ಟಿ-20 ವಿಶ್ವಕಪ್: ಇಂದು ಇಂಗ್ಲೆಂಡ್ vs ನ್ಯೂಝಿಲೆಂಡ್ ಮೊದಲ ಸೆಮಿಫೈನಲ್

ಅಬುಧಾಬಿ: ಇಂಗ್ಲೆಂಡ್‌ ಮತ್ತು ನ್ಯೂಜಿಲ್ಯಾಂಡ್‌ ತಂಡಗಳು ಮತ್ತೂಂದು ಐಸಿಸಿ ಟೂರ್ನಿಯ ನಾಕೌಟ್‌ನಲ್ಲಿ ಸೆಣಸಲಿವೆ. ಬುಧವಾರ ಅಬುಧಾಬಿಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಕೂಟದ ಮೊದಲ ಸೆಮಿಫೈನಲ್‌ನಲ್ಲಿ ಈ ತಂಡ ಗಳು ಮುಖಾಮುಖಿಯಾಗಲಿವೆ. ಎರಡೂ ತಂಡಗಳು ಸಮಬಲದಂತೆ ಗೋಚರಿಸುತ್ತಿರುವುದರಿಂದ ಪೈಪೋಟಿ ತೀವ್ರಗೊಳ್ಳುವುದರಲ್ಲಿ ಅನುಮಾನವಿಲ್ಲ.

ಇಂಗ್ಲೆಂಡ್‌ ಮತ್ತು ನ್ಯೂಜಿಲ್ಯಾಂಡ್‌ ಸೂಪರ್‌-12 ಹಂತದ 5 ಪಂದ್ಯಗಳಲ್ಲಿ ತಲಾ ನಾಲ್ಕನ್ನು ಗೆದ್ದು ಒಂದರಲ್ಲಿ ಸೋಲನುಭವಿಸಿವೆ. ಮಾರ್ಗನ್‌ ಪಡೆ ಗ್ರೂಪ್‌ ಒಂದರ ಅಗ್ರಸ್ಥಾನಿಯಾದರೆ, ವಿಲಿಯಮ್ಸನ್‌ ಟೀಮ್‌ ಗ್ರೂಪ್‌ ಎರಡರ ದ್ವಿತೀಯ ಸ್ಥಾನಿಯಾಗಿ ನಾಕೌಟ್‌ ಪ್ರವೇಶಿಸಿವೆ.

ಸತತವಾಗಿ ಗೆಲ್ಲುತ್ತ ಬಂದ ಇಂಗ್ಲೆಂಡ್‌, ಕೊನೆಯ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾಕ್ಕೆ ಶರಣಾಗಿ ತನ್ನ ಘನತೆಗೆ ಒಂದಿಷ್ಟು ಪೆಟ್ಟು ಮಾಡಿ ಕೊಂಡಿದೆ. ಹಾಗೆಯೇ ಡ್ಯಾಶಿಂಗ್‌ ಓಪನರ್‌ ಜಾಸನ್‌ ರಾಯ್‌, ವೇಗಿ ಟೈಮಲ್‌ ಮಿಲ್ಸ್‌ ಗಾಯಾಳಾಗಿ ಕೂಟದಿಂದ ಹೊರಬಿದ್ದಿರುವುದೂ ಇಂಗ್ಲೆಂಡಿಗೆ ಬಿದ್ದ ದೊಡ್ಡ ಹೊಡೆತವಾಗಿದೆ.

ಜಾಸನ್‌ ರಾಯ್‌ ಗೈರಿನಿಂದಾಗಿ ಜಾನಿ ಬೇರ್‌ಸ್ಟೊ ಅವರಿಗೆ ಇನ್ನಿಂಗ್ಸ್‌ ಆರಂಭಿಸುವ ಅವಕಾಶ ಲಭಿಸಲಿದೆ. ಬೇರ್‌ಸ್ಟೊ ಮಧ್ಯಮ ಕ್ರಮಾಂಕಕ್ಕಿಂತ ಓಪನರ್‌ ಆಗಿ ಹೆಚ್ಚು ಅಪಾಯಕಾರಿ ಎಂಬುದರಲ್ಲಿ ಅನುಮಾನವಿಲ್ಲ. ಸ್ಯಾಮ್‌ ಬಿಲ್ಲಿಂಗ್ಸ್‌ ಅವರನ್ನು ಸೇರಿಸಿಕೊಂಡು ಇಂಗ್ಲೆಂಡ್‌ ತನ್ನ ಆಡುವ ಬಳಗವನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ.

ವೇಗಿ ಟೈಮಲ್‌ ಮಿಲ್ಸ್‌ ತೊಡೆಯ ನೋವಿನಿಂದಾಗಿ ಬೇರ್ಪಟ್ಟಿದ್ದಾರೆ. ಡೆತ್‌ ಓವರ್‌ಗಳಲ್ಲಿ ಮಿಲ್ಸ್‌ ಹೆಚ್ಚು ಪರಿಣಾಮ ಕಾರಿಯಾಗಿದ್ದರು. ಇವರ ಸ್ಥಾನಕ್ಕೆ ಬಂದಿರುವ ಮಾರ್ಕ್‌ ವುಡ್‌ ಎಸೆತಗಳಲ್ಲಿ “ಪೇಸ್‌’ ಇದ್ದರೂ “ವೇರಿಯೇಶನ್‌’ ಕಡಿಮೆ. ಅಲ್ಲದೇ ದಕ್ಷಿಣ ಆಫ್ರಿಕಾ ವಿರುದ್ಧ ಬಹಳ ದುಬಾರಿಯಾಗಿದ್ದರು. ಆದರೆ ಅವಳಿ ಸ್ಪಿನ್ನರ್‌ಗಳಾದ ಮೊಯಿನ್‌ ಅಲಿ-ಆದಿಲ್‌ ರಶೀದ್‌ ನ್ಯೂಜಿಲ್ಯಾಂಡಿಗೆ ಬೆದರಿಕೆಯೊಡ್ಡುವ ಎಲ್ಲ ಸಾಧ್ಯತೆ ಇದೆ.

ಇತ್ತೀಚಿನ ಐಸಿಸಿ ಟೂರ್ನಿಗಳಲ್ಲಿ ಚೇತೋಹಾರಿ ಪ್ರದರ್ಶನ ನೀಡುತ್ತ ಬಂದಿರುವ ನ್ಯೂಜಿಲ್ಯಾಂಡ್‌ ಪಾಲಿಗೆ ಇದು ಸೇಡಿನ ಪಂದ್ಯ. 2019ರ ಏಕದಿನ ವಿಶ್ವಕಪ್‌ ಫೈನಲ್‌ನಲ್ಲಿ ಇಂಗ್ಲೆಂಡ್‌ ವಿರುದ್ಧ ಅಮೋಘ ಆಟವಾಡಿಯೂ ಬೌಂಡರಿ ಲೆಕ್ಕಾಚಾರದಲ್ಲಿ ಚಾಂಪಿಯನ್‌ ಆಗುವ ಸುವರ್ಣಾವಕಾಶದಿಂದ ವಂಚಿತವಾಗಿತ್ತು. ಅನಂತರ ಟೆಸ್ಟ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತವನ್ನು ಮಣಿಸಿ “ಗದೆ’ ಎತ್ತಿದರೂ ಮಾರ್ಗನ್‌ ಬಳಗದೆದುರಿನ ಆ ಆಘಾತ ಮರೆಯಲಾಗದ್ದು. ಇದಕ್ಕೆ ತಕ್ಕ ಶಾಸ್ತಿ ಮಾಡಲು ಇದು ಸೂಕ್ತ ಸಮಯ!

ಕೇನ್‌ ವಿಲಿಯಮ್ಸನ್‌ ಪಡೆ ಒಂಥರ ಸೈಲೆಂಟ್‌ ಕಿಲ್ಲರ್‌. ಅವರ ಬೌಲಿಂಗ್‌ ವಿಭಾಗ ಹೆಚ್ಚು ಘಾತಕ. ಜತೆಗೆ ಉತ್ತಮ ಆಲ್‌ರೌಂಡರ್ ಇದ್ದಾರೆ. ಸ್ಪಿನ್ನರ್‌ಗಳಾದ ಸೋಧಿ, ಸ್ಯಾಂಟ್ನರ್‌ ಯುಎಇ ಟ್ರ್ಯಾಕ್ ಗಳಲ್ಲಿ ಹೆಚ್ಚು ಪರಿಣಾಮಕಾರಿಯಾಗಿದ್ದಾರೆ. ಅಬುಧಾಬಿ ಟ್ರ್ಯಾಕ್ ಬ್ಯಾಟಿಂಗಿಗೆ ಹೆಚ್ಚಿನ ನೆರವು ನೀಡುತ್ತ ಬಂದಿದೆ. ಗಪ್ಟಿಲ್‌, ಮಿಚೆಲ್‌, ವಿಲಿಯಮ್ಸನ್‌ ಗಟ್ಟಿಯಾಗಿ ನಿಂತರೆ ನ್ಯೂಜಿಲ್ಯಾಂಡ್‌ ತನ್ನ ಯೋಜನೆಯಲ್ಲಿ ಯಶಸ್ಸು ಕಂಡೀತು.

ಆತ್ಮೀಯ ಓದುಗರೇ, ಪಾರದರ್ಶಕ ಸುದ್ದಿಗಳು ನಿಮಗೆ ನಿರಂತರ ತಲುಪಲು ನಿಮ್ಮ ಸಹಾಯ ಅತೀ ಅಗತ್ಯ. ಸತ್ಯ ಎಲ್ಲೆಡೆ ತಲುಪಲು ನಮ್ಮೊಂದಿಗೆ ಕೈ ಜೋಡಿಸಿ. ನಮ್ಮನ್ನು ಬೆಂಬಲಿಸಲು

Hot Topics

ಉತ್ತಮ ಬರಹಗಾರನಾಗಬೇಕಾದರೆ ಮೊದಲು ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು – ಡಾ.ವಿನ್ಸೆಂಟ್ ಆಳ್ವ

ಉಡುಪಿ: ಉತ್ತಮ ಬರಹಗಾರನಾಗಬೇಕಾದರೆ ಮೊದಲು ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಡಿಸಿಕೊಂಡಾಗ ಮುಂದೆ ಉತ್ತಮ ಸಾಹಿತ್ಯ ರಚನೆಯಾಗಲು ಸಾಧ್ಯವಿದೆ ಎಂದು ಕಲ್ಯಾಣಪುರ ಮಿಲಾಗ್ರಿಸ್‌ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನ್ಸೆಂಟ್‌ ಆಳ್ವಾ ಹೇಳಿದರು. ಅವರು ಭಾನುವಾರ ಕಲ್ಯಾಣಪುರ...

ಕರ್ನಾಟಕ ಸೇರಿದಂತೆ ಐದು ರಾಜ್ಯಗಳಿಗೆ ಪತ್ರ ಬರೆದ ಕೇಂದ್ರ ಸರ್ಕಾರ

ನವದೆಹಲಿ (ಡಿ.5):ಹೆಚ್ಚುತ್ತಿರುವ covid ಸಾಪ್ತಾಹಿಕ ಧನಾತ್ಮಕ ದರಗಳು ಮತ್ತು ಕೆಲವು ಜಿಲ್ಲೆಗಳಲ್ಲಿ ಸಾವುಗಳನ್ನು ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರವು ಐದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಪತ್ರ ಬರೆದಿದೆ.ಕೇಂದ್ರ ಆರೋಗ್ಯ ಕಾರ್ಯದರ್ಶಿ...

ಮಂಗಳೂರು: ಯುವತಿ ನೇಣು ಬಿಗಿದು ಆತ್ಮಹತ್ಯೆ

ಮಂಗಳೂರು: ಯುವತಿಯೊಬ್ಬಳು ತನ್ನ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕಾವೂರಿನ ಆಕಾಶಭವನದಲ್ಲಿ ನಡೆದಿದೆ. ಆಕಾಶಭವನ ಬಳಿಯ ಕಾಪ್ರಿಗುಡ್ಡೆ ನಿವಾಸಿ ಶಿಫಾಲಿ ( 22 ) ಮೃತಪಟ್ಟ ಯುವತಿ ಎಂದು...

Related Articles

ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿ : ಸಚಿವ ಸುಧಾಕರ್

ಬೆಂಗಳೂರು (ಡಿ.6): ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಟಫ್ ರೂಲ್ಸ್ ಜಾರಿ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಆರೋಗ್ಯ ಸಚಿವ ಡಾ.ಸುಧಾಕರ್...

ಬಸ್ ಬೈಕ್ ನಡುವೆ ಬೀಕರ ಅಪಘಾತ : ಸವಾರ ಸ್ಥಳದಲ್ಲೇ ದುರ್ಮರಣ

ಬೆಂಗಳೂರು (ಡಿ.6): ಬಿಎಂಟಿಸಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಬೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಓಕಳಿಪುರಂ ಬಳಿ ನಡೆದಿದೆ. ಮೃತಪಟ್ಟ ಯುವಕನನ್ನು ವಿಶ್ವ (25) ಎಂದು ಗುರುತಿಸಲಾಗಿದೆ.ಅಪಘಾತದಲ್ಲಿ...

ಕೋರೋನ ಹೆಚ್ಚಾದರೆ ಶಾಲಾ ಕಾಲೇಜ್ ಗಳು ಬಂದ್ : ಸಚಿವ ಬಿ. ಸಿ ನಾಗೇಶ್

ಬೆಂಗಳೂರು,(ಡಿ.6)-ಒಂದು ವೇಳೆ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾದರೆ ಶಾಲಾಕಾಲೇಜುಗಳನ್ನು ಮುಚ್ಚಲು ತೀರ್ಮಾನಿಸುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ...
Translate »
error: Content is protected !!