ಮಾಧ್ಯಮಗಳ ಸ್ವಾರ್ಥಪರ ನಿಲುವು ಸಮಾಜ ಸ್ವಾಸ್ಥ್ಯ ಬಿಗಡಾಯಿಸದಿರಲಿ.

– ಇದ್ರೀಸ್ ಹೂಡೆ

ಜನಾಂಗೀಯವಾದಿ ಮೇಲ್ಮೈಯ ಪ್ರವರ್ತಕರ ಪ್ರಾಯೋಜಕತ್ವದಲ್ಲಿರುವ ಮತ್ತು ಆಳುವ ವರ್ಗದ ಪಾದನೆಕ್ಕುವ ಮಾಧ್ಯಮಗಳು ದೇಶದ ಪ್ರಜೆಗಳನ್ನು ವಿಭಜಿಸಿ ಸ್ವಾರ್ಥ ಸಾಧಿಸಲಿಕ್ಕಾಗಿ ಸುಳ್ಳಿನ ವಿಷಪೂರಿತ ಮುಳ್ಳುಕಂಠಿಗಳ ಗಿಡಗಳನ್ನು ನೆಟ್ಟು ಅದಕ್ಕೆ ನೀರು ಗೊಬ್ಬರ ಸುರಿದು ಅದರಿಂದ ಪೊಗದಸ್ತಾದ TRP ಎಂಬ ಸ್ವಾರ್ಥದ ಫಸಲು ಕಟಾವು ಮಾಡುವ ಸ್ಪರ್ಧೆಯಲ್ಲಿದೆ. ಈ ಜನದ್ರೋಹಿ ಮಾಧ್ಯಮಗಳೇ ಜನರ ಮಧ್ಯೆ ರಾಗ ದ್ವೇಷಗಳನ್ನು ಹರಡಿ ಪರಸ್ಪರ ಎದುರು ಬದುರಾಗುವಂತೆ ಮಾಡಿ ಸಮಾಜ ವಿಭಜಿಸುವಂತಹ ದೇಶದ್ರೋಹದ ಕೃತ್ಯಗಳ ಪ್ರೇರಕರು.

ಇತ್ತೀಚೆಗೆ ಕರಾವಳಿಯ ಕುಂದಾಪುರದ ಬಳಿಯ ಗಂಗೊಳ್ಳಿಯಲ್ಲಿ ಸುಮಾರು ಒಂದು ದಶಕದ ಹಿಂದೆ ದನದ ಮಾಂಸ ಮಾಡಿದ ಅಂದಿನ ವೀಡಿಯೋ ಕ್ಲಿಪ್’ನ್ನು ಹಿಡಿದುಕೊಂಡು ಸಮಾಜ ಕಂಟಕ ಶಕ್ತಿಗಳು, ಆ ಪ್ರದೇಶದಲ್ಲಿ ಪ್ರಕ್ಷುಬ್ಧತೆ ಹರಡುವ ದುರುದ್ದೇಶದಿಂದ ಕೂಡಿದ ಪ್ರತಿಭಟನೆಯನ್ನು ಹಮ್ಮಿಕೊಂಡಿತ್ತು. ಈ ಸಂದರ್ಭದಲ್ಲಿ ಆ ಸಂಘಟನೆಗಳ ಬೆಂಬಲಿಗರು ನಡೆದುಕೊಂಡ ನಮೂನೆಯು ಗೋ ಪ್ರೇಮದ ಮುಖವಾಡವು ನೇಪಥ್ಯಕ್ಕೆ ಸರಿಸಿ ಮನುಷ್ಯ ದ್ವೇಷಿ ಸಿದ್ದಾಂತದ ಕಾಲಾಳುತನ ಬಟಾಬಯಲಾಗಿಸಿತ್ತು. ಇಲ್ಲದ್ದಿದ್ದಲ್ಲಿ ತಥಾಕಥಿತ ಗೋ ರಕ್ಷಣಾ ಪ್ರತಿಭಟನೆಯಲ್ಲಿ ಇನ್ನೊಂದು ಧರ್ಮದ ಚಿನ್ಹೆಗಳು, ಪ್ರವಾದಿಗಳು, ದೇವನಂಬಿಕೆ ಇತ್ಯಾದಿಗಳ ಮೇಲೆ ಅಸಭ್ಯ, ಅನಾಗರಿಕ, ಅಶ್ಲೀಲತೆಗಳಿಂದ ಕೂಡಿದ ನಿಂದನೆಗಳ ಹಿಂದಿನ ತರ್ಕವೇನು ?

ಸಮಾಜ ವಿಭಾಜಕ ಶಕ್ತಿಗಳ ಈ ದೇವ ನಿಂದನೆಯ ಕೃತ್ಯಗಳಿಂದ ನೋವು ಅನುಭವಿಸಿದ ಸಮುದಾಯದ ಸ್ಥಳೀಯ ಕೆಲವರು ಆ ಪ್ರತಿಭಟನೆಯಲ್ಲಿ ಭಾಗಿಯಾದ ಮತ್ತು ಅದಕ್ಕೆ ಉತ್ತೇಜನ ನೀಡಿದರೆಂಬ ಹೆಂಗಸರಿಂದ ಮೀನು ಖರೀದಿಸುವುದು ನಿಲ್ಲಿಸಿದರು. ಮೀನು ಖರೀದಿಸುವುದು ನಿಲ್ಲಿಸುವುದ ಹಿಂದಿನ ಪ್ರೇರಣೆ ಧರ್ಮನಿಂದನೆ ಮತ್ತು ಸಮುದಾಯನಿಂದನೆಯ ನೋವಾಗಿತ್ತೇ ಹೊರತು ಗೋ ಮಾಂಸ ಮಾಡುವ ಬಗ್ಗೆ ವಿವಾದಗಳೇನಿದ್ದರೂ ‘ಗೋ ಮಾಂಸ ಮಾಡುವುದರ ವಿರುದ್ಧದ ಪ್ರತಿಭಟನೆಯ’ ಕಾರಣವಂತು ಮೀನು ಖರೀದಿಸದಿರುವುದ ಹಿಂದೆ ಇರಲ್ಲಿಲ್ಲ. ಅಲ್ಲದೇ ಈ ಸಂದರ್ಭದಲ್ಲಿ ಕಾನೂನು ವ್ಯವಸ್ಥೆಯ ಸಂರಕ್ಷಣೆಯ ಹೊಣೆಹೊತ್ತವರು ಮತ್ತು ಆಡಳಿತ ಯಂತ್ರಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಂಡಿಲ್ಲ ಬದಲಾಗಿ ಅವರ ನಿಲುವು ತಾರತಮ್ಯದಿಂದ ಕೂಡಿದೆ. ಅನ್ಯಾಯಕ್ಕೆ ಒಳಗಾದವರ ವಿರುದ್ಧದ ನಿಲುವು ತಾಳಿದೆ ಎಂಬ ಭಾವನೆ ಈ ಭಾಗದಲ್ಲಿ ದಟ್ಟವಾಗಿದೆ. ಈ ರೀತಿಯ ವಾತಾವರಣ ದೇಶದ ಪ್ರಜಾತಾಂತ್ರಿಕ ಸ್ವಾಸ್ಥ್ಯಕ್ಕೆ ಸೂಕ್ತವಲ್ಲ. ಬಹುಸಂಖ್ಯಾತರು, ಅಲ್ಪಸಂಖ್ಯಾತರು, ಜಿಲ್ಲಾಡಳಿತ, ನೀತಿ ನಿರೂಪಕರು, ಧಾರ್ಮಿಕ ನಾಯಕರು, ಮಾಧ್ಯಮಗಳು ಎಲ್ಲರೂ ಸೇರಿ ಪ್ರಕ್ಷುಬ್ಧ ವಾತಾವರಣವನ್ನು ತಿಳಿಗೊಳಿಸಬೇಕಾಗಿದೆ. ಆದರೆ ಕೆಲವು ಮಾಧ್ಯಮಗಳು ಸಾಮಾಜಿಕ ಬದ್ಧತೆಯನ್ನು ಮರೆತು ಕದಡಿದ ರಾಡಿ ನೀರಿನಲ್ಲಿ ಮೀನು ಹಿಡಿಯುವ ಸನ್ನಾಹದಲ್ಲಿದೆ. ಗೋ ಹತ್ಯೆಯ ವಿರುದ್ಧ ಪ್ರತಿಭಟನೆಯ ಕಾರಣ ಮೀನು ಖರೀದಿ ನಿಲ್ಲಿಸಲಾಗಿದೆ ಎಂದು ಕಿರುಚಿಕೊಳ್ಳತೋಡಗಿದೆ. ಈ ವರ್ಗದ ಮಾಧ್ಯಮಗಳಿಗೆ ಕನಿಷ್ಠ ಸಾಮಾಜಿಕ ಬದ್ಧತೆಗಳಿಲ್ಲ, ಬದಲಾಗಿ ಸ್ವಾರ್ಥ ಹಿತಾಸಕ್ತಿಗಳೇ Media Ethics ಎಂದು ಭಾವಿಸಿ ಕೊಂಡಂತಿದೆ.

ಇದೇ ಸಂದರ್ಭದಲ್ಲಿ ಮುಸ್ಲಿಮ್ ಸಮುದಾಯ ಕೂಡಾ ಬಾಹ್ಯ ಮತ್ತು ಆಂತರಿಕ ಭಾವನಾತ್ಮಕ ಉತ್ಪೀಡನೆ ಒಳಗಾಗಕೂಡದು. ಎಷ್ಟೇ ಪ್ರಚೋದನೆ ಮತ್ತು ಛೇಡಿಸುವ ದುಷ್ಟ ಹುನ್ನಾರಗಳು ನಡೆದರು ಸಂಯಮದಿಂದ ವಿವೇಚನಾ ಪೂರ್ಣ ನಿಲುವಿನ ಮೂಲಕ ಈ ಹುನ್ನಾರಗಳನ್ನು ವಿಫಲಗೊಳಿಸಬೇಕು. ಎದುರಿಗೆ ಕಾಣುವ ಪುಂಡು ಪೋಕರಿಗಳ ಕುಚೇಷ್ಟೇ ಪ್ರತಿಕ್ರಿಯಿಸಲು ಹೋಗಿ ಹೈರಾಣಾಗುವುದಲ್ಲ, ಈ ಮೂಲಕ ಸಮಾಜದಲ್ಲಿ ಕ್ಷೋಭೆಯನ್ನು ಹರಡುವುದರ ಹಿಂದೆ ಅಡಗಿರುವ ಷಡ್ಯಂತ್ರಗಳು ಮತ್ತು ಈ ಷಡ್ಯಂತ್ರಗಳಿಗೆ ರೂಪು ನೀಡುವ ಕಾಣದ ಕೈಗಳನ್ನು ಯಶಸ್ವಿಗೊಳಿಸುವಲ್ಲಿ ನಮ್ಮ ಪಾಲು ನೀಡುವುದೂ ಅಲ್ಲ. ಸಮುದಾಯದ ಚಟುವಟಿಕೆಗಳು ಪ್ರತಿಕ್ರಿಯಾತ್ಮಕ(Reactive) ವಾಗಿರದೆ ಸಮಾಜಕ್ಕೆ ದಿಕ್ಕು ನೀಡುವ ಸರ್ವರಿಗೂ ಪ್ರಯೋಜನಕಾರಿ ಧನಾತ್ಮಕ ತೀರ್ಮಾನ ಹಾಗೂ ಪ್ರಕ್ರಿಯೆಗಳಾಗಿರಬೇಕು. ಇದು ಸಮುದಾಯಕ್ಕೆ ಪ್ರವಾದಿಗಳಿಂದ ದೊರೆತ ಮಾರ್ಗದರ್ಶನ. ಈ ಸನ್ನಿವೇಶಗಳು ಕೆಲವರ ಬುಡಭದ್ರಗೊಳಿಸುವ ಉಪಕರಣಗಳು (Instruments) ಆಗದಂತೆ ಸಮಾಜ ಮತ್ತು ಸಮುದಾಯದ ನಾಯಕತ್ವ ನಿಗಾವಹಿಸಬೇಕಾದುದು ಅತ್ಯಗತ್ಯವಾಗಿದೆ.

ಆತ್ಮೀಯ ಓದುಗರೇ, ಪಾರದರ್ಶಕ ಸುದ್ದಿಗಳು ನಿಮಗೆ ನಿರಂತರ ತಲುಪಲು ನಿಮ್ಮ ಸಹಾಯ ಅತೀ ಅಗತ್ಯ. ಸತ್ಯ ಎಲ್ಲೆಡೆ ತಲುಪಲು ನಮ್ಮೊಂದಿಗೆ ಕೈ ಜೋಡಿಸಿ. ನಮ್ಮನ್ನು ಬೆಂಬಲಿಸಲು

Hot Topics

ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ವತಿಯಿಂದ ‘ಅಂಬೇಡ್ಕರ್ ಪರಿ ನಿಬ್ಬಾಣ ದಿನ’ – ಮೇಣದ ಬತ್ತಿ ಮೆರವಣಿಗೆ

ಉಡುಪಿ: ಎಲ್ಲರ ಸಮಾನತೆಗಾಗಿ ಅಂಬೇಡ್ಕರ್ ಹೋರಾಟ ನಡೆಸಿದರು.ಅವರ ಹೋರಾಟದ ಫಲವಾಗಿ ಭಾರತದ ಮಹಿಳೆಯರು ಶಿಕ್ಷಣ ಪಡೆಯುವಂತಾಯಿತು ಎಂದು ಪ್ರೊ.ಫಣಿರಾಜ್ ಹೇಳಿದರು.     ಅಂಬೇಡ್ಕರ್ ಪರಿ ನಿಬ್ಬಾಣ ದಿನಾಚರಣೆಯ ಹಿನ್ನಲೆಯಲ್ಲಿ ದಲಿತ ಸಂಘರ್ಷ ಸಮಿತಿ(ರಿ) ಅಂಬೇಡ್ಕರ್ ವಾದ...

ಉತ್ತಮ ಬರಹಗಾರನಾಗಬೇಕಾದರೆ ಮೊದಲು ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು – ಡಾ.ವಿನ್ಸೆಂಟ್ ಆಳ್ವ

ಉಡುಪಿ: ಉತ್ತಮ ಬರಹಗಾರನಾಗಬೇಕಾದರೆ ಮೊದಲು ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಡಿಸಿಕೊಂಡಾಗ ಮುಂದೆ ಉತ್ತಮ ಸಾಹಿತ್ಯ ರಚನೆಯಾಗಲು ಸಾಧ್ಯವಿದೆ ಎಂದು ಕಲ್ಯಾಣಪುರ ಮಿಲಾಗ್ರಿಸ್‌ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನ್ಸೆಂಟ್‌ ಆಳ್ವಾ ಹೇಳಿದರು. ಅವರು ಭಾನುವಾರ ಕಲ್ಯಾಣಪುರ...

ಕರ್ನಾಟಕ ಸೇರಿದಂತೆ ಐದು ರಾಜ್ಯಗಳಿಗೆ ಪತ್ರ ಬರೆದ ಕೇಂದ್ರ ಸರ್ಕಾರ

ನವದೆಹಲಿ (ಡಿ.5):ಹೆಚ್ಚುತ್ತಿರುವ covid ಸಾಪ್ತಾಹಿಕ ಧನಾತ್ಮಕ ದರಗಳು ಮತ್ತು ಕೆಲವು ಜಿಲ್ಲೆಗಳಲ್ಲಿ ಸಾವುಗಳನ್ನು ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರವು ಐದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಪತ್ರ ಬರೆದಿದೆ.ಕೇಂದ್ರ ಆರೋಗ್ಯ ಕಾರ್ಯದರ್ಶಿ...

Related Articles

ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ವತಿಯಿಂದ ‘ಅಂಬೇಡ್ಕರ್ ಪರಿ ನಿಬ್ಬಾಣ ದಿನ’ – ಮೇಣದ ಬತ್ತಿ ಮೆರವಣಿಗೆ

ಉಡುಪಿ: ಎಲ್ಲರ ಸಮಾನತೆಗಾಗಿ ಅಂಬೇಡ್ಕರ್ ಹೋರಾಟ ನಡೆಸಿದರು.ಅವರ ಹೋರಾಟದ ಫಲವಾಗಿ ಭಾರತದ ಮಹಿಳೆಯರು ಶಿಕ್ಷಣ ಪಡೆಯುವಂತಾಯಿತು ಎಂದು ಪ್ರೊ.ಫಣಿರಾಜ್ ಹೇಳಿದರು.     ಅಂಬೇಡ್ಕರ್ ಪರಿ ನಿಬ್ಬಾಣ ದಿನಾಚರಣೆಯ ಹಿನ್ನಲೆಯಲ್ಲಿ ದಲಿತ ಸಂಘರ್ಷ ಸಮಿತಿ(ರಿ) ಅಂಬೇಡ್ಕರ್ ವಾದ...

ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿ : ಸಚಿವ ಸುಧಾಕರ್

ಬೆಂಗಳೂರು (ಡಿ.6): ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಟಫ್ ರೂಲ್ಸ್ ಜಾರಿ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಆರೋಗ್ಯ ಸಚಿವ ಡಾ.ಸುಧಾಕರ್...

ಬಸ್ ಬೈಕ್ ನಡುವೆ ಬೀಕರ ಅಪಘಾತ : ಸವಾರ ಸ್ಥಳದಲ್ಲೇ ದುರ್ಮರಣ

ಬೆಂಗಳೂರು (ಡಿ.6): ಬಿಎಂಟಿಸಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಬೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಓಕಳಿಪುರಂ ಬಳಿ ನಡೆದಿದೆ. ಮೃತಪಟ್ಟ ಯುವಕನನ್ನು ವಿಶ್ವ (25) ಎಂದು ಗುರುತಿಸಲಾಗಿದೆ.ಅಪಘಾತದಲ್ಲಿ...
Translate »
error: Content is protected !!