ಪುತ್ತೂರು: ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ಪ್ರಕರಣ: ಅಪರಾಧಿಗೆ ನಾಲ್ಕುವರೆ ವರ್ಷ ಜೈಲು ಶಿಕ್ಷೆ!

ಪುತ್ತೂರು : ಅಪ್ರಾಪ್ತೆಗೆ ಲೈಂಗಿಕ ಕಿರುಕುಳ ನೀಡಿದ ಅಪರಾಧಿಗೆ ಪುತ್ತೂರು ಪೋಕ್ಸೋ ವಿಶೇಷ ನ್ಯಾಯಾಲಯ ಹಾಗೂ 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನಾಲ್ಕುವರೆ ವರ್ಷ ಸಾದಾ ಸ್ವರೂಪದ ಶಿಕ್ಷೆ ಹಾಗೂ ರೂ. 16,000 ದಂಡ ವಿಧಿಸಿ ಇಂದು ( ಜುಲೈ 05) ಆದೇಶ ಹೊರಡಿಸಿದೆ. ಪುತ್ತೂರು ತಾಲೂಕಿನ ಒಳಮೊಗ್ರು ಗ್ರಾಮದ ಶಾಫಿ ಆಡ್ಕ ಅಲಿಯಾಸ್ ಇಬ್ರಾಹಿಂ ಇ.ಎ. ಶಿಕ್ಷೆಗೆ ಗುರಿಯಾದ ಅಪರಾಧಿಯಾಗಿದ್ದಾನೆ.

ಇಬ್ರಾಹಿಂ 10.02.2016 ರಂದು ಅಪ್ರಾಪ್ತೆ ಬಾಲಕಿಯ ಮನೆಗೆ ನುಗ್ಗಿ ಲೈಂಗಿಕ ಕಿರುಕುಳ ನೀಡಿದ್ದ. ಈ ಕುರಿತು ಸಂತ್ರಸ್ತೆ ಗ್ರಾಮಾಂತರ ಠಾಣೆಗೆ ದೂರು ನೀಡಿದ್ದಳು. ಬಾಲಕಿಯ ದೂರಿನ ಮೇರೆಗೆ ಪೊಲೀಸರು ಈತನ ವಿರುದ್ಧ ಐಪಿಸಿ ಸೆಕ್ಷನ್ 448, 354 ಮತ್ತು ಪೋಕ್ಸೋ ಕಾಯ್ದೆ ಕಲಂ 12 ರಡಿ ಎಫ್ ಐ ಆರ್ ದಾಖಲಿಸಿಕೊಂಡಿದ್ದರು. ಅಂದಿನ ಪುತ್ತೂರು ಗ್ರಾಮಾಂತರ ಠಾಣಾ ಪಿ.ಎಸ್.ಐ. ರವಿ ಬಿ.ಎಸ್. ರವರು ಆರೋಪಿ ವಿರುದ್ಧ ಸಮಗ್ರ ತನಿಖೆ ನಡೆಸಿ ಪೋಕ್ಸೋ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿ ಸಲ್ಲಿಸಿದ್ದರು. ಇದೀಗ ವಿಚಾರಣೆ ಅಂತ್ಯಗೊಳಿಸಿರುವ ನ್ಯಾಯಾಧೀಶ ರುಡಾಲ್ಫ್ ಪಿರೇರಾರವರು ಅಪರಾಧಿಗೆ ಶಿಕ್ಷೆ ಪ್ರಮಾಣ ಪ್ರಕಟಿಸಿದ್ದಾರೆ.

ಆರೋಪಿಗೆ ಐಪಿಸಿ ಸೆಕ್ಷನ್ 354 ರಡಿ ಅಪರಾಧಕ್ಕೆ 1 ವರ್ಷ ಸಾದಾ ಸ್ವರೂಪದ ಶಿಕ್ಷೆ ಮತ್ತು ರೂ. 5,000/- ದಂಡ, ದಂಡ ತೆರಲು ತಪ್ಪಿದ್ದಲ್ಲಿ 3 ತಿಂಗಳು ಸಾದಾ ಸ್ವರೂಪದ ಶಿಕ್ಷೆ, ಭಾ.ದಂ.ಸಂ. ಕಲಂ 448 ರಡಿ ಅಪರಾಧಕ್ಕೆ 6 ತಿಂಗಳು ಸಾದಾ ಸ್ವರೂಪದ ಶಿಕ್ಷೆ ಮತ್ತು ರೂ. 1,000/- ದಂಡ, ದಂಡ ತೆರಲು ತಪ್ಪಿದ್ದಲ್ಲಿ 1 ತಿಂಗಳ ಸಾದಾ ಸ್ವರೂಪದ ಶಿಕ್ಷೆ ಮತ್ತು ಕಲಂ 7, 8, 11, 12 ಷೋ ಕಾಯ್ದೆಯಡಿ ಅಪರಾಧಕ್ಕೆ 3 ವರ್ಷ ಸಾದಾ ಸ್ವರೂಪದ ಶಿಕ್ಷೆ ಮತ್ತು ರೂ. 10,000/- ದಂಡ, ದಂಡ ತೆರಲು ತಪ್ಪಿದಲ್ಲಿ 6 ತಿಂಗಳ ಸಾದಾ ಸ್ವರೂಪದ ಶಿಕ್ಷೆ ವಿಧಿಸಿ ತೀರ್ಪಿತ್ತಿದ್ದಾರೆ.

ಆತ್ಮೀಯ ಓದುಗರೇ,ಪಾರದರ್ಶಕ ಸುದ್ದಿಗಳು ನಿಮಗೆ ನಿರಂತರ ತಲುಪಲು ನಿಮ್ಮ ಸಹಾಯ ಅತೀ ಅಗತ್ಯ. ಸತ್ಯ ಎಲ್ಲೆಡೆ ತಲುಪಲು ನಮ್ಮೊಂದಿಗೆ ಕೈ ಜೋಡಿಸಿ. ನಮ್ಮನ್ನು ಬೆಂಬಲಿಸಲು

Hot Topics

ಸಕಲ ಜೀವಾತ್ಮಗಳಿಗೆ ಪ್ರವಾದಿ ಅತ್ಯುತ್ತಮ ಮಾದರಿ:- ಕರಿ ಬಸವಶ್ರೀ

ತಾವರಗೇರಾ. ಜಮಾತೇ ಇಸ್ಲಾಮಿ ಹಿಂದ್ ವತಿಯಿಂದ ಪತ್ರಿವರ್ಷದಂತೆ ಈ ವರ್ಷವುಕೂಡ ಅಕ್ಟೂಬರ್ 17 ರಿಂದ 26 ರ ವರೆಗೆ “ಪ್ರವಾದಿ ಮಹಮ್ಮದ್ (ಸ) ಅತ್ಯುತ್ತಮ ಮಾದರಿ” ಎಂಬ ಧ್ಯೇಯ ವಾಕ್ಯದಡಿಯಲ್ಲಿ ರಾಜ್ಯವ್ಯಾಪ್ತಿ ನಡೆಯುತ್ತಿರುವ...

ನಮ್ಮ ನಾಡ ಒಕ್ಕೂಟ ಉಡುಪಿ ಘಟಕ ಮತ್ತು ಮಸ್ಜಿದ್ ಎ ನೂರುಲ್ ಇಸ್ಲಾಮ್ ಆದಿಉಡುಪಿ ವತಿಯಿಂದ ಆಯುಷ್ಮಾನ್ ಕಾರ್ಡ್ ಹಾಗೂ ವಿದ್ಯಾರ್ಥಿವೇತನ ಶಿಬಿರ

ದಿನಾಂಕ 24 ಅಕ್ಟೊಬರ್ 2021, ಆದಿತ್ಯವಾರ: ಚಿಕಿತ್ಸೆಯ ಸಂಕಷ್ಟದ ಸನ್ನಿವೇಶದಲ್ಲಿ ಆತ್ಮವಿಶ್ವಾಸ ತುಂಬಲು ಹಾಗೂ ಶೈಕ್ಷಣಿಕ ರಂಗದಲ್ಲಿ ಪ್ರೇರಣೆ ನೀಡುವ ಉದ್ದೇಶದಿಂದ ಇಂದು ನಮ್ಮ ನಾಡ ಒಕ್ಕೂಟ ಉಡುಪಿ ತಾಲೂಕು ಘಟಕದ ವತಿಯಿಂದ...

ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷರಿಂದ ಪಕ್ಷದ ಉಳ್ಳಾಲ ನಗರ ಸಮಿತಿ ವತಿಯಿಂದ ಸ್ಥಾಪಿಸಿದ ನಾಗರಿಕ ಸೇವಾ ಕೇಂದ್ರ ಮತ್ತು ಪಕ್ಷದ ಕಚೇರಿಯ ಉದ್ಘಾಟನೆ ಹಾಗೂ ಸಾಧಕರಿಗೆ ಸನ್ಮಾನ ಕಾರ್ಯಕ್ರಮ

ಮಂಗಳೂರು, ಅ. 24: ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಷ್ಟ್ರಾದ್ಯಂತ ತನ್ನ ಪಕ್ಷಕ್ಕೆ ಸದಸ್ಯತ್ವ ಸೇರ್ಪಡೆಯ ಬೃಹತ್ ಅಭಿಯಾನವನ್ನು ಇದೇ ಕಳೆದ ಅಕ್ಟೋಬರ್ 15 ರಿಂದ ಈ ತಿಂಗಳ ಕೊನೆಯವರೆಗೂ ಅಂದರೆ ಅಕ್ಟೋಬರ್...

Related Articles

ಸಕಲ ಜೀವಾತ್ಮಗಳಿಗೆ ಪ್ರವಾದಿ ಅತ್ಯುತ್ತಮ ಮಾದರಿ:- ಕರಿ ಬಸವಶ್ರೀ

ತಾವರಗೇರಾ. ಜಮಾತೇ ಇಸ್ಲಾಮಿ ಹಿಂದ್ ವತಿಯಿಂದ ಪತ್ರಿವರ್ಷದಂತೆ ಈ ವರ್ಷವುಕೂಡ ಅಕ್ಟೂಬರ್ 17 ರಿಂದ 26 ರ ವರೆಗೆ “ಪ್ರವಾದಿ ಮಹಮ್ಮದ್ (ಸ) ಅತ್ಯುತ್ತಮ ಮಾದರಿ” ಎಂಬ ಧ್ಯೇಯ ವಾಕ್ಯದಡಿಯಲ್ಲಿ ರಾಜ್ಯವ್ಯಾಪ್ತಿ ನಡೆಯುತ್ತಿರುವ...

ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ ರೋಹ್‌ ಟೇ-ವೊ ನಿಧನ

ಸೋಲ್‌ (ಅ.26):ಅನಾರೋಗ್ಯದಿಂದ ಬಳಳುತ್ತಿದ್ದ ದಕ್ಷಿಣ ಕೊರಿಯಾದ ಮಾಜಿ ಅಧ್ಯಕ್ಷ ರೋಹ್ ಟೇ-ವೂ (88) ನಿಧನರಾಗಿದ್ದಾರೆ ಎಂದು ಸೋಲ್‌ನ ನ್ಯಾಷನಲ್ ಯುನಿವರ್ಸಿಟಿ ಆಸ್ಪತ್ರೆ ತಿಳಿಸಿದೆ.1979ರ ಮಿಲಿಟರಿ ದಂಗೆಯನ್ನು ಬೆಂಬಲಿಸಿದ್ದ ರೋಹ್‌, ಸೋಲ್‌ನಲ್ಲಿ ಸೇನಾ ವಿಭಾಗವನ್ನು...

2022 ರ ಚುನಾವಣೆ ಕುರಿತು ಚರ್ಚೆಗೆ ಕಾಂಗ್ರೆಸ್ ಅದಿನಾಯಕಿ ಸೋನಿಯಾ ಗಾಂಧಿ ಸಭೆ

ನವದೆಹಲಿ,(ಅ.26): ಮುಂಬರುವ 2022ರ ವಿಧಾನಸಭೆ ಚುನಾವಣೆಗಳ ಕುರಿತು ಚರ್ಚಿಸುವುದಕ್ಕೆ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷೆ ಸೋನಿಯಾ ಗಾಂಧಿಯವರು ಮಂಗಳವಾರ ಪಕ್ಷದ ಹಿರಿಯ ನಾಯಕರೊಂದಿಗೆ ಸಭೆ ನಡೆಸಲಿದ್ದಾರೆ. ಪಂಜಾಬ್, ಉತ್ತರ ಪ್ರದೇಶ, ಉತ್ತರಾಖಂಡ್, ಮಣಿಪುರ ಮತ್ತು...
Translate »
error: Content is protected !!