ಉಡುಪಿ: 25 ಲಕ್ಷ ಬಹುಮಾನವನ್ನು ನಂಬಿ 5.5 ಲಕ್ಷ ಕಳೆದುಕೊಂಡ್ರು!

ಉಡುಪಿ: ಆನ್ಲೈನ್ ಮೋಸಗಳು ಹೆಚ್ಚು ಹೆಚ್ಚು ವರದಿಯಾಗಿತ್ತಿದೆ. ಹಲವು ಎಚ್ಚರಿಕೆಯ ಹೊರತಾಗಿಯೂ ಮೋಸ ಹೋಗುವವರ ಸಂಖ್ಯೆ ಕಡಿಮೆಯಾಗಿಲ್ಲ. ಇದೀಗ ಉಡುಪಿಯಲ್ಲಿ ಇಂತಹ ಇನ್ನೊಂದು ಪ್ರಕರಣ ವರದಿಯಾಗಿದೆ.

ದಿವಾಕರ್ ಎಂಬುವವರು ಅಪರಿಚಿತ ಕರೆಯನ್ನು ನಂಬಿ ಬರೊಬ್ಬರಿ 5,63,150 ಕಳೆದುಕೊಂಡಿದ್ದಾರೆ.

ಅಪರಿಚಿತ ವ್ಯಕ್ತಿಯೊಬ್ಬ ವಾಯ್ಸ್ ಸಂದೇಶ ಕಳುಹಿಸಿ ಪ 25 ಲಕ್ಷ ಹಣ ಬಹುಮಾನ ಬಂದಿರುವುದಾಗಿ ತಿಳಿಸಿದ್ದಲ್ಲದೆ ಈ ಬಗ್ಗೆ ದಾಖಲಾತಿಗಳನ್ನು ವಾಟ್ಸ್ ಅಫ್ ಗೆ ಕಳುಹಿಸಿ ದಿವಾಕರ್ ಅವರನ್ನು ನಂಬಿಸಿದ್ದಾನೆ. ನಂತರ ಯಾರೋ ಅಪರಿಚಿತ ವ್ಯಕ್ತಿಗಳು ದೂರವಾಣಿ ಕರೆ ಮಾಡಿ, ವಿವಿಧ ಇಲಾಖೆಯ ಅಧಿಕಾರಿಗಳೆಂದು ನಂಬಿಸಿ ಬಹುಮಾನದ ಮೊತ್ತಕ್ಕೆ ಡಿಪಾಸಿಟ್ ಹಣವನ್ನು ಕಟ್ಟುವಂತೆ ತಿಳಿಸಿ ಎಸ್.ಬಿ.ಐ, ಐಡಿಬಿಐ ಬ್ಯಾಂಕ್ ಗಳ ವಿವಿಧ ಖಾತೆಗಳನ್ನು ನೀಡಿದ್ದು, ಇದನ್ನು ನಂಬಿ ಪಿರ್ಯಾದಿದಾರರು Jaldi Cash ನಿಂದ ರೂಪಾಯಿ 1,90,000/- ಹಾಗೂ IDBI Bank ಉಡುಪಿಯಿಂದ ರೂಪಾಯಿ 3,73,150/- ರಂತೆ ಒಟ್ಟು ರೂಪಾಯಿ 5,63,150/- ಹಣವನ್ನು ಡಿಪಾಸಿಟ್ ಮಾಡಿದ್ದಾರೆ.

ಇದೀಗ ಬಹುಮಾನದ ಹಣವನ್ನು ನೀಡದೆ ಡಿಪಾಸಿಟ್ ಮಾಡಿಸಿಕೊಂಡ ಹಣವನ್ನು ಕೂಡ ವಾಪಾಸ್ಸು ನೀಡದೆ ಒಟ್ಟು ರೂಪಾಯಿ 5,63,150/- ಹಣವನ್ನು ಮೋಸ ಮಾಡಿರುವುದಾಗಿ ನೀಡಿದ ದೂರಿನಂತೆ ಸೆನ್ ಅಪರಾಧ ಪೊಲೀಸ್ ಠಾಣೆ ಅಪರಾಧ ಕ್ರಮಾಂಕ 55/2021 ಕಲಂ: 66(c), 66(d) ಐ.ಟಿ. ಆಕ್ಟ್ 420 ಐಪಿಸಿಯಂತೆ ಪ್ರಕರಣ ದಾಖಲಾಗಿರುತ್ತದೆ.

ಆತ್ಮೀಯ ಓದುಗರೇ, ಪಾರದರ್ಶಕ ಸುದ್ದಿಗಳು ನಿಮಗೆ ನಿರಂತರ ತಲುಪಲು ನಿಮ್ಮ ಸಹಾಯ ಅತೀ ಅಗತ್ಯ. ಸತ್ಯ ಎಲ್ಲೆಡೆ ತಲುಪಲು ನಮ್ಮೊಂದಿಗೆ ಕೈ ಜೋಡಿಸಿ. ನಮ್ಮನ್ನು ಬೆಂಬಲಿಸಲು

Hot Topics

ಕೃಷ್ಣ ಮಠದಲ್ಲಿ ನೀಡಿದ ಹೇಳಿಕೆಗಳನ್ನು ಹಿಂಪಡೆಯುತ್ತೇನೆ : ತೇಜಸ್ವಿ ಸೂರ್ಯ

ಉಡುಪಿ,( ಡಿ.27): ಎರಡು ದಿನಗಳ ಹಿಂದೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ 'ಭಾರತದಲ್ಲಿ ಹಿಂದೂ ಪುನರುತ್ಥಾನ' ಎಂಬ ವಿಷಯದ ಕುರಿತು ಮಾತನಾಡಿದ್ದ ನನ್ನ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ ಎಂದು ಸಂಸದ ತೇಜಸ್ವಿ...

ನಮ್ಮ ನಾಡ ಒಕ್ಕೂಟ ಬೈಂದೂರು ಘಟಕ ಮತ್ತು ಹಳಗೇರಿ ಓವರ್ಸೀಸ್ ಕಮಿಟಿ ವತಿಯಿಂದ ಉಚಿತ ಆಯುಷ್ಮಾನ್ ಕಾರ್ಡ್, ಈ-ಶ್ರಮ್ ಕಾರ್ಡ್ ಮತ್ತು ವಿದ್ಯಾರ್ಥಿವೇತನ ಶಿಬಿರ

ದಿನಾಂಕ 26 (ಡಿ.2021), ಆದಿತ್ಯವಾರ: ಚಿಕಿತ್ಸೆಯ ಸಂಕಷ್ಟದ ಸನ್ನಿವೇಶದಲ್ಲಿ ಆತ್ಮವಿಶ್ವಾಸ ತುಂಬಲು ಹಾಗೂ ಶೈಕ್ಷಣಿಕ ರಂಗದಲ್ಲಿ ಪ್ರೇರಣೆ ನೀಡುವ ಉದ್ದೇಶದಿಂದ ಇಂದು ನಮ್ಮ ನಾಡ ಒಕ್ಕೂಟ(ರಿ) ಬೈಂದೂರು ಘಟಕ ಮತ್ತು ಹಳಗೇರಿ ಓವರ್ಸೀಸ್...

ಮಂಗಳೂರು : ಇಂಜಿನಿಯರಿಂಗ್ ವಿದ್ಯಾರ್ಥಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ

ಮಂಗಳೂರು (ಡಿ.26): ಇಲ್ಲಿನ ಸುರತ್ಕಲ್ ನ ಇಂಜಿನಿಯರಿಂಗ್ ಕಾಲೇಜ್ ನ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ. ಸೌರವ್ ಎನ್ನುವ ಬಿಹಾರ ಮೂಲದ ದ್ವಿತೀಯ ವರ್ಷದ ವಿದ್ಯಾರ್ಥಿ ಸೌರವ್...

Related Articles

ರಾಜ್ಯ ಸರ್ಕಾರಗಳಿಗೆ ತೆರಿಗೆ ಹಂಚಿಕೆಯ ಮುಂಗಡ ಕಂತು ಹಂಚಿಕೆ

ನವದೆಹಲಿ,(ಜ.21): ಹಣಕಾಸು ಸಚಿವಾಲಯದ ವೆಚ್ಚ ಇಲಾಖೆ, 17 ರಾಜ್ಯಗಳಿಗೆ 9,781 ಕೋಟಿ ರೂ. ತಿಂಗಳ ಬದಲಾವಣೆ ನಂತರದ ಆದಾಯ ಕೊರತೆ (ಪಿಡಿಆರ್ ಆಡಿ) ಅನುದಾನವನ್ನು ಬಿಡುಗಡೆ ಮಾಡಿದೆ. ಇದು ರಾಜ್ಯಗಳಿಗೆ ಬಿಡುಗಡೆ ಮಾಡಿದ...

ಕವಿ ಚನ್ನವೀರ ಕಣವಿ ಚಿಕಿತ್ಸಾ ವೆಚ್ಚ ಬರಿಸಲಿರುವ ಸರ್ಕಾರ : ಸಿಎಂ ಬಸವರಾಜ್ ಬೊಮ್ಮಾಯಿ

ಬೆಂಗಳೂರು,(ಜ.20): ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಕವಿ ಚನ್ನವೀರ ಕಣವಿ ಅವರ ಆಸ್ಪತ್ರೆ ವೆಚ್ಚ ವನ್ನು ಸರ್ಕಾರದ ವತಿಯಿಂದ ಭರಿಸಲು ನಿರ್ಧರಿಸಲಾಗಿದೆ. ಜ್ವರದಿಂದ ಬಳಲುತ್ತಿದ್ದ ಕಣವಿ ಅವರು ಜನವರಿ 14 ರಂದು...

ಮಂಡ್ಯ : ಶೆಲ್ ತಯರಿಕ ಕಂಪನಿಯಲ್ಲಿ 39 ಜನರಿಗೆ ಕೋರೊನ

ಮಂಡ್ಯ (ಜ.21): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಮಂಡ್ಯ ಜಿಲ್ಲೆಯ ಶೆಲ್ ತಯಾರಿಕಾ ಫ್ಯಾಕ್ಟರಿಯಲ್ಲಿ 39 ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ...
Translate »
error: Content is protected !!