ದುಬೈ ನಲ್ಲಿ ವರ್ಣರಂಜಿತ ಕ್ರಿಕೆಟ್ ಹಬ್ಬ ಯುನೈಟೆಡ್ ಪ್ರೀಮಿಯರ್ ಲೀಗ್-2021

ದುಬೈ ನ ಪ್ರತಿಷ್ಠಿತ ಸಂಸ್ಥೆ River Valley ಮುಖ್ಯಸ್ಥರಾದ ಮಿ.ರಫೀಕ್ ಇವರ ಪ್ರಮುಖ ಪ್ರಾಯೋಜಕತ್ವದಲ್ಲಿ,
ಸಲ್ಮಾನ್,ರೆಹಮತ್ ಹೊನ್ನಾಳ,M.H.T ಹಾಗೂ ಈಶಾಮ್ ಇವರೆಲ್ಲರ ಮುಂದಾಳತ್ವದಲ್ಲಿ ಜೂನ್ 17 ರಂದು ದುಬೈ ಸ್ಕೌಟ್ ಮಿಷನ್ ಮೈದಾನದಲ್ಲಿ ಅದ್ಧೂರಿಯ ಯುನೈಟೆಡ್ ಪ್ರೀಮಿಯರ್ ಲೀಗ್-2021 40 ಗಜಗಳ ಹೊನಲು ಬೆಳಕಿನ ರಾಜ್ಯಮಟ್ಟದ ಕ್ರಿಕೆಟ್ ಪಂದ್ಯಾಟ ಆಯೋಜಿಸಲಾಗಿದೆ.

ಲೀಗ್ ಕಮ್ ನಾಕೌಟ್ ಮಾದರಿಯಲ್ಲಿ ಪಂದ್ಯಾಟ ಮೂಡಿಬರಲಿದ್ದು,5 ಓವರ್ ನ 12 ರೋಚಕ ಹಣಾಹಣಿಗಳು ನಡೆಯಲಿದೆ.ನಿಗದಿತ 9 ತಂಡಗಳಿಗಷ್ಟೇ ಭಾಗವಹಿಸಲು ಅವಕಾಶವಿದ್ದು,ಪ್ರವೇಶ ದರ 400 A.E.D ಹಾಗೂ ವಿಜೇತ ತಂಡ 1ಲಕ್ಷ ನಗದು ಹಾಗೂ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದೆ.

ಟೂರ್ನಮೆಂಟ್ ನ ಬೆಸ್ಟ್ ಬ್ಯಾಟ್ಸ್‌ಮನ್‌ ಪೂಮಾ ಶೂ,ಬೆಸ್ಟ್ ಬೌಲರ್ ನೈಕ್ ಶೂ,ಬೆಸ್ಟ್ ಕೀಪರ್ ಸ್ಮಾರ್ಟ್ ಟಿ.ವಿ,ಹ್ಯಾಟ್ರಿಕ್ ವಿಕೆಟ್ ಪಡೆವ ಬೌಲರ್ ಬುರ್ಜ್ ಖಲೀಫಾ ಟಿಕೆಟ್,ಬೆಸ್ಟ್ ಫೀಲ್ಡರ್ ದುಬಾರಿ ಸುಗಂಧ ದ್ರವ್ಯ,ಫೈನಲ್ ನ ಪಂದ್ಯಶ್ರೇಷ್ಟ ಚಿನ್ನದ ನಾಣ್ಯ ಹಾಗೂ ಸರಣಿಶ್ರೇಷ್ಟ ಪ್ರಶಸ್ತಿ ರೂಪದಲ್ಲಿ ಎಲ್.ಇ.ಡಿ ಟಿ.ವಿ ಹಾಗೂ ಆಕರ್ಷಕ ಟ್ರೋಫಿಗಳನ್ನು ಪಡೆಯಲಿದ್ದಾರೆ.

ಟೊರ್ಪೆಡೋಸ್ ಕುಂದಾಪುರ ಹಾಗೂ ಸನ್ ರೈಸ್ ಹೊನ್ನಾಳ ಪ್ರದರ್ಶನ ಪಂದ್ಯ

ಜೂನ್ 17 ರಾತ್ರಿ 8 ಗಂಟೆಗೆ ಪಂದ್ಯಾಟ ಪ್ರಾರಂಭವಾಗಲಿದ್ದು,10 ಗಂಟೆಗೆ ವರ್ಣರಂಜಿತ ಉದ್ಘಾಟನಾ ಕಾರ್ಯಕ್ರಮ ನಡೆಯಲಿದೆ.

ರಾತ್ರಿ 10.30 ಗಂಟೆಗೆ ಸರಿಯಾಗಿ ಉಡುಪಿ ಜಿಲ್ಲೆಯ 2 ಪ್ರಸಿದ್ಧ ಸಂಸ್ಥೆಗಳಾದ ಟೊರ್ಪೆಡೋಸ್ ಕುಂದಾಪುರ ಹರಿಪ್ರಸನ್ನ ಪುಟ್ಟ ಸಾರಥ್ಯದಲ್ಲಿ ಹಾಗೂ ಸನ್ ರೈಸ್  ಹೊನ್ನಾಳ ರೆಹಮತ್ ಹೊನ್ನಾಳ ಸಾರಥ್ಯದಲ್ಲಿ ಪ್ರದರ್ಶನ ಪಂದ್ಯ ನಡೆಯಲಿದೆ.ಬೆಳಿಗ್ಗೆ 5 ಗಂಟೆಗೆ ಗಣ್ಯಾತಿಗಣ್ಯರ ಸಮ್ಮುಖದಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ.

ಆಸಕ್ತ ತಂಡಗಳು ಜೂನ್ 2 ರ ಒಳಗೆ ನೋಂದಣಿ ಮಾಡಿಕೊಳ್ಳಬಹುದು.ಹೆಚ್ಚಿನ ವಿವರಗಳಿಗಾಗಿ ರೆಹಮತ್ ಹೊನ್ನಾಳ 971588569104 ಮೊಬೈಲ್ ನಂಬರ್ ಸಂಪರ್ಕಿಸಬಹುದು.

ಆತ್ಮೀಯ ಓದುಗರೇ, ಪಾರದರ್ಶಕ ಸುದ್ದಿಗಳು ನಿಮಗೆ ನಿರಂತರ ತಲುಪಲು ನಿಮ್ಮ ಸಹಾಯ ಅತೀ ಅಗತ್ಯ. ಸತ್ಯ ಎಲ್ಲೆಡೆ ತಲುಪಲು ನಮ್ಮೊಂದಿಗೆ ಕೈ ಜೋಡಿಸಿ. ನಮ್ಮನ್ನು ಬೆಂಬಲಿಸಲು

Hot Topics

ಉತ್ತಮ ಬರಹಗಾರನಾಗಬೇಕಾದರೆ ಮೊದಲು ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು – ಡಾ.ವಿನ್ಸೆಂಟ್ ಆಳ್ವ

ಉಡುಪಿ: ಉತ್ತಮ ಬರಹಗಾರನಾಗಬೇಕಾದರೆ ಮೊದಲು ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಡಿಸಿಕೊಂಡಾಗ ಮುಂದೆ ಉತ್ತಮ ಸಾಹಿತ್ಯ ರಚನೆಯಾಗಲು ಸಾಧ್ಯವಿದೆ ಎಂದು ಕಲ್ಯಾಣಪುರ ಮಿಲಾಗ್ರಿಸ್‌ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನ್ಸೆಂಟ್‌ ಆಳ್ವಾ ಹೇಳಿದರು. ಅವರು ಭಾನುವಾರ ಕಲ್ಯಾಣಪುರ...

ಕರ್ನಾಟಕ ಸೇರಿದಂತೆ ಐದು ರಾಜ್ಯಗಳಿಗೆ ಪತ್ರ ಬರೆದ ಕೇಂದ್ರ ಸರ್ಕಾರ

ನವದೆಹಲಿ (ಡಿ.5):ಹೆಚ್ಚುತ್ತಿರುವ covid ಸಾಪ್ತಾಹಿಕ ಧನಾತ್ಮಕ ದರಗಳು ಮತ್ತು ಕೆಲವು ಜಿಲ್ಲೆಗಳಲ್ಲಿ ಸಾವುಗಳನ್ನು ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರವು ಐದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಪತ್ರ ಬರೆದಿದೆ.ಕೇಂದ್ರ ಆರೋಗ್ಯ ಕಾರ್ಯದರ್ಶಿ...

ಮಂಗಳೂರು: ಯುವತಿ ನೇಣು ಬಿಗಿದು ಆತ್ಮಹತ್ಯೆ

ಮಂಗಳೂರು: ಯುವತಿಯೊಬ್ಬಳು ತನ್ನ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕಾವೂರಿನ ಆಕಾಶಭವನದಲ್ಲಿ ನಡೆದಿದೆ. ಆಕಾಶಭವನ ಬಳಿಯ ಕಾಪ್ರಿಗುಡ್ಡೆ ನಿವಾಸಿ ಶಿಫಾಲಿ ( 22 ) ಮೃತಪಟ್ಟ ಯುವತಿ ಎಂದು...

Related Articles

ಟಿ-20 ವರ್ಲ್ಡ್‌ ಕಪ್: ನ್ಯೂಝಿಲೆಂಡ್ ಸೋಲಿಸಿ ವಿಶ್ವಕಪ್ ಗೆದ್ದ ಆಸೀಸ್ ಪಡೆ

ದುಬೈ: ನ್ಯೂಝಿಲೆಂಡ್ ವಿರುದ್ಧ ನಡೆದ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ ಭರ್ಜರಿ ಗೆಲುವು ದಾಖಲಿಸಿ ಚೊಚ್ಚಲ ಟಿ-20 ವಿಶ್ವಕಪ್ ಗೆದ್ದುಕೊಂಡಿದೆ. ವಾರ್ನರ್ ಮತ್ತು ಮಾರ್ಶ್ ಆರ್ಭಟದ ಬ್ಯಾಟಿಂಗ್ ನಡೆಸಿ ನ್ಯೂಝಿಲೆಂಡ್ ನೀಡಿದ 173 ರನ್...

ಟಿ-20 ವಿಶ್ವಕಪ್: ಇಂದು ಇಂಗ್ಲೆಂಡ್ vs ನ್ಯೂಝಿಲೆಂಡ್ ಮೊದಲ ಸೆಮಿಫೈನಲ್

ಅಬುಧಾಬಿ: ಇಂಗ್ಲೆಂಡ್‌ ಮತ್ತು ನ್ಯೂಜಿಲ್ಯಾಂಡ್‌ ತಂಡಗಳು ಮತ್ತೂಂದು ಐಸಿಸಿ ಟೂರ್ನಿಯ ನಾಕೌಟ್‌ನಲ್ಲಿ ಸೆಣಸಲಿವೆ. ಬುಧವಾರ ಅಬುಧಾಬಿಯಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ ಕೂಟದ ಮೊದಲ ಸೆಮಿಫೈನಲ್‌ನಲ್ಲಿ ಈ ತಂಡ ಗಳು ಮುಖಾಮುಖಿಯಾಗಲಿವೆ. ಎರಡೂ ತಂಡಗಳು...

ಟಿ-20 ವಿಶ್ವಕಪ್: ಭಾರತದ ವಿರುದ್ಧ ಪಾಕಿಸ್ತಾನಕ್ಕೆ ‘ನೊ ಲಾಸ್’ ಜಯ

ಅಬುಧಾಬಿ: ಇಂಡಿಯಾ-ಪಾಕಿಸ್ತಾನ ಹೈ ವೋಲ್ಟೇಜ್ ಪಂದ್ಯಾವಳಿಯಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ದುಕೊಂಡಿತು. ಭಾರತದ ಪರ ಆರಂಭಿಕವಾಗಿ ಬ್ಯಾಟಿಂಗ್ ಇಳಿದ ರೋಹಿತ್ ಶರ್ಮಾ (0) ಮತ್ತು ಕೆ.ಎಲ್ ರಾಹುಲ್ (3) ಅವರನ್ನು ಪಾಕಿಸ್ತಾನ ವೇಹೆ...
Translate »
error: Content is protected !!