ಐ.ಪಿ.ಎಲ್ – 2021: ಮುಂಬೈ ಮಣಿಸಿದ ಚೆನೈ!

ದುಬೈ: ಮುಂಬೈ ವಿರುದ್ಧದ ಗೆಲುವಿನ ಮೂಲಕ ಚೆನ್ನೈ ಸೂಪರ್‌ ಕಿಂಗ್ಸ್‌ ಐಪಿಎಲ್‌ ನಲ್ಲಿ ಭರ್ಜರಿ ಮರು ಆರಂಭ ಮಾಡಿದೆ. ಕೊರೊನಾ ಕಾರಣದಿಂದ ಸ್ಥಗಿತಗೊಂಡಿದ್ದ ಐಪಿಎಲ್‌, ದುಬೈ ಮತ್ತು ಅಬುಧಾಬಿಯಲ್ಲಿ ಪುನಾರಂಭಗೊಂಡಿದೆ.
ಈ 30ನೇ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಚೆನ್ನೈ ಸೂಪರ್‌ ಕಿಂಗ್ಸ್‌, ಗಾಯಕ್ವಾಡ್‌ ಅವರ ಅಮೋಘ 88 ರನ್‌ಗಳ ನೆರವಿನಿಂದ 6 ವಿಕೆಟ್‌ಗೆ 156 ರನ್‌ ಗಳಿಸಿತ್ತು. ಈ ಮೊತ್ತ ಬೆನ್ನಟ್ಟಿದ ಮುಂಬೈ ತಂಡ 20 ಓವರ್‌ ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 136 ರನ್‌ ಗಳಿಸಲಷ್ಟೇ ಶಕ್ತವಾಯಿತು. ಈ ಮೂಲಕ 20 ರನ್‌ಗಳ ಸೋಲು ಅನುಭವಿಸಿತು.

ಮುಂಬೈ ಪರ ಸೌರಭ್‌ ತಿವಾರಿ ಅವರು ಅರ್ಧ ಶತಕ ಬಾರಿಸಿದರು. ಉಳಿದವರ ಕಡೆಯಿಂದ ಅಂಥ ಬೆಂಬಲ ಸಿಗಲಿಲ್ಲ. ಅಂದ ಹಾಗೆ, ಈ ಪಂದ್ಯ ರೋಹಿತ್‌ ಅವರ ಅನುಪಸ್ಥಿತಿಯಲ್ಲಿ, ಪೊಲಾರ್ಡ್‌ ಅವರ ನಾಯಕತ್ವದಲ್ಲಿ ನಡೆಯಿತು.

ಟಾಸ್‌ ಗೆದ್ದು ಬ್ಯಾಟಿಂಗ್‌ ಆರಂಭಿಸಿದ ಚೆನ್ನೈಗೆ ಅಂಥ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕ ಆಟಗಾರ ಡು ಪ್ಲೆಸಿಕ್ಸ್‌ ಶೂನ್ಯಕ್ಕೆ ಔಟಾದರು. ನಂತರ ಬಂದ ಮೊಯಿನ್‌ ಅಲಿ ಮತ್ತು ಅಂಬಾಟಿ ರಾಯುಡು ಕೂಡ ಶೂನ್ಯ ಗಳಿಸಿದರು. ಆದರೆ, ಮತ್ತೂಂದು ಕಡೆಯಲ್ಲಿದ್ದ ಗಾಯಕ್ವಾಡ್‌ ಅಜೇಯ 88 ರನ್‌ ಗಳಿಸಿ ಸಾಧಾರಣ ಮೊತ್ತ ಪೇರಿಸುವಲ್ಲಿ ಸಫ‌ಲರಾದರು. ಗಾಯಕ್ವಾಡ್‌ ಅವರಿಗೆ ಜಡೇಜ ಮತ್ತು ಬ್ರಾವೋ ಕೆಲ ಕಾಲ ಬೆಂಬಲ ನೀಡಿದರು. ಟ್ರೆಂಟ್‌ ಬೌಲ್ಟ್ ಮತ್ತು ಆ್ಯಡಂ ಮಿಲ್ನೆ, ಬೂಮ್ರಾ ಕಾಡಿದರು.

ಇದರಲ್ಲಿ ಗಾಯಕ್ವಾಡ್‌ ಕೊಡುಗೆ ಅಜೇಯ 88 ರನ್‌ (58 ಎಸೆತ, 9 ಬೌಂಡರಿ, 4 ಸಿಕ್ಸರ್‌). ಇದು ಮುಂಬೈ ವಿರುದ್ಧ ಚೆನ್ನೈ ಕ್ರಿಕೆಟಿಗನ ಸರ್ವಾಧಿಕ ವೈಯಕ್ತಿಕ ಗಳಿಕೆಯಾಗಿದೆ. 2013ರಲ್ಲಿ ಮೈಕಲ್‌ ಹಸ್ಸಿ ಅಜೇಯ 86, 2010ರಲ್ಲಿ ಸುರೇಶ್‌ ರೈನಾ ಅಜೇಯ 83 ರನ್‌ ಬಾರಿಸಿದ್ದರು. ಒಂದೆಡೆ ವಿಕೆಟ್‌ ಉರುಳುತ್ತ ಹೋದರೂ ವಿಚಲಿತರಾಗದ ಗಾಯಕ್ವಾಡ್‌ ಮುಂಬೈ ಬೌಲರ್ ಮೇಲೆರಗಿ ಹೋಗಿ ತಂಡದ ಪಾಲಿಗೆ ಆಪತ್ಬಾಂಧವನೆನಿಸಿದರು. ಇವರಿಗೆ ರವೀಂದ್ರ ಜಡೇಜ, ಡ್ವೇನ್‌ ಬ್ರಾವೊ ಉತ್ತಮ ಬೆಂಬಲ ನೀಡಿದರು.

ಟಾಸ್‌ ಗೆದ್ದು ಬ್ಯಾಟಿಂಗ್‌ ಆಯ್ದುಕೊಂಡ ಚೆನ್ನೈಗೆ ಇದರ ಪ್ರಯೋಜನವೆತ್ತಲು ಸಾಧ್ಯವಾಗಲೇ ಇಲ್ಲ. ಪವರ್‌ ಪ್ಲೇ ಮುಗಿಯುವುದರೊಳಗಾಗಿ ಅದು 24 ರನ್ನಿಗೆ 4 ವಿಕೆಟ್‌ ಉರುಳಿಸಿಕೊಂಡಿತು. ಈ 4 ವಿಕೆಟ್‌ಗಳನ್ನು ಬೌಲ್ಟ್ ಮತ್ತು ಮಿಲ್ನೆ ಹಂಚಿಕೊಂಡರು. ಗಾಯದ ಮೇಲೆ ಬರೆ ಎಂಬಂತೆ ಪ್ರಧಾನ ಬ್ಯಾಟ್ಸ್‌ಮನ್‌ ಅಂಬಾಟಿ ರಾಯುಡು ಗಾಯಾಳಾಗಿ ಅಂಗಳ ತೊರೆದರು. ಬೌಲ್ಟ್ ಪಂದ್ಯದ ದ್ವಿತೀಯ ಎಸೆತದಲ್ಲೇ ಡು ಪ್ಲೆಸಿಸ್‌ ಅವರನ್ನು ವಾಪಸ್‌ ಕಳುಹಿಸಿದರು. ಮಿಲ್ನೆಯ ಮೊದಲ ಓವರಿನಲ್ಲಿ ಮೊಯಿನ್‌ ಅಲಿ ವಿಕೆಟ್‌ ಬಿತ್ತು. ಬೌಲ್ಟ್ ದ್ವಿತೀಯ ಓವರ್‌ನಲ್ಲಿ ರೈನಾಗೆ (4) ಪೆವಿಲಿಯನ್‌ ಹಾದಿ ತೋರಿಸಿದರು. ಇನ್ನೇನು ಪವರ್‌ ಪ್ಲೇ ಅವಧಿ ಮುಗಿಯಿತು ಎನ್ನುವಷ್ಟರಲ್ಲಿ ಕಪ್ತಾನ ಧೋನಿ (3) ಆಟವೂ ಮುಗಿಯಿತು. ಈ ವಿಕೆಟ್‌ ಮಿಲ್ನೆ ಬುಟ್ಟಿಗೆ ಬಿತ್ತು. ಇವರಿಬ್ಬರ ಯಶಸ್ಸಿನಿಂದಾಗಿ ಬುಮ್ರಾ 3ನೇ ಕ್ರಮಾಂಕದಲ್ಲಿ ಬೌಲಿಂಗ್‌ ದಾಳಿಗೆ ಇಳಿಯಬೇಕಾಯಿತು.

ಆತ್ಮೀಯ ಓದುಗರೇ,ಪಾರದರ್ಶಕ ಸುದ್ದಿಗಳು ನಿಮಗೆ ನಿರಂತರ ತಲುಪಲು ನಿಮ್ಮ ಸಹಾಯ ಅತೀ ಅಗತ್ಯ. ಸತ್ಯ ಎಲ್ಲೆಡೆ ತಲುಪಲು ನಮ್ಮೊಂದಿಗೆ ಕೈ ಜೋಡಿಸಿ. ನಮ್ಮನ್ನು ಬೆಂಬಲಿಸಲು

Hot Topics

ಸಕಲ ಜೀವಾತ್ಮಗಳಿಗೆ ಪ್ರವಾದಿ ಅತ್ಯುತ್ತಮ ಮಾದರಿ:- ಕರಿ ಬಸವಶ್ರೀ

ತಾವರಗೇರಾ. ಜಮಾತೇ ಇಸ್ಲಾಮಿ ಹಿಂದ್ ವತಿಯಿಂದ ಪತ್ರಿವರ್ಷದಂತೆ ಈ ವರ್ಷವುಕೂಡ ಅಕ್ಟೂಬರ್ 17 ರಿಂದ 26 ರ ವರೆಗೆ “ಪ್ರವಾದಿ ಮಹಮ್ಮದ್ (ಸ) ಅತ್ಯುತ್ತಮ ಮಾದರಿ” ಎಂಬ ಧ್ಯೇಯ ವಾಕ್ಯದಡಿಯಲ್ಲಿ ರಾಜ್ಯವ್ಯಾಪ್ತಿ ನಡೆಯುತ್ತಿರುವ...

ನಮ್ಮ ನಾಡ ಒಕ್ಕೂಟ ಉಡುಪಿ ಘಟಕ ಮತ್ತು ಮಸ್ಜಿದ್ ಎ ನೂರುಲ್ ಇಸ್ಲಾಮ್ ಆದಿಉಡುಪಿ ವತಿಯಿಂದ ಆಯುಷ್ಮಾನ್ ಕಾರ್ಡ್ ಹಾಗೂ ವಿದ್ಯಾರ್ಥಿವೇತನ ಶಿಬಿರ

ದಿನಾಂಕ 24 ಅಕ್ಟೊಬರ್ 2021, ಆದಿತ್ಯವಾರ: ಚಿಕಿತ್ಸೆಯ ಸಂಕಷ್ಟದ ಸನ್ನಿವೇಶದಲ್ಲಿ ಆತ್ಮವಿಶ್ವಾಸ ತುಂಬಲು ಹಾಗೂ ಶೈಕ್ಷಣಿಕ ರಂಗದಲ್ಲಿ ಪ್ರೇರಣೆ ನೀಡುವ ಉದ್ದೇಶದಿಂದ ಇಂದು ನಮ್ಮ ನಾಡ ಒಕ್ಕೂಟ ಉಡುಪಿ ತಾಲೂಕು ಘಟಕದ ವತಿಯಿಂದ...

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷರಿಂದ ಪಕ್ಷದ ಉಳ್ಳಾಲ ನಗರ ಸಮಿತಿ ವತಿಯಿಂದ ಸ್ಥಾಪಿಸಿದ ನಾಗರಿಕ ಸೇವಾ ಕೇಂದ್ರ ಮತ್ತು ಪಕ್ಷದ ಕಚೇರಿಯ ಉದ್ಘಾಟನೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಮಂಗಳೂರು, ಅ. 24: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರಾದ್ಯಂತ ತನ್ನ ಪಕ್ಷಕ್ಕೆ ಸದಸ್ಯತ್ವ ಸೇರ್ಪಡೆಯ ಬೃಹತ್ ಅಭಿಯಾನವನ್ನು ಇದೇ ಕಳೆದ ಅಕ್ಟೋಬರ್ 15 ರಿಂದ ಈ ತಿಂಗಳ ಕೊನೆಯವರೆಗೂ ಅಂದರೆ ಅಕ್ಟೋಬರ್...

Related Articles

ಸಕಲ ಜೀವಾತ್ಮಗಳಿಗೆ ಪ್ರವಾದಿ ಅತ್ಯುತ್ತಮ ಮಾದರಿ:- ಕರಿ ಬಸವಶ್ರೀ

ತಾವರಗೇರಾ. ಜಮಾತೇ ಇಸ್ಲಾಮಿ ಹಿಂದ್ ವತಿಯಿಂದ ಪತ್ರಿವರ್ಷದಂತೆ ಈ ವರ್ಷವುಕೂಡ ಅಕ್ಟೂಬರ್ 17 ರಿಂದ 26 ರ ವರೆಗೆ “ಪ್ರವಾದಿ ಮಹಮ್ಮದ್ (ಸ) ಅತ್ಯುತ್ತಮ ಮಾದರಿ” ಎಂಬ ಧ್ಯೇಯ ವಾಕ್ಯದಡಿಯಲ್ಲಿ ರಾಜ್ಯವ್ಯಾಪ್ತಿ ನಡೆಯುತ್ತಿರುವ...

ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ ರೋಹ್‌ ಟೇ-ವೊ ನಿಧನ

ಸೋಲ್‌ (ಅ.26):ಅನಾರೋಗ್ಯದಿಂದ ಬಳಳುತ್ತಿದ್ದ ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ ರೋಹ್ ಟೇ-ವೂ (88) ನಿಧನರಾಗಿದ್ದಾರೆ ಎಂದು ಸೋಲ್‌ನ ನ್ಯಾಷನಲ್ ಯುನಿವರ್ಸಿಟಿ ಆಸ್ಪತ್ರೆ ತಿಳಿಸಿದೆ.1979ರ ಮಿಲಿಟರಿ ದಂಗೆಯನ್ನು ಬೆಂಬಲಿಸಿದ್ದ ರೋಹ್‌, ಸೋಲ್‌ನಲ್ಲಿ ಸೇನಾ ವಿಭಾಗವನ್ನು...

2022 ರ ಚುನಾವಣೆ ಕುರಿತು ಚರ್ಚೆಗೆ ಕಾಂಗ್ರೆಸ್ ಅದಿನಾಯಕಿ ಸೋನಿಯಾ ಗಾಂಧಿ ಸಭೆ

ನವದೆಹಲಿ,(ಅ.26): ಮುಂಬರುವ 2022ರ ವಿಧಾನಸಭೆ ಚುನಾವಣೆಗಳ ಕುರಿತು ಚರ್ಚಿಸುವುದಕ್ಕೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಮಂಗಳವಾರ ಪಕ್ಷದ ಹಿರಿಯ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ್, ಮಣಿಪುರ ಮತ್ತು...
Translate »
error: Content is protected !!