ಮೋಹನ್ ಭಾಗವತ್ ಹೇಳಿದ ಮಾತುಗಳು – ಸಂಘಪರಿವಾರದ ವಲಯದಲ್ಲಿ ಸಂಚಲನ!

ಆರ್.ಎಸ್.ಎಸ್ ಸರ ಸಂಚಾಲಕ ಭಾನುವಾರ ಮುಸ್ಲಿಂ ರಾಷ್ಟ್ರೀಯ ಮಂಚ್ ಆಯೋಜಿಸಿದ ಕಾರ್ಯಕ್ರಮದಲ್ಲಿ ಎಲ್ಲ ಭಾರತೀಯರ ಡಿ.ಎನ್.ಎ ಒಂದೇ ಎಂದು ಹೇಳಿಕೆ ನೀಡಿರುವುದು ಇದೀಗ ಸಂಘ ಪರಿವಾರದ ಅಂತರಿಕ ವಲಯದಲ್ಲೇ ಪರ-ವಿರೋಧ ಚರ್ಚೆಗೆ ನಾಂದಿ ಹಾಡಿದೆ.

ಸಾಮಾಜಿಕ ಜಾಲತಾಣದಲ್ಲಿ ಸ್ವತಃ ಸಂಘಪರಿವಾರದ ಕಾರ್ಯಕರ್ತರು ಈ ಹೇಳಿಕೆಯ ಕುರಿತು ವಿಭಿನ್ನವಾದ ನಿಲುವನ್ನು ವ್ಯಕ್ತಪಡಿಸುತ್ತಿದ್ದಾರೆ. ಕ್ಲಬ್ ಹೌಸ್ ಒಂದರಲ್ಲಿ ಹಿಂದು, ಮುಸ್ಲಿಂ ಮತ್ತು ಕ್ರೈಸ್ತರ ಡಿ.ಎನ್.ಎ ಒಂದೇನಾ ಎಂಬ ಚರ್ಚೆಯೂ ಕೂಡ ನಡೆದಿದ್ದು ಇದರಲ್ಲಿ ಸಂಘಪರಿವಾರದ ಕಾರ್ಯಕರ್ತರು ಹಲವು ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.ಕೆಲವರು ಮುಸ್ಲಿಮರು, ಕ್ರೈಸ್ತರು ಈ ಮುಂಚೆ ಹಿಂದುಗಳಾಗಿದ್ದರು ಅವರು ಮತಾಂತರ ಹೊಂದಿದ್ದಾರೆ ಅವರನ್ನು ಮುಖ್ಯವಾಹಿನಿಗೆ ತರಬೇಕಾದ ಕೆಲಸವಾಗಬೇಕಾಗಿದೆ ಆ ನಿಟ್ಟಿನಲ್ಲಿ ಈ ಹೇಳಿಕೆ ಸಮಂಜಸ ಎಂದು ಹೇಳಿದರೆ ಇನ್ನು ಕೆಲವರು ಈ ಅಭಿಪ್ರಾಯಕ್ಕೆ ವಿರೋಧ ವ್ಯಕ್ತಪಡಿಸುತ್ತಾ ಇಷ್ಟು ದಿನ ನಾವು ದೂರ ಇದ್ದು ಇದೀಗ ಯಾಕೆ ಈ ರೀತಿಯ ಹೇಳಿಕೆ ನೀಡಲಾಗುತ್ತಿದೆ ಎಂಬ ಚರ್ಚೆಗಳು ನಡೆದಿದೆ. ಈ ಚರ್ಚೆಯಲ್ಲಿ ಮುಸ್ಲಿಮರ ಜನಸಂಖ್ಯೆ ನಿಯಂತ್ರಣದ ಕುರಿತು ಕಠಿಣ ಕಾನೂನು ತರಬೇಕೆಂದು ಆಗ್ರಹಿಸಲಾಗಿದೆ.

ಮೋಹನ್ ಭಾಗವತ್ ಅವರು ಗೋಹತ್ಯೆ ಹೆಸರಿನಲ್ಲಿ ಗುಂಪು ಹಲ್ಲೆ ನಡೆಸುವವರು ಹಿಂದುತ್ವವಾದಿಗಳಲ್ಲ ಎಂಬ ಹೇಳಿಕೆ ಕೂಡ ಇದೀಗ ಸಂಘಪರಿವಾರಕ್ಕೆ ಇರಿಸು ಮುರಿಸು ಮಾಡಿರುವುದು ಸುಳ್ಳಲ್ಲ. ಬಹಳಷ್ಟು ಸಂಘಪರಿವಾರದ ನಾಯಕರು ವಿಭಜನಕಾರಿ ಭಾಷಣಗಳನ್ನು, ದ್ವೇಷ ಪೂರಿತ ಭಾಷಣಗಳನ್ನು ನಡೆಸಿ ಪ್ರಕರಣಗಳನ್ನು ತಲೆ ಮೇಲೆ ಎಳೆದುಕೊಂಡು ಓಡಾಡುತ್ತಿರುವ ಈ ಸಂದರ್ಭದಲ್ಲಿ ಈ ಹೇಳಿಕೆ ಸಂಘಪರಿವಾರದ ಕಾರ್ಯಕರ್ತರಿಗೆ ಸಿಡಿಲು ಬಡಿದ ಅನುಭವ ನೀಡಿದೆ. ಹಿಂದು-ಮುಸ್ಲಿಮ್ ಸಂಘರ್ಷವನ್ನು ದೂರೀಕರಿಸಲು ಮಾತುಕತೆ ಅತೀ ಅಗತ್ಯ ಎಂದಿರುವ ಮೋಹನ್ ಭಾಗವತ್ ಹೇಳಿಕೆ ಬಿಜೆಪಿಯಲ್ಲಿ ಹಾರ್ಡ್’ಕೋರ್ ಹಿಂದುತ್ವವಾದಿಗಳಿಗೆ ಚುಚ್ಚಿದಂತಾಗಿದೆ. ಆ ಕಾರಣಕ್ಕಾಗಿ ಈ ಹೇಳಿಕೆಗಳ ವಿರುದ್ಧ ಬಹಿರಂಗವಾಗಿ ಅಸಮಾಧಾನ ವ್ಯಕ್ತವಾಗುತ್ತಿದೆ.

ಆತ್ಮೀಯ ಓದುಗರೇ,ಪಾರದರ್ಶಕ ಸುದ್ದಿಗಳು ನಿಮಗೆ ನಿರಂತರ ತಲುಪಲು ನಿಮ್ಮ ಸಹಾಯ ಅತೀ ಅಗತ್ಯ. ಸತ್ಯ ಎಲ್ಲೆಡೆ ತಲುಪಲು ನಮ್ಮೊಂದಿಗೆ ಕೈ ಜೋಡಿಸಿ. ನಮ್ಮನ್ನು ಬೆಂಬಲಿಸಲು

Hot Topics

ಸೆ 27 ಭಾರತ್ ಬಂದ್ ಗೆ ವೆಲ್ಪೇರ್ ಪಾರ್ಟಿ ಉಡುಪಿ ಸಂಪೂರ್ಣ ಬೆಂಬಲ – ಅಬ್ದುಲ್ ಅಜೀಜ್

ಉಡುಪಿ: ಸೆಪ್ಟೆಂಬರ್ 27 ರಂದು ದೇಶಾದ್ಯಂತ ರೈತ ಸಂಘಟನೆಗಳು ಭಾರತ್ ಬಂದ್’ಗೆ ಕರೆ ನೀಡಿದೆ. ಈ ಹಿನ್ನಲೆಯಲ್ಲಿ ಉಡುಪಿ ನಗರದಲ್ಲಿ ವಿವಿಧ ಸಂಘಟನೆಗಳು ಸೇರಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಜಾಥ ಮತ್ತು...

ಬೈಂದೂರು:ಅಕ್ಷರ ದಾಸೋಹ ನೌಕರರ ಬೃಹತ್ ಪ್ರತಿಭಟನೆ

ಕೇಂದ್ರ ಯೋಜನೆ ಸ್ಕೀಮ್ ನೌಕರರನ್ನು ಖಾಯಂಗೊಳಿಸಿ,ಬಜೆಟ್ ನಲ್ಲಿ ಅನುದಾನ ಹೆಚ್ಚಳ ಮಾಡಬೇಕು.ಶಾಲೆಗಳಲ್ಲಿ ಗ್ರೂಪ್ "ಡಿ" ನೌಕರರು ಇಲ್ಲದಿರುವುದರಿಂದ ಈ ನೌಕರರಿಂದಲೇ ಶಾಲಾಸ್ವಚ್ಚತೆ,ಕೈತೋಟ ನಿವ೯ಹಣೆ,ಶಾಲಾ ಸಮಯದ ಗಂಟೆ ಬಾರಿಸುವುದು ಇನ್ನಿತರ ಕೆಲಸ ನೀಡಿ ಈ...

ಸೆಪ್ಟೆಂಬರ್ 27 ರಂದು ನಡೆಯುವ ರೈತ ಪರ ಹೋರಾಟದಲ್ಲಿ ಭಾಗವಹಿಸಲು ಸಾಲಿಡಾರಿಟಿ ಕರೆ

ಉಡುಪಿ: ಸೆಪ್ಟೆಂಬರ್ 27 ರಂದು ದೇಶಾದ್ಯಂತ ರೈತ ಸಂಘಟನೆಗಳು ಭಾರತ್ ಬಂದ್'ಗೆ ಕರೆ ನೀಡಿದೆ. ಈ ಹಿನ್ನಲೆಯಲ್ಲಿ ಉಡುಪಿ ನಗರದಲ್ಲಿ ವಿವಿಧ ಸಂಘಟನೆಗಳು ಸೇರಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಜಾಥ ಮತ್ತು...

Related Articles

ಕಾರ್ಕಳ ಕಾಂಗ್ರೆಸ್ ನಿಂದ ಸೆ.25 ರಂದು ಪಂಜಿನ ಮೆರವಣಿಗೆ

ರಾಜ್ಯದಲ್ಲಿ ಧಾರ್ಮಿಕ ಕೇಂದ್ರಗಳನ್ನು ತೆರವುಗೊಳಿಸುವ ನೆಪದಲ್ಲಿ ಪುರಾತನ ಶ್ರದ್ದಾ ಕೇಂದ್ರಗಳನ್ನು ದ್ವಂಸಗೊಳಿಸುತ್ತಿರುವ ಬಿಜೆಪಿ ಸರ್ಕಾರದ ನಡೆಯನ್ನು ವಿರೋಧಿಸಿ ಜನಜಾಗೃತಿಗಾಗಿ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಮತ್ತು ಕಾರ್ಕಳ ಯುವ ಕಾಂಗ್ರೆಸ್ ನೇತೃತ್ವದಲ್ಲಿ, ಕಾರ್ಕಳ...
Translate »
error: Content is protected !!