ಕವಿ ಸಿದ್ಧಲಿಂಗಯ್ಯ ನಿಧನಕ್ಕೆ ಸುಂದರ ಮಾಸ್ತರ್ ಸಂತಾಪ

ಉಡುಪಿ: ಬಂಡಾಯ ಕವಿ , ದಲಿತ ಚಳುವಳಿಗೆ ಕ್ರಾಂತಗೀತೆಯ ರಕ್ತದ ಜೀವಕೊಟ್ಟ , ಹೋರಾಟಕ್ಕೆ ಜನಪದ ಸೊಗಡಿನ ಗ್ರಾಮ ಭಾಷೆಯ ಕಿಚ್ಚು ಹೊತ್ತಿಸಿದ ದಲಿತರ ಸಾಕ್ಷೀ ಪ್ರಜ್ಞೆ , ದಲಿತ ಸಂಘರ್ಷ ಸಮಿತಿಯ ಹುಟ್ಟಿಗೆ ಕಾರಣೀಕರ್ತರಲ್ಲಿ ಒಬ್ಬರಾದ ಬಂಡಾಯ ಕವಿ ಡಾಕ್ಟರ್ ಸಿಧ್ಧಲಿಂಗಯ್ಯ ನಿಧನಕ್ಕೆ ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಾದ ) ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕರಾದ ಶ್ರೀ. ಸುಂಧರ ಮಾಸ್ತರ್ ಸಂತಾಪ ಸೂಚಿಸಿದ್ದಾರೆ.

ದಲಿತ ಚಳುವಳಿಗೆ ಹೋರಾಟ ಗೀತೆಯ ಹೊಸ ಭಾಷೆ ಬರೆದ ನಮ್ಮ ಮೇರು ಚಿಂತಕ ಇಂದು ನಮ್ಮನ್ನಗಲಿದ್ದಾರೆ.ನಮ್ಮ ಯಾವುದೇ ಕಾರ್ಯಕ್ರಮಕ್ಕೆ ಸಿಧ್ಧಲಿಂಗಯ್ಯ ನವರ ಕ್ರಾಂತಿ ಗೀತೆ ಇಲ್ಲದಿದ್ದರೆ ಅದು ಅಪೂರ್ಣ ಕಾರ್ಯಕ್ರಮ ಆಗುತ್ತಿತ್ತು. ನಮ್ಮ ಎಲ್ಲಾ ಕಾರ್ಯಕ್ರಮಗಳ ಆರಂಭ ಸಿಧ್ಧಲಿಂಗಯ್ಯ ನವರ ಕ್ರಾಂತಿಗೀತೆ ಮುಖಾಂತರವೇ ಪ್ರಾರಂಭವಾಗುವುದು ಎಂದರು.ಲಾಕ್ಡೌನ್ ಮುಗಿದ ತಕ್ಷಣ ಸಿಧ್ಧಲಿಂಗಯ್ಯ ನವರ ನುಡಿ ನಮನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಘಟನಾ ಸಂಚಾಲಕರಾದ ಶ್ರೀ. ಶ್ಯಾಮರಾಜ್ ಬಿರ್ತಿ , ಪರಮೇಶ್ವರ ಉಪ್ಪೂರು ,ಶ್ಯಾಮಸುಂದರ್ ತೆಕ್ಕಟ್ಟೆ , ಭಾಸ್ಕರ್ ಮಾಸ್ಟರ್ ಕುಂಜಿಬೆಟ್ಟು , ಮಂಜುನಾಥ್ ಬಾಳ್ಕುದ್ರು , ಶ್ರೀಧರ್ ಕುಂಜಿಬೆಟ್ಟು , ತಾಲೂಕು ಸಂಚಾಲಕರಾದ ಶ್ರೀ. ಶಂಕರ್ ದಾಸ್ ಚೆಂಡ್ಕಳ , ರಾಘವ ಕುಕುಜೆ , ವಿಠಲ ಉಚ್ಚಿಲ , ದೇವು ಹೆಬ್ರಿ , ನಾಗರಾಜ ಕುಂದಾಪುರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಆತ್ಮೀಯ ಓದುಗರೇ,ಪಾರದರ್ಶಕ ಸುದ್ದಿಗಳು ನಿಮಗೆ ನಿರಂತರ ತಲುಪಲು ನಿಮ್ಮ ಸಹಾಯ ಅತೀ ಅಗತ್ಯ. ಸತ್ಯ ಎಲ್ಲೆಡೆ ತಲುಪಲು ನಮ್ಮೊಂದಿಗೆ ಕೈ ಜೋಡಿಸಿ. ನಮ್ಮನ್ನು ಬೆಂಬಲಿಸಲು

Hot Topics

ಉಡುಪಿ: ರಾತ್ರಿ 10 ರಿಂದ ಬೆಳಿಗ್ಗೆ 5ರವರೆಗೆ ನೈಟ್ ಕರ್ಫ್ಯೂ!

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನಲೆ ರಾತ್ರಿ ಕರ್ಫ್ಯೂ ಜಾರಿ ಮಾಡಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಆದೇಶ ಹೊರಡಿಸಿದ್ದಾರೆ.ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಜಿಲ್ಲಾಧಿಕಾರಿ ಜಿ.ಜಗದೀಶ್...

ಉಡುಪಿ: ಅಪರಿಚಿತರು ಕಳುಹಿಸಿದ ಲಿಂಕ್ ಒತ್ತಿ ಹಣ ಕಳೆದುಕೊಂಡ ಪ್ರೊಫೆಸರ್!

ಉಡುಪಿ : ಅಪರಿಚರಿತರು ಕಳುಹಿಸಿದ ಬ್ಯಾಂಕ್‌ ಸಂಬಂಧಿಸಿದ ಸಂದೇಶಕ್ಕೆ ಸ್ಪಂದಿ️ಸಿದ ಅಸೋಸಿಯೇಟ್‌ ಪ್ರೊಫೆಸರ್‌ 67,000 ರೂ. ಕಳೆದುಕೊಂಡ ಪ್ರಕರಣ ಉಡುಪಿ ಠಾಣೆಯಲ್ಲಿ ದಾಖಲಾಗಿದೆ.ಕೆಎಂಸಿ ಫಾರ್ಮಕಾಲಜಿ ವಿಭಾಗದ ಅಸೋಸಿಯೇಟ್‌ ಪ್ರೊಫೆಸರ್‌ ಎ. ಮೋಹನ್ ಬಾಬು...

ಕೋಟ ಶ್ರೀನಿವಾಸ್ ಪೂಜಾರಿ, ಸುನೀಲ್ ಕುಮಾರ್ ಸಚಿವ ಸಂಪುಟದಲ್ಲಿ ಸ್ಥಾನ – ಇಲ್ಲಿದೆ 29 ಶಾಸಕರ ಹೆಸರು.

ಬೆಂಗಳೂರು: ಸಚಿವ ಸಂಪುಟದಲ್ಲಿ ಕರಾವಳಿ ಕರ್ನಾಟಕದ ಭಾಗದಿಂದ ಸುನೀಲ್ ಕುಮಾರ್, ಕೋಟಾ ಶ್ರೀನಿವಾಸ್ ಪೂಜಾರಿ, ಅಂಗಾರ ಅವರಿಗೆ ಅವಕಾಶ ಲಭ್ಯವಾಗಿದೆ. ಹಾಲಡಿ ಶ್ರೀನಿವಾಸ್ ಶೆಟ್ಟಿಯವರಿಗೆ ಮತ್ತೆ ನಿರಾಸೆಯಾಗಿದೆ. ಈ ಬಾರಿ ಉಪ...

Related Articles

Translate »
error: Content is protected !!