ಜೋಜಿ ಸೈಕೊಲಾಜಿಕಲ್ ಕ್ರೈಮ್ ಮಲಯಾಳಂ ಚಿತ್ರ

ಎಂ. ಎ ಮಂಗಳೂರು

ಜೋಜಿ ಇತ್ತೀಚಿಗೆ ಅಮೆಝೋನ್ ಪ್ರೈಮ್ ನಲ್ಲಿ ಬಿಡುಗಡೆಗೊಂಡ ವಿಲಿಯಂ ಷೇಕ್ಸ್‌ ಪಿಯರ್‌ ನ ಮ್ಯಾಕ್ಬೆತ್ ನಾಟಕವನ್ನು ಆಧಾರಿಸಿಕೊಂಡ ಸೈಕೊಲಾಜಿಕಲ್ ಕ್ರೈಮ್ ಮಲಯಾಳಂ ಚಿತ್ರ. ಮನೋಜ್ಞ ಅಭಿನಯದ ಮೂಲಕ ಫಹಾದ್ ಫಾಸಿಲ್ ಚಿತ್ರದ ಕೇಂದ್ರ ಕಥಾಪಾತ್ರವನ್ನು ಅತ್ಯುತ್ತಮವಾಗಿ ಅಭಿನಯಿಸಿ ಜೀವ ತುಂಬಿದ್ದಾರೆ.

ತಂದೆ ಹಾಗೂ 3 ಮಕ್ಕಳ ಕಥೆಯಲ್ಲಿ ಕಿರಿಯ ಮಗ ಜೋಜಿ ಕೊರೊನಾದಿಂದಾಗಿ ಪ್ರವಾಸೋದ್ಯಮ ತಟಸ್ಥವಾದ ಕಾರಣ ಯಾವುದೇ ಕೆಲಸ ಇಲ್ಲದೆ, ದಿನ ಪೂರ್ತಿ ತನ್ನ ಕೋಣೆಯಲ್ಲಿ ಇಂಟರ್ನೆಟ್ ನೋಡುತ್ತಾ ನಿದ್ದೆಮಾಡುತ್ತಾ ಸಮಯ ವ್ಯರ್ಥ ಮಾಡುತ್ತಾ ಕಾಲ ಕಳೆಯುವವನು. ಹಿರಿಯ ಮಗ ಜೋಮೋನ್ (ಬಾಬು ರಾಜ್ ) ತಂದೆಯ ಪ್ರತಿಯೊಂದು ಆಜ್ಞೆಯನ್ನು ಚಾಚು ತಪ್ಪದೆ ಮಾಡುವವನು. ಅವನಿಗೆ ಒಬ್ಬ ಮಗನಿದ್ದಾನೆ ಪೋಪಿ(ಅಲಿಸ್ಟರ್ ಅಲೆಕ್ಸ್). ಎರಡನೇ ಮಗ ಜೋಯ್ ಸನ್ (ಜೋಜಿ ಮುಂಡಕ್ಕಾಯಂ) ತಂದೆಯ ವ್ಯಾಪಾರದ ಲೆಕ್ಕವನ್ನು ನೋಡಿಕೊಳ್ಳುವವನು. ಅವನ ಹೆಂಡತಿ ಬಿನ್ಸಿ(ಉಣ್ಣಿಮಾಯ ಪ್ರಸಾದ್). ಈ ಎಲ್ಲಾ ಪಾತ್ರಗಳು ಒಂದಕೊಂದು ಹೊಂದಿಕೊಂಡಿರುತ್ತದೆ.

ವಿಶಾಲ ತೋಟದ ದನಿಕನಾದ ಇವರ ಅಪ್ಪ ಕುಟ್ಟಪ್ಪನ್ ಕೆ ಪಣಾಚಿಲ್ (ಸಣ್ಣಿ ಪಿ.ಏನ್ )ಅವನ ಹೆದರಿಕೆಯಿಂದ ಬದುಕುತ್ತಿರುವ ಮೂರು ಮಕ್ಕಳು ಒಂದು ದಿನ ತೋಟದ ಕೆಲಸದ ನಡುವೆ ಅಪ್ಪ ಅನಾರೋಗ್ಯಕ್ಕೀಡಾದಾಗ ಅವನ ಆಸ್ತಿಯ ಮೇಲೆ ಉಂಟಾಗುವ ವ್ಯಾಮೋಹದಿಂದ ಮತ್ತು ಅಪ್ಪನ ಹಠಮಾರಿ ಸ್ವಬಾವದ ಕಾರಣ ತಂದೆ ಸತ್ತು ಹೋದರೆ ಅವರ ಉತ್ತರಾಧಿಕಾರ, ಆಸ್ತಿ ಸಿಗುತ್ತದೆ ಎನ್ನುವ ಆಸೆಯಲ್ಲಿ ಮಕ್ಕಳಿರುತ್ತಾರೆ. ಗುಣಮುಖರಾಗಲು ಪಾದ್ರಿಗಳು ನಡೆಸುವ ಪ್ರಾರ್ಥನೆಯನ್ನು ಮಕ್ಕಳು ಕಡೆಗಣಿಸುತ್ತಾರೆ. ಜೋಜಿ ಅಪ್ಪನನ್ನು ಮಾತ್ರೆ ನೀಡಿ ಕೊಳ್ಳುವ ಸಾಹಸಕ್ಕೆ ಇಳಿಯುತ್ತಾನೆ. ಬಿನ್ಸಿ ಅವನ ಸಹಾಯಕ್ಕೆ ನಿಲ್ಲುತ್ತಾಳೆ. ಮಕ್ಕಳು ತಂದೆಯನ್ನು ಕೊಂದರು ಎಂಬ ಗಾಳಿ ಸುದ್ದಿ ಊರಲ್ಲಿ ಹರಡಿತು. ಇಲ್ಲಿಂದ ಕತೆ ತಿರುವು ಪಡೆಯುತ್ತದೆ ಸಾಮಾನ್ಯ ಪಾತ್ರದಂತಿದ್ದ ಜೋಜಿ ಅಡ್ಯಂತಾರದಿಂದ ವೀಕ್ಷಕರ ಕೇಂದ್ರೀಯ ನಾಗುತ್ತಾನೆ.

ಕೌಟುಂಬಿಕ ಕಲಹ ವ್ಯಾಮೋಹ, ಕಚ್ಚಾಟ, ವಂಚನೆ ಕೊಲೆ ಎಲ್ಲವು ಮನುಷ್ಯನ ಅಧಿಕಾರದ ದುರಾಸೆಯೇ ಕಾರಣವಾಗಿರುತ್ತದೆ ಎಂದು ನಿರ್ದೇಶಕರ ಡಿಲೀಶ್ ಪೋತನ್ ಮನಮುಟ್ಟುವಂತೆ ನಿರ್ದೇಶಿಸಿದ್ದಾರೆ. ಶ್ಯಾಮ್ ಪುಷ್ಕರ್ ರವರ ಕತೆಯಲ್ಲಿ ಪ್ರಾದೇಶಿಕತೆಯಂತೆ ಸರಳವಾದ ನೈಜ್ಯತೆಯಿದೆ. ಶೈಜು ಖಾಲಿದ್ ರವರ ಉತ್ತಮ ಛಾಯಾಗ್ರಹಣ ಇದೆ. ಶಮ್ಮಿ ತಿಲಕನ್, ಬೇಸಿಲ್ ಜೋಸೆಫ್ , ರಂಜಿತ್ , ರಾಜನ್ ಮೊದಲಾದವರು ನಟಿಸಿದ್ದಾರೆ.

Hot Topics

ರಾಜ್ಯದಲ್ಲಿ ಮೇ 10 ರಿಂದ ಮೇ 24ರವರೆಗೆ ಲಾಕ್’ಡೌನ್

ಬೆಂಗಳೂರು: ಕರ್ನಾಟಕದಲ್ಲಿ ಮೇ 10 ರಿಂದ ಮೇ 24 ವರೆಗೆ ಲಾಕ್'ಡೌನ್ ವಿಧಿಸಲಾಗಿದೆ.ಲಾಕ್'ಡೌನ್ ಸಂದರ್ಭದಲ್ಲಿ ಬೆಳಿಗ್ಗೆ 6-10 ಗಂಟೆಯವರೆಗೆ ಅಗತ್ಯ ವಸ್ತುಗಳಿಗೆ ಅವಕಾಶವಿದೆ. ನಂತರ ಯಾರು ಕೂಡ ರಸ್ತೆಗೆ ಇಳಿಯುವಂತಿಲ್ಲವೆಂದು ಹೇಳಿದ್ದಾರೆ.ಸೋಮವಾರದಿಂದ...

ಉಡುಪಿಯಲ್ಲಿ ಇಂದು 1526 ಮಂದಿಗೆ ಕೋರೊನಾ ಪಾಸಿಟಿವ್, ಐದು ಮಂದಿ ಮೃತ್ಯು

ಉಡುಪಿ: ಜಿಲ್ಲೆಯಲ್ಲಿ ಇಂದು ಒಟ್ಟು 1526 ಮಂದಿಗೆ ಕೋರೊನಾ ಪಾಸಿಟಿವ್ ಆಗಿದೆ. ಇಂದಿನ ವರದಿಯಂತೆ ಐದು ಮಂದಿ ಮೃತಪಟ್ಟಿದ್ದಾರೆ.ಜಿಲ್ಲೆಯಲ್ಲಿ ಪ್ರಸ್ತುತ 5063 ಸಕ್ರಿಯ ಪ್ರಕರಣಗಳಿವೆ. 384 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ‌. ಜಿಲ್ಲೆಯಲ್ಲಿ...

ಉಡುಪಿಯಲ್ಲಿ ಸಂಪೂರ್ಣ ಲಾಕ್’ಡೌನ್ ಮಾಡಿ – ಸಂಸದೆ ಶೋಭಾ ಕರಂದ್ಲಾಜೆ

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಜನತಾ ಲಾಕ್‌ಡೌನ್ ನಿಂದ ನಿಯಂತ್ರಣ ಕಷ್ಟ ಅನಿಸುತ್ತೆ. ಕಳೆದ ವರ್ಷದಂತೆ ಸಂಪೂರ್ಣ ಲಾಕ್‌ಡೌನ್‌ ಮಾಡಿ, ಅವಶ್ಯಕ ವಸ್ತುಗಳಿಗೆ ಮಾತ್ರ ಅವಕಾಶ...

Related Articles

ಉತ್ತಮ ಕಥಾವಸ್ತುವನ್ನು ಹೊಂದಿದ ಸಿನಿಮಾ “ಯುವರತ್ನ”

- ಸಹಚಾರಿ, ಮಂಗಳೂರು"ಶಿಕ್ಷಣ ವೆಂಬುವುದು ವ್ಯಾಪಾರವಲ್ಲ ಅದೊಂದು ಸೇವೆ" ಎಂಬ ಪ್ರಕಾಶ್ ರೈ ಯವರ ಗಟ್ಟಿ ಸ್ವರದಿಂದ ಹಿಟ್ಟಾದ ಪುನೀತ್ ರಾಜಕುಮಾರ್ ಅಭಿನಯದ "ಯುವರತ್ನ"ದ ಟ್ರೈಲರನಷ್ಟು ಸಿನಿಮಾ ಉತ್ತಮವಾಗಿ ಮೂಡಿ ಬರಲಿಲ್ಲ...

ಖಾದರ್‌ ಖಾನ್‌ ಮಗ ಅಬ್ದುಲ್‌ ಖುದ್ದೂಸ್‌ ನಿಧನ

ನವದೆಹಲಿ: ದಿವಂಗತ ನಟ ಖಾದರ್ ಖಾನ್ ಅವರ ಹಿರಿಯ ಮಗ ಅಬ್ದುಲ್ ಖುದ್ದುಸ್ ಕೆನಡಾದಲ್ಲಿ ಬುಧವಾರ ನಿಧನರಾದರು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಈ ಸುದ್ದಿಯನ್ನು ಅಬ್ದುಲ್ ಕುದ್ದುಸ್ ಅವರ...

ಖ್ಯಾತ ನಟ ರಜನೀಕಾಂತ್’ಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿ

ತಮಿಳುನಾಡು ಚುನಾವಣೆಯ ಐದು ದಿನಗಳ ಮುನ್ನ, ನಟ, ನಿರ್ಮಾಪಕ ಮತ್ತು ಚಿತ್ರಕಥೆಗಾರನಾಗಿ ನೀಡಿದ ಕೊಡುಗೆಗಳಿಗಾಗಿ ನರೇಂದ್ರ ಮೋದಿ ಸರ್ಕಾರ ರಜನಿಕಾಂತ್ ಅವರಿಗೆ ದಾದಾಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ಗುರುವಾರ ಪ್ರಕಟಿಸಿದೆ.ಮಾಹಿತಿ ಮತ್ತು ಪ್ರಸಾರ ಸಚಿವ...
Translate »
error: Content is protected !!