ಪ್ರವಾಸಿಗಳಿಗೆ ಸುಗ್ಗಿ; ಆಕಾಶದಲ್ಲಿ ಬಣ್ಣ ಬಣ್ಣದ ಧ್ರುವ ಪ್ರಭೆ ‘ಅರೋರೆ’

ಈಗ ನಮ್ಮ ಭೂಮಿಯ ಧ್ರುವ ಪ್ರದೇಶಗಳಲ್ಲಿ ಆಕಾಶ ಅತಿ ಸುಂದರ, ಧ್ರುವ ಪ್ರಭೆಗಳ ತಾಂಡವ ನರ್ತನ.. ಪ್ರವಾಸಿಗಳಿಗಂತೂ ಸುಗ್ಗಿ. ಉತ್ತರ ಅಮೇರಿಕಾ, ಕೆನಡಾ, ಇಂಗ್ಲೇಡ್, ಯುರೋಪಿನ ಎಲ್ಲಾ ರಸಿಕರೂ ಗ್ರೀನ್ ಲ್ಯಾಂಡ್, ನಾರ್ವೆ, ಸ್ವೀಡನ್ ಕಡೆಗೆ ನುಗ್ಗುತ್ತಿದ್ದಾರೆ. ಉತ್ತರ ಧ್ರುವಪ್ರದೇಶದ ಸಮೀಪದ ಆರ್ಕಟಿಕ್ ಸರ್ಕಲ್ ನ ಪ್ರದೇಶಗಳಲ್ಲಿ ಆಕಾಶದಲ್ಲಿ ಬಣ್ಣದೋಕುಳಿ. ಸುಮಾರು 15 ರಿಂದ 20 ನಿಮಿಷಗಳ ಕಾಲ ಇಡೀ ಆಕಾಶದ ಸುತ್ತಲೂ ಕುಣಿ ಕಣಿತದ ಬಣ್ಣ ಬಣ್ಣದ ಪ್ರಭೆ. ಹಸಿರು, ಕೆಂಪು , ನೀಲಿ, ಹಳದಿ ಹಾಗೂ ಸಂಮಿಶ್ರ ಬಣ್ಣಗಳ ಹೊಗೆಯೋ ಎನ್ನುವಂತಹ ಬೆಳಕಿನ ನರ್ತನ. ಇದಕ್ಕೆ ಧ್ರುವ ಪ್ರಭೆ “ಅರೋರೆ” ಎನ್ನುತ್ತಾರೆ. ದಕ್ಷಿಣ ಧ್ರುವ ಅಂಟಾರ್ಟೆಕಾದಲ್ಲೂ ಕಾಣುತ್ತದೆ.

ಇದೇನು ಈಗ ವಿಶೇಷವೆನ್ನುವಿರಾ? , ಹೌದು. ಈಗ ಇದು ಅತ್ಯದ್ಭುತವಾಗಿ ಸೃಷ್ಟಿ ಯಾಗುತ್ತಿದೆ. ಯಾವಾಗಲೂ ಕಾಣ ಸಿಗುವುದಿಲ್ಲ ಇದು. ಕೆಲ ಕಾಲ ಇರುವುದೇ ಇಲ್ಲ. 11 ವರ್ಷಕ್ಕೊಮ್ಮೆ ಕೆಲ ಸಮಯ ಭಾರೀ ವಿಶೇಷವಾಗಿ ಕಂಡುಬರುತ್ತದೆ. ಈಗ ಕಾಣುವ ಪ್ರಭೆ ಇನ್ನೊಂದು ಆರು ತಿಂಗಳು ಈ ಸಂಭ್ರಮವಿರುತ್ತದೆ.
ಈ ಧ್ರುವ ಪ್ರಭೆಗಳಿಗೂ ನಮ್ಮ ಸೂರ್ಯನಿಗೂ ಬಾರೀ ನಂಟು. ನಮ್ಮ ಸೂರ್ಯನೋ , ಅದೇನೇನು ವಿಸ್ಮಯಗಳನ್ನು ಸೃಷ್ಟಿಸುವನೊ ?

ಅಚ್ಚ ಹೊಸ ಬಿಸಿ ಬಿಸಿ ಸುದ್ದಿ. ಈ ತಿಂಗಳಲ್ಲೇ ನಮ್ಮ ಸೂರ್ಯ ಕೆಂಡಾಮಂಡಲವಾಗಿ ವಿಶೇಷ ಶಕ್ತಿಯನ್ನು ಉಗುಳುತ್ತಿದೆ. ಸಪ್ಟಂಬರ್ 26 ,27ರಂದು ಉಗುಳಿದ ಜ್ವಾಲೆ, ಭೂ ಕಾಂತೀಯ ವಾತಾವರಣವನ್ನು ಹಾಗೂ ನಮ್ಮ ಆಧುನಿಕ ಸಂಪರ್ಕಗಳನ್ನು ಕೆಲ ನಿಮಿಷ ವ್ಯತ್ಯಾಸ ಗೊಳಿಸಲೂ ಬಹುದೆಂದು ವಿಜ್ನಾನಿಗಳು ಅಂದಾಜಿಸಿದ್ದಾರೆ. ಇವುಗಳಿಗೆ ಸೋಲಾರ್ ಸ್ಟಾರ್ಮ್ ಅಥವಾ ಕೊರೋನಲ್ ಮಾಸ್ ಇಜೆಕ್ಷನ್ ‘ ಸಿ ಎಮ್ ಇ ‘ ಎನ್ನುತ್ತಾರೆ. ಇದು ಸೂರ್ಯನಲ್ಲಿ ಯಾವಾಗಲೂ ನಡೆಯುವ ಪ್ರಕಿೃಯೆಯಾದರೂ ಈಗ ಬಹಳ ಹೆಚ್ಚಾಗುತ್ತಿದೆ. ಇದಕ್ಕೆ ಸೂರ್ಯನ ವಿಚಿತ್ರ ಅಯಸ್ಕಾಂತೀಯ ಚಲನೆಗಳು ಕಾರಣ. ಸುಮಾರು 11 ವರ್ಷಕ್ಕೊಮ್ಮೆ ಸೂರ್ಯನ ಧ್ರುವಗಳ ಅಯಸ್ಕಾಂತೀಯ ಪರಿವರ್ತನೆ ನಡೆಯುತ್ತದೆ. ಈ ಪ್ರಕಿೃಯೆ ನಡೆದ ನಂತರ ಸೂರ್ಯ ಜ್ವಾಲೆಗಳು ಹೆಚ್ಚು. ಈಗ 2021ರಲ್ಲಿ ಇದು ಸೂರ್ಯನಲ್ಲಿ ನಡೆಯುತ್ತಿದೆ. 2019ರಲ್ಲಿ ಸೂರ್ಯನ ಕಲೆಗಳು ಇಲ್ಲವೆಂಬಷ್ಟು ವಿರಳವಾಗಿತ್ತು. ಈ ವಿದ್ಯಾದಾನವನ್ನು ನಿತ್ಯದ, ವರ್ಷದ ಸೂರ್ಯನ ಕಲೆಗಳಿಂದ ತಿಳಿಯ ಬಹುದು. ಸೂರ್ಯನ ಪ್ರತಿಬಿಂಬವನ್ನು ನೋಡಿದಾಗ ಸೂರ್ಯನ ಮೈಯಲ್ಲಿ ಹೆಚ್ಚಿನ ಕಪ್ಪು ಕಲೆಗಳನ್ನು ನೋಡಬಹುದು. ಇವನ್ನು ಸೂರ್ಯನ ಕಲೆಗಳು ” ಸನ್ ಸ್ಪೋಟ್ಸ್ ” ಎನ್ನುವರು.

ಸೂರ್ಯನ ಕಲೆಗಳು: ಸೂರ್ಯನಲ್ಲಿ 11 ವರ್ಷಕ್ಕೊಮ್ಮೆ ಅತೀ ಹೆಚ್ಚು ಕಲೆಗಳನ್ನು ಗುರುತಿಸಬಹುದು. ಇದಕ್ಕೆ ಸೂರ್ಯನ ಸನ್ ಸ್ಪೋಟ್ ಸೈಕಲ್ ಎನ್ನುವರು. ಗೆಲಿಲೀಯೊ ದೂರದರ್ಶಕದಿಂದ 1610 ರಲ್ಲಿ ಪ್ರಥಮವಾಗಿ ಗುರುತಿಸಿದನಂತರ, ನೋಡುತ್ತಲೇ ಬಂದಿದ್ದಾರೆ.
ಈ ಪ್ರಕೃಿಯೆಯನ್ನು ಇನ್ನೊಂದು ರೀತಿಯಲ್ಲಿ ಗಮನಿಸಬಹುದು. ಈ ಸೂರ್ಯನ ಕಲೆಗಳು ಹೆಚ್ಚಿರುವ ಸಮಯದಲ್ಲೇ ಭೂಮಿಯ ದ್ರುವ ಪ್ರದೇಶಗಳಲ್ಲಿ ಬಣ್ಣದೊಕುಳಿ ದ್ರುವ ಪ್ರಭೆ. ಬಹಳ ಹಿಂದಿನಿಂದ ಇದನ್ನು ಗುರುತಿಸಿದ್ದಾರೆ.
ಹಾಗಾಗಿ ಸೂರ್ಯನ ಕಾಂತೀಯ ವ್ಯತ್ಯಾಸ ಹಾಗೂ ವಿಶೇಷ ಶಕ್ತಿ ಉತ್ಸರ್ಜನದ ಕಾಲದಲ್ಲೇ ಸೂರ್ಯನ ಕಲೆಗಳು ಹಾಗೂ ದ್ರುವ ಪ್ರಭೆ ಹೆಚ್ಚು.
ಒಂದು ಪ್ರಶ್ನೆ ಮೂಡುವುದು ಸಹಜ. ಈ ಕಾಲದಲ್ಲಿ ದ್ರುವ ಪ್ರದೇಶದಲ್ಲಿ ಮಾತ್ರ ವಿಶೇಷ ಪ್ರಭೆ ಎಕೆ, ಎಂದು. ಇದಕ್ಕೆ ಕಾರಣ ನಮ್ಮ ಭೂಮಿಯ ಸುತ್ತ ಇರುವ ಭೂ ಕಾಂತೀಯ ವಲಯಗಳು. ಇವು ಸೂರ್ಯನಿಂದ ಬರುವ ವಿಶೇಷ ಶಕ್ತಿಯ ಕಣಗಳನ್ನು ನಮ್ಮ ಸಮಭಾಜಕ ವೃತ್ತದ ಆಸುಪಾಸು ಸಂಪೂರ್ಣ ತಡೆಯಬಲ್ಲವು. ಆದರೆ ದ್ರುವಗಳಲ್ಲಿ ಅವುಗಳಿಗೆ ಸಾಧ್ಯವಾಗುವುದಿಲ್ಲ. ಅಲ್ಲಿ ಆ ಶಕ್ತಿ ಯುತ ಕಣಗಳು ವಾತಾವರಣದ ಒಳ ನುಗ್ಗಿ ಅಲ್ಲಿರುವ ಅಣು, ಪರಮಾಣುಗಳೊಂದಿಗೆ ಘರ್ಷಿಸಿ ಬೆಳಕನ್ನು ಬಿಡುಗಡೆ ಮಾಡುತ್ತವೆ. ಅದೇ ಧ್ರುವ ಪ್ರಭೆ.

ಡಾ ಎ ಪಿ ಭಟ್, ಉಡುಪಿ.

ಆತ್ಮೀಯ ಓದುಗರೇ, ಪಾರದರ್ಶಕ ಸುದ್ದಿಗಳು ನಿಮಗೆ ನಿರಂತರ ತಲುಪಲು ನಿಮ್ಮ ಸಹಾಯ ಅತೀ ಅಗತ್ಯ. ಸತ್ಯ ಎಲ್ಲೆಡೆ ತಲುಪಲು ನಮ್ಮೊಂದಿಗೆ ಕೈ ಜೋಡಿಸಿ. ನಮ್ಮನ್ನು ಬೆಂಬಲಿಸಲು

Hot Topics

ಉತ್ತಮ ಬರಹಗಾರನಾಗಬೇಕಾದರೆ ಮೊದಲು ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು – ಡಾ.ವಿನ್ಸೆಂಟ್ ಆಳ್ವ

ಉಡುಪಿ: ಉತ್ತಮ ಬರಹಗಾರನಾಗಬೇಕಾದರೆ ಮೊದಲು ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಡಿಸಿಕೊಂಡಾಗ ಮುಂದೆ ಉತ್ತಮ ಸಾಹಿತ್ಯ ರಚನೆಯಾಗಲು ಸಾಧ್ಯವಿದೆ ಎಂದು ಕಲ್ಯಾಣಪುರ ಮಿಲಾಗ್ರಿಸ್‌ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನ್ಸೆಂಟ್‌ ಆಳ್ವಾ ಹೇಳಿದರು. ಅವರು ಭಾನುವಾರ ಕಲ್ಯಾಣಪುರ...

ಕರ್ನಾಟಕ ಸೇರಿದಂತೆ ಐದು ರಾಜ್ಯಗಳಿಗೆ ಪತ್ರ ಬರೆದ ಕೇಂದ್ರ ಸರ್ಕಾರ

ನವದೆಹಲಿ (ಡಿ.5):ಹೆಚ್ಚುತ್ತಿರುವ covid ಸಾಪ್ತಾಹಿಕ ಧನಾತ್ಮಕ ದರಗಳು ಮತ್ತು ಕೆಲವು ಜಿಲ್ಲೆಗಳಲ್ಲಿ ಸಾವುಗಳನ್ನು ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರವು ಐದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಪತ್ರ ಬರೆದಿದೆ.ಕೇಂದ್ರ ಆರೋಗ್ಯ ಕಾರ್ಯದರ್ಶಿ...

ಮಂಗಳೂರು: ಯುವತಿ ನೇಣು ಬಿಗಿದು ಆತ್ಮಹತ್ಯೆ

ಮಂಗಳೂರು: ಯುವತಿಯೊಬ್ಬಳು ತನ್ನ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕಾವೂರಿನ ಆಕಾಶಭವನದಲ್ಲಿ ನಡೆದಿದೆ. ಆಕಾಶಭವನ ಬಳಿಯ ಕಾಪ್ರಿಗುಡ್ಡೆ ನಿವಾಸಿ ಶಿಫಾಲಿ ( 22 ) ಮೃತಪಟ್ಟ ಯುವತಿ ಎಂದು...

Related Articles

ರಾಜ್ಯದಲ್ಲಿ ಟಫ್ ರೂಲ್ಸ್ ಜಾರಿ : ಸಚಿವ ಸುಧಾಕರ್

ಬೆಂಗಳೂರು (ಡಿ.6): ರಾಜ್ಯದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ಟಫ್ ರೂಲ್ಸ್ ಜಾರಿ ಮಾಡುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಈ ಕುರಿತು ಆರೋಗ್ಯ ಸಚಿವ ಡಾ.ಸುಧಾಕರ್...

ಬಸ್ ಬೈಕ್ ನಡುವೆ ಬೀಕರ ಅಪಘಾತ : ಸವಾರ ಸ್ಥಳದಲ್ಲೇ ದುರ್ಮರಣ

ಬೆಂಗಳೂರು (ಡಿ.6): ಬಿಎಂಟಿಸಿ ಬಸ್ ಹಾಗೂ ಬೈಕ್ ನಡುವೆ ಸಂಭವಿಸಿದ ಬೀಕರ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಓಕಳಿಪುರಂ ಬಳಿ ನಡೆದಿದೆ. ಮೃತಪಟ್ಟ ಯುವಕನನ್ನು ವಿಶ್ವ (25) ಎಂದು ಗುರುತಿಸಲಾಗಿದೆ.ಅಪಘಾತದಲ್ಲಿ...

ಕೋರೋನ ಹೆಚ್ಚಾದರೆ ಶಾಲಾ ಕಾಲೇಜ್ ಗಳು ಬಂದ್ : ಸಚಿವ ಬಿ. ಸಿ ನಾಗೇಶ್

ಬೆಂಗಳೂರು,(ಡಿ.6)-ಒಂದು ವೇಳೆ ರಾಜ್ಯದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾದರೆ ಶಾಲಾಕಾಲೇಜುಗಳನ್ನು ಮುಚ್ಚಲು ತೀರ್ಮಾನಿಸುತ್ತೇವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ.ನಾಗೇಶ್ ತಿಳಿಸಿದ್ದಾರೆ. ವಿಧಾನಸೌಧದಲ್ಲಿ ಇಂದು ಶಿಕ್ಷಣ ಇಲಾಖೆಯ ಅಧಿಕಾರಿಗಳ ಜೊತೆ...
Translate »
error: Content is protected !!