ಕೊಡವೂರು ಮಸೀದಿ ಜಮೀನಿನಲ್ಲಿ ಅಕ್ರಮ ಚಟುವಟಿಕೆ ಆರೋಪ – ಮಾನವ ಹಕ್ಕು ಆಯೋಗದಲ್ಲಿ ದೂರು ದಾಖಲು!

ಉಡುಪಿ: ಕೊಡವೂರು ಕಲ್ಮಾತ್ ಮಸೀದಿಯ ಅಧಿಕೃತ ಜಮೀನಿಗೆ ಅಕ್ರಮ ಪ್ರವೇಶಿಸಿ ಕಾನೂನು ಬಾಹಿರ ಚಟುವಟಿಕೆ ನಡೆಸಿ, ನಮಾಝಿಗಳಿಗೆ ಆತಂಕ ಸೃಷ್ಟಿಸುತ್ತಿರುವ ಬಗ್ಗೆ ಕರ್ನಾಟಕ ರಾಜ್ಯ ಮಾನವ ಹಕ್ಕು ಆಯೋಗಕ್ಕೆ ಅಸೋಸಿಯೇಶನ್ ಫಾರ್ ಪ್ರೊಟೆಕ್ಷನ್ ಆಫ್ ಸಿವಿಲ್ ರೈಟ್ಸ್, ಉಡುಪಿ ಚಾಪ್ಟರ್ ವತಿಯಿಂದ ಎ.15ರಂದು ದೂರು ನೀಡಲಾಗಿತ್ತು ಇದೀಗ ಆಯೋಗ ದೂರನ್ನು ನೋಂದಾಣಿ ಮಾಡಿಕೊಳ್ಳಲಾಗಿದೆ.

ಕಲ್ಮಾತ್ ಜಾಮೀಯಾ ಮಸೀದಿ ಸರ್ವೆ ನಂಬರ್ 53/06 ಇದರಲ್ಲಿ ಕಳೆದ 200 ವರ್ಷಕ್ಕಿಂತ ಹೆಚ್ಚು ಸಮಯದಿಂದ ಅಸ್ತಿತ್ವದಲ್ಲಿದೆ. 1908ರಿಂದ ಈ ಮಸೀದಿಯ ನಿರ್ವಹಣೆಗೆ ಸರಕಾರದ ಬೊಕ್ಕಸದಿಂದಲೇ ತಸ್ತಿದಿಕ್ ಬರುತ್ತಿದೆ. 28 ವರ್ಷಗಳ ಹಿಂದೆ ಅಂದರೆ 1993ರ ಮಾ.16ರಂದು ಕರ್ನಾಟಕ ವಕ್ಫ್ ಬೋರ್ಡಿನಲ್ಲಿ ಮಸೀದಿಯ ಸ್ಥಿರಾಸ್ತಿ ನೊಂದಾವಣಿಯಾಗಿದ್ದು, 2020ರ ಮಾ.16ರಂದು ಕರ್ನಾಟಕ ಸರಕಾರದ ಕಂದಾಯ ಇಲಾಖೆಯ ಅಧೀನದಲ್ಲಿ ನೊಟಿಫೀಕೆಷನ್ ಮಾಡುವುದಾರ ಮುಖಾಂತರ ವಕ್ಫ್ ಆಸ್ತಿಯನ್ನು ಪ್ರಕಟಿಸಿದೆ.

ಅದರಂತೆ ಕಂದಾಯ ಇಲಾಖೆಯು ಅಧಿಕೃತ ಪ್ರಕ್ರಿಯೆ ಮೂಲಕ ಕಲ್ಮಾತ್ ಜಾಮೀಯಾ ಇದರ ಸ್ಥಿರಾಸ್ತಿಯ ಪಹಣಿಯಲ್ಲಿ ಮಸೀದಿಯ ಹೆಸರು ನೊಂದಾ ಯಿಸಲ್ಪಟ್ಟಿದೆ. ಈಗಾಗಲೇ ವಕ್ಫ್ಗೊಳಿಸಲ್ಪಟ್ಟ ಮಸೀದಿಯ ಜಮೀನಿನಲ್ಲಿ ಈ ಆಸ್ತಿಗೆ ಸಂಬಂಧ ಪಡದ ವ್ಯಕ್ತಿಗಳು ಅಕ್ರಮವಾಗಿ ಮೂರ್ತಿಯನ್ನು ಸ್ಥಾಪಿಸಿ, ಟೆಂಟ್ನ್ನು ನಿರ್ಮಿಸಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ನಿರತರಾಗಿದ್ದಾರೆ.

2021ರ ಎ.13ರಂದು ತತಾಕಥಿತ ಪಂಚ ಧೂಮವತಿ ಹೋರಾಟ ಸಮಿತಿಯೆಂಬ ಹೆಸರಿನಲ್ಲಿ ಯಾವುದೇ ಅನುಮತಿಯಿಲ್ಲದೆ ಕಿಡಿಗೇಡಿಗಳು ಮಸೀದಿಯ ಜಮೀನನಲ್ಲಿ ಅಕ್ರಮ ಕೂಟ ಸೇರಿ ಆತಂಕದ ಹಾಗೂ ಅಶಾಂತಿಯ ವಾತವರಣ ಸೃಷ್ಟಿಸಿ ಸ್ಥಳೀಯ ಮುಸ್ಲಿಮರಿಗೆ ನಮಾಝ್ ಮಾಡಲು ತಡೆಯೊಡ್ಡಿ ದುಷ್ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಲ್ಲದೆ ಮಸೀದಿಯ ಜಮೀನಿನಲ್ಲಿ ಅಳವಡಿಸಲ್ಪಟ್ಟ ಸಿಸಿ ಕೆಮೆರಾವನ್ನು ಪೊಲೀಸ್ ಸಿಬ್ಬಂದಿಗಳ ಸಮ್ಮುಖದಲ್ಲಿ ಕಿತ್ತೆಸೆದಿದ್ದಾರೆ. ಈ ದುಷ್ಕೃತ್ಯ ನಡೆಸಿದ ಕಿಡಿಗೇಡಿಗಳ ನೇತೃತ್ವವನ್ನು ಸ್ಥಳೀಯ ನಗರ ಸಭೆಯ ಸದಸ್ಯ ವಹಿಸಿದ್ದು ಇದರೊಂದಿಗೆ ಇತರರು ಭಾಗಿಯಾಗಿದ್ದಾರೆ. ಈ ಕೃತ್ಯದ ಮೂಲಕ ಸಂವಿಧಾನ ಕೊಡಲ್ಪಟ್ಟಂತಹ ಮೂಲಭೂತ ಹಕ್ಕುಗಳ ಪೈಕಿ ಧಾರ್ಮಿಕ ಹಕ್ಕಿನ ಬಹಿರಂಗ ವಾಗಿ ಒತ್ತಾಯ ಪೂರ್ವಕ ನಿರಾಕರಣೆ ಮಾಡುತ್ತಿದ್ದಾರೆ.

ಈ ಎಲ್ಲ ಕಾರಣಗಳಿಂದ ಆ ಪ್ರದೇಶದಲ್ಲಿ ಭಯದ ವಾತವರಣ ನಿರ್ಮಾಣ ಗೊಂಡಿದ್ದು ತಾವು ತಮ್ಮ ಕಾನೂನು ಬದ್ದ ನಿಯಮಗಳ ಪ್ರಕಾರ ದುಷ್ಕರ್ಮಿಗಳ ವಿರುದ್ಧ ಸೂಕ್ತ ಕಠಿಣ ಕಾನೂನು ಕ್ರಮ ಕೈಗೊಂಡು ಮಸೀದಿಯ ನಮಾಝಿ ಗಳಲ್ಲಿ ಭರವಸೆ ಮೂಡಿಸಲು ಕಾನೂನು ಸುವ್ಯವಸ್ಥೆ ಕಾಪಾಡುವಂತೆ ಸಂಬಂಧ ಪಟ್ಟ ಇಲಾಖೆಗೆ ನಿರ್ದೇಶನ ನೀಡಬೇಕೆಂದು ಎಪಿಸಿಆರ್ ಉಡುಪಿ ಚಾಪ್ಟರ್ ಅಧ್ಯಕ್ಷ ಹುಸೇನ್ ಕೋಡಿಬೆಂಗ್ರೆ ಒತ್ತಾಯಿಸಿದ್ದಾರೆ.

ಅಲ್ಪ ಸಂಖ್ಯಾತ ಆಯೋಗ ಮತ್ತು ರಾಜ್ಯ ಪೊಲೀಸ್ ಮಹಾ ನಿರ್ದೇಶಕರಿಗೂ ಎಪಿಸಿಆರ್ ವತಿಯಿಂದ ದೂರು ನೀಡಲಾಗಿದ್ದು ನ್ಯಾಯಕ್ಕಾಗಿ ಆಗ್ರಹಿಸಿದ್ದಾರೆ.

Hot Topics

ರಾಜ್ಯದಲ್ಲಿ ಮೇ 10 ರಿಂದ ಮೇ 24ರವರೆಗೆ ಲಾಕ್’ಡೌನ್

ಬೆಂಗಳೂರು: ಕರ್ನಾಟಕದಲ್ಲಿ ಮೇ 10 ರಿಂದ ಮೇ 24 ವರೆಗೆ ಲಾಕ್'ಡೌನ್ ವಿಧಿಸಲಾಗಿದೆ.ಲಾಕ್'ಡೌನ್ ಸಂದರ್ಭದಲ್ಲಿ ಬೆಳಿಗ್ಗೆ 6-10 ಗಂಟೆಯವರೆಗೆ ಅಗತ್ಯ ವಸ್ತುಗಳಿಗೆ ಅವಕಾಶವಿದೆ. ನಂತರ ಯಾರು ಕೂಡ ರಸ್ತೆಗೆ ಇಳಿಯುವಂತಿಲ್ಲವೆಂದು ಹೇಳಿದ್ದಾರೆ.ಸೋಮವಾರದಿಂದ...

ಉಡುಪಿಯಲ್ಲಿ ಇಂದು 1526 ಮಂದಿಗೆ ಕೋರೊನಾ ಪಾಸಿಟಿವ್, ಐದು ಮಂದಿ ಮೃತ್ಯು

ಉಡುಪಿ: ಜಿಲ್ಲೆಯಲ್ಲಿ ಇಂದು ಒಟ್ಟು 1526 ಮಂದಿಗೆ ಕೋರೊನಾ ಪಾಸಿಟಿವ್ ಆಗಿದೆ. ಇಂದಿನ ವರದಿಯಂತೆ ಐದು ಮಂದಿ ಮೃತಪಟ್ಟಿದ್ದಾರೆ.ಜಿಲ್ಲೆಯಲ್ಲಿ ಪ್ರಸ್ತುತ 5063 ಸಕ್ರಿಯ ಪ್ರಕರಣಗಳಿವೆ. 384 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ‌. ಜಿಲ್ಲೆಯಲ್ಲಿ...

ಉಡುಪಿಯಲ್ಲಿ ಸಂಪೂರ್ಣ ಲಾಕ್’ಡೌನ್ ಮಾಡಿ – ಸಂಸದೆ ಶೋಭಾ ಕರಂದ್ಲಾಜೆ

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಜನತಾ ಲಾಕ್‌ಡೌನ್ ನಿಂದ ನಿಯಂತ್ರಣ ಕಷ್ಟ ಅನಿಸುತ್ತೆ. ಕಳೆದ ವರ್ಷದಂತೆ ಸಂಪೂರ್ಣ ಲಾಕ್‌ಡೌನ್‌ ಮಾಡಿ, ಅವಶ್ಯಕ ವಸ್ತುಗಳಿಗೆ ಮಾತ್ರ ಅವಕಾಶ...

Related Articles

ಛೋಟ ರಾಜನ್ ಮೃತಪಟ್ಟಿಲ್ಲ – ಏಮ್ಸ್ ಸ್ಪಷ್ಟನೆ

ನವದೆಹಲಿ: ಭೂಗತ ಪಾತಕಿ ಛೋಟಾ ರಾಜನ್ ಸತ್ತಿಲ್ಲ, ಜೀವಂತವಾಗಿರುವುದಾಗಿ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ಛೋಟಾ ರಾಜನ್ ಅವರು ಶುಕ್ರವಾರ ಕೋವಿಡ್ ಸಾಂಕ್ರಾಮಿಕ ರೋಗದಿಂದ ಮೃತಪಟ್ಟಿರುವ...

ಸಂಸದ ತೇಜಸ್ವಿ ಕರೆದಿದ್ದಕ್ಕೆ ನಾನು ಹೋಗಿದ್ದೆ, ಅವರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ – ಬಿಜೆಪಿ ಶಾಸಕ ಉದಯ್ ಗರುಡಾಚಾರ್

ಬೆಂಗಳೂರು: ಸಂಸದ ತೇಜಸ್ವಿ ಕರೆದಿದ್ದಕ್ಕೆ ನಾನು ಹೋಗಿದ್ದೆ, ಅವರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಹೇಳಿದ್ದಾರೆ.ಕೋವಿಡ್ ಹಾಸಿಗೆ ಬ್ಲಾಕಿಂಗ್ ವಿಚಾರದಲ್ಲಿ ಸಂಸದ ತೇಜಸ್ವಿ ಸೂರ್ಯ...

ರಾಜ್ಯದಲ್ಲಿ ಲಾಕ್’ಡೌನ್: ನೂತನ ಮಾರ್ಗಸೂಚಿಗಳು ಏನೇನು – ಸಂಪೂರ್ಣ ವಿವರ

ಬೆಂಗಳೂರು: ರಾಜ್ಯದಲ್ಲಿ COVID 19 ಪ್ರಸರಣದ ಸರಪಳಿಯನ್ನು ಮುರಿಯಲು ನೂತನ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ.ಮೇ 10-24 ವರೆಗೆ ಸಂಪೂರ್ಣ ಲಾಕ್'ಡೌನ್ ಇರಲಿದ್ದು ಈ ಕೆಳಗಿನ ಮಾರ್ಗಸೂಚಿಗಳು ಕಡ್ಡಾಯವಾಗಿ ಜಾರಿಯಾಗಲಿದೆ.(ಆದೇಶ ಸಂಖ್ಯೆ ಆರ್ಡಿ 158...
Translate »
error: Content is protected !!