ಡಿ.6 ರಂದು ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ

ಬೆಂಗಳೂರು,(ನ.24): ಪ್ರಧಾನಿ ನರೇಂದ್ರ ಮೋದಿ ಡಿಸೆಂಬರ್ 6 ರಂದು ಬೆಂಗಳೂರಿಗೆ ಭೇಟಿ ನೀಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಜ್ಞಾನಭಾರತಿ ಕ್ಯಾಂಪಸ್​ನಲ್ಲಿ ನಿರ್ಮಿಸಿರುವ ಲಾ ಕಾಲೇಜ್​​ ಕಟ್ಟಡ ಹಾಗೂ, ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಕಟ್ಟಡ ಉದ್ಘಾಟಿಸಲಿದ್ದಾರೆ.ಇದೇ ಹಿನ್ನಲೆ ಸಚಿವರಾದ ಅಶ್ವಥ್​​ ನಾರಾಯಣ್​​, ವಿ.ಸೋಮಣ್ಣ ಪ್ರಧಾನಿ ಮೋದಿ ಸ್ವಾಗತಕ್ಕೆ ಸರ್ಕಾರದ ಪೂರ್ವ ತಯಾರಿ ಆರಂಭವಾಗಿದೆ.

ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ನೂತನ ಕಟ್ಟಡ ಉದ್ಘಾಟನೆ ಹಿನ್ನೆಲೆಯಲ್ಲಿ ಡಿಸೆಂಬರ್​ 6 ರಂದು ಪ್ರಧಾನಿ ಮೋದಿ ಬೆಂಗಳೂರಿಗೆ ಬರುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಸಚಿವರಾದ ಅಶ್ವಥ್ ನಾರಾಯಣ್ ಹಾಗೂ ವಿ.ಸೋಮಣ್ಣ ಅವ್ರು, ಜ್ಞಾನಭಾರತಿ ಕ್ಯಾಂಪಸ್​ನಲ್ಲಿ ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಕಾರ್ಯಕ್ರಮದ ಪೂರ್ವಬಾವಿ ತಯಾರಿ ವೀಕ್ಷಿಸಿದ್ದಾರೆ.

ತ್ವರಿತಗತಿಯಲ್ಲಿ ಕಾಮಗಾರಿ ಮುಗಿಸುವಂತೆ ಅಧಿಕಾರಿಗಳಿಗೆ ಸಚಿವರು ಸೂಚಿಸಿದ್ದಾರೆ. ಬೆಂಗಳೂರಿನ ಗೋವಿಂದರಾಜನಗರ ವಿಧಾನಸಭಾ ಕ್ಷೇತ್ರಕ್ಕೆ ಪ್ರಧಾನಿ ಆಗಮಿಸುತ್ತಿರುವ ಹಿನ್ನೆಲೆಯಲ್ಲಿ ವಸತಿ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ. ಸೋಮಣ್ಣ ಅಭಿವೃದ್ಧಿ ಕಾಮಗಾರಿಗಳ ವೀಕ್ಷಣೆ ಮಾಡಿದ್ದಾರೆ.

ವಸತಿ ಇಲಾಖೆಯ ಯೋಜನೆ ಪ್ರಕಾರ ನಡೆದರೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಮುಂದಿನ ತಿಂಗಳು ಬೆಂಗಳೂರಿನ ಬಡವರಿಗೆ ವಸತಿ ಯೋಜನೆಯನ್ನು ಉದ್ಘಾಟಿಸಲಿದ್ದಾರೆ.

ಆತ್ಮೀಯ ಓದುಗರೇ, ಪಾರದರ್ಶಕ ಸುದ್ದಿಗಳು ನಿಮಗೆ ನಿರಂತರ ತಲುಪಲು ನಿಮ್ಮ ಸಹಾಯ ಅತೀ ಅಗತ್ಯ. ಸತ್ಯ ಎಲ್ಲೆಡೆ ತಲುಪಲು ನಮ್ಮೊಂದಿಗೆ ಕೈ ಜೋಡಿಸಿ. ನಮ್ಮನ್ನು ಬೆಂಬಲಿಸಲು

Hot Topics

ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ವತಿಯಿಂದ ‘ಅಂಬೇಡ್ಕರ್ ಪರಿ ನಿಬ್ಬಾಣ ದಿನ’ – ಮೇಣದ ಬತ್ತಿ ಮೆರವಣಿಗೆ

ಉಡುಪಿ: ಎಲ್ಲರ ಸಮಾನತೆಗಾಗಿ ಅಂಬೇಡ್ಕರ್ ಹೋರಾಟ ನಡೆಸಿದರು.ಅವರ ಹೋರಾಟದ ಫಲವಾಗಿ ಭಾರತದ ಮಹಿಳೆಯರು ಶಿಕ್ಷಣ ಪಡೆಯುವಂತಾಯಿತು ಎಂದು ಪ್ರೊ.ಫಣಿರಾಜ್ ಹೇಳಿದರು.     ಅಂಬೇಡ್ಕರ್ ಪರಿ ನಿಬ್ಬಾಣ ದಿನಾಚರಣೆಯ ಹಿನ್ನಲೆಯಲ್ಲಿ ದಲಿತ ಸಂಘರ್ಷ ಸಮಿತಿ(ರಿ) ಅಂಬೇಡ್ಕರ್ ವಾದ...

ಉತ್ತಮ ಬರಹಗಾರನಾಗಬೇಕಾದರೆ ಮೊದಲು ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು – ಡಾ.ವಿನ್ಸೆಂಟ್ ಆಳ್ವ

ಉಡುಪಿ: ಉತ್ತಮ ಬರಹಗಾರನಾಗಬೇಕಾದರೆ ಮೊದಲು ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಡಿಸಿಕೊಂಡಾಗ ಮುಂದೆ ಉತ್ತಮ ಸಾಹಿತ್ಯ ರಚನೆಯಾಗಲು ಸಾಧ್ಯವಿದೆ ಎಂದು ಕಲ್ಯಾಣಪುರ ಮಿಲಾಗ್ರಿಸ್‌ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನ್ಸೆಂಟ್‌ ಆಳ್ವಾ ಹೇಳಿದರು. ಅವರು ಭಾನುವಾರ ಕಲ್ಯಾಣಪುರ...

ಕರ್ನಾಟಕ ಸೇರಿದಂತೆ ಐದು ರಾಜ್ಯಗಳಿಗೆ ಪತ್ರ ಬರೆದ ಕೇಂದ್ರ ಸರ್ಕಾರ

ನವದೆಹಲಿ (ಡಿ.5):ಹೆಚ್ಚುತ್ತಿರುವ covid ಸಾಪ್ತಾಹಿಕ ಧನಾತ್ಮಕ ದರಗಳು ಮತ್ತು ಕೆಲವು ಜಿಲ್ಲೆಗಳಲ್ಲಿ ಸಾವುಗಳನ್ನು ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರವು ಐದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಪತ್ರ ಬರೆದಿದೆ.ಕೇಂದ್ರ ಆರೋಗ್ಯ ಕಾರ್ಯದರ್ಶಿ...

Related Articles

ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ವತಿಯಿಂದ ‘ಅಂಬೇಡ್ಕರ್ ಪರಿ ನಿಬ್ಬಾಣ ದಿನ’ – ಮೇಣದ ಬತ್ತಿ ಮೆರವಣಿಗೆ

ಉಡುಪಿ: ಎಲ್ಲರ ಸಮಾನತೆಗಾಗಿ ಅಂಬೇಡ್ಕರ್ ಹೋರಾಟ ನಡೆಸಿದರು.ಅವರ ಹೋರಾಟದ ಫಲವಾಗಿ ಭಾರತದ ಮಹಿಳೆಯರು ಶಿಕ್ಷಣ ಪಡೆಯುವಂತಾಯಿತು ಎಂದು ಪ್ರೊ.ಫಣಿರಾಜ್ ಹೇಳಿದರು.     ಅಂಬೇಡ್ಕರ್ ಪರಿ ನಿಬ್ಬಾಣ ದಿನಾಚರಣೆಯ ಹಿನ್ನಲೆಯಲ್ಲಿ ದಲಿತ ಸಂಘರ್ಷ ಸಮಿತಿ(ರಿ) ಅಂಬೇಡ್ಕರ್ ವಾದ...

ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿ : ಸಚಿವ ಸುಧಾಕರ್

ಬೆಂಗಳೂರು (ಡಿ.6): ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಟಫ್ ರೂಲ್ಸ್ ಜಾರಿ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಆರೋಗ್ಯ ಸಚಿವ ಡಾ.ಸುಧಾಕರ್...

ಬಸ್ ಬೈಕ್ ನಡುವೆ ಬೀಕರ ಅಪಘಾತ : ಸವಾರ ಸ್ಥಳದಲ್ಲೇ ದುರ್ಮರಣ

ಬೆಂಗಳೂರು (ಡಿ.6): ಬಿಎಂಟಿಸಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಬೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಓಕಳಿಪುರಂ ಬಳಿ ನಡೆದಿದೆ. ಮೃತಪಟ್ಟ ಯುವಕನನ್ನು ವಿಶ್ವ (25) ಎಂದು ಗುರುತಿಸಲಾಗಿದೆ.ಅಪಘಾತದಲ್ಲಿ...
Translate »
error: Content is protected !!