ಬೆಲೆ ಏರಿಕೆ ಮಾಡಿ ಜನರ ರಕ್ತ ಹೀರುತ್ತಿರುವ ಬಿಜೆಪಿ ಸರ್ಕಾರ

ಬೆಂಗಳೂರು (ಸೆ.24): ದಪ್ಪ ಚರ್ಮದ ಬಿಜೆಪಿ ಸರ್ಕಾರಕ್ಕೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದಾಗಿರುವ ಜನರ ಸಂಕಷ್ಟ ಅರ್ಥವಾಗುತ್ತಿಲ್ಲ. ಜನರ ಧ್ವನಿಯಾಗಿ ನಾವು ಹೋರಾಟ ಮಾಡುತ್ತಿದ್ದರೆ ಕಾಂಗ್ರೆಸ್ ನವರು ನಾಟಕವಾಡುತ್ತಿದ್ದಾರೆ ಎಂದು ಹೇಳುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿ ಸರ್ಕಾರ ಬೆಲೆ ಏರಿಕೆ ಮಾಡಿ ಜನರ ರಕ್ತ ಕುಡಿಯುತ್ತಿದೆ. ಸಿಎಂ ಬಸವರಾಜ್ ಬೊಮ್ಮಾಯಿ, ಪ್ರಧಾನಿ ಮೋದಿ ಸರ್ಕಾರ ದಪ್ಪ ಚರ್ಮದ ಸರ್ಕಾರ. ಬೆಲೆ ಏರಿಕೆಯನ್ನು ಬಹಳ ಲಘುವಾಗಿ ಮಾತನಾಡುತ್ತಾ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಅಧಿವೇಶನ ಆರಂಭದಂದು ಎತ್ತಿನಗಾಡಿ ಮೂಲಕ ಪ್ರತಿಭಟನೆ ನಡೆಸಿದೆವು, ನಂತರ ಸೈಕಲ್ ಜಾಥಾ ಮೂಲಕ ಹೋರಾಟ ನಡೆಸಿದ್ದೇವೆ. ಇಂದು ಅಧಿವೇಶನದ ಕೊನೆ ದಿನ ಟಾಂಗಾ ಜಾಥಾ ಮೂಲಕ ಬೆಲೆ ಏರಿಕೆ ಖಂಡಿಸುತ್ತಿದ್ದೇವೆ. ಈ ಮೂಲಕ ಸರ್ಕಾರದ ಗಮನವನ್ನು ಮತ್ತೊಮ್ಮೆ ಸೆಳೆಯುತ್ತಿದ್ದೇವೆ ಎಂದರು.

ಪೆಟ್ರೋಲ್ ದರ 100 ರೂ. ತಲುಪಿದೆ. ಡೀಸೆಲ್ 90 ರೂಪಾಯಿ ಆಗಿದೆ. ಅಗತ್ಯ ವಸ್ತುಗಳನ್ನು ಖರೀದಿಸಲು ಜನರು ಒಡವೆಗಳನ್ನು ಗಿರವಿ ಇಡುತ್ತಿದ್ದಾರೆ. 10-15 ಸಾವಿರ ಸಂಬಳ ಪಡೆಯುವವರು ಮನೆಗಳನ್ನು ಹೇಗೆ ನಿಭಾಯಿಸಬೇಕು? ಹೊತ್ತಿನ ಊಟಕ್ಕೂ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಜನರ ದ್ವನಿಯಾಗಿ ನಾವು ಹೋರಾಡಿದರೆ ನಮಗೆ ನಾಟಕ ಮಾಡುತ್ತಿದ್ದಾರೆ ಎಂದು ಬಿಜೆಪಿ ನಾಯಕರು ಹೇಳುತ್ತಿದ್ದಾರೆ.

ಆತ್ಮೀಯ ಓದುಗರೇ,ಪಾರದರ್ಶಕ ಸುದ್ದಿಗಳು ನಿಮಗೆ ನಿರಂತರ ತಲುಪಲು ನಿಮ್ಮ ಸಹಾಯ ಅತೀ ಅಗತ್ಯ. ಸತ್ಯ ಎಲ್ಲೆಡೆ ತಲುಪಲು ನಮ್ಮೊಂದಿಗೆ ಕೈ ಜೋಡಿಸಿ. ನಮ್ಮನ್ನು ಬೆಂಬಲಿಸಲು

Hot Topics

ಸಕಲ ಜೀವಾತ್ಮಗಳಿಗೆ ಪ್ರವಾದಿ ಅತ್ಯುತ್ತಮ ಮಾದರಿ:- ಕರಿ ಬಸವಶ್ರೀ

ತಾವರಗೇರಾ. ಜಮಾತೇ ಇಸ್ಲಾಮಿ ಹಿಂದ್ ವತಿಯಿಂದ ಪತ್ರಿವರ್ಷದಂತೆ ಈ ವರ್ಷವುಕೂಡ ಅಕ್ಟೂಬರ್ 17 ರಿಂದ 26 ರ ವರೆಗೆ “ಪ್ರವಾದಿ ಮಹಮ್ಮದ್ (ಸ) ಅತ್ಯುತ್ತಮ ಮಾದರಿ” ಎಂಬ ಧ್ಯೇಯ ವಾಕ್ಯದಡಿಯಲ್ಲಿ ರಾಜ್ಯವ್ಯಾಪ್ತಿ ನಡೆಯುತ್ತಿರುವ...

ನಮ್ಮ ನಾಡ ಒಕ್ಕೂಟ ಉಡುಪಿ ಘಟಕ ಮತ್ತು ಮಸ್ಜಿದ್ ಎ ನೂರುಲ್ ಇಸ್ಲಾಮ್ ಆದಿಉಡುಪಿ ವತಿಯಿಂದ ಆಯುಷ್ಮಾನ್ ಕಾರ್ಡ್ ಹಾಗೂ ವಿದ್ಯಾರ್ಥಿವೇತನ ಶಿಬಿರ

ದಿನಾಂಕ 24 ಅಕ್ಟೊಬರ್ 2021, ಆದಿತ್ಯವಾರ: ಚಿಕಿತ್ಸೆಯ ಸಂಕಷ್ಟದ ಸನ್ನಿವೇಶದಲ್ಲಿ ಆತ್ಮವಿಶ್ವಾಸ ತುಂಬಲು ಹಾಗೂ ಶೈಕ್ಷಣಿಕ ರಂಗದಲ್ಲಿ ಪ್ರೇರಣೆ ನೀಡುವ ಉದ್ದೇಶದಿಂದ ಇಂದು ನಮ್ಮ ನಾಡ ಒಕ್ಕೂಟ ಉಡುಪಿ ತಾಲೂಕು ಘಟಕದ ವತಿಯಿಂದ...

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷರಿಂದ ಪಕ್ಷದ ಉಳ್ಳಾಲ ನಗರ ಸಮಿತಿ ವತಿಯಿಂದ ಸ್ಥಾಪಿಸಿದ ನಾಗರಿಕ ಸೇವಾ ಕೇಂದ್ರ ಮತ್ತು ಪಕ್ಷದ ಕಚೇರಿಯ ಉದ್ಘಾಟನೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಮಂಗಳೂರು, ಅ. 24: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರಾದ್ಯಂತ ತನ್ನ ಪಕ್ಷಕ್ಕೆ ಸದಸ್ಯತ್ವ ಸೇರ್ಪಡೆಯ ಬೃಹತ್ ಅಭಿಯಾನವನ್ನು ಇದೇ ಕಳೆದ ಅಕ್ಟೋಬರ್ 15 ರಿಂದ ಈ ತಿಂಗಳ ಕೊನೆಯವರೆಗೂ ಅಂದರೆ ಅಕ್ಟೋಬರ್...

Related Articles

2022 ರ ಚುನಾವಣೆ ಕುರಿತು ಚರ್ಚೆಗೆ ಕಾಂಗ್ರೆಸ್ ಅದಿನಾಯಕಿ ಸೋನಿಯಾ ಗಾಂಧಿ ಸಭೆ

ನವದೆಹಲಿ,(ಅ.26): ಮುಂಬರುವ 2022ರ ವಿಧಾನಸಭೆ ಚುನಾವಣೆಗಳ ಕುರಿತು ಚರ್ಚಿಸುವುದಕ್ಕೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಮಂಗಳವಾರ ಪಕ್ಷದ ಹಿರಿಯ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ್, ಮಣಿಪುರ ಮತ್ತು...

ಹೂತ್ರೆ ಕೊಳೆತು ಹೋಗ್ತೇನೆ, ಸುಟ್ರೆ ಬೂದಿ ಆಗ್ತೀನಿ ನನ್ನ ಅಂಗಾಂಗ ದಾನ ಮಾಡಿ ಎಂದು ವಿಡಿಯೋಮಾಡಿ ಇಂಜಿನಿಯರಿಂಗ್ ವಿದ್ಯಾರ್ಥಿ ಆತ್ಮಹತ್ಯೆ

ಹಾಸನ(ಅ.26)ಸುಟ್ಟರೆ ಬೂದಿ ಆಗುತ್ತೇನೆ ಹಾಗೂ ಮಣ್ಣಲ್ಲಿ ಹೂತರೆ ದೇಹ ಕೊಳೆತು ಹೋಗುತ್ತದೆ.ಆದ್ದರಿಂದ ನನ್ನ ಅಂಗಾಂಗಗಳನ್ನು ದಾನ ಮಾಡಿ ಎಂದು ವಿಡಿಯೋ ಮಾಡಿ ಇಂಜಿನಿಯರಿಂಗ್ ವಿದ್ಯಾರ್ಥಿ ಹಾಸ್ಟೆಲ್ ನಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹಾಸನದಲ್ಲಿ...

ಕುಮಾರಸ್ವಾಮಿಯಿಂದ ಸೂಟ್ಕೇಸ್ ರಾಜಕಾರಣ : ಜಮೀರ್ ಅಹ್ಮದ್ ಗಂಭೀರ ಆರೋಪ

ಹುಬ್ಬಳ್ಳಿ (ಅ.26); ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವಿರುದ್ಧ ಹಿಗ್ಗಾ ಮುಗ್ಗಾ ವಾಗ್ದಾಳಿ ನಡೆಸಿರುವ ಶಾಸಕ ಜಮೀರ್ ಅಹ್ಮದ್, ಕುಮಾರಸ್ವಾಮಿ ಸೂಟ್ ಕೇಸ್ ರಾಜಕಾರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, ಹಾನಗಲ್ ನಲ್ಲಿ...
Translate »
error: Content is protected !!