ಉಡುಪಿ ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ, ತುರ್ತು ಕ್ರಮಕ್ಕೆ ಎಸ್ಡಿಪಿಐ ಆಗ್ರಹ. ಚಾಮರಾಜನಗರ ಹಾಗೂ ಕಲ್ಬುರ್ಗಿ ದುರಂತ ಉಡುಪಿ ಜಿಲ್ಲೆಯಲ್ಲಿ ಮರುಕಳಿಸಿದರೆ ಜಿಲ್ಲಾಡಳಿತವೇ ನೇರ ಹೊಣೆ- ಎಸ್ಡಿಪಿಐ

ಕಳೆದ ಎರಡು ದಿನಗಳಲ್ಲಿ ಚಾಮರಾಜನಗರ ಹಾಗೂ ಕಲ್ಬುರ್ಗಿ ಜಿಲ್ಲೆಗಳಲ್ಲಿ ಸುಮಾರು 30ರಷ್ಟು ಕೋರೋಣ ಸೋಂಕಿತರು ಆಕ್ಸಿಜನ್ ಕೊರತೆಯಿಂದ ಮೃತಪಟ್ಟ ಘಟನೆ ಇನ್ನು ಜೀವಂತ ಇರುವಾಗಲೇ ಉಡುಪಿ ಜಿಲ್ಲೆಯಲ್ಲಿ ಇಂತಹದ್ದೇ ಸಮಸ್ಯೆ ಇರುವುದು ಆರೋಗ್ಯ ಕ್ಷೇತ್ರದಲ್ಲಿ ಮುಂದುವರಿದ ಜಿಲ್ಲೆಯಾದ ಉಡುಪಿಯ ಜನರನ್ನು ಆತಂಕಕ್ಕೀಡುಮಾಡಿದೆ. ಉಡುಪಿ ಜಿಲ್ಲೆಯು ರಾಜ್ಯದಲ್ಲೇ ವೈದ್ಯಕೀಯ ಸೇವೆಗೆ ಹೆಸರುವಾಸಿಯಾಗಿದ್ದು ಪಕ್ಕದ ಜಿಲ್ಲೆಗಳಿಂದ ರೋಗಿಗಳು ಉಡುಪಿಗೆ ಬರುವುದು ಸರ್ವೇ ಸಾಮಾನ್ಯ. ಇಷ್ಟಾಗಿಯೂ ಇಲ್ಲೆಯಲ್ಲಿ ಅಗತ್ಯ ಇರುವ ಆಕ್ಸಿಜನ್ ಕೊರತೆ ಕಂಡುಬಂದಿರುವುದು ಜಿಲ್ಲಾಡಳಿತದ ನಿರ್ಲಕ್ಷ ಧೋರಣೆ ಹಾಗೂ ಅಸಹಾಯಕತೆಯನ್ನು ತೋರಿಸುತ್ತದೆ.

ಕೋವಿಡ್ ಎರಡನೇ ಅಲೆಯ ಗಂಭೀರ ಪರಿಣಾಮದ ಬಗ್ಗೆ ಹಲವಾರು ತಜ್ಞರು, ಸಂಘಸಂಸ್ಥೆಗಳು ಜಿಲ್ಲಾಡಳಿತದ ಗಮನಕ್ಕೆ ತಂದಿದ್ದರು ಸಹ ಸರಕಾರ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸಮರ್ಥವಾದ ಪೂರ್ವಸಿದ್ಧತೆ ಮಾಡದೆ ಅಮಾಯಕ ಜನರ ಅಮೂಲ್ಯ ಜೀವದೊಂದಿಗೆ ಚೆಲ್ಲಾಟ ಆಡಲು ಹೊರಟಿರುವುದು ದುರದೃಷ್ಟಕರ ಒಂದು ವೇಳೆ ಚಾಮರಾಜನಗರ ದುರಂತ ಉಡುಪಿ ಜಿಲ್ಲೆಯಲ್ಲಿ ಸಂಭವಿಸಿದರೆ ಜಿಲ್ಲಾಡಳಿತವೇ ಸಂಪೂರ್ಣ ಹೊಣೆಯನ್ನು ಹೊರಬೇಕಾಗುತ್ತದೆ

ನಮ್ಮ ಜಿಲ್ಲೆಯಲ್ಲಿ ಆಕ್ಸಿಜನ್ ದಾಸ್ತಾನು ಇಡಲು ಬೇಕಾದಷ್ಟು ಪ್ಲಾಂಟ್ ಗಳು ಇರುವುದರಿಂದ ಜಿಲ್ಲಾಡಳಿತ ಕೂಡಲೇ ವಿಶೇಷ ಕಾಳಜಿ ವಹಿಸಿ ಅಗತ್ಯ ಆಕ್ಸಿಜನ್ ದಾಸ್ತಾನು ಇಡಬೇಕು ಹಾಗೂ ಕೋವಿಡ್ ತಡೆಗಟ್ಟುವ ನಿಟ್ಟಿನಲ್ಲಿ ಸಮರ್ಥವಾದ ಕಾರ್ಯಯೋಜನೆಗಳನ್ನು ಮಾಡುವ ಮೂಲಕ ಜನತೆಯ ಆತಂಕವನ್ನು ದೂರ ಮಾಡಬೇಕು ಇದಕ್ಕಾಗಿ ಎಸ್ಡಿಪಿಐ ಜಿಲ್ಲಾಡಳಿತದೊಂದಿಗೆ ಕೈಜೋಡಿಸಲು ಸದಾ ಸಿದ್ಧವಿದೆ ಎಂದು ಈ ಪತ್ರಿಕಾ ಪ್ರಕಟಣೆ ಮೂಲಕ ತಿಳಿಸುತ್ತಿದ್ದೇವೆ ಎಂದು ಎಸ್.ಡಿ.ಪಿ.ಐ ಪ್ರಕಟಣೆಯಲ್ಲಿ ತಿಳಿಸಿದೆ.

Hot Topics

ರಾಜ್ಯದಲ್ಲಿ ಮೇ 10 ರಿಂದ ಮೇ 24ರವರೆಗೆ ಲಾಕ್’ಡೌನ್

ಬೆಂಗಳೂರು: ಕರ್ನಾಟಕದಲ್ಲಿ ಮೇ 10 ರಿಂದ ಮೇ 24 ವರೆಗೆ ಲಾಕ್'ಡೌನ್ ವಿಧಿಸಲಾಗಿದೆ.ಲಾಕ್'ಡೌನ್ ಸಂದರ್ಭದಲ್ಲಿ ಬೆಳಿಗ್ಗೆ 6-10 ಗಂಟೆಯವರೆಗೆ ಅಗತ್ಯ ವಸ್ತುಗಳಿಗೆ ಅವಕಾಶವಿದೆ. ನಂತರ ಯಾರು ಕೂಡ ರಸ್ತೆಗೆ ಇಳಿಯುವಂತಿಲ್ಲವೆಂದು ಹೇಳಿದ್ದಾರೆ.ಸೋಮವಾರದಿಂದ...

ಉಡುಪಿಯಲ್ಲಿ ಇಂದು 1526 ಮಂದಿಗೆ ಕೋರೊನಾ ಪಾಸಿಟಿವ್, ಐದು ಮಂದಿ ಮೃತ್ಯು

ಉಡುಪಿ: ಜಿಲ್ಲೆಯಲ್ಲಿ ಇಂದು ಒಟ್ಟು 1526 ಮಂದಿಗೆ ಕೋರೊನಾ ಪಾಸಿಟಿವ್ ಆಗಿದೆ. ಇಂದಿನ ವರದಿಯಂತೆ ಐದು ಮಂದಿ ಮೃತಪಟ್ಟಿದ್ದಾರೆ.ಜಿಲ್ಲೆಯಲ್ಲಿ ಪ್ರಸ್ತುತ 5063 ಸಕ್ರಿಯ ಪ್ರಕರಣಗಳಿವೆ. 384 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ‌. ಜಿಲ್ಲೆಯಲ್ಲಿ...

ಉಡುಪಿಯಲ್ಲಿ ಸಂಪೂರ್ಣ ಲಾಕ್’ಡೌನ್ ಮಾಡಿ – ಸಂಸದೆ ಶೋಭಾ ಕರಂದ್ಲಾಜೆ

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಜನತಾ ಲಾಕ್‌ಡೌನ್ ನಿಂದ ನಿಯಂತ್ರಣ ಕಷ್ಟ ಅನಿಸುತ್ತೆ. ಕಳೆದ ವರ್ಷದಂತೆ ಸಂಪೂರ್ಣ ಲಾಕ್‌ಡೌನ್‌ ಮಾಡಿ, ಅವಶ್ಯಕ ವಸ್ತುಗಳಿಗೆ ಮಾತ್ರ ಅವಕಾಶ...

Related Articles

ಸರಕಾರಿ ಆಸ್ಪತ್ತೆಗಳಲ್ಲಿ ಲಸಿಕೆ ಕೊರತೆ – ಕೂಡಲೇ ಪೂರೈಕೆ ಮಾಡಲು ಸಿಪಿಐ(ಎಂ) ಆಗ್ರಹ

ಕುಂದಾಪುರ, ಕೋಟೇಶ್ವರ, ಬ್ರಹ್ಮಾವರ ಮೊದಲಾದ ಸರಕಾರಿ ಆಸ್ಪತ್ರೆಗಳಲ್ಲಿ ಲಸಿಕೆ ಕೊರತೆಯಿಂದಾಗಿ ಜನರಿಗೆ ತೊಂದರೆ ಆಗಿದೆ. ದಿನ ನಿತ್ಯ ವ್ಯಾಪಾರ, ವಹಿವಾಟು, ಕೂಲಿ ಕೆಲಸ ಮಾಡುವ ಬಡ, ಮಧ್ಯಮ ವರ್ಗದ ಜನರು ತಮ್ಮ ಆದಾಯಕ್ಕೆ...

ಎಬಿವಿಪಿ ಪ್ರತಿಭಟನೆ: ವಿಟಿಯು ಪರೀಕ್ಷೆ ಮುಂದೂಡಿಕೆ

ಸಿಎಂ ಲಾಕ್ ಡೌನ್ ಘೋಷಣೆ ಮಾಡಿದ ನಂತರವು VTU ,ಪರೀಕ್ಷೆಗಳನ್ನು ನಡೆಸಿಯೇ ನಡೆಸುತ್ತೇವೆ ಎಂದು ಸುತ್ತೋಲೆ ಹೊರಡಿಸಿತು.ಇದನ್ನು ಗಮನಿಸಿದ ಎಬಿವಿಪಿ ತಕ್ಷಣ VTU ಕುಲಪತಿಗಳ ಬೇಟಿಗೆ ತೆರಳಿದಾಗ ,ABVP ವಿದ್ಯಾರ್ಥಿಗಳನ್ನು , ಕುಲಪತಿಗಳ ಬೇಟಿಗೆ...

ಹೃದಯ, ಮನ,ಪರಿವರ್ತನೆಗೆ ಸಕಾಲ, ರಮಝನ್ ಮಾಸ.

ಕಾಪು : ಪವಿತ್ರ ಕುರ್ ಆನ್ ಅವತ್ತೀರ್ಣಗೊಂಡ ಪವಿತ್ರ ಮಾಸ ರಂಝಾನ್ ಆಗಿದ್ದು , ಈ ಗ್ರಂಥದಲ್ಲಿರುವ ಬೋಧನೆಯನ್ನು ಮನುಷ್ಯನು ತನ್ನ ಜೀವನದಲ್ಲಿ ಅಳವಡಿಸಿಕೊಂಡ್ಡಾಗ ಮಾತ್ರ ತನ್ನ ಜೀವನವನ್ನು ಅರಿ...
Translate »
error: Content is protected !!