ಬಂಧನದಲ್ಲಿದ್ದ ಬಾಂಗ್ಲಾದೇಶಿ ಮಹಿಳೆ ಮೇಲೆ ಅತ್ಯಾಚಾರ: ಬಿಎಸ್ಎಫ್ ಸಿಬ್ಬಂದಿ ಬಂಧನ

ಬೆಂಗಳೂರು: ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಅರೆಸೇನಾ ಪಡೆಯ ಶಿಬಿರದೊಳಗೆ ವಿಚಾರಣೆ ನಡೆಸುವ ನೆಪದಲ್ಲಿ ಬಾಂಗ್ಲಾದೇಶದ ಮಹಿಳೆಯನ್ನು ಕರೆತಂದು ಅತ್ಯಾಚಾರ ಎಸಗಿದ ಆರೋಪದ ಮೇಲೆ ಬಿಎಸ್‌ಎಫ್ ಸಿಬ್ಬಂದಿಯೊಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಶುಕ್ರವಾರ ತಿಳಿಸಿದ್ದಾರೆ.

ಗೈಘಾಟಾ ಪೊಲೀಸ್ ಠಾಣೆಯಲ್ಲಿ ಸಂತ್ರಸ್ಥ ಮಹಿಳೆ ನೀಡಿದ ದೂರಿನ ಮೇರೆಗೆ ಆರೋಪಿ ಬಿಎಸ್ಎಫ್ ಸಬ್ ಇನ್ಸ್‌ಪೆಕ್ಟರ್‌ನನ್ನು ಗುರುವಾರ ಬಂಧಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

“ಜುಲೈ 27 ರ ರಾತ್ರಿ ಈ ಘಟನೆ ನಡೆದಿದೆ. ಘಟನೆ ಬೆಳಕಿಗೆ ಬಂದ ನಂತರ, ಸ್ವತ ಬಿಎಸ್ಎಫ್, ಆರೋಪಿ ಸಿಬ್ಬಂದಿಯನ್ನು ಸ್ಥಳೀಯ ಪೊಲೀಸರಿಗೆ ಒಪ್ಪಿಸಿ ಅಮಾನತುಗೊಳಿಸಿದೆ ಎಂದು ಅರೆ ಸೇನಾ ಪಡೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸಂತ್ರಸ್ಥೆ ಹಾಗೂ ಇನ್ನೊಬ್ಬ ಮಹಿಳೆ, ಬಾಂಗ್ಲಾದೇಶದ ಗೋಪಾಲ್ ಗಂಜ್ ಮೂಲದವರಾಗಿದ್ದು, ಅಕ್ರಮವಾಗಿ ಭಾರತಕ್ಕೆ ಪ್ರವೇಶಿಸುವಾಗ ಬಂಧಿಸಲಾಗಿದೆ.

ಮಹಿಳೆ ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಇಬ್ಬರು ಮಹಿಳೆಯರನ್ನು ಬಿಎಸ್‌ಎಫ್‌ನ 158 ನೇ ಬೆಟಾಲಿಯನ್ ಸಿಬ್ಬಂದಿ ಬಂಧಿಸಿದ್ದಾರೆ, ಅವರು ಕಾನೂನುಬಾಹಿರವಾಗಿ ಜೌಡಂಗಾ ಗಡಿಯ ಮೂಲಕ ಭಾರತ ಪ್ರವೇಶಿಸಿಸಿದ್ದಾರೆ.

“ಬಿಎಸ್ಎಫ್ ಸಿಬ್ಬಂದಿ ಇಬ್ಬರೂ ಮಹಿಳೆಯರನ್ನು ಅರೆಸೇನಾ ಪಡೆಯ ಖರೆರ್ ಮಠ ಶಿಬಿರಕ್ಕೆ ವಿಚಾರಣೆಗಾಗಿ ಕರೆದೊಯ್ದಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಯಾರೂ ಇಲ್ಲದಿದ್ದಾಗ, ಆರೋಪಿ ಬಿಎಸ್‌ಎಫ್ ಸಬ್ ಇನ್ಸ್‌ಪೆಕ್ಟರ್‌ ಮಹಿಳೆಯನ್ನು ವಿಚಾರಣೆ ಮಾಡುವ ನೆಪದಲ್ಲಿ ಅತ್ಯಾಚಾರ ಎಸಗಿದ್ದಾರೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ಎಫ್ಐಆರ್ ಉಲ್ಲೇಖಿಸಿ ಹೇಳಿದ್ದಾರೆ.

ಆತ್ಮೀಯ ಓದುಗರೇ,ಪಾರದರ್ಶಕ ಸುದ್ದಿಗಳು ನಿಮಗೆ ನಿರಂತರ ತಲುಪಲು ನಿಮ್ಮ ಸಹಾಯ ಅತೀ ಅಗತ್ಯ. ಸತ್ಯ ಎಲ್ಲೆಡೆ ತಲುಪಲು ನಮ್ಮೊಂದಿಗೆ ಕೈ ಜೋಡಿಸಿ. ನಮ್ಮನ್ನು ಬೆಂಬಲಿಸಲು

Hot Topics

ಸೆ 27 ಭಾರತ್ ಬಂದ್ ಗೆ ವೆಲ್ಪೇರ್ ಪಾರ್ಟಿ ಉಡುಪಿ ಸಂಪೂರ್ಣ ಬೆಂಬಲ – ಅಬ್ದುಲ್ ಅಜೀಜ್

ಉಡುಪಿ: ಸೆಪ್ಟೆಂಬರ್ 27 ರಂದು ದೇಶಾದ್ಯಂತ ರೈತ ಸಂಘಟನೆಗಳು ಭಾರತ್ ಬಂದ್’ಗೆ ಕರೆ ನೀಡಿದೆ. ಈ ಹಿನ್ನಲೆಯಲ್ಲಿ ಉಡುಪಿ ನಗರದಲ್ಲಿ ವಿವಿಧ ಸಂಘಟನೆಗಳು ಸೇರಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಜಾಥ ಮತ್ತು...

ಬೈಂದೂರು:ಅಕ್ಷರ ದಾಸೋಹ ನೌಕರರ ಬೃಹತ್ ಪ್ರತಿಭಟನೆ

ಕೇಂದ್ರ ಯೋಜನೆ ಸ್ಕೀಮ್ ನೌಕರರನ್ನು ಖಾಯಂಗೊಳಿಸಿ,ಬಜೆಟ್ ನಲ್ಲಿ ಅನುದಾನ ಹೆಚ್ಚಳ ಮಾಡಬೇಕು.ಶಾಲೆಗಳಲ್ಲಿ ಗ್ರೂಪ್ "ಡಿ" ನೌಕರರು ಇಲ್ಲದಿರುವುದರಿಂದ ಈ ನೌಕರರಿಂದಲೇ ಶಾಲಾಸ್ವಚ್ಚತೆ,ಕೈತೋಟ ನಿವ೯ಹಣೆ,ಶಾಲಾ ಸಮಯದ ಗಂಟೆ ಬಾರಿಸುವುದು ಇನ್ನಿತರ ಕೆಲಸ ನೀಡಿ ಈ...

ಸೆಪ್ಟೆಂಬರ್ 27 ರಂದು ನಡೆಯುವ ರೈತ ಪರ ಹೋರಾಟದಲ್ಲಿ ಭಾಗವಹಿಸಲು ಸಾಲಿಡಾರಿಟಿ ಕರೆ

ಉಡುಪಿ: ಸೆಪ್ಟೆಂಬರ್ 27 ರಂದು ದೇಶಾದ್ಯಂತ ರೈತ ಸಂಘಟನೆಗಳು ಭಾರತ್ ಬಂದ್'ಗೆ ಕರೆ ನೀಡಿದೆ. ಈ ಹಿನ್ನಲೆಯಲ್ಲಿ ಉಡುಪಿ ನಗರದಲ್ಲಿ ವಿವಿಧ ಸಂಘಟನೆಗಳು ಸೇರಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಜಾಥ ಮತ್ತು...

Related Articles

ಕಾರ್ಕಳ ಕಾಂಗ್ರೆಸ್ ನಿಂದ ಸೆ.25 ರಂದು ಪಂಜಿನ ಮೆರವಣಿಗೆ

ರಾಜ್ಯದಲ್ಲಿ ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸುವ ನೆಪದಲ್ಲಿ ಪುರಾತನ ಶ್ರದ್ದಾ ಕೇಂದ್ರಗಳನ್ನು ದ್ವಂಸಗೊಳಿಸುತ್ತಿರುವ ಬಿಜೆಪಿ ಸರ್ಕಾರದ ನಡೆಯನ್ನು ವಿರೋಧಿಸಿ ಜನಜಾಗೃತಿಗಾಗಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಮತ್ತು ಕಾರ್ಕಳ ಯುವ ಕಾಂಗ್ರೆಸ್ ನೇತೃತ್ವದಲ್ಲಿ, ಕಾರ್ಕಳ...
Translate »
error: Content is protected !!