ಸೆ.10 ರಂದು ಬಿ.ಸಿ.ಸಿ.ಐ(ಯು.ಎ.ಯಿ) ವತಿಯಿಂದ ‘ಡಿಜಿಟಲ್ ರೆವಲ್ಯೂಶನ್’ ವೆಬಿನಾರ್

ಬ್ಯಾರೀಸ್ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ (ಬಿಸಿಸಿಐ) ಯುಎಇ ವತಿಯಿಂದ ಸೆಪ್ಟೆಂಬರ್ 10ರಂದು ‘ಡಿಜಿಟಲ್ ರೆವಲ್ಯೂಶನ್ ಆನ್ ಬ್ಯುಸಿನೆಸ್ ಆಂಡ್ ಎಂಟ್ರಪನರ್’ಶಿಪ್’ ಎಂಬ ವಿಷಯದಲ್ಲಿ ವೆಬಿನಾರ್ ಹಮ್ಮಿಕೊಂಡಿದೆ.

ಬ್ಯುಸಿನೆಸ್ ನೆಟ್ವರ್ಕಿಂಗ್ ಮೂಲಕ ಸಮಾಜದ ಉದ್ಯಮಿಗಳನ್ನು, ವೃತ್ತಿಪರರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ ಆ ಮೂಲಕ ವ್ಯಾಪಾರ ಸಬಲೀಕರಣ ಹಾಗೂ ಸಮಾಜ ಸೇವೆ ನಡೆಸುವ ಉದ್ದೇಶದಿಂದ ಕಳೆದ ಮೂರು ವರ್ಷಗಳಿಂದ ಯುಎಇಯಲ್ಲಿ ಸಕ್ರಿಯವಾಗಿರುವ ಬಿಸಿಸಿಐ ಯುಎಇ ಚಾಪ್ಟರ್, ಯುವ ಉದ್ಯಮಿಗಳ ಹಾಗೂ ವೃತ್ತಿಪರರ ಆಸಕ್ತಿದಾಯಕ ವಿಷಯವಾದ ‘ಡಿಜಿಟಲ್ ರೆವಲ್ಯೂಶನ್ ಆನ್ ಬ್ಯುಸಿನೆಸ್ ಆಂಡ್ ಎಂಟ್ರಪನರ್’ಶಿಪ್’ ಕುರಿತು ಆನ್ಲೈನ್ ವೆಬಿನಾರ್ ಹಮ್ಮಿಕೊಂಡಿದೆ ಎಂದು ಬ್ಯಾರೀಸ್ ಚೇಂಬರ್ಸ್ ಯುಎಇ ಚಾಪ್ಟರ್’ನ ಪತ್ರಿಕಾ ಪ್ರಕಟಣೆಯಲ್ಲಿ ಅಧ್ಯಕ್ಷ ಎಸ್.ಎಂ ಬಶೀರ್ ತಿಳಿಸಿದ್ದಾರೆ.

ದುಬೈ ಸರ್ಕಾರದ ಎಕೋನಮಿಕ್ ಡೆವಲಪ್ಮೆಂಟ್ ವಿಭಾಗದ ಮುಖ್ಯ ತಂತ್ರಜ್ಞರಾದ ರಾಶಿದ್ ಹಜಾರಿಯವರು ಡಿಜಿಟಲ್ ಮಾಧ್ಯಮವು ಉದ್ಯಮರಂಗದಲ್ಲಿ ಸೃಷ್ಟಿಸಿದ ಹೊಸ ಸಂಚಲನದ ಬಗ್ಗೆ ಉಪಯುಕ್ತ ಮಾಹಿತಿಯನ್ನು ವೆಬಿನಾರ್ ಮೂಲಕ ನೀಡಲಿದ್ದು, ಆಸಕ್ತರು ಸದುಪಯೋಗ ಪಡೆದುಕೊಳ್ಳಬಹುದು ಎಂದು ಬಿಸಿಸಿಐ ಯುಎಇ ಚಾಪ್ಟರ್ ಪ್ರಕಟನೆಯಲ್ಲಿ ತಿಳಿಸಿದೆ.

ಆತ್ಮೀಯ ಓದುಗರೇ, ಪಾರದರ್ಶಕ ಸುದ್ದಿಗಳು ನಿಮಗೆ ನಿರಂತರ ತಲುಪಲು ನಿಮ್ಮ ಸಹಾಯ ಅತೀ ಅಗತ್ಯ. ಸತ್ಯ ಎಲ್ಲೆಡೆ ತಲುಪಲು ನಮ್ಮೊಂದಿಗೆ ಕೈ ಜೋಡಿಸಿ. ನಮ್ಮನ್ನು ಬೆಂಬಲಿಸಲು

Hot Topics

ದಲಿತ ಸಂಘರ್ಷ ಸಮಿತಿ (ರಿ) ಅಂಬೇಡ್ಕರ್ ವಾದ ವತಿಯಿಂದ ‘ಅಂಬೇಡ್ಕರ್ ಪರಿ ನಿಬ್ಬಾಣ ದಿನ’ – ಮೇಣದ ಬತ್ತಿ ಮೆರವಣಿಗೆ

ಉಡುಪಿ: ಎಲ್ಲರ ಸಮಾನತೆಗಾಗಿ ಅಂಬೇಡ್ಕರ್ ಹೋರಾಟ ನಡೆಸಿದರು.ಅವರ ಹೋರಾಟದ ಫಲವಾಗಿ ಭಾರತದ ಮಹಿಳೆಯರು ಶಿಕ್ಷಣ ಪಡೆಯುವಂತಾಯಿತು ಎಂದು ಪ್ರೊ.ಫಣಿರಾಜ್ ಹೇಳಿದರು.     ಅಂಬೇಡ್ಕರ್ ಪರಿ ನಿಬ್ಬಾಣ ದಿನಾಚರಣೆಯ ಹಿನ್ನಲೆಯಲ್ಲಿ ದಲಿತ ಸಂಘರ್ಷ ಸಮಿತಿ(ರಿ) ಅಂಬೇಡ್ಕರ್ ವಾದ...

ಉತ್ತಮ ಬರಹಗಾರನಾಗಬೇಕಾದರೆ ಮೊದಲು ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು – ಡಾ.ವಿನ್ಸೆಂಟ್ ಆಳ್ವ

ಉಡುಪಿ: ಉತ್ತಮ ಬರಹಗಾರನಾಗಬೇಕಾದರೆ ಮೊದಲು ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಡಿಸಿಕೊಂಡಾಗ ಮುಂದೆ ಉತ್ತಮ ಸಾಹಿತ್ಯ ರಚನೆಯಾಗಲು ಸಾಧ್ಯವಿದೆ ಎಂದು ಕಲ್ಯಾಣಪುರ ಮಿಲಾಗ್ರಿಸ್‌ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನ್ಸೆಂಟ್‌ ಆಳ್ವಾ ಹೇಳಿದರು. ಅವರು ಭಾನುವಾರ ಕಲ್ಯಾಣಪುರ...

ಕರ್ನಾಟಕ ಸೇರಿದಂತೆ ಐದು ರಾಜ್ಯಗಳಿಗೆ ಪತ್ರ ಬರೆದ ಕೇಂದ್ರ ಸರ್ಕಾರ

ನವದೆಹಲಿ (ಡಿ.5):ಹೆಚ್ಚುತ್ತಿರುವ covid ಸಾಪ್ತಾಹಿಕ ಧನಾತ್ಮಕ ದರಗಳು ಮತ್ತು ಕೆಲವು ಜಿಲ್ಲೆಗಳಲ್ಲಿ ಸಾವುಗಳನ್ನು ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರವು ಐದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಪತ್ರ ಬರೆದಿದೆ.ಕೇಂದ್ರ ಆರೋಗ್ಯ ಕಾರ್ಯದರ್ಶಿ...

Related Articles

ದುಬೈ: ಜೆಬೆಲ್ ಅಲಿ ಬಂದರಿನಲ್ಲಿದ್ದ ಹಡಗಿನಲ್ಲಿ ದೈತ್ಯ ಜ್ವಾಲೆ – ಬೆಚ್ಚಿ ಬಿದ್ದ ಜನ

ದುಬೈ: ಅರೇಬಿಯನ್ ಪೆನಿನ್ಸುಲಾದ ಪೂರ್ವ ಭಾಗದಲ್ಲಿ ಮಧ್ಯಪ್ರಾಚ್ಯದ ಅತ್ಯಂತ ಜನನಿಬಿಡವಾದ ನಿರ್ಣಾಯಕ ಜೆಬೆಲ್ ಅಲಿ ಬಂದರಿನಲ್ಲಿರುವ ಹಡಗಿನಲ್ಲಿ ದೈತ್ಯ ಬೆಂಕಿ ಜ್ವಾಲೆಗಳು ಕಾಣಿಸಿದೆ. ಹಡಗಿನಲ್ಲಿ ಭಾರಿ ಸ್ಫೋಟದ ಸದ್ದು ಕೇಳಿಬಂದಿದ್ದು, ಪರಿಣಾಮ ಪಕ್ಕದ ಮೂರು...

ದುಬೈ ನಲ್ಲಿ ವರ್ಣರಂಜಿತ ಕ್ರಿಕೆಟ್ ಹಬ್ಬ ಯುನೈಟೆಡ್ ಪ್ರೀಮಿಯರ್ ಲೀಗ್-2021

ದುಬೈ ನ ಪ್ರತಿಷ್ಠಿತ ಸಂಸ್ಥೆ River Valley ಮುಖ್ಯಸ್ಥರಾದ ಮಿ.ರಫೀಕ್ ಇವರ ಪ್ರಮುಖ ಪ್ರಾಯೋಜಕತ್ವದಲ್ಲಿ, ಸಲ್ಮಾನ್,ರೆಹಮತ್ ಹೊನ್ನಾಳ,M.H.T ಹಾಗೂ ಈಶಾಮ್ ಇವರೆಲ್ಲರ ಮುಂದಾಳತ್ವದಲ್ಲಿ ಜೂನ್ 17 ರಂದು ದುಬೈ ಸ್ಕೌಟ್ ಮಿಷನ್ ಮೈದಾನದಲ್ಲಿ ಅದ್ಧೂರಿಯ...

ದುಬೈ: ಅನಿವಾಸಿ ಕನ್ನಡಿಗರ ಪರಿಶ್ರಮ; ಉತ್ತರ ಪ್ರದೇಶದ ಪ್ರಸಾದ್ ತಾಯ್ನಾಡಿಗೆ!

ಯುಎಇಯಲ್ಲಿ ಸಂಕಷ್ಟದಲ್ಲಿದ್ದ ಉತ್ತರ ಪ್ರದೇಶದ ಗೋರಕ್ ಪುರದ ನಿವಾಸಿ ಚಂಗೂರ್ ಪ್ರಸಾದ್ ನನ್ನು ಭಾರತೀಯ ರಾಯಭಾರಿ ಕಚೇರಿ ಸಹಕಾರದಿಂದ ಸುರಕ್ಷಿತವಾಗಿ ತಾಯ್ನಾಡಿಗೆ ತಲುಪಿಸುವಲ್ಲಿ ಕನ್ನಡಿಗಾಸ್ ಫೆಡರೇಷನ್ ಮತ್ತು ಏಮ್ ಇಂಡಿಯಾ ಫೌಂಡೇಶನ್ ಯಶಸ್ವಿಯಾಗಿದೆ....
Translate »
error: Content is protected !!