ಕರಾವಳಿಯಲ್ಲಿ ಕೈಗಾರಿಕೋದ್ಯಮಕ್ಕೆ 1050 ಎಕರೆ ಭೂಸ್ವಾಧೀನಕ್ಕೆ ಚಿಂತನೆ – ಸಚಿವ ಜಗದೀಶ್ ಶೆಟ್ಟರ್

ಕಾಪು/ ಪಡುಬಿದ್ರಿ: ಕರಾವಳಿಯಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಬೇಡಿಕೆ ಹೆಚ್ಚುತ್ತಿದ್ದು, ಕೈಗಾರಿಕಾ ಕಾರಿಡಾರ್‌ ನಿರ್ಮಾಣದ ಪ್ರಸ್ತಾವನೆಯಿದೆ. ಉಲ್ಲಾಸ್‌ ಕಾಮತ್‌ ನೇತೃತ್ವದಲ್ಲಿ ರಚಿಸಲಾಗಿರುವ ಟಾಸ್ಕ್ಫೋರ್ಸ್‌ನ ವರದಿ ತರಿಸಿಕೊಂಡು ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಕೈಗಾರಿಕೆ ಅಭಿವೃದ್ಧಿಗೆ ಪೂರಕ ಚಿಂತನೆ ನಡೆಸಲಾಗುತ್ತದೆ. ಉಡುಪಿ ಜಿಲ್ಲೆಯ ಮೂಳೂರಿನಲ್ಲಿ 250 ಎಕರೆ ಮತ್ತು ದ.ಕ.ಜಿಲ್ಲೆಯ ಬಳ್ಕುಂಜೆಯಲ್ಲಿ 800 ಎಕರೆ ಸೇರಿದಂತೆ ವಿವಿಧೆಡೆ 1,050 ಎಕರೆ ಜಮೀನು ಸ್ವಾಧೀನಪಡಿಸಿ ಹೊಸ ಕೈಗಾರಿಕೆಗಳ ಪ್ರಾರಂಭಕ್ಕೆ ಚಿಂತನೆ ನಡೆಸಲಾಗಿದೆ ಎಂದು ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಜಗದೀಶ್‌ ಶೆಟ್ಟರ್‌ ಹೇಳಿದ್ದಾರೆ.

ಸೋಮವಾರ ಬೆಳಪು ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ, ಉಡುಪಿ ಜಿಲ್ಲೆಯ ಮೊದಲ ಆಮ್ಲಜನಕ ಉತ್ಪಾದನ ಘಟಕ ಮತ್ತು ಕೈಗಾರಿಕಾ ಪ್ರದೇಶದ ಮೂಲಸೌಕರ್ಯಗಳ ಬಗ್ಗೆ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು. ಇದಕ್ಕೆ ಮುನ್ನ ನಂದಿಕೂರಿನ ಕೈಗಾರಿಕಾ ಪ್ರದೇಶಕ್ಕೆ ಭೇಟಿ ನೀಡಿ ಕೈಗಾರಿಕೋದ್ಯಮಿಗಳು, ಗ್ರಾ.ಪಂ. ಅಧ್ಯಕ್ಷ ರೊಂದಿಗೆ ಸಂವಹನ ನಡೆಸಿದರು.
ಬೆಂಗಳೂರಿನಾಚೆ ಕೈಗಾರಿಕೆಗಳನ್ನು ಬೆಳೆಸಲು ಸರಕಾರ ಸಾಕಷ್ಟು ಪ್ರೋತ್ಸಾಹ ನೀಡುತ್ತಿದೆ.

ಪಡುಬಿದ್ರಿಯಲ್ಲಿ ಮಾತನಾಡಿದ ಜಗದೀಶ ಶೆಟ್ಟರ್‌, ಸ್ಥಳೀಯ ಗ್ರಾ.ಪಂ.ಗಳಿಗೆ ಆಯಾ ಕೈಗಾರಿಕಾ ಪ್ರದೇಶಗಳಲ್ಲಿರುವ ಘಟಕಗಳಿಂದ ತೆರಿಗೆ ಬಾಕಿ ಇರುವ ಸಮಸ್ಯೆ ರಾಜ್ಯವ್ಯಾಪಿಯಾಗಿ ಇದೆ. ಈ ಬಗ್ಗೆ ಏಕರೂಪದ ಪರಿಹಾರ ರೂಪಿಸಲು ಶೀಘ್ರದಲ್ಲೇ ಕೈಗಾರಿಕಾ ಇಲಾಖೆ, ನಗರಾಭಿವೃದ್ಧಿ ಇಲಾಖೆ ಮತ್ತು ಗ್ರಾಮೀಣಾಭಿವೃದ್ಧಿ ಇಲಾಖೆ ಮಟ್ಟದಲ್ಲಿ ಜಂಟಿ ಸಭೆ ನಡೆಸಿ ಶೀಘ್ರವಾಗಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಬೃಹತ್‌ ಉದ್ದಿಮೆಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಒದಗಿಸಿ ಕೊಡಲು ಸರಕಾರ ಬದ್ಧವಾಗಿದೆ. ಉದ್ದಿಮೆಗೆ ಪರವಾನಿಗೆ ನೀಡುವಾಗ ಸ್ತರ -1, ಸ್ತರ-2 ಉದ್ಯೋಗಗಳಲ್ಲಿ ಶೇ. 80ರಷ್ಟು ಮತ್ತು ಸ್ತರ -3, ಸ್ತರ-4 ಉದ್ಯೋಗಗಳಲ್ಲಿ ಶೇ. 100ರಷ್ಟು ಸ್ಥಳೀಯರಿಗೆ ನೀಡಲು ಒಪ್ಪಂದದಲ್ಲಿಯೇ ಸೂಚನೆ ನೀಡಲಾಗುತ್ತಿದೆ. ಇದನ್ನು ಉಲ್ಲಂ ಸುವ ಉದ್ದಿಮೆಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಆತ್ಮೀಯ ಓದುಗರೇ,ಪಾರದರ್ಶಕ ಸುದ್ದಿಗಳು ನಿಮಗೆ ನಿರಂತರ ತಲುಪಲು ನಿಮ್ಮ ಸಹಾಯ ಅತೀ ಅಗತ್ಯ. ಸತ್ಯ ಎಲ್ಲೆಡೆ ತಲುಪಲು ನಮ್ಮೊಂದಿಗೆ ಕೈ ಜೋಡಿಸಿ. ನಮ್ಮನ್ನು ಬೆಂಬಲಿಸಲು

Hot Topics

ಸಕಲ ಜೀವಾತ್ಮಗಳಿಗೆ ಪ್ರವಾದಿ ಅತ್ಯುತ್ತಮ ಮಾದರಿ:- ಕರಿ ಬಸವಶ್ರೀ

ತಾವರಗೇರಾ. ಜಮಾತೇ ಇಸ್ಲಾಮಿ ಹಿಂದ್ ವತಿಯಿಂದ ಪತ್ರಿವರ್ಷದಂತೆ ಈ ವರ್ಷವುಕೂಡ ಅಕ್ಟೂಬರ್ 17 ರಿಂದ 26 ರ ವರೆಗೆ “ಪ್ರವಾದಿ ಮಹಮ್ಮದ್ (ಸ) ಅತ್ಯುತ್ತಮ ಮಾದರಿ” ಎಂಬ ಧ್ಯೇಯ ವಾಕ್ಯದಡಿಯಲ್ಲಿ ರಾಜ್ಯವ್ಯಾಪ್ತಿ ನಡೆಯುತ್ತಿರುವ...

ನಮ್ಮ ನಾಡ ಒಕ್ಕೂಟ ಉಡುಪಿ ಘಟಕ ಮತ್ತು ಮಸ್ಜಿದ್ ಎ ನೂರುಲ್ ಇಸ್ಲಾಮ್ ಆದಿಉಡುಪಿ ವತಿಯಿಂದ ಆಯುಷ್ಮಾನ್ ಕಾರ್ಡ್ ಹಾಗೂ ವಿದ್ಯಾರ್ಥಿವೇತನ ಶಿಬಿರ

ದಿನಾಂಕ 24 ಅಕ್ಟೊಬರ್ 2021, ಆದಿತ್ಯವಾರ: ಚಿಕಿತ್ಸೆಯ ಸಂಕಷ್ಟದ ಸನ್ನಿವೇಶದಲ್ಲಿ ಆತ್ಮವಿಶ್ವಾಸ ತುಂಬಲು ಹಾಗೂ ಶೈಕ್ಷಣಿಕ ರಂಗದಲ್ಲಿ ಪ್ರೇರಣೆ ನೀಡುವ ಉದ್ದೇಶದಿಂದ ಇಂದು ನಮ್ಮ ನಾಡ ಒಕ್ಕೂಟ ಉಡುಪಿ ತಾಲೂಕು ಘಟಕದ ವತಿಯಿಂದ...

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷರಿಂದ ಪಕ್ಷದ ಉಳ್ಳಾಲ ನಗರ ಸಮಿತಿ ವತಿಯಿಂದ ಸ್ಥಾಪಿಸಿದ ನಾಗರಿಕ ಸೇವಾ ಕೇಂದ್ರ ಮತ್ತು ಪಕ್ಷದ ಕಚೇರಿಯ ಉದ್ಘಾಟನೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಮಂಗಳೂರು, ಅ. 24: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರಾದ್ಯಂತ ತನ್ನ ಪಕ್ಷಕ್ಕೆ ಸದಸ್ಯತ್ವ ಸೇರ್ಪಡೆಯ ಬೃಹತ್ ಅಭಿಯಾನವನ್ನು ಇದೇ ಕಳೆದ ಅಕ್ಟೋಬರ್ 15 ರಿಂದ ಈ ತಿಂಗಳ ಕೊನೆಯವರೆಗೂ ಅಂದರೆ ಅಕ್ಟೋಬರ್...

Related Articles

ಸಕಲ ಜೀವಾತ್ಮಗಳಿಗೆ ಪ್ರವಾದಿ ಅತ್ಯುತ್ತಮ ಮಾದರಿ:- ಕರಿ ಬಸವಶ್ರೀ

ತಾವರಗೇರಾ. ಜಮಾತೇ ಇಸ್ಲಾಮಿ ಹಿಂದ್ ವತಿಯಿಂದ ಪತ್ರಿವರ್ಷದಂತೆ ಈ ವರ್ಷವುಕೂಡ ಅಕ್ಟೂಬರ್ 17 ರಿಂದ 26 ರ ವರೆಗೆ “ಪ್ರವಾದಿ ಮಹಮ್ಮದ್ (ಸ) ಅತ್ಯುತ್ತಮ ಮಾದರಿ” ಎಂಬ ಧ್ಯೇಯ ವಾಕ್ಯದಡಿಯಲ್ಲಿ ರಾಜ್ಯವ್ಯಾಪ್ತಿ ನಡೆಯುತ್ತಿರುವ...

ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ ರೋಹ್‌ ಟೇ-ವೊ ನಿಧನ

ಸೋಲ್‌ (ಅ.26):ಅನಾರೋಗ್ಯದಿಂದ ಬಳಳುತ್ತಿದ್ದ ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ ರೋಹ್ ಟೇ-ವೂ (88) ನಿಧನರಾಗಿದ್ದಾರೆ ಎಂದು ಸೋಲ್‌ನ ನ್ಯಾಷನಲ್ ಯುನಿವರ್ಸಿಟಿ ಆಸ್ಪತ್ರೆ ತಿಳಿಸಿದೆ.1979ರ ಮಿಲಿಟರಿ ದಂಗೆಯನ್ನು ಬೆಂಬಲಿಸಿದ್ದ ರೋಹ್‌, ಸೋಲ್‌ನಲ್ಲಿ ಸೇನಾ ವಿಭಾಗವನ್ನು...

2022 ರ ಚುನಾವಣೆ ಕುರಿತು ಚರ್ಚೆಗೆ ಕಾಂಗ್ರೆಸ್ ಅದಿನಾಯಕಿ ಸೋನಿಯಾ ಗಾಂಧಿ ಸಭೆ

ನವದೆಹಲಿ,(ಅ.26): ಮುಂಬರುವ 2022ರ ವಿಧಾನಸಭೆ ಚುನಾವಣೆಗಳ ಕುರಿತು ಚರ್ಚಿಸುವುದಕ್ಕೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಮಂಗಳವಾರ ಪಕ್ಷದ ಹಿರಿಯ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ್, ಮಣಿಪುರ ಮತ್ತು...
Translate »
error: Content is protected !!