ಚೀನಾದವರು ಹತ್ತು ಲಕ್ಷ ಮುಸ್ಲಿಮರನ್ನು ಕೂಡಿಟ್ಟುಕೊಂಡು ಹಿಂಸಿಸುತ್ತಿದ್ದಾರಾ?

ಉಡುಪಿ: ರಾತ್ರಿಯಿಡಿ ಸುರಿದ ಮಹಾ ಮಳೆ; ತಗ್ಗು ಪ್ರದೇಶಗಳು ಜಲಾವೃತ, ಮನೆಗಳಿಗೆ ನುಗ್ಗಿದ ನೀರು

ಉಡುಪಿ: ಜಿಲ್ಲೆಯಲ್ಲಿ ಸತತವಾಗಿ ಗಾಳಿ ಮಳೆ ಮುಂದುವರಿದಿದ್ದು ಶನಿವಾರ ರಾತ್ರಿಯಿಂದ ಮಹಾ ಮಳೆ ಮುಂದುವರಿದಿದೆ. ಕರಾವಳಿ ಪ್ರದೇಶದಲ್ಲಿ ಮಳೆಯೊಂದಿಗೆ ವೇಗವಾಗಿ ಗಾಳಿಯು ಬೀಸುತ್ತಿದ್ದು ಸಮುದ್ರ ಪ್ರಕ್ಷುಬ್ಧವಾಗಿದೆ. ಜಿಲ್ಲೆಯ ತಾಲೂಕುಗಳಾದ ಕುಂದಾಪುರ, ಬ್ರಹ್ಮಾವರ,ಬೈಂದೂರು,ಕಾಪು,ಕಾರ್ಕಳ, ಉಡುಪಿಯಲ್ಲಿ ಸತತವಾಗಿ...

ಬೈಂದೂರು:ಸಿಪಿಎಂ ಪ್ರತಿಭಟಿಸಿ ಸಂಸದರಿಗೆ ಮನವಿ

ಬೈಂದೂರು:ಸೆ.19:ಜನರು ಕೋವಿಡ್ ಸಂಕಷ್ಟದಲ್ಲಿರುವಾಗ 11ಸುಗ್ರೀವಾಜ್ಞೆಗಳನ್ನು ಹೊರಡಿಸಿರುವುದು ಜನತೆಯ ಮೇಲೆ ನಡೆಸಿದ ದಾಳಿಯಾಗಿದೆ ಅಲ್ಲದೇ ರಾಜ್ಯದ ಜನರಿಂದ ಸಂಗ್ರಹಿಸಿದ ಜಿಎಸ್ ಟಿ ಪಾಲು ನೀಡದೇ ಜನರ ಮೇಲೆ ಸಾಲದ ಹೊರೆ ಹೊರಿಸುತ್ತಿರುವುದು ಖಂಡನೀಯ, ಸಂಸತ್...

ಭಾರೀ ಮಳೆಗೆ ಕುಸಿದು ಬಿದ್ದ ಗೋಡೆ, ಕಾರ್ಮಿಕ ಮೃತ್ಯು

ಮಂಗಳೂರು: ರಾಜ್ಯಾದ್ಯಂತ ಮಳೆ ಅಬ್ಬರ ಮತ್ತೆ ಮುಂದುವರಿದಿದ್ದು, ಉತ್ತರ ಕರ್ನಾಟ, ಕರಾವಳಿ, ಮಲೆನಾಡು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಇದೀಗ ದ.ಕ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕಾಂಪೌಂಡ್ ಕುಸಿದು ವ್ಯಕ್ತಿ ಸಾವನ್ನಪ್ಪಿರುವ ಘಟನೆ...

ಟಾಸ್ ಗೆದ್ದ ಚೆನೈ ಸೂಪರ್ ಕಿಂಗ್ಸ್ ಬೌಲಿಂಗ್ ಆಯ್ಕೆ

ಅಬುಧಾಬಿ: 13ನೇ ಅವೃತ್ತಿಯ ಐಪಿಎಲ್ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ. ಅಬುಧಾಬಿಯ ಶೇಕ್ ಜಾಯೇದ್ ಸ್ಟೇಡಿಯಂ ನಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಮತ್ತು...

ಲೋಕಸಭಾ ಚಳಿಗಾಲ ಅಧಿವೇಶನ; ಬುಧವಾರ ಮುಕ್ತಾಯಗೊಳಿಸುವ ಸಾಧ್ಯತೆ

ನವದೆಹಲಿ: ಚಳಿಗಾಲ ಅಧಿವೇಶನ ಆರಂಭವಾದ ದಿನದಿಂದ ಸಂಸದರಲ್ಲಿ ಕಾಣಿಸಿಕೊಳ್ಳುತ್ತಿರುವ ಕೋರೊನಾ ಸೋಂಕಿನ ಕಾರಣ ಲೋಕಸಭಾ ಅಧಿವೇಶನವನ್ನು ಬುಧವಾರ ಮುಕ್ತಾಯಗೊಳಿಸುವ ಸಾಧ್ಯತೆಯಿದೆ. ಈ ಬಗ್ಗೆ ಈಗಾಗಲೇ ವಿರೋಧ ಪಕ್ಷದ ಸಮಿತಿಯೊಂದಿಗೆ ಸರಕಾರ ಚರ್ಚಿಸಿದೆ ಎಂದು...

ದಿನೇಶ್ ಕುಮಾರ್ ಎಸ್.ಸಿ

ನಿಜಾನಾ? ಚೀನಾದವರು ಹತ್ತು ಲಕ್ಷ ಮುಸ್ಲಿಮರನ್ನು ಕೂಡಿಟ್ಟುಕೊಂಡು ಹಿಂಸಿಸುತ್ತಿದ್ದಾರಾ? ವೊಕೇಷನಲ್ ಟ್ರೈನಿಂಗ್ ಕ್ಯಾಂಪ್ ಗಳ ಹೆಸರಲ್ಲಿ ಅಲ್ಲಿ ಮಾಡುತ್ತಿರುವುದು ಏನನ್ನು? ಉತ್ತರ ಚೀನಾದ ಪ್ರಾಂತ್ಯದಲ್ಲಿ ಎದ್ದಿರುವ ದೊಡ್ಡ ದೊಡ್ಡ ಕಟ್ಟಡಗಳು ಸಾವಿನ ಕೂಪಗಳಾಗಿವೆಯಾ? ಬಿಬಿಸಿ ಸೇರಿದಂತೆ ಪಾಶ್ಚಿಮಾತ್ಯ ಮಾಧ್ಯಮಗಳು ನಡೆಸಿರುವ ತನಿಖಾ ವರದಿಯಲ್ಲಿ ಕಂಡ ವಿಡಿಯೋಗಳು, ದಾಖಲೆಗಳು ಏನು ಹೇಳುತ್ತವೆ?

ಒಂಚೂರು ಹಿಂದಕ್ಕೆ ಹೋಗೋಣ. ಈಗ ಉಯ್ಗರ್ ಮುಸ್ಲಿಮರ ಮೇಲೆ ಚೀನಾ ನಡೆಸುತ್ತಿರುವ ಅನಾಹುತಕಾರಿ ದೌರ್ಜನ್ಯಗಳ ಹಾಗೆ ಹಿಂದೆ ತೊಂಭತ್ತರ ದಶಕದ ಮಧ್ಯಭಾಗದಲ್ಲಿ ಫಲೂನ್ ಗಾಂಗ್ ಎಂಬ ಅಧ್ಯಾತ್ಮ ಪಂಥದ ವಿರುದ್ಧವೂ ಕ್ರೂರ ಹಿಂಸೆ ನಡೆದಿತ್ತು. ಆಗಲೂ ಇದೇ ರೀತಿಯ ಟ್ರೈನಿಂಗ್ ಕ್ಯಾಂಪ್ ಗಳು ನಡೆದಿದ್ದವು. 2009ರಲ್ಲಿ ದಿ ನ್ಯೂ ಯಾರ್ಕ್ ಟೈಂಸ್ ವರದಿಯ ಪ್ರಕಾರ ಒಟ್ಟು ಸತ್ತವರ ಸಂಖ್ಯೆ 2000. ಆದರೆ ತನಿಖಾ ವರದಿಗಾರ ಈಥನ್ ಗಟಮನ್ ಅವರ ಸ್ವತಂತ್ರ ತನಿಖೆಯ ಪ್ರಕಾರ 2000ನೇ ಇಸವಿಯಿಂದ 2008ರವರೆಗೆ ಸುಮಾರು 65,000 ಫಲೂನ್ ಗಾಂಗ್ ಕಾರ್ಯಕರ್ತರನ್ನು ಕೇವಲ ‘ಅಂಗಾಂಗ ಮಾರಾಟ’ಕ್ಕಾಗಿ ( organ trading) ಗಾಗಿ ಕೊಂದುಹಾಕಲಾಗಿದೆ. ಇದು ಸಂಪೂರ್ಣ ಆಧಾರರಹಿತವೇನೂ ಅಲ್ಲ, ಯಾಕೆಂದರೆ ಡೇವಿಡ್ ಕಿಲ್ಗೋರ್ ಮತ್ತು ಡೇವಿಡ್ ಮಾಥಾಸ್ ಎಂಬ ಇಬ್ಬರು ಸ್ವತಂತ್ರ ಸಂಶೋಧಕರು ಚೀನಾದಲ್ಲಿ 2000ದಿಂದ 2005ರವರೆಗೆ ಆರು ವರ್ಷಗಳಲ್ಲಿ ನಡೆದ ಅಂಗಾಂಗ ಮರುಜೋಡಣೆ (Organ Transplant)ಗಳಿಗೆ ಬಳಸಲಾದ ಅಂಗಾಂಗಗಳ ಮೂಲ ಯಾವುದೆಂಬ ದಾಖಲೆಗಳೇ ಇಲ್ಲ ಎಂದು ಬಹಿರಂಗಪಡಿಸಿದ್ದರು.

ಚೀನಾ ಒಂದು ಬಗೆಯ ರಹಸ್ಯಕೋಟೆ. ಹೊರಜಗತ್ತಿಗೆ ಅಲ್ಲಿನ ಮಾಹಿತಿಗಳು ಅಷ್ಟು ಸುಲಭವಾಗಿ ಹೊರಬರಲು ಸಾಧ್ಯವಿಲ್ಲ. ಚೀನಾದಲ್ಲಿ ಸ್ವತಂತ್ರ ಮಾಧ್ಯಮ ಎಂಬುದೇ ಇಲ್ಲ.‌ 1949ರಲ್ಲಿ ಪೀಪಲ್ಸ್ ರಿಪಬ್ಲಿಕ್ ಆಫ್ ಚೈನಾ ರಚನೆಯಾದ ನಂತರ ಚೀನಾದ ಎಲ್ಲ ಮೀಡಿಯಾಗಳನ್ನು ಸರ್ಕಾರವೇ ನಡೆಸುತ್ತಿತ್ತು. ಚೀನಾ‌ ಜಾಗತೀಕರಣಕ್ಕೆ ತೆರೆದುಕೊಂಡ ನಂತರ ಸರ್ಕಾರೇತರ ಮೀಡಿಯಾಗಳು ಹುಟ್ಟಿಕೊಂಡವಾದರೂ ಅವು ಸರ್ಕಾರದ ಸೆನ್ಸಾರ್ ಶಿಪ್ ಗೆ ಒಳಪಟ್ಟವು. ಮೀಡಿಯಾ ಹಾಗಿರಲಿ, ಚೀನಾದ ಸೋಷಿಯಲ್ ಮೀಡಿಯಾ ಕೂಡ ಸರ್ಕಾರದ ಕಣ್ಗಾವಲಿನಲ್ಲೇ ಇದೆ. ಇದೆಲ್ಲವನ್ನು ಮೀರಿ ಪತ್ರಕರ್ತರು ಸರ್ಕಾರ ವಿರೋಧಿ ವರದಿಗಳನ್ನು ಪ್ರಕಟಿಸಿದರೆ ಅವರು ಜೈಲುಪಾಲಾಗುತ್ತಾರೆ. ಜಗತ್ತಿನಲ್ಲಿ ಅತಿಹೆಚ್ಚು ಪತ್ರಕರ್ತರು ಜೈಲುಶಿಕ್ಷೆಗೆ ಗುರಿಯಾಗಿರುವ ದೇಶಗಳಲ್ಲಿ ಚೀನಾ ಅಗ್ರಸ್ಥಾನದಲ್ಲಿದೆ, ಎರಡನೇ ಸ್ಥಾನ ಟರ್ಕಿ!

ಹೀಗಿರುವಾಗ ಚೀನಾದ ಸುದ್ದಿಗಳು ಅಂತ ಏನನ್ನು ನಾವು ನೋಡುತ್ತೇವೆಯೋ ಅದೆಲ್ಲವೂ ಅಲ್ಲಿನ ಸರ್ಕಾರದ ಮುಖವಾಣಿ ಪತ್ರಿಕೆಗಳು ಹೇಳುವಂಥವು. ಕ್ಸಿನ್ ಹುವಾ, ಪೀಪಲ್ಸ್ ಡೈಲಿ, ಗ್ಲೋಬಲ್ ಟೈಂಸ್, ಸಿಸಿಟಿವಿ ಇತ್ಯಾದಿ ಮೀಡಿಯಾಗಳನ್ನೆಲ್ಲ ಆಳುವ ಕಮ್ಯುನಿಸ್ಟ್ ಪಕ್ಷದ ನೇತಾರರೇ ನಡೆಸುತ್ತಾರೆ. ಹೀಗಿರುವಾಗ ಚೀನಾದ ಒಳಗೆ ನಡೆಯಬಹುದಾದ ದೌರ್ಜನ್ಯ, ದಂಗೆ ಇತ್ಯಾದಿಗಳು ಹೇಗೆ ವರದಿಯಾಗಲು ಸಾಧ್ಯ?

ಫಲೂನ್ ಗಾಂಗ್ ಎಂದರೆ ಅದೊಂದು ರೀತಿಯ ಧಾರ್ಮಿಕ ಪಂಥ. ನಮ್ಮಲ್ಲಿ ಬ್ರಹ್ಮಕುಮಾರಿ ಸಮಾಜ ಇದ್ದ ಹಾಗೆ. 1990ರಲ್ಲಿ ಇದು ಸ್ಥಾಪನೆಯಾಯಿತು. ಫಲೂನ್ ಗಾಂಗ್ ಎಂದರೆ ಧರ್ಮ ಚಕ್ರ ಪಾಲನೆ. ನಮ್ಮ ಯೋಗಾಸನದ ಮಾದರಿಯ ದೈಹಿಕ‌ ವ್ಯಾಯಾಮಗಳು, ಉಸಿರಾಟದ ವ್ಯಾಯಾಮಗಳನ್ನು ಕಲಿಸಲಾಗುತ್ತದೆ. ಜತೆಗೆ ಅಧ್ಯಾತ್ಮಿಕ ಪ್ರವಚನಗಳು. ಲಿ ಹಾಂಗ್ಜೀ ಎಂಬಾತ ಇದನ್ನು ಸ್ಥಾಪಿಸಿದ ನಂತರ ಚೀನಾದಲ್ಲಿ ವ್ಯಾಪಕವಾಗಿ ಬೆಳೆಯಿತು. ಮೊದಮೊದಲು ಚೀನಾ ಸರ್ಕಾರ ಇದನ್ನು‌ ವಿರೋಧಿಸಲಿಲ್ಲ. ಆದರೆ ಅದು ಲಕ್ಷಾಂತರ ಜನರನ್ನು ಆಕರ್ಷಿಸಿ ಚೀನಾದಾದ್ಯಂತ ಹಬ್ಬುತ್ತಿದ್ದಂತೆ ಚೀನಾದ ಕಮ್ಯುನಿಸ್ಟ್ ಸರ್ಕಾರ ಇದು ಇಂದಲ್ಲ ನಾಳೆ ಪ್ರಭುತ್ವಕ್ಕೆ ಸವಾಲಾಗಬಹುದು ಎಂಬ ಕಾರಣಕ್ಕೆ ದೌರ್ಜನ್ಯಗಳಿಗೆ ಇಳಿಯಿತು. 1999ರಲ್ಲಿ ದೊಡ್ಡ ಪ್ರಮಾಣದಲ್ಲಿ ಫಲೂನ್ ಗಾಂಗ್ ಕಾರ್ಯಕರ್ತರ ಮೇಲೆ ಸರ್ಕಾರ ದಾಳಿ ನಡೆಸಿತು. ಸಾವಿರಾರು ಜನರನ್ನು ಬಂಧಿಸಿ ಕೂಡಿಡಲಾಯಿತು. ಅದಕ್ಕೆ ಸಂಬಂಧಿಸಿದ ಆಸ್ತಿಪಾಸ್ತಿಗಳನ್ನು ಜಫ್ತಿ ಮಾಡಲಾಯಿತು. ಟ್ರೈನಿಂಗ್ ಕ್ಯಾಂಪ್ ಗಳ ಹೆಸರಲ್ಲಿ ಸಾವಿರಾರು ಮಂದಿಯನ್ನು ಕೂಡಿಟ್ಟು ಹಿಂಸಿಸಲಾಯಿತು, ಕೊಲ್ಲಲಾಯಿತು. ಕೊನೆಗೆ ಅತ್ಯಂತ ಘೋರವೆಂದರೆ ‘ಅಂಗಾಂಗ ಮಾರಾಟ’ಕ್ಕೆ ಕೂಡಿಟ್ಟುಕೊಂಡ ಜನರನ್ನು ಒಬ್ಬರಾದ ಮೇಲೊಬ್ಬರಂತೆ ಕೊಲ್ಲಲಾಯಿತು!

ಚೀನಾ ತನ್ನ ವಿರುದ್ಧ ನಾಗರಿಕರು ತಿರುಗಿಬಿದ್ದರೆ ಅಥವಾ ತಿರುಗಿ ಬೀಳಬಹುದು ಎಂದರೆ ಯಾವ ಪ್ರಮಾಣದ ಹಿಂಸೆಯನ್ನಾದರೂ ಎಸಗಿ ಅದನ್ನು ನಿಗ್ರಹಿಸುತ್ತದೆ. ಕಳೆದ ಎರಡು ವರ್ಷಗಳಿಂದ ಚೀನಾದ ವಾಯುವ್ಯ ಭಾಗದಲ್ಲಿ ಉಯ್ಗರ್ ಮುಸ್ಲಿಮರ ವಿರುದ್ಧವೂ ಇಂಥದ್ದೇ ಕಾರ್ಯಾಚರಣೆಗಳು ನಡೆಯುತ್ತಿವೆಯೇ? ಜಗತ್ತು ಪ್ರಶ್ನೆ ಕೇಳುತ್ತಿದೆ, ಚೀನಾ ಅಂಥದ್ದೇನೂ ಇಲ್ಲ ಎಂದು ತಿಪ್ಪೆ ಸಾರಿಸುತ್ತಿದೆ. ತನ್ನನ್ನು ತಾನು ಮುಸ್ಲಿಂ ದ್ವೇಷಿಯ ಹಾಗೆ ಬಿಂಬಿಸಿಕೊಂಡಿರುವ ಅಮೆರಿಕ‌ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ, ಉಯ್ಗರ್ ಮುಸ್ಲಿಮರ ವಿರುದ್ಧ ಚೀನಾ ಭೀಕರ ಜನಾಂಗೀಯ ದಾಳಿ ನಡೆಸುತ್ತಿದೆ ಎಂದು ಆರೋಪಿಸುತ್ತಿದ್ದಾನೆ.

ಉಯ್ಗರ್ (Uyghur) ಮುಸ್ಲಿಮರು ವಾಯುವ್ಯ ಚೀನಾದ ಜಿಂಗ್ ಜಿಯಾಂಗ್ ಪ್ರಾಂತ್ಯದಲ್ಲಿ ಇದ್ದಾರೆ. ಅವರು ಟರ್ಕಿ ನುಡಿಯಲ್ಲಿ ಮಾತನಾಡುತ್ತಾರೆ. ಮಧ್ಯ ಏಷಿಯಾ ಮತ್ತು ಪೂರ್ವ ಏಷಿಯಾದಿಂದ ವಲಸೆ ಬಂದ ಸಮುದಾಯವಿದು. ಚೀನಾ ಒಟ್ಟು 55 ಸಮುದಾಯಗಳನ್ನು ಗುರುತಿಸಿ ಮಾನ್ಯತೆ ನೀಡಿದೆ, ಅದರಲ್ಲಿ ಉಯ್ಗರ್ ಕೂಡ ಒಂದು. ಚೀನಾದಲ್ಲಿ ಮಾನ್ಯತೆ ಇಲ್ಲದ ಸಮುದಾಯಗಳು ಯಾವುದೇ ಆಚರಣೆ, ಸಂಪ್ರದಾಯ ಪಾಲಿಸಿದರೆ ಅದು ಅಪರಾಧ. ಆದರೆ ಉಯ್ಗರ್ ಗಳನ್ನು ಚೀನಾದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರನ್ನಾಗಿ ಗುರುತಿಸಲಾಗಿದೆ.‌ ಚೀನಾದಲ್ಲಿ ಇವರ ಸಂಖ್ಯೆ ಒಂದು ಕೋಟಿ ಇಪ್ಪತ್ತು ಲಕ್ಷಕ್ಕೂ ಹೆಚ್ಚು. ಖಜಾಕಿಸ್ತಾನದಲ್ಲಿ ಎರಡೂವರೆ ಲಕ್ಷದಷ್ಟು ಉಯ್ಗರ್ ಗಳು ಇದ್ದಾರೆ. ಮಿಕ್ಕಂತೆ ಥೈವಾನ್, ಟರ್ಕಿ, ಉಜ್ಬೆಕಿಸ್ತಾನ್, ಕಿರ್ಗಿಸ್ತಾನ್, ಸೌದಿ ಅರೇಬಿಯಾ, ಜೋರ್ಡಾನ್ ಇತ್ಯಾದಿ ದೇಶಗಳಲ್ಲಿ ಸಣ್ಣ ಪ್ರಮಾಣದಲ್ಲಿ ನೆಲೆಗೊಂಡಿದ್ದಾರೆ.‌

ಜಿಂಗ್ ಜಿಯಾಂಗ್ ಚೀನಾದ ಅತ್ಯಂತ ಸುಂದರವಾದ ರಾಜ್ಯ. ಉಯ್ಗರ್ ಮುಸ್ಲಿಮರು ಹೆಚ್ಚಿನ ಸಂಖ್ಯೆಯಲ್ಲಿ ಇಲ್ಲೇ ವಾಸವಾಗಿದ್ದಾರೆ. 2015ರಿಂದ ಉಯ್ಗರ್ ಸಮುದಾಯ ಸಮಸ್ಯೆಗಳ ಸುಳಿಗೆ ಸಿಲುಕಿತು. ಚೀನಾ ಸರ್ಕಾರ ಏನಿಲ್ಲವೆಂದರೂ ಹತ್ತು ಲಕ್ಷ ಮಂದಿ ಉಯ್ಗರ್ ಗಳನ್ನು ಬಂಧಿಸಿತು. ಬಂಧನಕ್ಕೆ ಒಳಗಾದವರನ್ನು ಜಿಂಗ್ ಜಿಯಾಂಗ್ ನ ತಥಾಕಥಿತ ಎಜುಕೇಷನ್ ಕ್ಯಾಂಪ್ ಗಳ ಒಳಗೆ ತುಂಬಲಾಯಿತು. ಚೀನಾ ಸರ್ಕಾರ ಹೇಳಿಕೊಳ್ಳುವ ಪ್ರಕಾರ ಈ ಎಜುಕೇಷನ್ ಕ್ಯಾಂಪ್ ಗಳ‌ ಉದ್ದೇಶ ‘ರಾಷ್ಟ್ರೀಯ ಸಿದ್ಧಾಂತ’ ವನ್ನು ಕಲಿಸುವುದು! ಆದರೆ ಇದನ್ನು ಹೊರಗಿನ ಜಗತ್ತು ನೋಡುತ್ತಿರುವುದೇ ಬೇರೆ ರೀತಿ. ಇದು ಉಯ್ಗರ್ ಜನರ ‘ಸಾಂಸ್ಕೃತಿಕ ನರಮೇಧ’ ಎಂದು ಪಾಶ್ಚಾತ್ಯ ಮಾಧ್ಯಮಗಳು ಬಣ್ಣಿಸುತ್ತಿವೆ.

ಉಯ್ಗರ್ ಗಳ ಮೇಲೆ ಯಾಕೆ ಚೀನಾದ ಕಮ್ಯುನಿಸ್ಟ್ ಪಕ್ಷ ಈ ದೌರ್ಜನ್ಯ ಗಳನ್ನು ನಡೆಸುತ್ತಿದೆ ಎಂದರೆ ‘ಭಯೋತ್ಪಾದನೆಯ ಭೀತಿ’! ಈ ಪ್ರಾಂತ್ಯದಲ್ಲಿ ನಡೆದ ಕೆಲವು ಭಯೋತ್ಪಾದಕ ದಾಳಿಗಳು ಚೀನಾ ಇಂಥ ಅತಿರೇಕದ ಕ್ರಮಗಳನ್ನು ತೆಗೆದುಕೊಳ್ಳಲು ಕುಮ್ಮಕ್ಕು ನೀಡಿತು. ಈತ ತಾನು ಮಾಡುತ್ತಿರುವುದೆಲ್ಲ ‘ಭಯೋತ್ಪಾದನೆಯ ವಿರುದ್ಧ ಸಮರ’, ‘ದೇಶದ ಸಾರ್ವಭೌಮತೆಯ ರಕ್ಷಣೆ’ ಯ ಹೆಸರಿನಲ್ಲಿ ಅದು ಸಮರ್ಥಿಸಿಕೊಳ್ಳುತ್ತಿದರ. ಧಾರ್ಮಿಕ ಮೂಲಭೂತವಾದ ಹೆಚ್ಚಿದರೆ ಅದು ದೇಶದ ಸುರಕ್ಷತೆ ಮತ್ತು ಸಾರ್ವಭೌಮತೆಗೆ ಧಕ್ಕೆಯಾಗುತ್ತದೆ ಎಂಬ ಕಾರಣಕ್ಕೆ ಉಯ್ಗರ್ ಗಳ ಬ್ರೈನ್ ವಾಷ್ ಮಾಡುವ ಕೆಲಸಕ್ಕೆ ಚೀನಾ ಸರ್ಕಾರ ಕೈ ಹಾಕಿದೆ. ಇದನ್ನು ಅದು ಕರೆಯುವುದು re radicalization ಎಂದು! ಈ ಶಿಬಿರಗಳಲ್ಲಿ ಕಲಿಸಲಾಗುವ ಮೂಲಪಾಠವೇ ಆಳುವ ಕಮ್ಯುನಿಸ್ಟ್ ಪಕ್ಷಕ್ಕೆ ನಿಷ್ಠರಾಗಿರಬೇಕು ಎಂಬುದು! ಜತೆಗೆ ಮೌಢ್ಯ, ಅಂಧಶ್ರದ್ಧೆ, ಸಂಪ್ರದಾಯಗಳನ್ನು ತೊರೆಯುವಂತೆ ತಾಕೀತು ಮಾಡಲಾಗುತ್ತದೆ.

ವಿಷಯ ಇಷ್ಟೇ ಅಲ್ಲ ಎಂಬುದನ್ನು ‘ಚೀನಾ ಲೀಕ್ಸ್’ ಎಂದೇ ಕರೆಯಲಾಗುತ್ತಿರುವ ದಾಖಲೆಗಳು ಹೇಳುತ್ತವೆ.‌ ಅಂತಾರಾಷ್ಟ್ರೀಯ ತನಿಖಾ ವರದಿಗಾರರ ಸಂಸ್ಥೆ (ICIJ) ಸುಮಾರು ಹದಿನೇಳು ಮೀಡಿಯಾ ಸಂಸ್ಥೆಗಳ ಸಹಯೋಗದಲ್ಲಿ ದೊಡ್ಡ ಮಟ್ಟದ ತನಿಖಾ ವರದಿಯೊಂದನ್ನು ಪ್ರಕಟಿಸಿತು. ಬಿಬಿಸಿ ಪನೋರಮಾ, ನ್ಯೂಯಾರ್ಕ್ ಟೈಮ್ಸ್ ಸಂಸ್ಥೆಗೂ ಸಹ ಈ ತಂಡದಲ್ಲಿದ್ದವು. ಚೀನಾದ ತಥಾಕಥಿತ ವೊಕೇಷನಲ್ ಟ್ರೈನಿಂಗ್ ಕ್ಯಾಂಪ್ ಗಳನ್ನು ನಡೆಸುವ ಅಧಿಕಾರಿಗಳಿಗೆ ಚೀನಾ ಸರ್ಕಾರದ ಪ್ರತಿನಿಧಿಗಳು ನೀಡಿದ ಆದೇಶಗಳ ಪ್ರತಿಗಳನ್ನು ICIJ ಹೊರತೆಗೆಯಿತು. ಆ ದಾಖಲೆಗಳ ಪ್ರಕಾರ ತರಬೇತಿಗಳಲ್ಲಿ ಪಾಲ್ಗೊಂಡವರು ಯಾವ ಕಾರಣಕ್ಕೂ ತಪ್ಪಿಸಿಕೊಳ್ಳುವಂತಿಲ್ಲ, ಶಿಸ್ತು ಉಲ್ಲಂಘನೆ ಮಾಡಿದರೆ ಕಠಿಣವಾಗಿ ಶಿಕ್ಷಿಸಬೇಕು. ICIJ ಡ್ರೋನ್ ನಲ್ಲಿ ಚಿತ್ರಿಸಿದ ಕೆಲವು ಆಘಾತಕಾರಿ ವಿಡಿಯೋಗಳನ್ನು ಸಂಗ್ರಹಿಸಿತು. ಕೈ ಕೋಳ ಹಾಕಿ ನೂರಾರು ಜನರನ್ನು ಚೀನಾ ಪೊಲೀಸರು ಸಾಗಿಸುವ ದೃಶ್ಯವದು. ಕಳೆದ ವಾರ ಬಿಬಿಸಿ ಈ ಕುರಿತು ಇಂಗ್ಲೆಂಡ್ ನಲ್ಲಿನ ಚೀನಾ ರಾಯಭಾರಿಯನ್ನು ಪ್ರಶ್ನಿಸಿದಾಗ, ಖೈದಿಗಳನ್ನು ಒಂದು ಜೈಲಿನಿಂದ ಇನ್ನೊಂದು ಜೈಲಿಗೆ ಯಾವುದೇ ದೇಶದಲ್ಲಿ ಹೇಗೆ ಸಾಗಿಸುತ್ತಾರೆ ಹೇಳಿ? ಪಾಶ್ಚಾತ್ಯ ಮಾಧ್ಯಮಗಳು ಕಟ್ಟುಕಥೆಗಳನ್ನು ಹರಡುತ್ತಿವೆ ಎಂದು ಸಮರ್ಥಿಸಿಕೊಂಡರು.‌

ಆದರೆ ಚೀನಾದಲ್ಲಿ ಇಂಥ ‘ತರಬೇತಿ ಕೇಂದ್ರ’ಗಳಲ್ಲಿ ಭಾಗವಹಿಸಿ ಹೇಗೋ ತಪ್ಪಿಸಿಕೊಂಡು ಚೀನಾದಿಂದ ಹೊರಗೆ ಬಂದ ಕೆಲವು ಉಯ್ಗರ್ ಮುಸ್ಲಿಮರನ್ನು ICIJ ಮಾತನಾಡಿಸಿದೆ. ಅವರು ಹೇಳುವ ಕಥೆಗಳು ಭಯಾನಕ. ‘ಟಾಯ್ಲೆಟ್ ಹೋಗಲು ಒಬ್ಬೊಬ್ಬರಿಗೆ ಇಷ್ಟಿಷ್ಟೇ ನಿಮಿಷ, ಇಷ್ಟು ಸಮಯಕ್ಕೇ ಹೋಗಬೇಕೆಂಬ ನಿಯಮವಿದೆ. ಒಂಚೂರು ತಡ ಮಾಡಿದರೂ ತಲೆಯ ಮೇಲೆ ರಾಡ್ ನಿಂದ ಹೊಡೆಯಲಾಗುತ್ತದೆ, ಮುಂದೆ ಎಂದೂ ತಡ ಮಾಡುವುದಿಲ್ಲ ಎಂದು ಕ್ಷಮಾಪಣೆ ಕೇಳಬೇಕಾಗುತ್ತದೆ’ ಎನ್ನುತ್ತಾಳೆ ಒಬ್ಬ ಮಹಿಳೆ.‌ ಇದು ಶಿಸ್ತಿನ ಹೆಸರಿನಲ್ಲಿ ನಡೆಸಲಾಗುವ ದೌರ್ಜನ್ಯ.

ಇದೆಲ್ಲಕ್ಕಿಂತ ಕ್ರೂರವೆಂದರೆ, ಮಹಿಳೆಯರಿಗೆ ಕಡ್ಡಾಯವಾಗಿ ಮತ್ತೆಂದೂ ಗರ್ಭ ಧರಿಸಿದಂತೆ ಸಾಮೂಹಿಕ ಶಸ್ತ್ರ ಚಿಕಿತ್ಸೆಗಳನ್ನು ಮಾಡಲಾಗುತ್ತಿದೆ. ಬೇಡಿಕೊಂಡರೂ ಬಿಡುವುದಿಲ್ಲ. ಅವರು ನಮ್ಮ ಸಂತತಿಯನ್ನೇ ನಾಶ ಮಾಡಲು ಹೊರಟಿದ್ದಾರೆ ಎನ್ನುತ್ತಾರೆ ಸಂತ್ರಸ್ಥರು.

ಚೀನಾದಲ್ಲಿ ಉಯ್ಗರ್ ಗಳ ಪರಿಸ್ಥಿತಿ ಚಿಂತಾಜನಕವಾಗಿರುವುದಂತೂ ನಿಜ. ಹಿಟ್ಲರನ ನಾಜಿ ಸೈನ್ಯದ ಸಾಫ್ಟ್ ವರ್ಷನ್ ಈ ಚೀನಾ ಮಿಲಿಟರಿ ಮತ್ತು ಅಲ್ಲಿನ ಕಮ್ಯುನಿಸ್ಟ್ ಪಾರ್ಟಿ. ಜನರ ಕ್ರಾಂತಿಯೊಂದು ಸೃಷ್ಟಿಸಿದ ವ್ಯವಸ್ಥೆ-ಸರ್ಕಾರ ಇಷ್ಟು ಕ್ರೂರವಾಗಿರಲು ಹೇಗೆ ಸಾಧ್ಯ? ಕಾರ್ಲ್ ಮಾರ್ಕ್ಸ್ ಕೂಡ ತನ್ನ ಚಿಂತನೆಗಳನ್ನು ಮಾರ್ಪಾಡು ಮಾಡಿಕೊಂಡು ಧರ್ಮದ ವಿಷಯದಲ್ಲಿ ಮೃದು ಧೋರಣೆ ತಳೆದಿದ್ದನ್ನು ನಾವು ಗಮನಿಸಬಹುದು. ಆದರೆ ಚೀನಾ ಯಾಕಿಷ್ಟು ಅಸಹಿಷ್ಣುವಾಗಿದೆ? ಎಲ್ಲ ಧರ್ಮ, ಪಂಥ, ಮತಗಳನ್ನು ನಾಶಪಡಿಸುವುದೇ ಚೀನಾದ ‘ರಾಷ್ಟ್ರೀಯತೆ’ಯ ಧ್ಯೇಯೋದ್ದೇಶವಾಗಿದ್ದೇಕೆ?

– ದಿನೇಶ್ ಕುಮಾರ್ ಎಸ್.ಸಿ.

LEAVE A REPLY

Please enter your comment!
Please enter your name here

Hot Topics

ವಿಚಿತ್ರ ಸ್ವರೂಪದ ಮಗು ಜನನ, ವೈರಲ್ ವಿಡಿಯೋ ಮತ್ತು ಸುದ್ದಿಯ ಹಿಂದಿರುವ ಸತ್ಯಾಂಶ? ?

ಮಿರರ್ ಫೋಕಸ್ : ಜಗತ್ತಿನಲ್ಲಿ ಪ್ರತಿನಿತ್ಯ ಸಾವಿರಾರೂ ಮಕ್ಕಳು ಹುಟ್ಟುತ್ತಲೇ ಇರುತ್ತಾರೆ. ಅದರಲ್ಲಿ ಕೆಲವೊಂದು ಮಗು ವಿಚಿತ್ರ ರೀತಿಯಲ್ಲಿ ಬೆಳವಣಿಗೆ ಹೊಂದುದನ್ನು ನಾವು ದಿನಪತ್ರಿಕೆಗಳಲ್ಲಿ, ಟಿ ವಿ ಮಾಧ್ಯಮದಲ್ಲಿ ನೋಡಿದ್ದೇವೆ ಆದರೆ ಇತ್ತೀಚಗೆ...

ಯಾವುದೋ ಒಂದು ಘಟನೆ ಆಧರಿಸಿ ಮುಸ್ಲಿಮರ ಬಗ್ಗೆ ತಪ್ಪಾಗಿ ಮಾತನಾಡಿದರೆ ಕ್ರಮ – ಮುಖ್ಯಮಂತ್ರಿ ಯಡಿಯೂರಪ್ಪ ಖಡಕ್ ಎಚ್ಚರಿಕೆ

ಬೆಂಗಳೂರು: ಖಾಸಗಿ ವಾಹಿನಿಯೊಂದರ ಸಂದರ್ಶನದಲ್ಲಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಸಂದರ್ಶಕ ಏಕಾಏಕಿ ಭಾವೋದ್ವೇಗದಿಂದ ಕೆಲವೊಂದು ಪ್ರಶ್ನೆ ಕೇಳಿ ಮುಖ್ಯಮಂತ್ರಿಯನ್ನು ಉದ್ರೇಕಿಸಲು ಪ್ರಯತ್ನಿಸಿದಾಗ ಶಾಂತ ಚಿತ್ತವಾಗಿ ಉತ್ತರ ನೀಡಿದ ಅವರು ನಾನು ಅಲ್ಪಸಂಖ್ಯಾತ ಸಮಾಜದ...

ಕೋರೊನಾ ವೈರಸ್ ಭೀತಿ; ಸಂಬಂಧಿಕರು ಯಾರು‌ ಮುಂದೆ ಬಾರದಿದ್ದಾಗ ಮೃತದೇಹಕ್ಕೆ ಹೆಗಲು ಕೊಟ್ಟ ಮುಸ್ಲಿಮ್ ಬಾಂಧವರು

ಉತ್ತರ:  ರವಿಶಂಕರ್ ಎಂಬ ವ್ಯಕ್ತಿ ಮೃತರಾದಾಗ ಸಂಬಂಧಿಕರು ಯಾರು‌ ಮುಂದೆ ಬಾರದಿದ್ದಾಗ ಮೃತದೇಹಕ್ಕೆ ಮುಸ್ಲಿಂ ಬಾಂಧವರು ಮುಂದೆ ಬಂದು ಹೆಗಲುಕೊಟ್ಟು ಹಿಂದು ಸಂಸ್ಕೃತಿಯೆಂತೆ ಅಂತ್ಯ ಕ್ರಿಯೆ ನಡೆಸಿದ್ದಾರೆ ಈ ವರದಿಯನ್ನು ನವಭಾರತ್ ಟೈಮ್ಸ್...

Related Articles

ಉಡುಪಿ: ರಾತ್ರಿಯಿಡಿ ಸುರಿದ ಮಹಾ ಮಳೆ; ತಗ್ಗು ಪ್ರದೇಶಗಳು ಜಲಾವೃತ, ಮನೆಗಳಿಗೆ ನುಗ್ಗಿದ ನೀರು

ಉಡುಪಿ: ಜಿಲ್ಲೆಯಲ್ಲಿ ಸತತವಾಗಿ ಗಾಳಿ ಮಳೆ ಮುಂದುವರಿದಿದ್ದು ಶನಿವಾರ ರಾತ್ರಿಯಿಂದ ಮಹಾ ಮಳೆ ಮುಂದುವರಿದಿದೆ. ಕರಾವಳಿ ಪ್ರದೇಶದಲ್ಲಿ ಮಳೆಯೊಂದಿಗೆ ವೇಗವಾಗಿ ಗಾಳಿಯು ಬೀಸುತ್ತಿದ್ದು ಸಮುದ್ರ ಪ್ರಕ್ಷುಬ್ಧವಾಗಿದೆ. ಜಿಲ್ಲೆಯ ತಾಲೂಕುಗಳಾದ ಕುಂದಾಪುರ, ಬ್ರಹ್ಮಾವರ,ಬೈಂದೂರು,ಕಾಪು,ಕಾರ್ಕಳ, ಉಡುಪಿಯಲ್ಲಿ ಸತತವಾಗಿ...

ಭಾರೀ ಮಳೆಗೆ ಕುಸಿದು ಬಿದ್ದ ಗೋಡೆ, ಕಾರ್ಮಿಕ ಮೃತ್ಯು

ಮಂಗಳೂರು: ರಾಜ್ಯಾದ್ಯಂತ ಮಳೆ ಅಬ್ಬರ ಮತ್ತೆ ಮುಂದುವರಿದಿದ್ದು, ಉತ್ತರ ಕರ್ನಾಟ, ಕರಾವಳಿ, ಮಲೆನಾಡು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಿದೆ. ಇದೀಗ ದ.ಕ ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಕಾಂಪೌಂಡ್ ಕುಸಿದು ವ್ಯಕ್ತಿ ಸಾವನ್ನಪ್ಪಿರುವ ಘಟನೆ...

ಟಾಸ್ ಗೆದ್ದ ಚೆನೈ ಸೂಪರ್ ಕಿಂಗ್ಸ್ ಬೌಲಿಂಗ್ ಆಯ್ಕೆ

ಅಬುಧಾಬಿ: 13ನೇ ಅವೃತ್ತಿಯ ಐಪಿಎಲ್ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡಿದೆ. ಅಬುಧಾಬಿಯ ಶೇಕ್ ಜಾಯೇದ್ ಸ್ಟೇಡಿಯಂ ನಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ಮತ್ತು...
Translate »
error: Content is protected !!