ಬ್ರಾಹ್ಮಣ್ಯದ ಅನಿಷ್ಠ ಪದ್ಧತಿಗಳ ನಡುವೆ ಬುರ್ಖಾದ ಚರ್ಚೆ !

ಬ್ರಾಹ್ಮಣ್ಯ ಅಥವಾ ಜಾತಿವ್ಯವಸ್ಥೆಯ ಕರಾಳತೆಯ ಕುರಿತ ಬಿಸಿ ಬಿಸಿ ಚರ್ಚೆಯ ಬೆನ್ನಿಗೆ ಬುರ್ಖಾ ಅಥವಾ ಮತ್ತೊಂದು ಮುಸ್ಲಿಂ ಧಾರ್ಮಿಕ ಶ್ರದ್ಧೆಯನ್ನು ಹಿಡಿದು ಎಳೆದಾಡೋದು ಫೇಸ್ಬುಕಲ್ಲಿ ಕಳೆದ 8-10 ವರ್ಷಗಳಿಂದ ನಡೆದು ಬರುತ್ತಿರುವ ಸಂಪ್ರದಾಯ. ಕಮ್ಯೂನಿಸ್ಟ್, ಸಮಾಜವಾದಿ ಇತ್ಯಾದಿ ಬ್ರಾಹ್ಮಣ್ಯ ಪ್ರಣೀತ ರಾಜಕೀಯ ಪಕ್ಷ/ಸಂಘಟನೆಗಳಿಗೆ ಸೇರಿದ ಹಾಗೂ ಬ್ರಾಹ್ಮಣ್ಯದ ಗೇಟ್ ಕೀಪರ್ ಚಾಕರಿ ಮಾಡುವ ಸಮುದಾಯದ ಕೆಲವರು ತಮ್ಮರಾಜಕೀಯ ಹಾಗೂ ಸಾಂಸ್ಕೃತಿಕ ನಿಲುವಿನಲ್ಲಿ balancing ಕಾಪಾಡಿಕೊಳ್ಳಲು ಕಂಡುಕೊಂಡಿರುವ ದಾರಿ ಇದು. ಇವರಿಗೆ ನಮ್ಮನ್ನು ಮಾತ್ರ ಪ್ರಶ್ನಿಸಲು ಸಾಧ್ಯವೆನ್ನುವ ತಮ್ಮ ಸ್ವಜಾತಿ ಬಾಂಧವರಿಗೆ, ಅದು ಹಾಗಲ್ಲ ನಾವು ಬೇರೆಯವರನ್ನೂ ಪ್ರಶ್ನಿಸೋದೆ ಎಂದು ಹೆಗ್ಗಳಿಸಲು ಇವರು ಕಂಡುಕೊಂಡದ್ದು ಮುಸ್ಲಿಮರನ್ನು.

ಮುಸ್ಲಿಂ ಧಾರ್ಮಿಕ ಶ್ರದ್ಧೆಗಳ ಕುರಿತ ವಿರೋಧ/ವಿಮರ್ಶೆಗಳು ಕೇವಲ ಎಫ್ಬಿ ಚಾಲ್ತಿಗೆ ಬಂದ ನಂತರ ತೊಡಗಿದ್ದಲ್ಲ. ಈ ಚರ್ಚೆ-ಸಂವಾದ, ವಿರೋಧ/ವಿಮರ್ಶೆಗಳಿಗೆ ಕನಿಷ್ಠ 1400 ವರ್ಷಗಳ ಇತಿಹಾಸವಿದೆ. ಅಲ್-ಕುರಾನ್ ಮತ್ತು ಅಧಿಕೃತ ಹದೀತುಗಳಲ್ಲೂ ನಮಗೆ ಈ ಕುರಿತ ಮಾಹಿತಿ ಸಿಗುತ್ತದೆ. ಯಾವತ್ತೂ ವಿಮರ್ಶೆಗಳಿಗೆ ಹಾಗೂ ಆರೋಗ್ಯಕರ ಸಂವಾದಗಳಿಗೆ ತೆರೆದುಕೊಂಡ ಧರ್ಮ ಇಸ್ಲಾಂ, ಮುಸ್ಲಿಮರು ಕಾಲ ಕಾಲಕ್ಕೆ ಇವುಗಳನ್ನು ಸಮರ್ಥವಾಗಿ ಎದುರಿಸುತ್ತಲೇ ಬಂದಿದ್ದಾರೆ. ಸಮಾನತೆ, ಸರ್ವರಿಗೂ ಗೌರವಯುತ ಬದುಕು, ಹೆಣ್ಣುಮಕ್ಕಳಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಪಾಲು, ಶಿಕ್ಷಣಕ್ಕೆ ಪ್ರಾಶಸ್ತ್ಯ, ಮಹಿಳಾ ಶೋಷಣೆಯ ನಿಶೇಧ, ಹೆಣ್ಣು ಶಿಶು ಹತ್ಯೆ ನಿಶೇಧ, ವ್ಯಭಿಚಾರ ನಿಷೇಧ, ಮಧ್ಯಪಾನ ನಿಷೇಧ, ಬಡ್ಡಿ ನಿಷೇಧ, ಸಾಮಾಜಿಕ, ರಾಜಕೀಯ ಹಾಗೂ ವಾಣಿಜ್ಯ ವ್ಯವಹಾರಗಳಲ್ಲಿ ಪ್ರಾಮಾಣಿಕತೆ, ವರ್ಣಭೇದ ನೀತಿ ನಿಶೇಧ, ಜಾತಿ ಭೇದ ನಿಶೇಧ, ಸಾಮಾಜಿಕ ಜವಾಬ್ದಾರಿ ಹೀಗೆ ಹಲವಾರು ಕ್ರಾಂತಿಕಾರಿ ನಿಲುವುಗಳ ಕಾರಣಕ್ಕೆ ನೆಲದಗಲಕ್ಕೂ ಇಸ್ಲಾಂ ಪಸರಿಸುವ ಹಂತದಲ್ಲಿ ನೂರಾರು ಪ್ರಾದೇಶಿಕ ಸಂಪ್ರದಾಯ, ಆಚರಣೆ ಹಾಗೂ ಸಂಸ್ಕೃತಿಗಳ ಪ್ರಭಾವಗಳಿಗೆ ಒಳಗಾದರೂ ಕಾಲಾನುಕ್ರಮೇಣ ಅವುಗಳನ್ನು ಮೀರಿ ಆಧುನಿಕತೆಯ ಬೆಳವಣಿಗೆಗಳನ್ನು ತನ್ನ ಎದೆಗೆ ಅನಿಸಿಕೊಳ್ಳುತ್ತಾ ಬೆಳೆದಿದೆ. ಆದ್ದರಿಂದ, ಇಸ್ಲಾಂ ನ ಕ್ರಾಂತಿಕಾರಿ ನಿಲುವುಗಳು ಇಂಡಿಯಾ ಎಂಬ ಈ ನೆಲದ ಜಡ್ಡು ಹಿಡಿದ ಜಾತಿ ವ್ಯವಸ್ಥೆಯ ಜಾಢ್ಯತೆಗೆ ಪರಿಹಾರವೇ ಹೊರತು ಯಾವ ವಿಧದಲ್ಲೂ ಸಮಾನವಲ್ಲ ಎಂಬ ವಾಸ್ತವವನ್ನು ಪ್ರತಿಯೊಬ್ಬ ಮುಸ್ಲಿಮರೂ ಅರಿತಿರಬೇಕು.

7-8 ದಶಕಗಳ ಹಿಂದೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಇಸ್ಲಾಂ ಧರ್ಮ ಕುರಿತ ಅಧ್ಯಯನ ಹಾಗೂ ಅವಲೋಕನದಂತೆ “ಭಾರತದಲ್ಲಿ ಹಿಂದೂ ಧರ್ಮದ ಸಂಪರ್ಕದಿಂದಾಗಿ ಅನಿಷ್ಟ ಪದ್ಧತಿಗಳನ್ನು ಅಳವಡಿಸಿಕೊಂಡ ಇಸ್ಲಾಂ ಧರ್ಮ ತನ್ನ ಶುದ್ಧತೆಯನ್ನು ಕಳೆದುಕೊಂಡ ಬಗ್ಗೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಖೇದವಿತ್ತು.” ಎಂದು ಆನಂದ್ ತೇಲ್ತುಂಬ್ಡೆ ತಮ್ಮ ‘ಅಂಬೇಡ್ಕರ್ ಮತ್ತು ಮುಸ್ಲಿಮರು’ ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ ಎಂಬದು ಗಮನಾರ್ಹ. ಭಾರತದ ನೆಲದಲ್ಲಿ ಸಹಸ್ರಾರು ವರ್ಷಗಳಿಂದ ತುಳಿತಕ್ಕೊಳಗಾಗಿ ಸಾಮಾಜಿಕ ಬದಲಾವಣೆಗಾಗಿ ತುಡಿದ ಅವರ್ಣೀಯರು, ಶೂದ್ರ ಸಮುದಾಯದವರು ಮತ್ತು ಅರಸೊತ್ತಿಗೆಯ ಸಾಮೀಪ್ಯದಿಂದ ಸುಲಭವಾಗಿ ಸಿಗುವ ಸೌಲಭ್ಯಗಳಿಗಾಗಿ ಮೇಲ್ಜಾತಿಯವರು ಇಸ್ಲಾಂ ಸ್ವೀಕರಿಸಿದಾಗ ಸಹಜವಾಗಿ ಆಯಾ ಸಂಸ್ಕೃತಿಯ ಒಳಿತುಗಳನ್ನು ತನ್ನೊಳಗೆ ಬೆಸೆದುಕೊಂಡಂತೆಯೇ ಯಜಮಾನಿಕೆ, ಫ್ಯೂಡಲಿಸ್ಟ್ ಮನೋಭಾವ, ವರದಕ್ಷಿಣೆ ಪಿಡುಗಿನಂತಹ ಇನ್ನಿತರೆ ಅಂಶಗಳ ಪ್ರಭಾವಕ್ಕೂ ಒಳಗಾಯಿತು. ಸ್ವಾತಂತ್ರ್ಯಾ ನಂತರ,
ಮುಸ್ಲಿಮರನ್ನು ಹದ್ದುಬಸ್ತಿನಲ್ಲಿಡಬೇಕೆಂಬುದಕ್ಕಾಗಿಯೇ ಇಲ್ಲಿ ಏರ್ಪಡಾಗುವ ಕೋಮುಗಲಭೆಗಳು, ಗುಂಪು ಹತ್ಯೆಗಳು, ರಾಜಕೀಯ ತೀರ್ಮಾನಗಳು,ಅಸಮಂಜಸವಾದ ಶಿಕ್ಷಣ ನೀತಿಗಳು ಹಾಗೂ ಸಮುದಾಯದ ರಾಜಕಾರಣಿಗಳ ಕುಟಿಲತೆಯ ಕಾರಣ ಮುಸ್ಲಿಮರ ಜೀವನಸ್ಥಿತಿ ಎಲ್ಲಾ ರೀತಿಯಲ್ಲಿ ಸಾಚಾರ್ ವರದಿಯಲ್ಲಿ ವಿವರಿಸಿದ ಹಂತಕ್ಕೆ ಇಳಿಯಿತು. ಸಂಸ್ಕೃತಿ ಚಿಂತಕರಾದ ಪ್ರೊ. ಮುಜ಼ಾಫರ್ ಅಸಾದಿ ಒಂದು ಕಡೆ ಹೇಳಿದಂತೆ, “ಪ್ರತಿಯೊಂದು ಬಾರಿ ಕೋಮು ಗಲಭೆಯಲ್ಲೂ ಮುಸ್ಲಿಮರ ಬದುಕು 25 ವರ್ಷಗಳಷ್ಟು ಹಿಂದಕ್ಕೆ ಹೋಗುತ್ತದೆ” ಎಂಬ ಮಾತುಗಳನ್ನು ಇಲ್ಲಿ ನೆನಪಿಸಿಕೊಳ್ಳುವುದು ಸೂಕ್ತ.
ಆದಾಗ್ಯೂ, ಈ ಎಲ್ಲ ಸವಾಲುಗಳು ಮತ್ತು ತಲ್ಲಣಗಳನ್ನು ಈ ನೆಲದ ದಮನಿತ ಪರ ಧ್ವನಿಗಳ ಬೆಂಬಲ ಮತ್ತು ಸಹಾಯದೊಂದಿಗೆ ದಿಟ್ಟತೆಯಿಂದ ಎದುರಿಸುತ್ತಾ ಕಾಲ ಕ್ರಮೇಣ ಚರ್ಚೆ-ಸಂವಾದ, ಆತ್ಮವಿಮರ್ಶೆಗಳ ತರುವಾಯ ಮುಸ್ಲಿಮರ ಬದುಕಿನಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ, ಆಗುತ್ತಿವೆ. ಇಂತಹ ಬಿಸಿ ಬಿಸಿ ವಿವಾದಗಳು ಭುಗಿಲೆದ್ದಾಗೆಲ್ಲ ಹೆಣ್ಣುಮಕ್ಕಳ ವಿಮೋಚನೆಯ ಚಾಂಪಿಯನ್ಸ್ ಎಂಬಂತೆ ಹೆಸರಿಸಲಾಗುವ ಸಾರಾ ಅಬೂಬಕರ್, ಭಾನು ಮುಷ್ತಾಕ್ ಮತ್ತಿತರರು 3-4 ದಶಕಗಳ ಹಿಂದೆ ಎದುರಿಸಿರಬಹುದಾದ ಸವಾಲುಗಳಿಗೆ ಮುಸ್ಲಿಂ ಸಮುದಾಯ ಈಗಾಗಲೇ ಪರಿಹಾರ ಕಂಡುಕೊಂಡಿದೆ. ಹಾಗೆಯೇ ಮುಂದಿನ ದಿನಗಳಲ್ಲೂ ಈ ಬದಲಾವಣೆಯ ಪ್ರಕ್ರಿಯೆ ಜಾರಿಯಲ್ಲಿದ್ದೇ ಇರುತ್ತೆ.

ಅದೇ ಸಮಯ, ಜಾತಿವ್ಯಾಧಿಗ್ರಸ್ತ ವ್ಯವಸ್ಥೆ ಮಾತ್ರ ಅಂದಿಗೂ ಇಂದಿಗೂ ಹಾಗೆಯೇ ಇದೆ, ಇನ್ನು ಮುಂದೆಯೂ ಇರಲಿದೆ. ಇದಕ್ಕಿರುವ ಪರಿಹಾರವೆಂದರೆ, ಊನಾ ಘಟನೆಯ ನಂತರ ಸಂದರ್ಶನವೊಂದರಲ್ಲಿ ದಲಿತರ ರಕ್ಷಣೆಗೆ ಅಂಬೇಡ್ಕರರು ಮತ್ತೆ ಹುಟ್ಟಿಬರಬೇಕೆ? ಎಂಬ ಪ್ರಶ್ನೆಗೆ ತಮಿಳು ಚಿತ್ರ ನಿರ್ದೇಶಕ ಪಾ.ರಂಜಿತ್ ನೀಡಿದ ಉತ್ತರ, ಹೌದು ಆದರೆ ದಲಿತರ ಮೇಲೆ ದೌರ್ಜನ್ಯವೆಸಗುವ ಜಾತಿಗಳೊಳಗೆ ಅಂಬೇಡ್ಕರ್ ಅಂಥವರು ಹುಟ್ಟಿ ಬರಬೇಕು ಎಂಬ ಮಾತನ್ನು ವಿಸ್ತರಿಸಿ ಹೇಳಬೇಕೆಂದರೆ ದೇಶದ ಪ್ರತಿಯೊಂದು ಅಗ್ರಹಾರ ಮತ್ತು ಶೋಷಕ ಜಾತಿಗಳಲ್ಲಿ ಪ್ರತಿ 25ವರ್ಷಕ್ಕೊಮ್ಮೆ ಒಬ್ಬೊಬ್ಬರು ಬುದ್ಧ, ಬಸವ, ನಾರಾಯಣ ಗುರು, ಪೆರಿಯಾರ್, ಗಾಂಧೀಜಿ, ಅಂಬೇಡ್ಕರ್, ಕುವೆಂಪು ಹಾಗೂ ಲಂಕೇಶರು ಹುಟ್ಟಿ ಬರಬೇಕು ಅಥವಾ ಪೆರಿಯಾರರು ಸೂಚಿಸಿದಂತೆ ಜಾತಿ ವಿನಾಶಕ್ಕಾಗಿ ಇಸ್ಲಾಂ ಧರ್ಮ ಸ್ವೀಕರಿಸಬೇಕು.

~ ದಾದಾ ಖಲಂದರ್

ಆತ್ಮೀಯ ಓದುಗರೇ,ಪಾರದರ್ಶಕ ಸುದ್ದಿಗಳು ನಿಮಗೆ ನಿರಂತರ ತಲುಪಲು ನಿಮ್ಮ ಸಹಾಯ ಅತೀ ಅಗತ್ಯ. ಸತ್ಯ ಎಲ್ಲೆಡೆ ತಲುಪಲು ನಮ್ಮೊಂದಿಗೆ ಕೈ ಜೋಡಿಸಿ. ನಮ್ಮನ್ನು ಬೆಂಬಲಿಸಲು

Hot Topics

ಸೆ 27 ಭಾರತ್ ಬಂದ್ ಗೆ ವೆಲ್ಪೇರ್ ಪಾರ್ಟಿ ಉಡುಪಿ ಸಂಪೂರ್ಣ ಬೆಂಬಲ – ಅಬ್ದುಲ್ ಅಜೀಜ್

ಉಡುಪಿ: ಸೆಪ್ಟೆಂಬರ್ 27 ರಂದು ದೇಶಾದ್ಯಂತ ರೈತ ಸಂಘಟನೆಗಳು ಭಾರತ್ ಬಂದ್’ಗೆ ಕರೆ ನೀಡಿದೆ. ಈ ಹಿನ್ನಲೆಯಲ್ಲಿ ಉಡುಪಿ ನಗರದಲ್ಲಿ ವಿವಿಧ ಸಂಘಟನೆಗಳು ಸೇರಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಜಾಥ ಮತ್ತು...

ಬೈಂದೂರು:ಅಕ್ಷರ ದಾಸೋಹ ನೌಕರರ ಬೃಹತ್ ಪ್ರತಿಭಟನೆ

ಕೇಂದ್ರ ಯೋಜನೆ ಸ್ಕೀಮ್ ನೌಕರರನ್ನು ಖಾಯಂಗೊಳಿಸಿ,ಬಜೆಟ್ ನಲ್ಲಿ ಅನುದಾನ ಹೆಚ್ಚಳ ಮಾಡಬೇಕು.ಶಾಲೆಗಳಲ್ಲಿ ಗ್ರೂಪ್ "ಡಿ" ನೌಕರರು ಇಲ್ಲದಿರುವುದರಿಂದ ಈ ನೌಕರರಿಂದಲೇ ಶಾಲಾಸ್ವಚ್ಚತೆ,ಕೈತೋಟ ನಿವ೯ಹಣೆ,ಶಾಲಾ ಸಮಯದ ಗಂಟೆ ಬಾರಿಸುವುದು ಇನ್ನಿತರ ಕೆಲಸ ನೀಡಿ ಈ...

ಸೆಪ್ಟೆಂಬರ್ 27 ರಂದು ನಡೆಯುವ ರೈತ ಪರ ಹೋರಾಟದಲ್ಲಿ ಭಾಗವಹಿಸಲು ಸಾಲಿಡಾರಿಟಿ ಕರೆ

ಉಡುಪಿ: ಸೆಪ್ಟೆಂಬರ್ 27 ರಂದು ದೇಶಾದ್ಯಂತ ರೈತ ಸಂಘಟನೆಗಳು ಭಾರತ್ ಬಂದ್'ಗೆ ಕರೆ ನೀಡಿದೆ. ಈ ಹಿನ್ನಲೆಯಲ್ಲಿ ಉಡುಪಿ ನಗರದಲ್ಲಿ ವಿವಿಧ ಸಂಘಟನೆಗಳು ಸೇರಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಜಾಥ ಮತ್ತು...

Related Articles

ಮಳೆಗಾಲದಲ್ಲಿ ಬೇಯುತ್ತಿರುವ ಕರಾವಳಿ!

ಉಡುಪಿ/ದ.ಕ: (ಕೋಸ್ಟಲ್ ಮಿರರ್ ವಿಶೇಷ ವರದಿ) : ಮಳೆಗಾಲದಲ್ಲಿ ಸತತವಾಗಿ ಮಳೆ ಬಾರದಿದ್ದರೂ ಸಾಮಾನ್ಯವಾಗಿ ಮೋಡ ಕವಿದ ವಾತವರಣವಿದ್ದು ತಂಪಾಗಿರುವುದು ವಾಡಿಕೆ. ಆದರೆ ಕಳೆದ ಕೆಲವಾರು ವರ್ಷಗಳಿಂದ ಕರಾವಳಿಯ ಹವಾಮಾನದಲ್ಲಿ ಭಾರೀ ಪ್ರಮಾಣದ...

ಉಳ್ಳಾಲದ ರಾಣಿ ಅಬ್ಬಕ್ಕ, ಬ್ಯಾರಿಗಳು ಮತ್ತು ಕಲ್ಲಡ್ಕ ಪ್ರಭಾಕರ ಭಟ್ರ ಹೇಳಿಕೆ

- ನವೀನ್ ಸೂರಿಂಜೆಬ್ಯಾರಿ ಮುಸ್ಲೀಮರ ಸಂಖ್ಯೆ ಜಾಸ್ತಿ ಇದೆ ಎನ್ನುವ ಕಾರಣಕ್ಕಾಗಿ ಉಳ್ಳಾಲವನ್ನು ಪಾಕಿಸ್ತಾನ ಎಂದ ಕಲ್ಲಡ್ಕ ಪ್ರಭಾಕರ ಭಟ್ಟರ ಮಾತನ್ನು ಕೇವಲ ಅಷ್ಟಕ್ಕೇ ಸೀಮಿತಗೊಳಿಸಿ ನೋಡಬಾರದು. ಈ ಮಾತಿನ ಹಿಂದೆ ಕರಾವಳಿಯ...

ಕೋರೊನಾ ವೈರಸ್: ಅನಿವಾಸಿ ಭಾರತೀಯರನ್ನು ನಿಂದಿಸುವ ಮುನ್ನ….

ಕೋಸ್ಟಲ್ ಮಿರರ್, ನ್ಯೂಸ್: ದೇಶದಲ್ಲಿ ಕೋರೊನಾ ವೈರಸ್ ವ್ಯಾಪಕಗೊಳ್ಳುತ್ತಿರುವ ಹಿನ್ನಲೆಯಲ್ಲಿ ಕೆಲವರು ಅನಿವಾಸಿ ಭಾರತೀಯರನ್ನು ಗುರಿಯಾಗಿಸಿ ನಿಂದಿಸುವ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ. ಅವರ ಕಾರಣಕ್ಕಾಗಿ ಈ ಸೋಂಕು ಭಾರತದಲ್ಲಿ ಬರುತ್ತಿದೆ. ಅವರೂ ಅಲ್ಲಿಗೆ ಹೋಗಿದ್ದು...
Translate »
error: Content is protected !!