ಜೂ.14 ರಂದು ವಿಶ್ವಸಂಸ್ಥೆ ಸಮಾವೇಶದಲ್ಲಿ ಮೋದಿ ಭಾಷಣ

ವಿಶ್ವಸಂಸ್ಥೆ (ಜೂ.11): ವಿಶ್ವಸಂಸ್ಥೆಯು ವರ್ಚುವಲ್ ವಿಧಾನದ ಮೂಲಕ ಜೂನ್‌ 14ರಂದು ಆಯೋಜಿಸಿರುವ ಉನ್ನತ ಮಟ್ಟದ ಸಂವಾದ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ.ವಿಶ್ವಸಂಸ್ಥೆಯ 75ನೇ ಸಾಮಾನ್ಯಸಭೆಯ ಅಧ್ಯಕ್ಷರಾದ ವೋಲ್ಕನ್‌ ಬೊಜ್ಕಿರ್ ಅವರು ಈ ಕಾರ್ಯಕ್ರಮ ಆಯೋಜಿಸಿದ್ದಾರೆ

ಪ್ರಧಾನಿ ಮೋದಿ ಅವರು ‘ಮರುಭೂಮೀಕರಣ ವಿರುದ್ಧ ಹೋರಾಟದ ವಿಶ್ವಸಂಸ್ಥೆಯ ಸಮಾವೇಶ’ದ (ಯುಎನ್‌ಸಿಸಿಡಿ) 14ನೇ ಅಧಿವೇಶನದ ಅಧ್ಯಕ್ಷರಾಗಿದ್ದಾರೆ. ಈ ಅಧಿವೇಶನಕ್ಕೆ ಮೋದಿ ಅವರು 2019ರ ಸೆಪ್ಟೆಂಬರ್‌ನಲ್ಲಿ ಚಾಲನೆ ನೀಡಿದ್ದರು.

ವಿಶ್ವಸಂಸ್ಥೆಯ ಉಪ ಪ್ರಧಾನ ಕಾರ್ಯದರ್ಶಿ ಅಮೀನಾ ಮೊಹಮ್ಮದ್‌, ಯುಎನ್‌ಸಿಸಿಡಿಯ ಕಾರ್ಯನಿರ್ವಾಹಕ ಕಾರ್ಯದರ್ಶಿ ಇಬ್ರಾಹಿಂ ಥಾಯ್ವ್ ಸಹ ಈ ಕಾರ್ಯಕ್ರಮವನ್ನು ಉದ್ಧೇಶಿಸಿ ವಿಚಾರ ಮಂಡನೆ ಮಾಡುವರು.

ಆತ್ಮೀಯ ಓದುಗರೇ,ಪಾರದರ್ಶಕ ಸುದ್ದಿಗಳು ನಿಮಗೆ ನಿರಂತರ ತಲುಪಲು ನಿಮ್ಮ ಸಹಾಯ ಅತೀ ಅಗತ್ಯ. ಸತ್ಯ ಎಲ್ಲೆಡೆ ತಲುಪಲು ನಮ್ಮೊಂದಿಗೆ ಕೈ ಜೋಡಿಸಿ. ನಮ್ಮನ್ನು ಬೆಂಬಲಿಸಲು

Hot Topics

ಉಡುಪಿ: ರಾತ್ರಿ 10 ರಿಂದ ಬೆಳಿಗ್ಗೆ 5ರವರೆಗೆ ನೈಟ್ ಕರ್ಫ್ಯೂ!

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನಲೆ ರಾತ್ರಿ ಕರ್ಫ್ಯೂ ಜಾರಿ ಮಾಡಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಆದೇಶ ಹೊರಡಿಸಿದ್ದಾರೆ.ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಜಿಲ್ಲಾಧಿಕಾರಿ ಜಿ.ಜಗದೀಶ್...

ಉಡುಪಿ: ಅಪರಿಚಿತರು ಕಳುಹಿಸಿದ ಲಿಂಕ್ ಒತ್ತಿ ಹಣ ಕಳೆದುಕೊಂಡ ಪ್ರೊಫೆಸರ್!

ಉಡುಪಿ : ಅಪರಿಚರಿತರು ಕಳುಹಿಸಿದ ಬ್ಯಾಂಕ್‌ ಸಂಬಂಧಿಸಿದ ಸಂದೇಶಕ್ಕೆ ಸ್ಪಂದಿ️ಸಿದ ಅಸೋಸಿಯೇಟ್‌ ಪ್ರೊಫೆಸರ್‌ 67,000 ರೂ. ಕಳೆದುಕೊಂಡ ಪ್ರಕರಣ ಉಡುಪಿ ಠಾಣೆಯಲ್ಲಿ ದಾಖಲಾಗಿದೆ.ಕೆಎಂಸಿ ಫಾರ್ಮಕಾಲಜಿ ವಿಭಾಗದ ಅಸೋಸಿಯೇಟ್‌ ಪ್ರೊಫೆಸರ್‌ ಎ. ಮೋಹನ್ ಬಾಬು...

ಕೋಟ ಶ್ರೀನಿವಾಸ್ ಪೂಜಾರಿ, ಸುನೀಲ್ ಕುಮಾರ್ ಸಚಿವ ಸಂಪುಟದಲ್ಲಿ ಸ್ಥಾನ – ಇಲ್ಲಿದೆ 29 ಶಾಸಕರ ಹೆಸರು.

ಬೆಂಗಳೂರು: ಸಚಿವ ಸಂಪುಟದಲ್ಲಿ ಕರಾವಳಿ ಕರ್ನಾಟಕದ ಭಾಗದಿಂದ ಸುನೀಲ್ ಕುಮಾರ್, ಕೋಟಾ ಶ್ರೀನಿವಾಸ್ ಪೂಜಾರಿ, ಅಂಗಾರ ಅವರಿಗೆ ಅವಕಾಶ ಲಭ್ಯವಾಗಿದೆ. ಹಾಲಡಿ ಶ್ರೀನಿವಾಸ್ ಶೆಟ್ಟಿಯವರಿಗೆ ಮತ್ತೆ ನಿರಾಸೆಯಾಗಿದೆ. ಈ ಬಾರಿ ಉಪ...

Related Articles

ಕೋವಿಡ್ ಸಂಕಷ್ಟ ನಿರ್ವಹಣೆಗೆ ನೋಟು ಮುದ್ರಣ ಇಲ್ಲ :ಸಚಿವೆ ನಿರ್ಮಲ

ನವದೆಹಲಿ(ಜು,27): ಕೋವಿಡ್‌-19ನಿಂದಾಗಿ ದೇಶ ಎದುರಿಸುತ್ತಿರುವ ಸಮಸ್ಯೆ ಪರಿಹಾರಕ್ಕಾಗಿ ನೋಟು ಮುದ್ರಿಸುವ ಯಾವುದೇ ಪ್ರಸ್ತಾಪ ಇಲ್ಲ ಎಂದು ಸಚಿವೆ ನಿರ್ಮಲ ತಿಳಿಸಿದ್ದಾರೆ.ಕೋವಿಡ್‌ನಿಂದಾಗಿ ಎದುರಾಗಿರುವ ಸಂಕಷ್ಟಗಳ ನಿವಾರಣೆ ಮತ್ತು ಉದ್ಯೋಗಳನ್ನು ಉಳಿಸುವ ಸಲುವಾಗಿ ಹೆಚ್ಚೆಚ್ಚು ನೋಟುಗಳನ್ನು...

ಮತ್ತೆ ಸೋಂಕಿನಲ್ಲಿ ಏರಿಕೆಯಾಗುವ ಸಾಧ್ಯತೆ – ಸಂಶೋಧಕರ ಎಚ್ಚರಿಕೆ!

ನವದೆಹಲಿ: ದೇಶದಲ್ಲಿ ಕೋವಿಡ್ -19 ಸೋಂಕು ಮತ್ತೆ ಏರಿಕೆಯನ್ನು ಕಾಣುವ ಸಾಧ್ಯತೆಯಿದೆ. ಈ ಅಲೆಯು ಹೆಚ್ಚು ದೊಡ್ಡದಾಗಿರದಿದ್ದರೂ ಅಕ್ಟೋಬರ್‌ನಲ್ಲಿ ಉತ್ತುಂಗಕ್ಕೇರುವ ಸಾಧ್ಯತೆಯ ಕುರಿತು ಸಂಶೋಧಕರು ಅಂದಾಜಿಸಿದ್ದಾರೆ.ಈ ತಿಂಗಳಲ್ಲಿ ಸೋಂಕು ಏಕಾಏಕಿ ಏರಿಕೆಯಾಗುತ್ತಿರುವುದನ್ನು ಗಮನಿಸಬಹುದಾಗಿದೆ....

ಪೆಗಾಸಸ್ ವಿವಾದ: ಮುಂದಿನ ವಾರ ಸುಪ್ರೀಮ್ ಅರ್ಜಿ ವಿಚಾರಣೆ

ನವದೆಹಲಿ: ಪೆಗಾಸಸ್ ಗೂಢಚರ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನ ನಿವೃತ್ತ ಅಥವಾ ಹಾಲಿ ನ್ಯಾಯಾಧೀಶರಿಂದ ಸ್ವತಂತ್ರ ತನಿಕೆಗೆಗೆ ನಿರ್ದೇಶನ ಕೋರಿ ಸಲ್ಲಿಸಿದ್ದ ಅರ್ಜಿ ಮುಂದಿನ ವಾರ ಸುಪ್ರೀಂ ಕೋರ್ಟ್ ನಲ್ಲಿ ವಿಚಾರಣೆಗೆ ಬರುವ...
Translate »
error: Content is protected !!