ಉತ್ತಮ ಕಥಾವಸ್ತುವನ್ನು ಹೊಂದಿದ ಸಿನಿಮಾ “ಯುವರತ್ನ”

– ಸಹಚಾರಿ, ಮಂಗಳೂರು

“ಶಿಕ್ಷಣ ವೆಂಬುವುದು ವ್ಯಾಪಾರವಲ್ಲ ಅದೊಂದು ಸೇವೆ” ಎಂಬ ಪ್ರಕಾಶ್ ರೈ ಯವರ ಗಟ್ಟಿ ಸ್ವರದಿಂದ ಹಿಟ್ಟಾದ ಪುನೀತ್ ರಾಜಕುಮಾರ್ ಅಭಿನಯದ “ಯುವರತ್ನ”ದ ಟ್ರೈಲರನಷ್ಟು ಸಿನಿಮಾ ಉತ್ತಮವಾಗಿ ಮೂಡಿ ಬರಲಿಲ್ಲ ಎಂದರೆ ತಪ್ಪಾಗಲಾರದು.

ಸಮೀರಾ ಎಂಬ ಕಾಲೇಜಿನ ಟಾಪರ್ ಹುಡುಗಿಯ ಆತ್ಮಹತ್ಯೆ ಯಿಂದ ಸಂಚಾರ ಆರಂಭಿಸುವ ಸಿನಿಮಾ, ಮುಚ್ಚುತ್ತಿರುವ ಸರ್ಕಾರಿ ಕಾಲೇಜುಗಳ, ಇನ್ನೊಂದೆಡೆ ಅವನ್ನು ಮುಚ್ಚಿಸಲಿಕ್ಕೆಂದೇ ಶತಪ್ರಯತ್ನ ಮಾಡುತ್ತಿರುವ ಖಾಸಗಿ ವಿದ್ಯಾವ್ಯಾಪಾರಿಗಳ ನಡುವೆ ಸಮರದಂತೆ ಬಂದು ನಿಲ್ಲುತ್ತದೆ. ಇವರ ನಡುವಿನ ಹೋರಾಟವೇ ಮುಖ್ಯ ಕಥಾವಸ್ತು. ಈ ಸಿನಿಮಾ ಉತ್ತಮ ಕಥೆಯನ್ನು ಹೊಂದಿದ್ದರೂ ಕಥಾ ಪಾತ್ರ ಆಯ್ಕೆ ಮಾಡುವಲ್ಲಿ ಮತ್ತು ಚಿತ್ರ ಕಥೆ ಹೆಣೆಯುವಲ್ಲಿ ಎಡವಿದೆ.

ಶಿಕ್ಷಣ, ಅಧಿಕಾರಿ ವರ್ಗಗಳ ವ್ಯಾಪಾರದ ಸರಕಾದಾಗ ನೂರಾರು ಕಾಲೇಜುಗಳು ಮುಚ್ಚಿದೆ. ಕೆಲವು ಕಾಲೇಜಿನಲ್ಲಿ ಮಾದಕದ್ರವ್ಯ ಸಾಗಾಣಿಕೆ ನಡೆಸಿ ಅದರ ಹೆಸರನ್ನು ಕೆಡಿಸಲಾಗಿದೆ. ಸರಕಾರಿ ಕಾಲೇಜುಗಳ ಉಳಿವು ನೈತಿಕತೆಯ ಉಳಿವು ಎಂಬುವುದು ಸಿನಿಮಾದ ಶೀರ್ಷಿಕೆ. ಅದಕ್ಕಾಗಿ ನೂಂದು ಹೋರಾಟ ಮಾಡುವ ಶಿಕ್ಷಕನ ಕಥೆ.

ಮೂರು ಗಂಟೆಯ ಧೀರ್ಘ ಹೊಂದಿದ ಸಿನಿಮಾದಲ್ಲಿ ನಾಯಕನ ಎಂಟ್ರಿ ಬಿಲ್ಡಪ್, ನಾಯಕಿಯೂಂದಿಗಿನ ಸಲ್ಲಾಪ, ಹಾಡುಗಳು ಕೆಲವು ಡೈಲಾಗ್ ಸೀನ್ಸ್ , ಫೈಟ್, ಅನಗತ್ಯವಾಗಿ ತೋರುತ್ತದೆ. ಅಲ್ಲದೇ ರಾಜ್ ಕುಟುಂಬಕ್ಕೆ ಸಿನಿಮಾ ಸ್ವಲ್ಪ ಒತ್ತು ಕೊಟ್ಟು ಮಾತನಾಡಿದೆ.

ಸ್ಲೋಮೋಶನ್ ಕಮರ್ಷಿಯಲ್ ಸಿನಿಮಾವಾದರೂ ಅಲ್ಲಲ್ಲಿ ಉತ್ತಮ ಸಂದೇಶ ನೀಡುವ ಸಂಭಾಷಣೆ ಹಾಗೂ ಸನ್ನಿವೇಶಗಳಿವೆ. ಎರಡು ತಾಸುಗಳಿಗೆ ದೈರ್ಘ್ಯವನ್ನು ಇಳಿಸಿದ್ದರೆ ಇನ್ನಷ್ಟು ಉತ್ತಮವಾಗಿ ಮೂಡಿ ಬರಬಹುದಿತ್ತು ಎಂಬುದು ನನ್ನ ಅನಿಸಿಕೆ. ಇಲ್ಲಿ ನಾಯಕನಿಗೆ ಎರಡು ಕಥೆಯಿದ್ದರೆ ಕಥೆ ಸಂಚಾರಿಸಿದಂತೆ ನಾಯಕ ತುಂಬಾ ಪಾತ್ರಗಳನ್ನು ನಿಭಾಯಿಸುತ್ತಾ ಹೋಗುತ್ತಾನೆ. ಪುನೀತ್ ರಾಜಕುಮಾರ್ ರವರ ನಟನೆ ಚೆನ್ನಾಗಿ ಮೂಡಿ ಬಂದಿದೆ. ಎಂದಿನಂತೆ ಪ್ರಕಾಶ್ ರಾಜ್ ಗಾಂಭೀರ್ಯತೆಯನ್ನು ತೋರಿಸಿದ್ದಾರೆ. ಸಾಯಿಕುಮಾರ್, ಅವಿನಾಶ್ ಡಾಲಿ ಧನಂಜಯ ಖಳನಾಯಕ ಪಾತ್ರಕ್ಕೆ ಜೀವ ತುಂಬಿದ್ದಾರೆ.

ಹೂಂಬಾಳೆ ಫಿಲ್ಮ್ ಬ್ಯಾನರ್ ನಲ್ಲಿ ವಿಜಯ್ ಕಿರಗಂದೂರ್‌ ನಿರ್ಮಿಸಿದ್ದಾರೆ.
ಸಂತೋಷ್ ಆನಂದ್‌ರಾಮ್ ನಿರ್ದೇಶನ ಮಾಡಿದ್ದಾರೆ.
ನಟಿ ಸಯೇಶಾ, ಅಚ್ಯುತ್ ಕುಮಾರ್, ರಂಗಾಯಣ ರಘು.ಎಂ. ಕೆ ಮಠ ಇತ್ಯಾದಿ ದೊಡ್ಡ ತಾರಾಗಣವಿದೆ.

ಕೊರೊನದ ಎರಡನೇ ಅಲೆಗಿಂತ ಮುಂಚೆ ಬಿಡುಗಡೆ ಗೊಂಡಿದ್ದರೂ ಸಿನಿಮಾ ಪ್ರೀಯರನ್ನು ತಲುಪುವಲ್ಲಿ ವಿಫಲವಾಗಿತ್ತು ಇದೀಗ ಅಮೇಜಾನ್ ಪ್ರೈಮ್ ನಲ್ಲಿ ಇದೆ ಲಾಕ್ ಡೌನ್ ಸಂಕಷ್ಟದಲ್ಲಿ ಯುವರತ್ನ ನೋಡಿ ಆನಂದಿಸಿ.

Hot Topics

ರಾಜ್ಯದಲ್ಲಿ ಮೇ 10 ರಿಂದ ಮೇ 24ರವರೆಗೆ ಲಾಕ್’ಡೌನ್

ಬೆಂಗಳೂರು: ಕರ್ನಾಟಕದಲ್ಲಿ ಮೇ 10 ರಿಂದ ಮೇ 24 ವರೆಗೆ ಲಾಕ್'ಡೌನ್ ವಿಧಿಸಲಾಗಿದೆ.ಲಾಕ್'ಡೌನ್ ಸಂದರ್ಭದಲ್ಲಿ ಬೆಳಿಗ್ಗೆ 6-10 ಗಂಟೆಯವರೆಗೆ ಅಗತ್ಯ ವಸ್ತುಗಳಿಗೆ ಅವಕಾಶವಿದೆ. ನಂತರ ಯಾರು ಕೂಡ ರಸ್ತೆಗೆ ಇಳಿಯುವಂತಿಲ್ಲವೆಂದು ಹೇಳಿದ್ದಾರೆ.ಸೋಮವಾರದಿಂದ...

ಉಡುಪಿಯಲ್ಲಿ ಇಂದು 1526 ಮಂದಿಗೆ ಕೋರೊನಾ ಪಾಸಿಟಿವ್, ಐದು ಮಂದಿ ಮೃತ್ಯು

ಉಡುಪಿ: ಜಿಲ್ಲೆಯಲ್ಲಿ ಇಂದು ಒಟ್ಟು 1526 ಮಂದಿಗೆ ಕೋರೊನಾ ಪಾಸಿಟಿವ್ ಆಗಿದೆ. ಇಂದಿನ ವರದಿಯಂತೆ ಐದು ಮಂದಿ ಮೃತಪಟ್ಟಿದ್ದಾರೆ.ಜಿಲ್ಲೆಯಲ್ಲಿ ಪ್ರಸ್ತುತ 5063 ಸಕ್ರಿಯ ಪ್ರಕರಣಗಳಿವೆ. 384 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ‌. ಜಿಲ್ಲೆಯಲ್ಲಿ...

ಉಡುಪಿಯಲ್ಲಿ ಸಂಪೂರ್ಣ ಲಾಕ್’ಡೌನ್ ಮಾಡಿ – ಸಂಸದೆ ಶೋಭಾ ಕರಂದ್ಲಾಜೆ

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಜನತಾ ಲಾಕ್‌ಡೌನ್ ನಿಂದ ನಿಯಂತ್ರಣ ಕಷ್ಟ ಅನಿಸುತ್ತೆ. ಕಳೆದ ವರ್ಷದಂತೆ ಸಂಪೂರ್ಣ ಲಾಕ್‌ಡೌನ್‌ ಮಾಡಿ, ಅವಶ್ಯಕ ವಸ್ತುಗಳಿಗೆ ಮಾತ್ರ ಅವಕಾಶ...

Related Articles

ಜೋಜಿ ಸೈಕೊಲಾಜಿಕಲ್ ಕ್ರೈಮ್ ಮಲಯಾಳಂ ಚಿತ್ರ

ಎಂ. ಎ ಮಂಗಳೂರುಜೋಜಿ ಇತ್ತೀಚಿಗೆ ಅಮೆಝೋನ್ ಪ್ರೈಮ್ ನಲ್ಲಿ ಬಿಡುಗಡೆಗೊಂಡ ವಿಲಿಯಂ ಷೇಕ್ಸ್‌ ಪಿಯರ್‌ ನ ಮ್ಯಾಕ್ಬೆತ್ ನಾಟಕವನ್ನು ಆಧಾರಿಸಿಕೊಂಡ ಸೈಕೊಲಾಜಿಕಲ್ ಕ್ರೈಮ್ ಮಲಯಾಳಂ ಚಿತ್ರ. ಮನೋಜ್ಞ ಅಭಿನಯದ ಮೂಲಕ ಫಹಾದ್ ಫಾಸಿಲ್...

ಖಾದರ್‌ ಖಾನ್‌ ಮಗ ಅಬ್ದುಲ್‌ ಖುದ್ದೂಸ್‌ ನಿಧನ

ನವದೆಹಲಿ: ದಿವಂಗತ ನಟ ಖಾದರ್ ಖಾನ್ ಅವರ ಹಿರಿಯ ಮಗ ಅಬ್ದುಲ್ ಖುದ್ದುಸ್ ಕೆನಡಾದಲ್ಲಿ ಬುಧವಾರ ನಿಧನರಾದರು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಈ ಸುದ್ದಿಯನ್ನು ಅಬ್ದುಲ್ ಕುದ್ದುಸ್ ಅವರ...

ಖ್ಯಾತ ನಟ ರಜನೀಕಾಂತ್’ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

ತಮಿಳುನಾಡು ಚುನಾವಣೆಯ ಐದು ದಿನಗಳ ಮುನ್ನ, ನಟ, ನಿರ್ಮಾಪಕ ಮತ್ತು ಚಿತ್ರಕಥೆಗಾರನಾಗಿ ನೀಡಿದ ಕೊಡುಗೆಗಳಿಗಾಗಿ ನರೇಂದ್ರ ಮೋದಿ ಸರ್ಕಾರ ರಜನಿಕಾಂತ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಗುರುವಾರ ಪ್ರಕಟಿಸಿದೆ.ಮಾಹಿತಿ ಮತ್ತು ಪ್ರಸಾರ ಸಚಿವ...
Translate »
error: Content is protected !!