ಸೆಪ್ಟೆಂಬರ್ 27 ರಂದು ನಡೆಯುವ ರೈತ ಪರ ಹೋರಾಟದಲ್ಲಿ ಭಾಗವಹಿಸಲು ಸಾಲಿಡಾರಿಟಿ ಕರೆ

ಉಡುಪಿ: ಸೆಪ್ಟೆಂಬರ್ 27 ರಂದು ದೇಶಾದ್ಯಂತ ರೈತ ಸಂಘಟನೆಗಳು ಭಾರತ್ ಬಂದ್’ಗೆ ಕರೆ ನೀಡಿದೆ. ಈ ಹಿನ್ನಲೆಯಲ್ಲಿ ಉಡುಪಿ ನಗರದಲ್ಲಿ ವಿವಿಧ ಸಂಘಟನೆಗಳು ಸೇರಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಜಾಥ ಮತ್ತು ಸಭೆಯನ್ನು ಆಯೋಜಿಸಿದ್ದು ಇದರಲ್ಲಿ ಉಡುಪಿ ಜಿಲ್ಲೆಯ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಅನ್ನದಾತರ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಸಾಲಿಡಾರಿಟಿ ಯೂತ್’ಮೂವ್ಮೆಂಟ್ ಉಡುಪಿ ಜಿಲ್ಲಾ ಘಟಕ ಆಗ್ರಹಿಸಿದೆ‌.

ಕೇಂದ್ರ ಸರಕಾರ ಜಾರಿಗೆ ತಂದಿರುವ ಮೂರು ಕರಾಳ ಕೃಷಿ ತಿದ್ದುಪಡಿ ಕಾಯ್ದೆ, ಜನ ವಿರೋಧಿ ವಿದ್ಯುತ್ ಮಸೂದೆ, ಭೂ ಸುಧಾರಣಾ ಕಾಯ್ದೆ ತಿದ್ದುಪಡಿ ,ಎಪಿಎಂಸಿ ಕಾಯ್ದೆ ತಿದ್ದುಪಡಿ , ಪೆಟ್ರೋಲ್ , ಡೀಸೆಲ್ , ಅಡುಗೆ ಅನಿಲ , ಬೆಲೆ ಏರಿಕೆ ಮೊದಲಾದ ಜನವಿರೋಧಿ ಆಡಳಿತವನ್ನು ವಿರೋಧಿಸಿ ರೈತ ಸಂಘಟನೆಗಳು, ಪ್ರಗತಿ ಪರ ಸಂಘಟನೆಗಳು ಭಾರತ್ ಬಂದ್’ಗೆ ಕರೆ ನೀಡಿದೆ.ಉಡುಪಿಯಲ್ಲೂ ಸಹ ಕೇಂದ್ರ ಸರಕಾರದ ಜನ ವಿರೋಧಿ ನೀತಿ ವಿರೋಧಿಸಿ ಜಾಗೃತಿ ಸಭೆಗಳನ್ನು ಆಯೋಜಿಸಲಾಗಿದೆ. ಇದಕ್ಕೆ ಸಂಪೂರ್ಣ ಉಡುಪಿಯ ನಾಗರಿಕರು ಸಂಪೂರ್ಣ ಬೆಂಬಲ ನೀಡಬೇಕೆಂದು ಸಾಲಿಡಾರಿಟಿ ಉಡುಪಿ ಜಿಲ್ಲಾ ಸಹ ಕಾರ್ಯದರ್ಶಿ ಸೈಯದ್ ಅಕ್ರಮ್ ವಿನಂತಿಸಿದ್ದಾರೆ.

ಹಲವು ಸಮಾನ ಮನಸ್ಕ ಜನಪರ ಸಂಘಟನೆಗಳೊಂದಿಗೆ ಕೂಡಿಕೊಂಡು 27 ರಂದು ಬ್ರಹತ್ ಪ್ರತಿಭಟನೆ ನಡೆಲಾಗುವುದು. ಜಿಲ್ಲೆಯಾದ್ಯಂತ ಇರುವ ದಲಿತ ಸಂಘಟನೆಯ ಪದಾಧಿಕಾರಿಗಳು ಮತ್ತು ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಭಾಗವಹಿಸಿ , ಈ ಕರಾಳ ದುರಾಡಳಿತವನ್ನು ಖಂಡಿಸಬೇಕೆಂದು ಕರೆ ನೀಡಿದ್ದಾರೆ.

ಸೆಪ್ಟೆಂಬರ್ 27 ರಂದು ಜೋಡುಕಟ್ಟೆಯಿಂದ ನಡೆಯುವ ಬ್ರಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಭಾಗವಹಿಸಬೇಕೆಂದು ಸೈಯದ್ ಅಕ್ರಮ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆತ್ಮೀಯ ಓದುಗರೇ,ಪಾರದರ್ಶಕ ಸುದ್ದಿಗಳು ನಿಮಗೆ ನಿರಂತರ ತಲುಪಲು ನಿಮ್ಮ ಸಹಾಯ ಅತೀ ಅಗತ್ಯ. ಸತ್ಯ ಎಲ್ಲೆಡೆ ತಲುಪಲು ನಮ್ಮೊಂದಿಗೆ ಕೈ ಜೋಡಿಸಿ. ನಮ್ಮನ್ನು ಬೆಂಬಲಿಸಲು

Hot Topics

ಸಕಲ ಜೀವಾತ್ಮಗಳಿಗೆ ಪ್ರವಾದಿ ಅತ್ಯುತ್ತಮ ಮಾದರಿ:- ಕರಿ ಬಸವಶ್ರೀ

ತಾವರಗೇರಾ. ಜಮಾತೇ ಇಸ್ಲಾಮಿ ಹಿಂದ್ ವತಿಯಿಂದ ಪತ್ರಿವರ್ಷದಂತೆ ಈ ವರ್ಷವುಕೂಡ ಅಕ್ಟೂಬರ್ 17 ರಿಂದ 26 ರ ವರೆಗೆ “ಪ್ರವಾದಿ ಮಹಮ್ಮದ್ (ಸ) ಅತ್ಯುತ್ತಮ ಮಾದರಿ” ಎಂಬ ಧ್ಯೇಯ ವಾಕ್ಯದಡಿಯಲ್ಲಿ ರಾಜ್ಯವ್ಯಾಪ್ತಿ ನಡೆಯುತ್ತಿರುವ...

ನಮ್ಮ ನಾಡ ಒಕ್ಕೂಟ ಉಡುಪಿ ಘಟಕ ಮತ್ತು ಮಸ್ಜಿದ್ ಎ ನೂರುಲ್ ಇಸ್ಲಾಮ್ ಆದಿಉಡುಪಿ ವತಿಯಿಂದ ಆಯುಷ್ಮಾನ್ ಕಾರ್ಡ್ ಹಾಗೂ ವಿದ್ಯಾರ್ಥಿವೇತನ ಶಿಬಿರ

ದಿನಾಂಕ 24 ಅಕ್ಟೊಬರ್ 2021, ಆದಿತ್ಯವಾರ: ಚಿಕಿತ್ಸೆಯ ಸಂಕಷ್ಟದ ಸನ್ನಿವೇಶದಲ್ಲಿ ಆತ್ಮವಿಶ್ವಾಸ ತುಂಬಲು ಹಾಗೂ ಶೈಕ್ಷಣಿಕ ರಂಗದಲ್ಲಿ ಪ್ರೇರಣೆ ನೀಡುವ ಉದ್ದೇಶದಿಂದ ಇಂದು ನಮ್ಮ ನಾಡ ಒಕ್ಕೂಟ ಉಡುಪಿ ತಾಲೂಕು ಘಟಕದ ವತಿಯಿಂದ...

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷರಿಂದ ಪಕ್ಷದ ಉಳ್ಳಾಲ ನಗರ ಸಮಿತಿ ವತಿಯಿಂದ ಸ್ಥಾಪಿಸಿದ ನಾಗರಿಕ ಸೇವಾ ಕೇಂದ್ರ ಮತ್ತು ಪಕ್ಷದ ಕಚೇರಿಯ ಉದ್ಘಾಟನೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಮಂಗಳೂರು, ಅ. 24: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರಾದ್ಯಂತ ತನ್ನ ಪಕ್ಷಕ್ಕೆ ಸದಸ್ಯತ್ವ ಸೇರ್ಪಡೆಯ ಬೃಹತ್ ಅಭಿಯಾನವನ್ನು ಇದೇ ಕಳೆದ ಅಕ್ಟೋಬರ್ 15 ರಿಂದ ಈ ತಿಂಗಳ ಕೊನೆಯವರೆಗೂ ಅಂದರೆ ಅಕ್ಟೋಬರ್...

Related Articles

ಸಕಲ ಜೀವಾತ್ಮಗಳಿಗೆ ಪ್ರವಾದಿ ಅತ್ಯುತ್ತಮ ಮಾದರಿ:- ಕರಿ ಬಸವಶ್ರೀ

ತಾವರಗೇರಾ. ಜಮಾತೇ ಇಸ್ಲಾಮಿ ಹಿಂದ್ ವತಿಯಿಂದ ಪತ್ರಿವರ್ಷದಂತೆ ಈ ವರ್ಷವುಕೂಡ ಅಕ್ಟೂಬರ್ 17 ರಿಂದ 26 ರ ವರೆಗೆ “ಪ್ರವಾದಿ ಮಹಮ್ಮದ್ (ಸ) ಅತ್ಯುತ್ತಮ ಮಾದರಿ” ಎಂಬ ಧ್ಯೇಯ ವಾಕ್ಯದಡಿಯಲ್ಲಿ ರಾಜ್ಯವ್ಯಾಪ್ತಿ ನಡೆಯುತ್ತಿರುವ...

ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ ರೋಹ್‌ ಟೇ-ವೊ ನಿಧನ

ಸೋಲ್‌ (ಅ.26):ಅನಾರೋಗ್ಯದಿಂದ ಬಳಳುತ್ತಿದ್ದ ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ ರೋಹ್ ಟೇ-ವೂ (88) ನಿಧನರಾಗಿದ್ದಾರೆ ಎಂದು ಸೋಲ್‌ನ ನ್ಯಾಷನಲ್ ಯುನಿವರ್ಸಿಟಿ ಆಸ್ಪತ್ರೆ ತಿಳಿಸಿದೆ.1979ರ ಮಿಲಿಟರಿ ದಂಗೆಯನ್ನು ಬೆಂಬಲಿಸಿದ್ದ ರೋಹ್‌, ಸೋಲ್‌ನಲ್ಲಿ ಸೇನಾ ವಿಭಾಗವನ್ನು...

2022 ರ ಚುನಾವಣೆ ಕುರಿತು ಚರ್ಚೆಗೆ ಕಾಂಗ್ರೆಸ್ ಅದಿನಾಯಕಿ ಸೋನಿಯಾ ಗಾಂಧಿ ಸಭೆ

ನವದೆಹಲಿ,(ಅ.26): ಮುಂಬರುವ 2022ರ ವಿಧಾನಸಭೆ ಚುನಾವಣೆಗಳ ಕುರಿತು ಚರ್ಚಿಸುವುದಕ್ಕೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಮಂಗಳವಾರ ಪಕ್ಷದ ಹಿರಿಯ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ್, ಮಣಿಪುರ ಮತ್ತು...
Translate »
error: Content is protected !!