ಸಂಸದ ತೇಜಸ್ವಿ ಕರೆದಿದ್ದಕ್ಕೆ ನಾನು ಹೋಗಿದ್ದೆ, ಅವರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ – ಬಿಜೆಪಿ ಶಾಸಕ ಉದಯ್ ಗರುಡಾಚಾರ್

ಬೆಂಗಳೂರು: ಸಂಸದ ತೇಜಸ್ವಿ ಕರೆದಿದ್ದಕ್ಕೆ ನಾನು ಹೋಗಿದ್ದೆ, ಅವರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಹೇಳಿದ್ದಾರೆ.

ಕೋವಿಡ್ ಹಾಸಿಗೆ ಬ್ಲಾಕಿಂಗ್ ವಿಚಾರದಲ್ಲಿ ಸಂಸದ ತೇಜಸ್ವಿ ಸೂರ್ಯ ಯಾವ ಹಿನ್ನೆಲೆಯಲ್ಲಿ ಒಂದು ಕೋಮಿನ ಸದಸ್ಯರ ಹೆಸರು ಉಲ್ಲೇಖಿಸಿದರೋ ನನಗೆ ಗೊತ್ತಿಲ್ಲ. ಸಂಸದರು ಕರೆದಿದ್ದಕ್ಕೆ ನಾನು ಅವರೊಂದಿಗೆ ಹೋಗಿದ್ದೆ. ಚಿಕ್ಕ ವಯಸ್ಸಿನಿಂದ ನಾನು ತೇಜಸ್ವಿಯನ್ನು ನೋಡಿದ್ದೇನೆ. ಸಂಸದರಿಗೆ ತಪ್ಪು ಮಾಹಿತಿ ಬಂದಿರಬಹುದು ಎಂದು ಸ್ಪಷ್ಟನೆ ನೀಡಲು ಯತ್ನಿಸಿದ್ದಾರೆ.

ಕೋವಿಡ್ ದುರಂತದ ಸಂದರ್ಭದಿಂದ ಕಾಣೆಯಾಗಿದ್ದ ಸಂಸದ ತೇಜಸ್ವಿ ಏಕಾಏಕಿ ಪ್ರತ್ಯಕ್ಷವಾಗಿ ಬೆಡ್ ಬ್ಲಾಕಿಂಗ್ ಹಗರಣದಲ್ಲಿ ಮುಸ್ಲಿಮರ ಹೆಸರು ಪೂರ್ವಗ್ರಹ ಪೀಡಿತರಾಗಿ ಉಲ್ಲೇಖಿಸಿ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದರು. ನಂತರ ಅವರು ಕ್ಷಮೆಯಾಚಿಸಿದ ಸುದ್ದಿಯು ಹರಿದಾಡಿತ್ತು. ಇದೀಗ ಬೆಡ್ ಬ್ಲಾಕ್ ಹಗರಣ ಸಂಸದನೊಂದಿಗಿದ್ದ ಶಾಸಕ ಸತೀಶ್ ರೆಡ್ಡಿಯ ಮೇಲೆ ಆರೋಪ ಬಂದಿದೆ.

ಇದೀಗ ಸುದ್ದಿಗೋಷ್ಟಿಯಲ್ಲಿ ಮಾತನಾಡಿರುವ ಶಾಸಕ ಉದಯ್, ಒಂದು ಸಮುದಾಯವನ್ನು ಪರಿಗಣಿಸಿ ಅವರು ಮಾತನಾಡಿಲ್ಲ. ಅವರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ. ನಾನು ಪ್ರತಿನಿಧಿಸುವ ಚಿಕ್ಕಪೇಟೆ ಕ್ಷೇತ್ರದಲ್ಲಿ 60 ಸಾವಿರ ಮುಸ್ಲಿಮರಿದ್ದಾರೆ, 32 ಮಸೀದಿಗಳಿವೆ. ನಮ್ಮ ಕ್ಷೇತ್ರದಲ್ಲಿ ಹಿಂದೂ-ಮುಸ್ಲಿಮ್ ಎಂಬ ಭೇದ-ಭಾವ ಇಲ್ಲ. ಈ ಬಗ್ಗೆ ಅನಂತರ ತೇಜಸ್ವಿ ಜೊತೆ ಮಾತಾಡಿದ್ದೇನೆ. ಒಂದು ಕೋಮಿನ ವಿರುದ್ಧ ಬೇಕೆಂದು ಮಾತಾಡಿಲ್ಲ ಎಂದು ಸ್ಪಷ್ಟಪಡಿಸಿದರು.

ಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ನನಗೆ ಸ್ನೇಹಿತರು. ಅವರಿಗೆ ತುಂಬಾ ಜನ ಮುಸ್ಲಿಮ್ ಗೆಳೆಯರಿದ್ದಾರೆ. ಐಎಎಸ್ ಅಧಿಕಾರಿಗಳನ್ನು ನಾವು ಗೌರವಿಸುತ್ತೇವೆ. ಸತೀಶ್ ರೆಡ್ಡಿ ಅವರ ಬೆಂಬಲಿಗರು ಗಲಾಟೆ ಮಾಡಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ. ಈ ಬಗ್ಗೆ ನನಗೆ ಸರಿಯಾಗಿ ಮಾಹಿತಿ ಇಲ್ಲ. ಅದನ್ನು ನಾನು ನೋಡಿಲ್ಲ. ಸತೀಶ್ ರೆಡ್ಡಿ ಅಂತಹವರಲ್ಲ ಎಂದು ಉದಯ್ ಗರುಡಾಚಾರ್ ಹೇಳಿದ್ದಾರೆ.

Hot Topics

ಜೂನ್ 14 ರ ನಂತರ ಉಡುಪಿಯಲ್ಲಿ ಹೊಸ ರೂಲ್ಸ್: ಮದುವೆಗೆ 40 ಮಂದಿಗೆ ಅವಕಾಶ!

ಉಡುಪಿ: ಜಿಲ್ಲೆಯಲ್ಲಿ ಜೂನ್ 14 ರ ನಂತರ ಆನ್'ಲಾಕ್ ಪ್ರಕ್ರಿಯೆ ಆರಂಭವಾಗಲಿದ್ದು ಈಗಾಗಲೇ ಸರ್ಕಾರ ತಿಳಿಸಿರುವಂತೆ 6-2 ಗಂಟೆಯವರೆಗೆ ಅಂಗಡಿ ತೆರೆಯಲು ಅವಕಾಶವಿದೆ.ಆದರೆ ಬಹಳಷ್ಟು ಜನರಲ್ಲಿ ಯಾವ ಅಂಗಡಿ ತೆರೆಯಬೇಕೆಂಬ ಕುರಿತು ಗೊಂದಲವಿದ್ದು...

ಉದಯ ಗಾಣಿಗಾ ಕೊಲೆಯಿಂದಾಗಿ ಜಿಲ್ಲೆಯ ಜನತೆ ತಲೆ ತಗ್ಗಿಸುವಂತಾಗಿದೆ – ಕಠಿಣ ಕಾನೂನು ಕ್ರಮಕ್ಕೆ ಎಡ್ವಕೇಟ್ ಸಂಕಪ್ಪ ಆಗ್ರಹ

ಉಡುಪಿ: ಗಾಣಿಗ ಸಮಾಜದ ಉದಯ ಎನ್ನುವ ಸಾಮಾಜಿಕ ಕಾರ್ಯಕರ್ತನನ್ನು ಹೀನಾಯವಾಗಿ ಹತ್ಯೆ ಮಾಡಿರುವುದು ಜಿಲ್ಲೆಯ ನಾಗರಿಕರು ತಲೆ ತಗ್ಗಿಸುವಂತಾಗಿದೆ. ಈ ಹೀನ ಕೃತ್ಯದಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಅಧ್ಯಕ್ಷ ಸಹಿತ ಪ್ರಮುಖ...

ದಕ್ಷಿಣ ಕನ್ನಡ: ಸೋಂಕು ಹೆಚ್ಚಿರುವ ನಲ್ವತ್ತು ಗ್ರಾಮಗಳು ಸಿಲ್’ಡೌನ್

ಮಂಗಳೂರು (ಕೋಸ್ಟಲ್ ಮಿರರ್): ಸೋಂಕಿತ ಜನರ ಸಂಖ್ಯೆ ಹೆಚ್ಚಿರುವ ಹಳ್ಳಿಗಳು ಮತ್ತು ಪ್ರದೇಶಗಳನ್ನು ಸಂಪೂರ್ಣವಾಗಿ ಲಾಕ್'ಡೌನ್ ಮಾಡುವ ಮೂಲಕ ಮತ್ತು ಸೋಂಕಿತ ಜನರ ಮನೆಗಳನ್ನು ಸಿಲ್'ಡೌನ್ ಹಾಕುವ ಮೂಲಕ ಕೋವಿಡ್ನ ಪಾಸಿಟಿವಿಟಿ ದರವನ್ನು...

Related Articles

ಜೂನ್ 14 ರ ನಂತರ ಉಡುಪಿಯಲ್ಲಿ ಹೊಸ ರೂಲ್ಸ್: ಮದುವೆಗೆ 40 ಮಂದಿಗೆ ಅವಕಾಶ!

ಉಡುಪಿ: ಜಿಲ್ಲೆಯಲ್ಲಿ ಜೂನ್ 14 ರ ನಂತರ ಆನ್'ಲಾಕ್ ಪ್ರಕ್ರಿಯೆ ಆರಂಭವಾಗಲಿದ್ದು ಈಗಾಗಲೇ ಸರ್ಕಾರ ತಿಳಿಸಿರುವಂತೆ 6-2 ಗಂಟೆಯವರೆಗೆ ಅಂಗಡಿ ತೆರೆಯಲು ಅವಕಾಶವಿದೆ.ಆದರೆ ಬಹಳಷ್ಟು ಜನರಲ್ಲಿ ಯಾವ ಅಂಗಡಿ ತೆರೆಯಬೇಕೆಂಬ ಕುರಿತು ಗೊಂದಲವಿದ್ದು...

ಕೋವಿಡ್ ಹಿನ್ನಲೆ: ಈ ಬಾರಿಯೂ ವಿದೇಶಿಗರಿಗಿಲ್ಲ ಹಜ್ಜ್ ನಿರ್ವಹಿಸುವ ಅವಕಾಶ!

ಸೌದಿ ಅರೇಬಿಯಾ: ಕೋರೊನಾ ಸೋಂಕಿನ ಹಿನ್ನಲೆಯಲ್ಲಿ ಈ ಬಾರಿಯು ವಿದೇಶಿಗರಿಗೆ ಹಜ್ಜ್ ನಿರ್ವಹಿಸಲು ಸೌದಿ ಸರಕಾರ ಅವಕಾಶ ಕಲ್ಪಿಸಿಲ್ಲ. ಈ ಬಾರಿ ಸೌದಿ ಅರೇಬಿಯಾದಲ್ಲಿರುವ 60 ಸಾವಿರ ಮಂದಿಗಷ್ಟೇ ಹಜ್ಜ್'ಗೆ ಅವಕಾಶ ಕಲ್ಪಿಸಲಾಗಿದೆ....

ದಕ್ಷಿಣ ಕನ್ನಡ: ಸೋಂಕು ಹೆಚ್ಚಿರುವ ನಲ್ವತ್ತು ಗ್ರಾಮಗಳು ಸಿಲ್’ಡೌನ್

ಮಂಗಳೂರು (ಕೋಸ್ಟಲ್ ಮಿರರ್): ಸೋಂಕಿತ ಜನರ ಸಂಖ್ಯೆ ಹೆಚ್ಚಿರುವ ಹಳ್ಳಿಗಳು ಮತ್ತು ಪ್ರದೇಶಗಳನ್ನು ಸಂಪೂರ್ಣವಾಗಿ ಲಾಕ್'ಡೌನ್ ಮಾಡುವ ಮೂಲಕ ಮತ್ತು ಸೋಂಕಿತ ಜನರ ಮನೆಗಳನ್ನು ಸಿಲ್'ಡೌನ್ ಹಾಕುವ ಮೂಲಕ ಕೋವಿಡ್ನ ಪಾಸಿಟಿವಿಟಿ ದರವನ್ನು...
Translate »
error: Content is protected !!