ಬಿಜೆಪಿ ಆಳ್ವಿಕೆಯ ಈ ನಾಲ್ಕು ರಾಜ್ಯದಲ್ಲಿ ಮುಖ್ಯಮಂತ್ರಿಗಳು ವಲಸಿಗರು!!

ಕೋಸ್ಟಲ್ ಮಿರರ್ ಡೆಸ್ಕ್: ಬಿಜೆಪಿ ಅಪರೇಷನ್ ಕಮಲದಲ್ಲಿ ಎತ್ತಿದ ಕೈ. ಸಾಕಷ್ಟು ಹಣ, ಅಧಿಕಾರದ ಆಸೆ ತೋರಿಸಿ ಬೇರೆ ಪಕ್ಷಗಳಿಂದ ತನ್ನತ್ತ ಅದರ ಶಾಸಕರನ್ನು ಸೆಳೆಯುವ ಆರೋಪ ಅದರ ಮೇಲಿದೆ. ಇತ್ತೀಚಿಗೆ ಕರ್ನಾಟಕದ ಹದಿನೇಳು ಶಾಸಕರನ್ನು ಬಿಜೆಪಿ ಸೆಳೆದು ಅಧಿಕಾರ ಮಾಡಿದ್ದು ಇತಿಹಾಸ.

ಇದೀಗ ದೇಶದಲ್ಲಿರುವ 12 ಬಿಜೆಪಿ ಮುಖ್ಯಮಂತ್ರಿಗಳಲ್ಲಿ ನಾಲ್ಕು ಮಂದಿ ಮೂಲ ಬಿಜೆಪಿಗರಲ್ಲವೆಂಬುವುದೂ ವಾಸ್ತವ. ಕರ್ನಾಟಕ ಸೇರಿದಂತೆ ಇನ್ನು ಮೂರು ಕಡೆ ವಲಸಿಗರನ್ನು ಬಿಜೆಪಿ ಅನಿವಾರ್ಯವಾಗಿ ಮುಖ್ಯಮಂತ್ರಿಯನ್ನಾಗಿ ಮಾಡಿದೆ.

ಇತ್ತೀಚ್ಚಿಗೆ ಜನತಾದಳದಿಂದ 2008 ರಲ್ಲಿ ಬಿಜೆಪಿ ಸೇರ್ಪಡೆಯಾದ ಬಸವರಾಜ್ ಬೊಮ್ಮಾಯಿ ಮುಖ್ಯಮಂತ್ರಿ ಸ್ಥಾನಮಾನ ನೀಡಿರುವುದು ಅಚ್ಚರಿಯೊಂದಿಗೆ ಮೂಲ ಬಿಜೆಪಿಗರಲ್ಲಿ ಸ್ವಲ್ಪ ಮಟ್ಟಿನ ಕಸಿವಿಸಿ ಉಂಟು ಮಾಡಿದ್ದು ಸುಳ್ಳಲ್ಲ. ಶಿಸ್ತಿನ ಪಕ್ಷ, ಪ್ರಮಾಣಿಕ ಪಕ್ಷವೆಂದಲ್ಲ ಪಂಚ್ ಲೈನ್ ಹೇಳುವ ಬಿಜೆಪಿ ಇಲ್ಲಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಲಾಬಿ ಮತ್ತು ಲಿಂಗಾಯತ ಸಮುದಾಯದ ಲಾಭಿಗೆ ಮಂಡಿಯೂರಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.

ಇನ್ನು ಅರುಣಾಚಲ ಪ್ರದೇಶದ ಪೇಮಾ ಕಾಂಡು ಕೂಡ ಮೂಲ ಬಿಜೆಪಿಗರಲ್ಲ. ಇವರನ್ನು ಬಿಜೆಪಿ ಕಾಂಗ್ರೆಸ್’ನಿಂದ ಸೆಳೆದುಕೊಂಡಿತ್ತು. ಇವರ ತಂದೆ ದೋರ್ಜಿ ಕಾಂಡು 2011 ರಲ್ಲಿ ಹೆಲಿಕಾಪ್ಟರ್ ಪತನವಾಗಿ ಮೃತರಾಗುವ ಮುನ್ನ ಕಾಂಗ್ರೆಸ್ ನಿಂದ ಎರಡು ಬಾರಿ ಮುಖ್ಯಮಂತ್ರಿಯಾದವರು. ಇದೀಗ ಪೆಮಾ ಕಾಂಡು ಅರುಣಾಚಲ ಪ್ರದೇಶದ ಮುಖ್ಯಮಂತ್ರಿ. 2016 ರಲ್ಲಿ ಕಾಂಗ್ರೆಸ್ ತೊರೆದಿದ್ದರು.

ಇನ್ನು ಅಸ್ಸಾಮಿನ ಮುಖ್ಯಮಂತ್ರಿ ಹೀಮಾಂತ ಬಿಸ್ವಾ ಸಿರ್ಮಾ ಕೂಡ ಕಾಂಗ್ರೆಸ್ ನಿಂದ ವಲಸೆ ಬಂದವರು. 2014 ರಲ್ಲಿ ಮೋದಿ ವಿರುದ್ಧ ಪ್ರಚಾರ ನಡೆಸಿದ್ದ ಹೀಮಾಂತ ಬಿಸ್ವಾ 2015 ರ ಆಗಸ್ಟ್ ನಲ್ಲಿ ಬಿಜೆಪಿ ಸೇರ್ಪಡೆಯಾದರು ಈ ಮೂಲಕ ಪ್ರಥಮ ಬಾರಿಗೆ 2016 ರಲ್ಲಿ ಅಸ್ಸಾಮಿನಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿತು.

ಎನ್ ಬಿರೆನ್ ಸಿಂಗ್ ಮಣಿಪುರದ ಬಿಜೆಪಿ ಮುಖ್ಯಮಂತ್ರಿ. ಇವರು ಕೂಡ ಕಾಂಗ್ರೆಸ್ ಪಕ್ಷದಿಂದ ವಲಸೆ ಬಂದವರು. ನಂತರ ಕಾಂಗ್ರೆಸ್ ಸೋಲಿಸಲು ಪ್ರಯತ್ನ ಪಟ್ಟರು.

2017 ರಲ್ಲಿ ಕಾಂಗ್ರೆಸ್ ಅತ್ಯಂತ ಹೆಚ್ಚು ಸೀಟು ಗಳಿಸಿದರೂ ರಾಜ್ಯಪಾಲರು ಬಿಜೆಪಿಗೆ ಮೈತ್ರಿ ಪಕ್ಷದೊಂದಿಗೆ ಸರಕಾರ ನಡೆಸಲು ಮೊದಲು ಆಹ್ವಾನಿಸಿದರು. ಅದರಂತೆ ನಾಗ ಪೀಪಲ್ಸ್ ಫ್ರಂಟ್ ಮತ್ತು ನ್ಯಾಷನಲ್ ಪೀಪಲ್ಸ್ ಪಾರ್ಟಿಯೊಂದಿಗೆ ಸೇರಿ ಮೈತ್ರಿ ಸರಕಾರ ರಚಿಸಿ ಎನ್ ಬಿರೆನ್ ಸಿಂಗ್ ಮುಖ್ಯಮಂತ್ರಿಯಾದರು.

ಆತ್ಮೀಯ ಓದುಗರೇ,ಪಾರದರ್ಶಕ ಸುದ್ದಿಗಳು ನಿಮಗೆ ನಿರಂತರ ತಲುಪಲು ನಿಮ್ಮ ಸಹಾಯ ಅತೀ ಅಗತ್ಯ. ಸತ್ಯ ಎಲ್ಲೆಡೆ ತಲುಪಲು ನಮ್ಮೊಂದಿಗೆ ಕೈ ಜೋಡಿಸಿ. ನಮ್ಮನ್ನು ಬೆಂಬಲಿಸಲು

Hot Topics

ಸೆ 27 ಭಾರತ್ ಬಂದ್ ಗೆ ವೆಲ್ಪೇರ್ ಪಾರ್ಟಿ ಉಡುಪಿ ಸಂಪೂರ್ಣ ಬೆಂಬಲ – ಅಬ್ದುಲ್ ಅಜೀಜ್

ಉಡುಪಿ: ಸೆಪ್ಟೆಂಬರ್ 27 ರಂದು ದೇಶಾದ್ಯಂತ ರೈತ ಸಂಘಟನೆಗಳು ಭಾರತ್ ಬಂದ್’ಗೆ ಕರೆ ನೀಡಿದೆ. ಈ ಹಿನ್ನಲೆಯಲ್ಲಿ ಉಡುಪಿ ನಗರದಲ್ಲಿ ವಿವಿಧ ಸಂಘಟನೆಗಳು ಸೇರಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಜಾಥ ಮತ್ತು...

ಬೈಂದೂರು:ಅಕ್ಷರ ದಾಸೋಹ ನೌಕರರ ಬೃಹತ್ ಪ್ರತಿಭಟನೆ

ಕೇಂದ್ರ ಯೋಜನೆ ಸ್ಕೀಮ್ ನೌಕರರನ್ನು ಖಾಯಂಗೊಳಿಸಿ,ಬಜೆಟ್ ನಲ್ಲಿ ಅನುದಾನ ಹೆಚ್ಚಳ ಮಾಡಬೇಕು.ಶಾಲೆಗಳಲ್ಲಿ ಗ್ರೂಪ್ "ಡಿ" ನೌಕರರು ಇಲ್ಲದಿರುವುದರಿಂದ ಈ ನೌಕರರಿಂದಲೇ ಶಾಲಾಸ್ವಚ್ಚತೆ,ಕೈತೋಟ ನಿವ೯ಹಣೆ,ಶಾಲಾ ಸಮಯದ ಗಂಟೆ ಬಾರಿಸುವುದು ಇನ್ನಿತರ ಕೆಲಸ ನೀಡಿ ಈ...

ಸೆಪ್ಟೆಂಬರ್ 27 ರಂದು ನಡೆಯುವ ರೈತ ಪರ ಹೋರಾಟದಲ್ಲಿ ಭಾಗವಹಿಸಲು ಸಾಲಿಡಾರಿಟಿ ಕರೆ

ಉಡುಪಿ: ಸೆಪ್ಟೆಂಬರ್ 27 ರಂದು ದೇಶಾದ್ಯಂತ ರೈತ ಸಂಘಟನೆಗಳು ಭಾರತ್ ಬಂದ್'ಗೆ ಕರೆ ನೀಡಿದೆ. ಈ ಹಿನ್ನಲೆಯಲ್ಲಿ ಉಡುಪಿ ನಗರದಲ್ಲಿ ವಿವಿಧ ಸಂಘಟನೆಗಳು ಸೇರಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಜಾಥ ಮತ್ತು...

Related Articles

ಬೈಂದೂರು:ಅಕ್ಷರ ದಾಸೋಹ ನೌಕರರ ಬೃಹತ್ ಪ್ರತಿಭಟನೆ

ಕೇಂದ್ರ ಯೋಜನೆ ಸ್ಕೀಮ್ ನೌಕರರನ್ನು ಖಾಯಂಗೊಳಿಸಿ,ಬಜೆಟ್ ನಲ್ಲಿ ಅನುದಾನ ಹೆಚ್ಚಳ ಮಾಡಬೇಕು.ಶಾಲೆಗಳಲ್ಲಿ ಗ್ರೂಪ್ "ಡಿ" ನೌಕರರು ಇಲ್ಲದಿರುವುದರಿಂದ ಈ ನೌಕರರಿಂದಲೇ ಶಾಲಾಸ್ವಚ್ಚತೆ,ಕೈತೋಟ ನಿವ೯ಹಣೆ,ಶಾಲಾ ಸಮಯದ ಗಂಟೆ ಬಾರಿಸುವುದು ಇನ್ನಿತರ ಕೆಲಸ ನೀಡಿ ಈ...

ಸೆಪ್ಟೆಂಬರ್ 27 ರಂದು ನಡೆಯುವ ರೈತ ಪರ ಹೋರಾಟದಲ್ಲಿ ಭಾಗವಹಿಸಲು ಸಾಲಿಡಾರಿಟಿ ಕರೆ

ಉಡುಪಿ: ಸೆಪ್ಟೆಂಬರ್ 27 ರಂದು ದೇಶಾದ್ಯಂತ ರೈತ ಸಂಘಟನೆಗಳು ಭಾರತ್ ಬಂದ್'ಗೆ ಕರೆ ನೀಡಿದೆ. ಈ ಹಿನ್ನಲೆಯಲ್ಲಿ ಉಡುಪಿ ನಗರದಲ್ಲಿ ವಿವಿಧ ಸಂಘಟನೆಗಳು ಸೇರಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಜಾಥ ಮತ್ತು...

ಕಾರ್ಕಳ ಕಾಂಗ್ರೆಸ್ ನಿಂದ ಸೆ.25 ರಂದು ಪಂಜಿನ ಮೆರವಣಿಗೆ

ರಾಜ್ಯದಲ್ಲಿ ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸುವ ನೆಪದಲ್ಲಿ ಪುರಾತನ ಶ್ರದ್ದಾ ಕೇಂದ್ರಗಳನ್ನು ದ್ವಂಸಗೊಳಿಸುತ್ತಿರುವ ಬಿಜೆಪಿ ಸರ್ಕಾರದ ನಡೆಯನ್ನು ವಿರೋಧಿಸಿ ಜನಜಾಗೃತಿಗಾಗಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಮತ್ತು ಕಾರ್ಕಳ ಯುವ ಕಾಂಗ್ರೆಸ್ ನೇತೃತ್ವದಲ್ಲಿ, ಕಾರ್ಕಳ...
Translate »
error: Content is protected !!