ದೇಶವ್ಯಾಪಿ ಪ್ರತಿಭಟನೆಗೆ ಕರೆ ಕೊಟ್ಟು ತಾನೇ ಮಾಡಿದ ಕೋವಿಡ್ ನಿಯಮ ಬ್ರೇಕ್ ಮಾಡಿದ ಬಿಜೆಪಿ!

ನವದೆಹಲಿ: ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರು ಬಿಜೆಪಿ ಕಾರ್ಯಕರ್ತರ ಮೇಲೆ ಹಿಂಸಾತ್ಮಕ ದಾಳಿ ಮಾಡಿದ್ದಾರೆಂದು ಆರೋಪಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ ಮೇ. 5 ಕ್ಕೆ ದೇಶವ್ಯಾಪಿ ಧರಣಿಗೆ ಕರೆ ನೀಡಿದ್ದರು.

ಇದೀಗ ಇವರ ಕರೆಗೆ ವ್ಯಾಪಕ ಟೀಕೆ ವ್ಯಕ್ತವಾಗುತ್ತಿದ್ದು ಬಿಜೆಪಿ ಸರಕಾರ ಕೋವಿಡ್ ಕಾರಣ ನೀಡಿ ಪ್ರತಿಭಟನೆ, ಧರಣಿಗಳನ್ನು ನಿಷೇಧಿಸಿರುವಾಗ ಇವರು ಹೇಗೆ ಕರೆ ನೀಡುತ್ತಾರೆಂದು ಪ್ರಶ್ನಿಸಲಾಗುತ್ತಿದೆ. ಬಿಜೆಪಿ ಕೋರೊನಾ ಸೋಂಕು ವೇಗವಾಗಿ ಹರಡಲು ಕರೆ ನೀಡಿದಂತಾಗಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆ.

ಶಿವಸೇನೆಯ ರಾಜ್ಯಸಭಾ ಸಂಸದೆ ಪ್ರಿಯಾಂಕ ಚತುರ್ವೇದಿ ಟ್ವೀಟ್ ಮಾಡಿ, ಈಗಾಗಲೇ ನೀವು ದೇಶ ಅನುಭವಿಸುತ್ತಿರುವ ದುರಂತ ನೋಡುತ್ತಿಲ್ಲವೇ? ಮತ್ತೆ ನೀವು ಕೋವಿಡ್ ಸೂಪರ್ ಸ್ಪ್ರೆಡ್ಡರ್ ಆಗಬೇಕೆಂದು ಇದ್ದೀರಾ? ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ಸಾರ್ವಜನಿಕರು ಪ್ರತಿಭಟನೆ, ಧರಣಿ ಮಾಡಿದರೆ ಜೈಲು ಭಾಗ್ಯ ಕರುಣಿಸಲು ಹೊರಟಿದ್ದ ಬಿಜೆಪಿ ಸರಕಾರ ಇದೀಗ ಪಶ್ಚಿಮ ಬಂಗಾಳದಲ್ಲಿ ನಡೆದ ಹಿಂಸಾಚಾರಕ್ಕೆ ದೇಶವ್ಯಾಪಿ ಪ್ರತಿಭಟನೆ ಕರೆ ನೀಡಿದ್ದಕ್ಕೆ ವ್ಯಾಪಕ ವಿರೋಧ ವ್ಯಕ್ತವಾಗಿದೆ.

Hot Topics

ರಾಜ್ಯದಲ್ಲಿ ಮೇ 10 ರಿಂದ ಮೇ 24ರವರೆಗೆ ಲಾಕ್’ಡೌನ್

ಬೆಂಗಳೂರು: ಕರ್ನಾಟಕದಲ್ಲಿ ಮೇ 10 ರಿಂದ ಮೇ 24 ವರೆಗೆ ಲಾಕ್'ಡೌನ್ ವಿಧಿಸಲಾಗಿದೆ.ಲಾಕ್'ಡೌನ್ ಸಂದರ್ಭದಲ್ಲಿ ಬೆಳಿಗ್ಗೆ 6-10 ಗಂಟೆಯವರೆಗೆ ಅಗತ್ಯ ವಸ್ತುಗಳಿಗೆ ಅವಕಾಶವಿದೆ. ನಂತರ ಯಾರು ಕೂಡ ರಸ್ತೆಗೆ ಇಳಿಯುವಂತಿಲ್ಲವೆಂದು ಹೇಳಿದ್ದಾರೆ.ಸೋಮವಾರದಿಂದ...

ಉಡುಪಿಯಲ್ಲಿ ಇಂದು 1526 ಮಂದಿಗೆ ಕೋರೊನಾ ಪಾಸಿಟಿವ್, ಐದು ಮಂದಿ ಮೃತ್ಯು

ಉಡುಪಿ: ಜಿಲ್ಲೆಯಲ್ಲಿ ಇಂದು ಒಟ್ಟು 1526 ಮಂದಿಗೆ ಕೋರೊನಾ ಪಾಸಿಟಿವ್ ಆಗಿದೆ. ಇಂದಿನ ವರದಿಯಂತೆ ಐದು ಮಂದಿ ಮೃತಪಟ್ಟಿದ್ದಾರೆ.ಜಿಲ್ಲೆಯಲ್ಲಿ ಪ್ರಸ್ತುತ 5063 ಸಕ್ರಿಯ ಪ್ರಕರಣಗಳಿವೆ. 384 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ‌. ಜಿಲ್ಲೆಯಲ್ಲಿ...

ಉಡುಪಿಯಲ್ಲಿ ಸಂಪೂರ್ಣ ಲಾಕ್’ಡೌನ್ ಮಾಡಿ – ಸಂಸದೆ ಶೋಭಾ ಕರಂದ್ಲಾಜೆ

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಜನತಾ ಲಾಕ್‌ಡೌನ್ ನಿಂದ ನಿಯಂತ್ರಣ ಕಷ್ಟ ಅನಿಸುತ್ತೆ. ಕಳೆದ ವರ್ಷದಂತೆ ಸಂಪೂರ್ಣ ಲಾಕ್‌ಡೌನ್‌ ಮಾಡಿ, ಅವಶ್ಯಕ ವಸ್ತುಗಳಿಗೆ ಮಾತ್ರ ಅವಕಾಶ...

Related Articles

ಛೋಟ ರಾಜನ್ ಮೃತಪಟ್ಟಿಲ್ಲ – ಏಮ್ಸ್ ಸ್ಪಷ್ಟನೆ

ನವದೆಹಲಿ: ಭೂಗತ ಪಾತಕಿ ಛೋಟಾ ರಾಜನ್ ಸತ್ತಿಲ್ಲ, ಜೀವಂತವಾಗಿರುವುದಾಗಿ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ಛೋಟಾ ರಾಜನ್ ಅವರು ಶುಕ್ರವಾರ ಕೋವಿಡ್ ಸಾಂಕ್ರಾಮಿಕ ರೋಗದಿಂದ ಮೃತಪಟ್ಟಿರುವ...

ಸಂಸದ ತೇಜಸ್ವಿ ಕರೆದಿದ್ದಕ್ಕೆ ನಾನು ಹೋಗಿದ್ದೆ, ಅವರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ – ಬಿಜೆಪಿ ಶಾಸಕ ಉದಯ್ ಗರುಡಾಚಾರ್

ಬೆಂಗಳೂರು: ಸಂಸದ ತೇಜಸ್ವಿ ಕರೆದಿದ್ದಕ್ಕೆ ನಾನು ಹೋಗಿದ್ದೆ, ಅವರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಹೇಳಿದ್ದಾರೆ.ಕೋವಿಡ್ ಹಾಸಿಗೆ ಬ್ಲಾಕಿಂಗ್ ವಿಚಾರದಲ್ಲಿ ಸಂಸದ ತೇಜಸ್ವಿ ಸೂರ್ಯ...

ರಾಜ್ಯದಲ್ಲಿ ಲಾಕ್’ಡೌನ್: ನೂತನ ಮಾರ್ಗಸೂಚಿಗಳು ಏನೇನು – ಸಂಪೂರ್ಣ ವಿವರ

ಬೆಂಗಳೂರು: ರಾಜ್ಯದಲ್ಲಿ COVID 19 ಪ್ರಸರಣದ ಸರಪಳಿಯನ್ನು ಮುರಿಯಲು ನೂತನ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ.ಮೇ 10-24 ವರೆಗೆ ಸಂಪೂರ್ಣ ಲಾಕ್'ಡೌನ್ ಇರಲಿದ್ದು ಈ ಕೆಳಗಿನ ಮಾರ್ಗಸೂಚಿಗಳು ಕಡ್ಡಾಯವಾಗಿ ಜಾರಿಯಾಗಲಿದೆ.(ಆದೇಶ ಸಂಖ್ಯೆ ಆರ್ಡಿ 158...
Translate »
error: Content is protected !!