರ ಆರೈಕೆಯ ಬಗ್ಗೆ ಗಮನಹರಿಸಬೇಕು.

ಕೋವಿಡ್ – 19 ಸಾಂಕ್ರಾಮಿಕ ರೋಗವಾಗಿರುವ ಕಾರಣ ಸೋಂಕಿತರಿಂದ ಅಂತರ ಕಾಯ್ದುಕೊಳ್ಳಲು ಹೇಳಲಾಗಿದೆ. ಅದು ಮುನ್ನೆಚ್ಚರಿಕೆಯ ಭಾಗ ಹೊರತು ಸೋಂಕಿತರೊಂದಿಗೆ ತಾರತಮ್ಯ ಮಾಡಿ, ಅವರ ಬಗ್ಗೆ ತಾತ್ಸರದ ಮನೋಭಾವವನ್ನು ಇಟ್ಟು ಕೊಳ್ಳಿ ಎಂದಲ್ಲ.

ಇತ್ತೀಚಿಗೆ ಕೆಲವರು ಗುಪ್ತ ಕಾರ್ಯಸೂಚಿಗಳನ್ನು ಸಾಧಿಸುವ ಸಲುವಾಗಿ ಒಂದು ಸಮುದಾಯದ ಜನರ ಮೇಲೆ ಸೋಂಕಿನ ಆರೋಪ ಹೊರಿಸಲು ತಮ್ಮ ಬಳಿಯಿದ್ದ ಎಲ್ಲ ಶಕ್ತಿಯನ್ನು ಉಪಯೋಗಿಸಿ ಪ್ರಯತ್ನಿಸಿ ನೋಡಿದರು. ಜನರಲ್ಲಿ ಸೋಂಕಿತರ ಬಗ್ಗೆ ಸಹನೀಯ ಗುಣ ಬೆಳೆಸುವುದನ್ನು ಬಿಟ್ಟು ಅವರೊಂದಿಗೆ ಒರಟಾಗಿ ವರ್ತಿಸುವ ಹಾಗೆ ವಿಷ ಬೀಜ ಬಿತ್ತಿದರು. ಸ್ವಲ್ಪ ಸಮಯ ಅದರಲ್ಲಿ ಯಶಸ್ವಿಯಾದರೂ ನಂತರ ಅವರ ದುಷ್ಟ ಆಟ ಜನರಿಗೆ ಮನವರಿಕೆಯಾಯಿತು. ಇದೀಗ ಮತ್ತೆ ಹೊರ ದೇಶಗಳಿಂದ ಬರುವ ಅನಿವಾಸಿ ಭಾರತೀಯರ ಬಗ್ಗೆ ದ್ವೇಷ ಕಾರುತ್ತ ಅವರು ಸೋಂಕು ವಾಹಕರೆಂದು ಬಡಬಡಾಯಿಸಲು ಆರಂಭಿಸಿದ್ದಾರೆ. ದೇಶದಲ್ಲಿ ಕೆಲಸ ಸಿಗದೆ ತನ್ನ ಕುಟುಂಬ ನಿರ್ವಹಣೆಯ ಹೊಣೆ ಹೊತ್ತು ಯಾರು ತನ್ನವೆರೆಂಬುವವರು ಇಲ್ಲದ ದೂರದ ಪರದೇಶಗಳಿಗೆ ತೆರಳಿದ ಅನಿವಾಸಿ ಭಾರತೀಯರೂ ಈ ದೇಶದ ನಾಗರಿಕರೇ ಹೊರತು ಅನ್ಯರಲ್ಲ. ಅನಿವಾಸಿ ಭಾರತೀಯರು ಈ ದೇಶಕ್ಕೆ ಅನನ್ಯ ಕೊಡುಗೆ ಕೊಟ್ಟಿದ್ದಾರೆ. ದೇಶದ ಸಂಕಷ್ಟದ ಸಂದರ್ಭದಲ್ಲಿ ಹೆಗಲಿಗೆ ಹೆಗಲು ಕೊಟ್ಟು ನಮ್ಮೊಂದಿಗಿದ್ದರು. ನಮ್ಮ ದೇಶದ ಪ್ರಧಾನಿ ಕೊಲ್ಲಿ ರಾಷ್ಟ್ರಗಳಿಗೆ ಭೇಟಿಕೊಟ್ಟಾಗ ಕೆಂಪು ಹಾಸು ಹಾಕಿ ಸ್ವಾಗತಿಸಿದ್ದಾರೆ. ಆಗ ಇಲ್ಲಿನ ನರೇಂದ್ರ ಮೋದಿ ಅಭಿಮಾನಿಗಳು ಕೇಕೆ ಹಾಕಿ ಸಂಭ್ರಮಿಸಿದ್ದು ಮಾತ್ರವಲ್ಲ, ಅನಿವಾಸಿ ಭಾರತೀಯರ ನಡವಳಿಕೆಯನ್ನು ವ್ಯಾಪಕವಾಗಿ ಪ್ರಶಂಸಿಸಿದ್ದಾರೆ. ಆದರೆ ಅದೇ ಅನಿವಾಸಿ ಭಾರತೀಯರು ಇಂದು ಸಂಕಷ್ಟದಲ್ಲಿದ್ದಾರೆ. ಬಹಳಷ್ಟು ಮಂದಿ ಉದ್ಯೋಗ ಹುಡುಕಿಕೊಂಡು ಹೊರಟಿದ್ದು ನಂತರ ಕೋವಿಡ್ 19 ಕಾರಣಕ್ಕೆ ಉದ್ಯೋಗ ಸಿಗದೆ ಅತ್ತ ಕೈಯಲ್ಲಿ ಕಾಸಿಲ್ಲದೇ ಪರದಾಡುತ್ತಿದ್ದಾರೆ.ಅಲ್ಲಿ ಸಿಲುಕಿ ಹಾಕಿಕೊಂಡವರಲ್ಲಿ ಗರ್ಭಿಣಿಯರಿದ್ದಾರೆ, ವೃದ್ದರಿದ್ದಾರೆ, ಅಷ್ಟೇ ಅಲ್ಲ ಕಂಪೆನಿಗಳು ನಷ್ಟ ಹೊಂದಿ ಕೆಲಸಗಳಿಂದ ವಜಾಗೊಳಿಸಲ್ಪಟ್ಟ ಹಲವು ಮಂದಿ ಸಿಲುಕಿ ಹಾಕಿಕೊಂಡು ಒಂದು ಹೊತ್ತಿನ ಊಟಕ್ಕು ಪರದಾಡುತ್ತಿರುವವರು ಇದ್ದಾರೆ. ಇಂತಹ ಸಂಕಷ್ಟದ ಸಮಯದಲ್ಲಿ ಅವರನ್ನು ಸಂರಕ್ಷಿಸುವುದು ಅವರ ತವರು ದೇಶದ ಕರ್ತವ್ಯ. ಅದನ್ನೇ ಪ್ರಸ್ತುತ ಕೇಂದ್ರ ಸರಕಾರ ಮಾಡುತ್ತಿದೆ. ಇಂತಹ ಸಂದರ್ಭದಲ್ಲಿ ಪ್ರಜ್ಞಾವಂತ ನಾಗರಿಕರಾದ ನಾವು ಅವರನ್ನು ತೆಗಳದೆ ಅವರ ಆಗಮನವನ್ನು ಸ್ವಾಗತಿಸಬೇಕಾಗಿದೆ. ಸೋಂಕು ನಿಯಂತ್ರಿಸಲು ಸರಕಾರ ಸಾಕಷ್ಟು ಕ್ರಮವನ್ನು ಕೈಗೆತ್ತಿಕೊಂಡಿದೆ. ಪ್ರತಿ ಜಿಲ್ಲಾ ವ್ಯಾಪ್ತಿಯಲ್ಲಿ ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ನಿಗಾ ವಹಿಸಲಾಗುತ್ತಿದೆ. ಇಂತಹ ಸಂದರ್ಭದಲ್ಲಿ ಜಿಲ್ಲಾಡಳಿತ ಅನಿವಾಸಿ ಭಾರತೀಯರನ್ನು ಕರೆಸಿಕೊಳ್ಳಲು ಪಡುತ್ತಿರುವ ಶ್ರಮದೊಂದಿಗೆ ಕೈ ಜೋಡಿಸುವುದು ಅನಿವಾರ್ಯ. ಯಾಕೆಂದರೆ ಒಂದು ವೇಳೆ ನಮ್ಮ ನಮ್ಮ ಮನೆಯ ವ್ಯಕ್ತಿಗಳು ಅವರಲೊಬ್ಬರಾಗಿದ್ದರೆ ನಾವು ಯಾವ ರೀತಿಯಲ್ಲಿ ಸ್ಪಂದಿಸುತ್ತಿದ್ದೇವೋ ಅದೇ ರೀತಿಯ ಸ್ಪಂದನೆ ಅತೀ ಅಗತ್ಯ. ಕೋವಿಡ್ 19 ಎಂಬುವುದು ಸಾಂಕ್ರಾಮಿಕ ರೋಗ ಅದು ಒಬ್ಬರಿಂದ ಮತ್ತೊಬ್ಬರಿಗೆ ಸಂಪರ್ಕದ ಮುಖಾಂತರ ಹರಡುತ್ತದೆ. ಆದರೆ ಆ ರೋಗವನ್ನು ನಿಯಂತ್ರಿಸುವ ಸಲುವಾಗಿ ಸೋಂಕಿತರನ್ನು ದ್ವೇಷಿಸಿ ಫಲವಿಲ್ಲ. ಆ ರೋಗದಿಂದ ಗುಣಮುಖರಾಗುವವರ ಸಂಖ್ಯೆ ಹೆಚ್ಚಿರುವುದರಿಂದ ಈ ಸಂದರ್ಭದಲ್ಲಿ ನಾವು ಅವರಿಗೆ ಧೈರ್ಯ ತುಂಬ ಬೇಕೇ ಹೊರತು ಅವರ ಬಗೆಗಿನ ತಾತ್ಸರ ಮನೋಭಾವ ಕೈ ಬಿಡಬೇಕು.

ಈ ದೇಶದಲ್ಲಿ ಅಸ್ಪೃಶ್ಯತೆಯ ಮನೋಭಾವವನ್ನು ಹುಟ್ಟು ಹಾಕಿದ ಒಂದು ಮನುಷ್ಯತ್ವ ವಿರೋಧಿ ವರ್ಗವೆಯೇ ಇಂದು ಕೋವಿಡ್ 19 ಸೋಂಕಿತರ ಬಗ್ಗೆ ಅಪಸ್ವರ ಎತ್ತುತ್ತಿದೆ. ಅದರೊಂದಿಗೆ ರೋಗದಲ್ಲೂ ಜಾತಿ, ಧರ್ಮ, ಭಾಷೆ, ಪ್ರಾದೇಶಿಕತೆ, ಲಿಂಗ ತಾರತಮ್ಯದ ಒರಟು ವಾಸನೆಯನ್ನು ಹರಡಲು ಪ್ರಯತ್ನಿಸುತ್ತಿದೆ. ಆ ಕಾರಣಕ್ಕಾಗಿ ಅದು ಒಂದು ವೈರಸ್’ಗೆ ತಬ್ಲಿಘಿ ವೈರಸ್,ಗರ್ಭಿಣಿ ವೈರಸ್,ಬಿಹಾರಿ ವೈರಸ್, ನರ್ಸ್ ವೈರಸ್ ಯೆಂದು ನಾಮಕರಣ ಮಾಡಿ ದ್ವೇಷೋತ್ಪತ್ತಿ ಮಾಡಲು ಯತ್ನಿಸಿದರು. ಇದೀಗ ಅದೆಲ್ಲದರಲ್ಲೂ ಬಹುತೇಕ ವೈಫಲ್ಯ ಅನುಭವಿಸಿದಾಗ ಅನಿವಾಸಿ ಭಾರತೀಯರ ಹಿಂದೆ ಬಿದ್ದು ಅವರ ಬಗೆಗೆ ತಾರತಮ್ಯದ ಹೊಗೆಯಾಡಿಸಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ಈ ಮನಸ್ಥಿತಿಯ ಮರ್ಮವರಿತು, ನಮ್ಮ ಹೋರಾಟ ರೋಗದೊಂದಿಗೆ ಹೊರತು ರೋಗಿಯೊಂದಿಗಲ್ಲ ಎಂಬ ಸಂದೇಶವನ್ನು ಬೇರೆಯವರಿಗೂ ಮನವರಿಕೆ ಮಾಡಬೇಕಾದ ಅನಿವಾರ್ಯ ಸಂದರ್ಭವಿದು.

LEAVE A REPLY

Please enter your comment!
Please enter your name here

Hot Topics

ವಿಚಿತ್ರ ಸ್ವರೂಪದ ಮಗು ಜನನ, ವೈರಲ್ ವಿಡಿಯೋ ಮತ್ತು ಸುದ್ದಿಯ ಹಿಂದಿರುವ ಸತ್ಯಾಂಶ? ?

ಮಿರರ್ ಫೋಕಸ್ : ಜಗತ್ತಿನಲ್ಲಿ ಪ್ರತಿನಿತ್ಯ ಸಾವಿರಾರೂ ಮಕ್ಕಳು ಹುಟ್ಟುತ್ತಲೇ ಇರುತ್ತಾರೆ. ಅದರಲ್ಲಿ ಕೆಲವೊಂದು ಮಗು ವಿಚಿತ್ರ ರೀತಿಯಲ್ಲಿ ಬೆಳವಣಿಗೆ ಹೊಂದುದನ್ನು ನಾವು ದಿನಪತ್ರಿಕೆಗಳಲ್ಲಿ, ಟಿ ವಿ ಮಾಧ್ಯಮದಲ್ಲಿ ನೋಡಿದ್ದೇವೆ ಆದರೆ ಇತ್ತೀಚಗೆ...

ಯಾವುದೋ ಒಂದು ಘಟನೆ ಆಧರಿಸಿ ಮುಸ್ಲಿಮರ ಬಗ್ಗೆ ತಪ್ಪಾಗಿ ಮಾತನಾಡಿದರೆ ಕ್ರಮ – ಮುಖ್ಯಮಂತ್ರಿ ಯಡಿಯೂರಪ್ಪ ಖಡಕ್ ಎಚ್ಚರಿಕೆ

ಬೆಂಗಳೂರು: ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಸಂದರ್ಶಕ ಏಕಾಏಕಿ ಭಾವೋದ್ವೇಗದಿಂದ ಕೆಲವೊಂದು ಪ್ರಶ್ನೆ ಕೇಳಿ ಮುಖ್ಯಮಂತ್ರಿಯನ್ನು ಉದ್ರೇಕಿಸಲು ಪ್ರಯತ್ನಿಸಿದಾಗ ಶಾಂತ ಚಿತ್ತವಾಗಿ ಉತ್ತರ ನೀಡಿದ ಅವರು ನಾನು ಅಲ್ಪಸಂಖ್ಯಾತ ಸಮಾಜದ...

ಕೋರೊನಾ ವೈರಸ್ ಭೀತಿ; ಸಂಬಂಧಿಕರು ಯಾರು‌ ಮುಂದೆ ಬಾರದಿದ್ದಾಗ ಮೃತದೇಹಕ್ಕೆ ಹೆಗಲು ಕೊಟ್ಟ ಮುಸ್ಲಿಮ್ ಬಾಂಧವರು

ಉತ್ತರ:  ರವಿಶಂಕರ್ ಎಂಬ ವ್ಯಕ್ತಿ ಮೃತರಾದಾಗ ಸಂಬಂಧಿಕರು ಯಾರು‌ ಮುಂದೆ ಬಾರದಿದ್ದಾಗ ಮೃತದೇಹಕ್ಕೆ ಮುಸ್ಲಿಂ ಬಾಂಧವರು ಮುಂದೆ ಬಂದು ಹೆಗಲುಕೊಟ್ಟು ಹಿಂದು ಸಂಸ್ಕೃತಿಯೆಂತೆ ಅಂತ್ಯ ಕ್ರಿಯೆ ನಡೆಸಿದ್ದಾರೆ ಈ ವರದಿಯನ್ನು ನವಭಾರತ್ ಟೈಮ್ಸ್...

Related Articles

ಪಕ್ಷ ಬಿಟ್ಟು ಬಿಜೆಪಿ ಸೇರಿದವರೆಲ್ಲ ಮೂಲೆ ಗುಂಪು – ಅದ್ರು ಬುದ್ದಿ ಕಲಿಯುತ್ತಿಲ್ಲ ಕಾಂಗ್ರೆಸ್ ಶಾಸಕರು!

ಸಂಪಾದಕೀಯ ಹೌದು! ಹಣದ ಆಸೆ, ಅಧಿಕಾರದ ವ್ಯಾಮೋಹ ಇತ್ತೀಚಿಗೆ ಜನಪ್ರತಿನಿಧಿಗಳೆನಿಸಿಕೊಂಡವರಲ್ಲಿ ವ್ಯಾಪಕವಾಗುತ್ತಿದೆ. ಆ ಪ್ರಯುಕ್ತ ಪಕ್ಷಾಂತರವಾಗುತ್ತಿರುವವರ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಮಾರ್ಕೆಟ್ ನಲ್ಲಿ ಯಾವ ಪಕ್ಷಕ್ಕೆ ಮೌಲ್ಯವಿದೆಯೆಂದು ನೋಡಿ ಹಾರುವವರ ಸಂಖ್ಯೆ ಬಹಳಷ್ಟಿದೆ. ಹೆಸರಿಗೆ...

ಭೋಪಾಲ್ ಅನಿಲ ದುರಂತ ನೆನಪಿಸಿದ ವಿಝಾಗ್ ಅನಿಲ್ ಸೋರಿಕೆ ದುರಂತ!

ಸಂಪಾದಕೀಯ ಗುರುವಾರ ಬೆಳಿಗ್ಗೆ ವಿಶಾಖಪಟ್ಟಣದಲ್ಲಿ ಸಂಭವಿಸಿದ ವಿಝಾಗ್ ಗ್ಯಾಸ್ ಸೋರಿಕೆಯಿಂದ ಜನರು ಪ್ರಾಣ ಉಳಿಸಲು ಓಡುತ್ತಿದ್ದ ದೃಶ್ಯ ನೋಡುವಾಗ ಸರಿ ಸುಮಾರು 36 ವರ್ಷದ ಹಿಂದೆ ಸಂಭವಿಸಿದ ಭೋಪಾಲ್ ಗ್ಯಾಸ್ ದುರಂತ ನೆನಪಿಗೆ ಬಂತು. ಮಧ್ಯ...

ಕೋವಿಡ್-19 ಲಾಕ್’ಡೌನ್’ನ ಹಿಂದೆ ಕೇಂದ್ರ ಸರಕಾರಕ್ಕೆ ಸಿ.ಎ.ಎ ವಿರೋಧಿ ಹೋರಾಟಗಾರರೇ ಟಾರ್ಗೆಟ್

ಸಂಪಾದಕೀಯ ಕೋವಿಡ್ 19 ಹಾವಳಿಗೆ ದೇಶವೇ ಸ್ತಬ್ಧವಾಗಿದೆ.‌ದೇಶದ ಅರ್ಥಿಕತೆ ಪಾತಾಳಕ್ಕೆ ಕುಸಿದು ಜನ ಸಂಕಷ್ಟದ ಸ್ಥಿತಿಯಲ್ಲಿದ್ದಾರೆ. ಎಲ್ಲೆಡೆಯೂ ಆಹಾಕಾರ ತಾಂಡವಾಡುತ್ತಿದೆ. ಸರಕಾರ ಪ್ಯಾಕೇಜಿನ ಹೆಸರಿನಲ್ಲಿ ಮುಂಗೈಗೆ ಸಿಹಿ ಸವರುವ ಕೆಲಸ ಮಾಡುತ್ತಿದೆ ಹೊರತು, ಜನರ...
Translate »
error: Content is protected !!