ಹಡಿಲು ಬಿದ್ದ ಕೃಷಿ ಭೂಮಿಯಲ್ಲಿ ಕೃಷಿ : ರಘುಪತಿ ಭಟ್ ಭಾಗವಹಿಸಿದ ಕಾರ್ಯಕ್ರಮದಲ್ಲಿ ಕೋವಿಡ್ ನಿಯಮ ಉಲ್ಲಂಘನೆ ಆರೋಪ

ಕೆಮ್ಮಣ್ಣು: ಉಡುಪಿ ಶಾಸಕರ ರಘುಪತಿ ಭಟ್ ಅವರ ಹಡಿಲು ಬಿದ್ದ ಕೃಷಿ ಭೂಮಿಯಲ್ಲಿ ನಾಟಿ ಮಾಡುವ ಕಾರ್ಯಕ್ರಮ ಕೆಮ್ಮಣ್ಣು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ನಡೆದಿದೆ. ಈ ಕಾರ್ಯಕ್ರಮ ಇದೀಗ ಚರ್ಚೆಗೆ ಗ್ರಾಸವಾಗಿದೆ.

“ಸರ್ಕಾರದ ನಿಯಮ ಪಾಲಿಸಬೇಕಾದವರೇ ನಿಯಮ ಉಲ್ಲಂಘನೆ ಮಾಡಿದ್ರೆ ಹೇಗೆ ಶಾಸಕರೇ? ಎಂದು ಸಾಮಾಜಿಕ ಜಾಲತಾಣಗಳಲ್ಲಿ ಈ ಕುರಿತು ಚರ್ಚೆ ವ್ಯಾಪಕವಾಗಿದೆ.

ಸರಕಾರ ಈಗಾಗಲೇ ಯಾವುದೇ ಸಮಾಜಿಕ, ರಾಜಕೀಯ ಕಾರ್ಯಕ್ರಮ ಮಾಡಲು ನಿರ್ಬಂಧ ಹೇರಿದೆ. ಆದರೆ ಶಾಸಕರು ಭಾಗವಹಿಸಿದ್ಧ ಕಾರ್ಯಕ್ರಮದಲ್ಲಿ ನಿಯಮ ಮೀರಿ ಜನ ಬಂದಿರುವ ವೀಡಿಯೋ ಇದೀಗ ವೈರಲಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಶಾಸಕರ ಕಾರ್ಯಕ್ರಮಕ್ಕೆ ಜನರ ಮಿತಿ ಇಲ್ಲ, ಸಾಮಾಜಿಕ ಅಂತರವೇ ಇರಲಿಲ್ಲ.

ಉಡುಪಿ ಶಾಸಕರ ರಘುಪತಿ ಭಟ್ ಅವರ, ಹಡಿಲು ಬಿದ್ದ ಕೃಷಿ ಭೂಮಿಯಲ್ಲಿ ನಾಟಿ ಮಾಡುವ ಕಾರ್ಯಕ್ರಮ ಆಯೋಜಿಸಲಾಗಿತ್ತು.ಉಡುಪಿಯ ಕೆಮ್ಮಣ್ಣು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮ ನಡೆದಿತ್ತು.

ಈ ಕಾರ್ಯಕ್ರಮದಲ್ಲಿ ಮಾಹಿತಿಯ ಪ್ರಕಾರ ಪಂಚಾಯತ್ ಸಿಇಒ ನವೀನ್ ಭಟ್, ಸೋದೆ ಮಠದ ಸ್ವಾಮಿಗಳು ಸಹಿತ ಸರ್ಕಾರಿ ಅಧಿಕಾರಿ ಭಾಗಿಯಾಗಿದ್ದರು.

ಕೆಮ್ಮಣ್ಣು ಗ್ರಾ ಪಂ ವ್ಯಾಪ್ತಿಯಲ್ಲಿ ಗ್ರಾಮ ಕಾರ್ಯಪಡೆ ಕೊರೋನಾ ತಡೆಗಟ್ಟಲು ಶ್ರಮಿಸುತ್ತಿದೆ. ಅ ಕಾರಣಗಳಿಂದ ಕೋವಿಡ್ ಹರಡುವಿಕೆ ಸಾಕಷ್ಟು ಹತೋಟಿಗೆ ಬಂದಿದೆ.ಇಂತಹ ಕಾರ್ಯಕ್ರಮಗಳಿಂದ ಕೊರೋನಾ ಇನ್ನಷ್ಟು ಹೆಚ್ಚಳವಾದರೇ ಅದಕ್ಕೆ ಖಂಡಿತವಾಗಿಯೂ ಈ ಕಾರ್ಯಕ್ರಮದ ರೂವಾರಿಗಳು ಹೊಣೆಯಾಗಬೇಕಾಗುತ್ತದೆ.ಗ್ರಾಮದಲ್ಲಿ ಸುಮಾರು 15 ಜನ ಒರಿಸ್ಸಾ ಮೂಲದ ವಲಸೆ ಕಾರ್ಮಿಕರಲ್ಲಿ ಕೊರೊನಾ ಕಾಣಿಸಿಕೊಂಡಿತ್ತು. ಅದರಿಂದಾಗಿ ಮೀನು ಕಟ್ಟಿಂಗ್ ಸೆಂಟರ್ ಅನ್ನು ಬಂದ್ ಮಾಡಿ ಕಂಟೋನ್ಮೆಂಟ್ ಝೋನ್ ಅಂತ ಮಾಡಲಾಗಿತ್ತು. ಇಂದು ಗದ್ದೆಯ ನಾಟಿ ಕೆಲಸಕ್ಕೆ ಅಂತಹುದೇ ವಲಸೆ ಕಾರ್ಮಿಕರಾದ ಸುಮಾರು 50 ಮಹಿಳೆಯರನ್ನು ಬಳಸಲಾಗಿದೆ. ಇನ್ನು ಈ ಕೃಷಿ ಭೂಮಿಯಲ್ಲಿ ಈ ಮುಂಚಿನಿಂದಲೂ ಕೃಷಿ ಮಾಡಲಾಗುತ್ತಿದ್ದು ಹಡಿಲು ಬಿದ್ದಿರಲಿಲ್ಲ ಎಂದೂ ಹೇಳಲಾಗುತ್ತಿದೆ.

ಆತ್ಮೀಯ ಓದುಗರೇ,ಪಾರದರ್ಶಕ ಸುದ್ದಿಗಳು ನಿಮಗೆ ನಿರಂತರ ತಲುಪಲು ನಿಮ್ಮ ಸಹಾಯ ಅತೀ ಅಗತ್ಯ. ಸತ್ಯ ಎಲ್ಲೆಡೆ ತಲುಪಲು ನಮ್ಮೊಂದಿಗೆ ಕೈ ಜೋಡಿಸಿ. ನಮ್ಮನ್ನು ಬೆಂಬಲಿಸಲು

Hot Topics

ಸೆ 27 ಭಾರತ್ ಬಂದ್ ಗೆ ವೆಲ್ಪೇರ್ ಪಾರ್ಟಿ ಉಡುಪಿ ಸಂಪೂರ್ಣ ಬೆಂಬಲ – ಅಬ್ದುಲ್ ಅಜೀಜ್

ಉಡುಪಿ: ಸೆಪ್ಟೆಂಬರ್ 27 ರಂದು ದೇಶಾದ್ಯಂತ ರೈತ ಸಂಘಟನೆಗಳು ಭಾರತ್ ಬಂದ್’ಗೆ ಕರೆ ನೀಡಿದೆ. ಈ ಹಿನ್ನಲೆಯಲ್ಲಿ ಉಡುಪಿ ನಗರದಲ್ಲಿ ವಿವಿಧ ಸಂಘಟನೆಗಳು ಸೇರಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಜಾಥ ಮತ್ತು...

ಬೈಂದೂರು:ಅಕ್ಷರ ದಾಸೋಹ ನೌಕರರ ಬೃಹತ್ ಪ್ರತಿಭಟನೆ

ಕೇಂದ್ರ ಯೋಜನೆ ಸ್ಕೀಮ್ ನೌಕರರನ್ನು ಖಾಯಂಗೊಳಿಸಿ,ಬಜೆಟ್ ನಲ್ಲಿ ಅನುದಾನ ಹೆಚ್ಚಳ ಮಾಡಬೇಕು.ಶಾಲೆಗಳಲ್ಲಿ ಗ್ರೂಪ್ "ಡಿ" ನೌಕರರು ಇಲ್ಲದಿರುವುದರಿಂದ ಈ ನೌಕರರಿಂದಲೇ ಶಾಲಾಸ್ವಚ್ಚತೆ,ಕೈತೋಟ ನಿವ೯ಹಣೆ,ಶಾಲಾ ಸಮಯದ ಗಂಟೆ ಬಾರಿಸುವುದು ಇನ್ನಿತರ ಕೆಲಸ ನೀಡಿ ಈ...

ಸೆಪ್ಟೆಂಬರ್ 27 ರಂದು ನಡೆಯುವ ರೈತ ಪರ ಹೋರಾಟದಲ್ಲಿ ಭಾಗವಹಿಸಲು ಸಾಲಿಡಾರಿಟಿ ಕರೆ

ಉಡುಪಿ: ಸೆಪ್ಟೆಂಬರ್ 27 ರಂದು ದೇಶಾದ್ಯಂತ ರೈತ ಸಂಘಟನೆಗಳು ಭಾರತ್ ಬಂದ್'ಗೆ ಕರೆ ನೀಡಿದೆ. ಈ ಹಿನ್ನಲೆಯಲ್ಲಿ ಉಡುಪಿ ನಗರದಲ್ಲಿ ವಿವಿಧ ಸಂಘಟನೆಗಳು ಸೇರಿ ರೈತರ ಹೋರಾಟಕ್ಕೆ ಬೆಂಬಲ ಸೂಚಿಸಿ ಜಾಥ ಮತ್ತು...

Related Articles

Translate »
error: Content is protected !!