ಆನ್ಲೈನ್ ತರಗತಿಯನ್ನೂ ಸರಿಯಾಗಿ ನಡೆಸದೆ ಗ್ರಾಮೀಣ ವಿದ್ಯಾರ್ಥಿಗಳೊಂದಿಗೆ ಭೇದ-ಭಾವ; ಎಸ್.ಎಸ್.ಎಲ್.ಸಿ ಮಕ್ಕಳಿಗೆ ಕೃಪಾಂಕ ನೀಡಿ – ಸುಂದರ್ ಮಾಸ್ತರ್ ಒತ್ತಾಯ

ಉಡುಪಿ:ಎಸ್.ಎಸ್.ಎಲ್.ಸಿ ಪರೀಕ್ಷೆ ಬರೆದ ಗ್ರಾಮೀಣ ಮಕ್ಕಳಿಗೆ ಕೋವಿಡ್ ಸಂಕ್ರಾಮಿಕ ರೋಗಾವಧಿಯಲ್ಲಿ ಕೃಪಾಂಕ ನೀಡುವಂತೆ ಆಗ್ರಹಿಸಿ ದಲಿತ ಸಂಘರ್ಷ ಸಮಿತಿ, ರೈತ ಸಂಘಗಳು ಉಡುಪಿಯ ತಾಲೂಕು ಕಚೇರಿಯ ಮುಂದೆ ಪ್ರತಿಭಟನಾ ಸಭೆ ಆಯೋಜಿಸಿದ್ದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಉಡುಪಿ ಜಿಲ್ಲಾ ಮುಖಂಡ ಸುಂದರ್ ಮಾಸ್ತರ್ ಮಾತನಾಡಿ, ಯಾವ ರಾಜ್ಯವೂ ಎಸ್.ಎಸ್.ಎಲ್.ಸಿ ಪರೀಕ್ಷೆ ನಡೆಸಿಲ್ಲ. ಆದರೆ ಕರ್ನಾಟಕ ರಾಜ್ಯಶಿಕ್ಷಣ ಸಚಿವರು ಜಿದ್ದಿಗೆ ಬಿದ್ದಂತೆ ವರ್ತಿಸಿ ಎಸ್.ಎಲ್.ಎಲ್.ಸಿ ಪರೀಕ್ಷೆ ನಡೆಸಿದ್ದಾರೆ.

ಆನ್ಲೈನ್ ತರಗತಿಗೆ ಯಾವ ಸೌಲಭ್ಯ ಕೊಟ್ಟಿದ್ದಾರೆ ಎಂಬ ವೈಜ್ಞಾನಿಕ ಚಿಂತನೆ ಮಾಡದೆ ಪರೀಕ್ಷೆ ನಡೆಸಿ ಬೇಧ ಬಾವ ಮಾಡಿದ್ದಾರೆ. ಗುಡ್ಡಗಾಡು ಪ್ರದೇಶದ ಮಕ್ಕಳಲ್ಲಿ ಯಾವ ಸೌಲಭ್ಯವಿಲ್ಲ. ಅಂತಹ ಸಂದರ್ಭದಲ್ಲಿ ಪರೀಕ್ಷೆ ನಡೆಸಿದ್ದು ಸರಿಯಲ್ಲ. ಸರಕಾರ ಫಲಿತಾಂಶ ಪ್ರಕಟಿಸುವಾಗ ಶೇ 20 ಕ್ರಮಾಂಕ ನೀಡಬೇಕೆಂದು ಆಗ್ರಹಿಸಿದರು. ಯಾಕೆಂದರೆ ಅಂಕಗಳ ಆಧಾರದಲ್ಲಿ ಸೀಟು, ಹಾಸ್ಟೆಲ್ ಸೌಕರ್ಯ ದೊರೆಯುತ್ತದೆ ಇಂತಹ ಸಂದರ್ಭದಲ್ಲಿ ಮಕ್ಕಳೊಂದಿಗೆ ಅನ್ಯಾಯವಾಗದಂತೆ ವರ್ತಿಸಬೇಕು ಎಂದರು.ಪಿಯುಸಿ ಮಕ್ಕಳಿಗೆ ನೀಡಿದಂತೆ ಅಂಕಗಳನ್ನು ನೀಡಬೇಕೆಂದು ಆಗ್ರಹಿಸಿದರು.

ಪ್ರೊ.ಫಣಿರಾಜ್ ಮಾತನಾಡುತ್ತಿರುವುದು:

ಸಾಲಿಡಾರಿಟಿ ಯೂತ್’ಮೂವ್ಮೆಂಟ್’ನ ಹುಸೇನ್ ಕೋಡಿಬೆಂಗ್ರೆ ಮಾತನಾಡಿ, ಸರಕಾರಗಳು ಪೆಗಾಸಸ್ ನಂತಹ ಸ್ಪೈವೇರ್ ಸಾಫ್ಟ್‌ವೇರ್ ಖರೀದಿಸಿ ದೇಶದ ನಾಗರಿಕರ ಗೂಢಚರ್ಯೆ ಮಾಡುವುದನ್ನು ಬಿಟ್ಟು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಗುಣಮಟ್ಟದ ಸಾಫ್ಟ್‌ವೇರ್ ತಯಾರಿಸಲಿ. ಗ್ರಾಮೀಣ ಪ್ರದೇಶಗಳಿಗೆ ನೆಟ್ವರ್ಕ್ ಸೇವೆ ನೀಡಲಿ. ಇದೀಗ ಗುಡ್ಡ ಗಾಡಿನ ಪ್ರದೇಶದ ವಿದ್ಯಾರ್ಥಿಗಳು ನೆಟ್ವರ್ಕ್ ಸಮಸ್ಯೆಯಿಂದಾಗಿ ಆನ್ಲೈನ್ ಕ್ಲಾಸ್ ನಲ್ಲಿ ಭಾಗವಹಿಸಿಲ್ಲ ಇಂತಹ ಸಂದರ್ಭದಲ್ಲಿ ಅವೈಜ್ಞಾನಿಕವಾಗಿ ಎಸ್.ಎಸ್.ಎಲ್.ಸಿ ಪರೀಕ್ಷೆ ಮಾಡಿ ಅನ್ಯಾಯವೆಸಗಿದೆ. ಕೂಡಲೇ ಗ್ರಾಮೀಣ ಪ್ರದೇಶದ ಮಕ್ಕಳಿಗೆ ಫಲಿತಾಂಶ ಸಂದರ್ಭದಲ್ಲಿ ಕೃಪಾಂಕ ನೀಡಿ ಅದು ಅವರ ಹಕ್ಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಶ್ಯಾಮರಾಜ್ ಬಿರ್ತಿ, ಮಂಜುನಾಥ್ ಬಾಳ್ಕುದ್ರು, ಭಾಸ್ಕರ್ ಮಾಸ್ತರ್, ಅಣ್ಣಪ್ಪ ನಕ್ರೆ, ಕಾರ್ಕಳ, ಶ್ರೀಧರ ಕುಂಜಿಬೆಟ್ಟು, ಇಬ್ರಾಹೀಮ್ ಸಯೀದ್, ಶಾರೂಕ್ ಮುಂತಾದವರು ಉಪಸ್ಥಿತರಿದ್ದರು.

ಆತ್ಮೀಯ ಓದುಗರೇ,ಪಾರದರ್ಶಕ ಸುದ್ದಿಗಳು ನಿಮಗೆ ನಿರಂತರ ತಲುಪಲು ನಿಮ್ಮ ಸಹಾಯ ಅತೀ ಅಗತ್ಯ. ಸತ್ಯ ಎಲ್ಲೆಡೆ ತಲುಪಲು ನಮ್ಮೊಂದಿಗೆ ಕೈ ಜೋಡಿಸಿ. ನಮ್ಮನ್ನು ಬೆಂಬಲಿಸಲು

Hot Topics

ಸೆ 27 ಭಾರತ್ ಬಂದ್ ಗೆ ವೆಲ್ಪೇರ್ ಪಾರ್ಟಿ ಉಡುಪಿ ಸಂಪೂರ್ಣ ಬೆಂಬಲ – ಅಬ್ದುಲ್ ಅಜೀಜ್

ಉಡುಪಿ: ಸೆಪ್ಟೆಂಬರ್ 27 ರಂದು ದೇಶಾದ್ಯಂತ ರೈತ ಸಂಘಟನೆಗಳು ಭಾರತ್ ಬಂದ್’ಗೆ ಕರೆ ನೀಡಿದೆ. ಈ ಹಿನ್ನಲೆಯಲ್ಲಿ ಉಡುಪಿ ನಗರದಲ್ಲಿ ವಿವಿಧ ಸಂಘಟನೆಗಳು ಸೇರಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಜಾಥ ಮತ್ತು...

ಬೈಂದೂರು:ಅಕ್ಷರ ದಾಸೋಹ ನೌಕರರ ಬೃಹತ್ ಪ್ರತಿಭಟನೆ

ಕೇಂದ್ರ ಯೋಜನೆ ಸ್ಕೀಮ್ ನೌಕರರನ್ನು ಖಾಯಂಗೊಳಿಸಿ,ಬಜೆಟ್ ನಲ್ಲಿ ಅನುದಾನ ಹೆಚ್ಚಳ ಮಾಡಬೇಕು.ಶಾಲೆಗಳಲ್ಲಿ ಗ್ರೂಪ್ "ಡಿ" ನೌಕರರು ಇಲ್ಲದಿರುವುದರಿಂದ ಈ ನೌಕರರಿಂದಲೇ ಶಾಲಾಸ್ವಚ್ಚತೆ,ಕೈತೋಟ ನಿವ೯ಹಣೆ,ಶಾಲಾ ಸಮಯದ ಗಂಟೆ ಬಾರಿಸುವುದು ಇನ್ನಿತರ ಕೆಲಸ ನೀಡಿ ಈ...

ಸೆಪ್ಟೆಂಬರ್ 27 ರಂದು ನಡೆಯುವ ರೈತ ಪರ ಹೋರಾಟದಲ್ಲಿ ಭಾಗವಹಿಸಲು ಸಾಲಿಡಾರಿಟಿ ಕರೆ

ಉಡುಪಿ: ಸೆಪ್ಟೆಂಬರ್ 27 ರಂದು ದೇಶಾದ್ಯಂತ ರೈತ ಸಂಘಟನೆಗಳು ಭಾರತ್ ಬಂದ್'ಗೆ ಕರೆ ನೀಡಿದೆ. ಈ ಹಿನ್ನಲೆಯಲ್ಲಿ ಉಡುಪಿ ನಗರದಲ್ಲಿ ವಿವಿಧ ಸಂಘಟನೆಗಳು ಸೇರಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಜಾಥ ಮತ್ತು...

Related Articles

Translate »
error: Content is protected !!