ರಾಜ್ಯದಲ್ಲಿ ಮೇ 10 ರಿಂದ ಮೇ 24ರವರೆಗೆ ಲಾಕ್’ಡೌನ್

ಬೆಂಗಳೂರು: ಕರ್ನಾಟಕದಲ್ಲಿ ಮೇ 10 ರಿಂದ ಮೇ 24 ವರೆಗೆ ಲಾಕ್’ಡೌನ್ ವಿಧಿಸಲಾಗಿದೆ.

ಲಾಕ್’ಡೌನ್ ಸಂದರ್ಭದಲ್ಲಿ ಬೆಳಿಗ್ಗೆ 6-10 ಗಂಟೆಯವರೆಗೆ ಅಗತ್ಯ ವಸ್ತುಗಳಿಗೆ ಅವಕಾಶವಿದೆ. ನಂತರ ಯಾರು ಕೂಡ ರಸ್ತೆಗೆ ಇಳಿಯುವಂತಿಲ್ಲವೆಂದು ಹೇಳಿದ್ದಾರೆ.

ಸೋಮವಾರದಿಂದ ಲಾಕ್’ಡೌನ್ ಆರಂಭವಾಗಲಿದೆ. ಹಾಲು ಕೊಳ್ಳಲು ಮಾರಾಟಕ್ಕೆ ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆಗೆ ಅವಕಾಶವಿದೆ. ಹೆಚ್ಚಿನ ಮಾರ್ಗಸೂಚಿ ಶೀಘ್ರ ಬಿಡುಗಡೆಯಾಗಲಿದೆ.

ಕಂಪ್ಲೀಟ್ ಲಾಕ್ಡೌನ್ ಹೇಗಿರುತ್ತೆ?

ಲಾಕ್ಡೌನ್ ಸಮಯದಲ್ಲಿ ಪಾಸ್ ಇದ್ದವರಿಗೆ ಮಾತ್ರ ಸಂಚರಿಸಲು ಅನುಮತಿ ನೀಡಲು ಸರ್ಕಾರ ಮುಂದಾಗಿದೆ. ಈ ಸಂಬಂಧ ಶೀಘ್ರವೇ ಮಾರ್ಗಸೂಚಿ ಹೊರಡಿಸಲಿದೆ. ಅವಶ್ಯಕ, ತುರ್ತು ಸೇವೆ, ಸಂಚಾರಗಳಿಗೆ ಮಾತ್ರ ಅವಕಾಶ ನೀಡಲಾಗುತ್ತದೆ. ದಿನಸಿ, ಹಾಲು, ತರಕಾರಿ ಖರೀದಿಗೆ ಮಾತ್ರ ಸಮಯ ನಿಗದಿ ಮಾಡಿ ಅನುಮತಿ ನೀಡಲಾಗುತ್ತದೆ. ಹಾಲಿನ ಬೂತ್ ಬೆಳಗ್ಗೆ 6ರಿಂದ ಸಂಜೆ 6ರವರೆಗೆ ತೆರೆದಿರಲು ಅವಕಾಶ. ಕಟ್ಟಡ ಕಾಮಗಾರಿಗಳಿಗೆ ನಿರ್ಬಂಧವಿಲ್ಲ. ಕೋವಿಡ್ ಸಂಬಂಧಿತ ಸರ್ಕಾರಿ ಇಲಾಖೆ, ಕಚೇರಿ-ಸಂಸ್ಥೆಗಳು ಬಿಟ್ಟು ಉಳಿದ ಎಲ್ಲ ಕಚೇರಿಗಳು ಬಂದ್ ಆಗಲಿದೆ.

ಜಿಲ್ಲೆ, ರಾಜ್ಯಗಳ ಗಡಿ ಭಾಗಗಳಲ್ಲಿ ಬಿಗಿ ನಿರ್ಬಂಧ ಹೇರಲಾಗುತ್ತದೆ. ಮೈಕ್ರೋ ಕಂಟೈನ್ಮೆಂಟ್ ವ್ಯವಸ್ಥೆ ಮತ್ತಷ್ಟು ಬಿಗಿಯಾಗಿ ರಸ್ತೆ, ಗಲ್ಲಿಗಳಲ್ಲಿ ಬ್ಯಾರಿಕೇಡ್, ಪೊಲೀಸ್ ಕಾವಲು ಬಿಗಿಯಾಗಲಿದೆ. ಅನಗತ್ಯವಾಗಿ ಓಡಾಡುವವರ ಮೇಲೆ ಕೇಸ್ ಹಾಕಲಾಗುತ್ತದೆ. ಕೋವಿಡ್ ರೋಗಿಗಳ ಸಂಪರ್ಕಿತರಿಗೆ ಕಡ್ಡಾಯ ಹೋಂ ಕ್ವಾರಂಟೈನ್‍ಗೆ ಕ್ರಮ ಕೈಗೊಳ್ಳಲಾಗುತ್ತದೆ. ರೋಗಿಗಳನ್ನು ಮೊದಲು ಕೋವಿಡ್ ಕೇರ್ ಕೇಂದ್ರಗಳಿಗೆ ಕಡ್ಡಾಯವಾಗಿ ದಾಖಲಿಸಲಾಗುತ್ತದೆ. ಬಳಿಕ ರೋಗಿ ಸ್ಥಿತಿ ನೋಡಿ ಆಸ್ಪತ್ರೆಗಳಿಗೆ ದಾಖಲಿಸಲು ಕ್ರಮ ಕೈಗೊಳ್ಳಲಾಗುತ್ತದೆ.

Hot Topics

ಜೂನ್ 14 ರ ನಂತರ ಉಡುಪಿಯಲ್ಲಿ ಹೊಸ ರೂಲ್ಸ್: ಮದುವೆಗೆ 40 ಮಂದಿಗೆ ಅವಕಾಶ!

ಉಡುಪಿ: ಜಿಲ್ಲೆಯಲ್ಲಿ ಜೂನ್ 14 ರ ನಂತರ ಆನ್'ಲಾಕ್ ಪ್ರಕ್ರಿಯೆ ಆರಂಭವಾಗಲಿದ್ದು ಈಗಾಗಲೇ ಸರ್ಕಾರ ತಿಳಿಸಿರುವಂತೆ 6-2 ಗಂಟೆಯವರೆಗೆ ಅಂಗಡಿ ತೆರೆಯಲು ಅವಕಾಶವಿದೆ.ಆದರೆ ಬಹಳಷ್ಟು ಜನರಲ್ಲಿ ಯಾವ ಅಂಗಡಿ ತೆರೆಯಬೇಕೆಂಬ ಕುರಿತು ಗೊಂದಲವಿದ್ದು...

ಉದಯ ಗಾಣಿಗಾ ಕೊಲೆಯಿಂದಾಗಿ ಜಿಲ್ಲೆಯ ಜನತೆ ತಲೆ ತಗ್ಗಿಸುವಂತಾಗಿದೆ – ಕಠಿಣ ಕಾನೂನು ಕ್ರಮಕ್ಕೆ ಎಡ್ವಕೇಟ್ ಸಂಕಪ್ಪ ಆಗ್ರಹ

ಉಡುಪಿ: ಗಾಣಿಗ ಸಮಾಜದ ಉದಯ ಎನ್ನುವ ಸಾಮಾಜಿಕ ಕಾರ್ಯಕರ್ತನನ್ನು ಹೀನಾಯವಾಗಿ ಹತ್ಯೆ ಮಾಡಿರುವುದು ಜಿಲ್ಲೆಯ ನಾಗರಿಕರು ತಲೆ ತಗ್ಗಿಸುವಂತಾಗಿದೆ. ಈ ಹೀನ ಕೃತ್ಯದಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಅಧ್ಯಕ್ಷ ಸಹಿತ ಪ್ರಮುಖ...

ದಕ್ಷಿಣ ಕನ್ನಡ: ಸೋಂಕು ಹೆಚ್ಚಿರುವ ನಲ್ವತ್ತು ಗ್ರಾಮಗಳು ಸಿಲ್’ಡೌನ್

ಮಂಗಳೂರು (ಕೋಸ್ಟಲ್ ಮಿರರ್): ಸೋಂಕಿತ ಜನರ ಸಂಖ್ಯೆ ಹೆಚ್ಚಿರುವ ಹಳ್ಳಿಗಳು ಮತ್ತು ಪ್ರದೇಶಗಳನ್ನು ಸಂಪೂರ್ಣವಾಗಿ ಲಾಕ್'ಡೌನ್ ಮಾಡುವ ಮೂಲಕ ಮತ್ತು ಸೋಂಕಿತ ಜನರ ಮನೆಗಳನ್ನು ಸಿಲ್'ಡೌನ್ ಹಾಕುವ ಮೂಲಕ ಕೋವಿಡ್ನ ಪಾಸಿಟಿವಿಟಿ ದರವನ್ನು...

Related Articles

ಜೂನ್ 14 ರ ನಂತರ ಉಡುಪಿಯಲ್ಲಿ ಹೊಸ ರೂಲ್ಸ್: ಮದುವೆಗೆ 40 ಮಂದಿಗೆ ಅವಕಾಶ!

ಉಡುಪಿ: ಜಿಲ್ಲೆಯಲ್ಲಿ ಜೂನ್ 14 ರ ನಂತರ ಆನ್'ಲಾಕ್ ಪ್ರಕ್ರಿಯೆ ಆರಂಭವಾಗಲಿದ್ದು ಈಗಾಗಲೇ ಸರ್ಕಾರ ತಿಳಿಸಿರುವಂತೆ 6-2 ಗಂಟೆಯವರೆಗೆ ಅಂಗಡಿ ತೆರೆಯಲು ಅವಕಾಶವಿದೆ.ಆದರೆ ಬಹಳಷ್ಟು ಜನರಲ್ಲಿ ಯಾವ ಅಂಗಡಿ ತೆರೆಯಬೇಕೆಂಬ ಕುರಿತು ಗೊಂದಲವಿದ್ದು...

ಉದಯ ಗಾಣಿಗಾ ಕೊಲೆಯಿಂದಾಗಿ ಜಿಲ್ಲೆಯ ಜನತೆ ತಲೆ ತಗ್ಗಿಸುವಂತಾಗಿದೆ – ಕಠಿಣ ಕಾನೂನು ಕ್ರಮಕ್ಕೆ ಎಡ್ವಕೇಟ್ ಸಂಕಪ್ಪ ಆಗ್ರಹ

ಉಡುಪಿ: ಗಾಣಿಗ ಸಮಾಜದ ಉದಯ ಎನ್ನುವ ಸಾಮಾಜಿಕ ಕಾರ್ಯಕರ್ತನನ್ನು ಹೀನಾಯವಾಗಿ ಹತ್ಯೆ ಮಾಡಿರುವುದು ಜಿಲ್ಲೆಯ ನಾಗರಿಕರು ತಲೆ ತಗ್ಗಿಸುವಂತಾಗಿದೆ. ಈ ಹೀನ ಕೃತ್ಯದಲ್ಲಿ ಬಿಜೆಪಿ ಬೆಂಬಲಿತ ಗ್ರಾಮ ಪಂಚಾಯತ್ ಅಧ್ಯಕ್ಷ ಸಹಿತ ಪ್ರಮುಖ...

ಕೋವಿಡ್ ಹಿನ್ನಲೆ: ಈ ಬಾರಿಯೂ ವಿದೇಶಿಗರಿಗಿಲ್ಲ ಹಜ್ಜ್ ನಿರ್ವಹಿಸುವ ಅವಕಾಶ!

ಸೌದಿ ಅರೇಬಿಯಾ: ಕೋರೊನಾ ಸೋಂಕಿನ ಹಿನ್ನಲೆಯಲ್ಲಿ ಈ ಬಾರಿಯು ವಿದೇಶಿಗರಿಗೆ ಹಜ್ಜ್ ನಿರ್ವಹಿಸಲು ಸೌದಿ ಸರಕಾರ ಅವಕಾಶ ಕಲ್ಪಿಸಿಲ್ಲ. ಈ ಬಾರಿ ಸೌದಿ ಅರೇಬಿಯಾದಲ್ಲಿರುವ 60 ಸಾವಿರ ಮಂದಿಗಷ್ಟೇ ಹಜ್ಜ್'ಗೆ ಅವಕಾಶ ಕಲ್ಪಿಸಲಾಗಿದೆ....
Translate »
error: Content is protected !!