ತಾಜುಲ್ ಫುಖಹಾ ಉಸ್ತಾದ್ ನಮ್ಮ ಶೈಖುನಾ ಬಾರ್ಕೂರು ಅನುಸ್ಮರಣಾ ಮಜ್ಲಿಸ್ ನಲ್ಲಿ ಖಾಝಿ ಮಾಣಿ ಉಸ್ತಾದ್

ಉಡುಪಿ : ಮನೆಯನ್ನೇ ಖುತುಬು ಖಾನ ಮಾಡಿದ ಅರಿವಿನ ಲೈಬ್ರರಿ ತಾಜುಲ್ ಫುಖಹಾಅ ಬೇಕಲ್ ಉಸ್ತಾದ್ ಅವರು ನಮ್ಮ ಶೈಖುನಾ ಆಗಿದ್ದಾರೆ ಯಾವುದೇ ಸಮಸ್ಯೆಗಳಿಗೂ,ಸಂಶಯಗಳಿಗೂ ಅಂತಿಮ ತೀರ್ಪು ಅವರದ್ದಾಗಿತ್ತು. ನಮ್ಮಿಂದ ಅಗಲಿ ಒಂದು ವರ್ಷ ಪೂರ್ತಿಯಾದರೂ ನಮಗೆ ಅವರನ್ನು ಮರೆಯಲು ಸಾಧ್ಯನೇ ಇಲ್ಲ ಎಂದು ಖಾಝಿ ಶೈಖುನಾ ಝೈನುಲ್ ಉಲಮಾ ಎಂ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ ಹೇಳಿದರು
ಯಾವುದೇ ಸಮಸ್ಯೆಗಳಿಲ್ಲದ್ದರೂ ಸಲೀಸಾಗಿ ನಿಭಾಯಿಸುತ್ತಿದ್ದರು,ಅವರು ನೀಡಿದ ಯಾವುದೇ ಫತ್ವಾ, ಪ್ರಕಟಣೆಗಳನ್ನು ತಿದ್ದುಪಡಿ ಮಾಡುವ ಅವಕಾಶ ಬಂದಿಲ್ಲ ಅಷ್ಟೊಂದು ಸೂಕ್ಷ್ಮತೆ ಹಾಗೂ ಗಾಂಭೀರ್ಯತೆ ಇತ್ತು ಎಂದು
ಪ್ರಾಸ್ತಾವಿಕವಾಗಿ ಮಾತನಾಡಿದ ಸುನ್ನೀ ಸಂಯುಕ್ತ ಜಮಾಅತ್ ಸಂಘಟನಾ ಕಾರ್ಯದರ್ಶಿ ಕೆ ಎ ಅಬ್ದುರ್ರಹ್ಮಾನ್ ರಝ್ವಿ ಕಲ್ಕಟ್ಟ ಹೇಳಿದರು.

ಸುನ್ನೀ ಸಂಯುಕ್ತ ಜಮಾಅತ್ ಉಡುಪಿ ಜಿಲ್ಲೆ ಇದರ ವತಿಯಿಂದ ಮಾಲಿಕಿಬ್ನು ದೀನಾರ್ ಜುಮಾ ಮಸೀದಿ ಬಾರ್ಕೂರು ನಲ್ಲಿ ಜರಗಿದ ತಾಜುಲ್ ಫುಖಹಾಅ ಖಾಝಿ ಪಿ ಎಮ್ ಇಬ್ರಾಹಿಂ ಮುಸ್ಲಿಯಾರ್ ಬೇಕಲ್ ಉಸ್ತಾದರ ಪ್ರಥಮ ವಾರ್ಷಿಕ ಅನುಸ್ಮರಣಾ ಮಜ್ಲಿಸ್ ನ ಅಧ್ಯಕ್ಷತೆಯನ್ನು ಸಂಯುಕ್ತ ಜಮಾಅತ್ ಅಧ್ಯಕ್ಷರಾದ ಹಾಜಿ ಪಿ ಅಬೂಬಕ್ಕರ್ ನೇಜಾರು ವಹಿಸಿದ್ದರು.

ರಾಜ್ಯ ಎಸ್ ವೈ ಎಸ್ ಕಾರ್ಯದರ್ಶಿ ಅಸ್ಸಯ್ಯಿದ್ ಜಾಫರ್ ಅಸ್ಸಖಾಫ್ ತಂಙಳ್ ರವರ ದುಆ ದೊಂದಿಗೆ ಚಾಲನೆ ಗೊಂಡ ಕಾರ್ಯಕ್ರಮದಲ್ಲಿ, ಕುರ್ ಆನ್ ಪಾರಾಯಣ, ತಹ್ಲೀಲ್ ಸಮರ್ಪಣೆ, ಅನುಸ್ಮರಣಾ ಭಾಷಣ ಹಾಗೂ ಸಾಮೂಹಿಕ ಪ್ರಾರ್ಥನಾ ಮಜ್ಲಿಸ್ ನಡೆಯಿತು
ಸಹಾಯಕ ಖಾಝಿ ಅಲ್ಹಾಜ್ ಅಬ್ದುರ್ರಹ್ಮಾನ್ ಮದನಿ, ಅಸ್ಸಯ್ಯಿದ್ ಜುನೈದ್ ಅರ್ರಿಫಾಯಿ ತಂಙಳ್, ಸೆಯ್ಯಿದ್ ಸಾಮಿರ್ ತಂಙಳ್ , ಇಸ್ಮಾಯಿಲ್ ಮದನಿ ಮಾವಿನಕಟ್ಟೆ, ಅಬ್ದುಲ್ಲತೀಫ್ ಮದನಿ ಬಾರ್ಕೂರು, ಮುಸ್ಲಿಂ ಜಮಾಅತ್ ಜಿಲ್ಲಾಧ್ಯಕ್ಷ ಬಿ ಎಸ್ ಎಫ್ ರಫೀಕ್ ಗಂಗೊಳ್ಳಿ, ಕಾರ್ಯದರ್ಶಿ ವೈ ಬಿ ಸಿ ಬಶೀರ್ ಅಲಿ,ಕಾರ್ಯಾಧ್ಯಕ್ಷ ಸುಬ್ಹಾನ್ ಅಹ್ಮದ್ ಹೊನ್ನಾಳ, ಬಾರ್ಕೂರು ಮಸೀದಿ ಅಧ್ಯಕ್ಷ ಖಾಸಿಂ ಬಾರ್ಕೂರು , ವಕ್ಫ್ ಸಲಹಾ ಸಮಿತಿ ನಿಕಟಪೂರ್ವ ಅಧ್ಯಕ್ಷ ಹಾಜಿ ಕೆ ಪಿ ಇಬ್ರಾಹಿಂ ಮಟಪಾಡಿ, ಮನ್ಸೂರ್ ಮೆಕ್ಕಾಸ್ ,ಹಂಝ ಕರ್ಕಿ ಗುಲ್ವಾಡಿ ಹಾಗೂ ಮತ್ತಿತರ ನಾಯಕರು ಉಪಸ್ಥಿತರಿದ್ದರು
ಮಸೀದಿ ಸಮಿತಿ ವತಿಯಿಂದ ಖಾಝಿ ಮಾಣಿ ಉಸ್ತಾದ್, ಕೋಟೇಶ್ವರ ತಂಙಳ್ ಮತ್ತು ಡಾ ನೌಷಾದ್ ಕುಂಜಾಲು ರವರುಗಳಿಗೆ ಸನ್ಮಾನಿಸಲಾಯಿತು
ಕೆ ಎ ರಝ್ವಿ ಕಲ್ಕಟ್ಟ ಸ್ವಾಗತಿಸಿದರು ಕಾರ್ಯದರ್ಶಿ ಹಾಜಿ ಎಮ್ ಎ ಬಾವು ಮೂಳೂರು ಧನ್ಯವಾದ ಗೈದರು

ಆತ್ಮೀಯ ಓದುಗರೇ, ಪಾರದರ್ಶಕ ಸುದ್ದಿಗಳು ನಿಮಗೆ ನಿರಂತರ ತಲುಪಲು ನಿಮ್ಮ ಸಹಾಯ ಅತೀ ಅಗತ್ಯ. ಸತ್ಯ ಎಲ್ಲೆಡೆ ತಲುಪಲು ನಮ್ಮೊಂದಿಗೆ ಕೈ ಜೋಡಿಸಿ. ನಮ್ಮನ್ನು ಬೆಂಬಲಿಸಲು

Hot Topics

ಉತ್ತಮ ಬರಹಗಾರನಾಗಬೇಕಾದರೆ ಮೊದಲು ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು – ಡಾ.ವಿನ್ಸೆಂಟ್ ಆಳ್ವ

ಉಡುಪಿ: ಉತ್ತಮ ಬರಹಗಾರನಾಗಬೇಕಾದರೆ ಮೊದಲು ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಡಿಸಿಕೊಂಡಾಗ ಮುಂದೆ ಉತ್ತಮ ಸಾಹಿತ್ಯ ರಚನೆಯಾಗಲು ಸಾಧ್ಯವಿದೆ ಎಂದು ಕಲ್ಯಾಣಪುರ ಮಿಲಾಗ್ರಿಸ್‌ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನ್ಸೆಂಟ್‌ ಆಳ್ವಾ ಹೇಳಿದರು. ಅವರು ಭಾನುವಾರ ಕಲ್ಯಾಣಪುರ...

ಕರ್ನಾಟಕ ಸೇರಿದಂತೆ ಐದು ರಾಜ್ಯಗಳಿಗೆ ಪತ್ರ ಬರೆದ ಕೇಂದ್ರ ಸರ್ಕಾರ

ನವದೆಹಲಿ (ಡಿ.5):ಹೆಚ್ಚುತ್ತಿರುವ covid ಸಾಪ್ತಾಹಿಕ ಧನಾತ್ಮಕ ದರಗಳು ಮತ್ತು ಕೆಲವು ಜಿಲ್ಲೆಗಳಲ್ಲಿ ಸಾವುಗಳನ್ನು ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರವು ಐದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಪತ್ರ ಬರೆದಿದೆ.ಕೇಂದ್ರ ಆರೋಗ್ಯ ಕಾರ್ಯದರ್ಶಿ...

ಮಂಗಳೂರು: ಯುವತಿ ನೇಣು ಬಿಗಿದು ಆತ್ಮಹತ್ಯೆ

ಮಂಗಳೂರು: ಯುವತಿಯೊಬ್ಬಳು ತನ್ನ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕಾವೂರಿನ ಆಕಾಶಭವನದಲ್ಲಿ ನಡೆದಿದೆ. ಆಕಾಶಭವನ ಬಳಿಯ ಕಾಪ್ರಿಗುಡ್ಡೆ ನಿವಾಸಿ ಶಿಫಾಲಿ ( 22 ) ಮೃತಪಟ್ಟ ಯುವತಿ ಎಂದು...

Related Articles

ಕಸಾಪ ಚುನಾವಣೆ ಸೂಕ್ತ ಅಭ್ಯರ್ಥಿಯ ಆಯ್ಕೆಯಾಗಲಿ: ಖಿದ್ಮಾ ಸಂಚಾಲಕ ಆಮಿರ್ ಬನ್ನೂರು ಅಭಿಪ್ರಾಯ

ಸಮಸ್ತ ಕನ್ನಡಿಗರ ಪ್ರಾತಿನಿಧಿಕ ಸಂಸ್ಥೆಯಾದ ಕನ್ನಡ ಸಾಹಿತ್ಯ ಪರಿಷತ್ ಗೆ ಇದೇ ಬರುವ ನವೆಂಬರ್ 21 ಭಾನುವಾರದಂದು ಚುನಾವಣೆ ನಡೆಯಲಿದೆ. ಪ್ರಸ್ತುತ ಕಸಾಪ ಚುನಾವಣೆಯಲ್ಲಿ ರಾಜ್ಯ ಮತ್ತು ಆಯಾ ಜಿಲ್ಲಾಧ್ಯಕ್ಷರ ಆಯ್ಕೆಯಾಗಲಿದ್ದು ಕನ್ನಡ...

ಎಸ್.ಡಿ.ಪಿ.ಐ. ಪಡುತೋನ್ಸೆ ಗ್ರಾಮ ಪಂಚಾಯತ್ ಸಮಿತಿಯಿಂದ ನೂತನ ಜಿಲ್ಲಾ ನಾಯಕರಿಗೆ ಸನ್ಮಾನ ಸಮಾರಂಭ

ಎಸ್.ಡಿ.ಪಿ.ಐ. ಪಡುತೋನ್ಸೆ ಗ್ರಾಮ ಪಂಚಾಯತ್ ಸಮಿತಿಯಿಂದ ನೂತನ ಜಿಲ್ಲಾ ನಾಯಕರಿಗೆ ಸನ್ಮಾನ ಸಮಾರಂಭವನ್ನು ಇತ್ತೀಚೆಗೆ ಹೂಡೆಯ ಎಸ್.ಡಿ.ಪಿ.ಐ. ಕಛೇರಿಯಲ್ಲಿ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ಡಿ.ಪಿ.ಐ.ಉಡುಪಿ ಜಿಲ್ಲಾಧ್ಯಕ್ಷರಾದ ನಜೀರ್ ಅಹ್ಮದ್ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಉಡುಪಿ...

ಕಥೊಲಿಕ್‌ ಸಭಾ ವತಿಯಿಂದ ಇಂಡಿಯನ್‌ ಐಡಲ್‌ ಫೈನಲಿಸ್ಟ್‌ ನಿಹಾಲ್‌ ತಾವ್ರೋ ಗೆ ಸನ್ಮಾನ

ಕಥೊಲಿಕ್‌ ಸಭಾ ಉಡುಪಿ ಪ್ರದೇಶ್‌ ಇದರ ವತಿಯಿಂದ ಇಂಡಿಯನ್‌ ಐಡಲ್‌ ಫೈನಲಿಸ್ಟ್‌ ನಿಹಾಲ್‌ ತಾವ್ರೋ ಅವರಿಗೆ ಭಾನುವಾರ ಉಡುಪಿ ಶೋಕಮಾತಾ ಇಗರ್ಜಿಯ ಸಭಾಂಗಣದಲ್ಲಿ ಅಭಿನಂದಿಸಲಾಯಿತು. ಕೆಥೊಲಿಕ್‌ ಸಭಾ ಉಡುಪಿ ಪ್ರದೇಶ ಇದರ ಆಧ್ಯಾತ್ಮಿಕ ನಿರ್ದೇಶಕರಾದ...
Translate »
error: Content is protected !!