ಮೈಸೂರಿನ ಹುಣಸೂರಿನಲ್ಲಿ ಸಾರಿಗೆ ಬಸ್ ಮೇಲೆ ಕಲ್ಲು ತೂರಾಟ : ಪ್ರಯಾಣಿಕರಿಗೆ ಗಾಯ

ಮೈಸೂರು (ಏ.12): ಇಂದು ಸಾರಿಗೆ ಬಸ್ ಪ್ರಯಾಣಿಕರ ಮುಷ್ಕರ ತಾರಕಕ್ಕೆ ಏರಿದೆ. ಮುಷ್ಕರದ ನಡುವೆ ಸಂಚಾರ ಆರಂಭಿಸಿದಂತ ಸಾರಿಗೆ ಬಸ್ ಗಳ ಮೇಲೆ ನೌಕರರ ಆಕ್ರೋಶದ ಬಿಸಿ ಮುಟ್ಟಿದೆ. ಹುಣಸೂರಿನಿಂದ ಮೈಸೂರಿಗೆ ಆಗಮಿಸುತ್ತಿದ್ದಂತ ಸಾರಿಗೆ ಬಸ್ ಮೇಲೆ, ರಂಗಯ್ಯನಕೊಪ್ಪಲು ಗೇಟ್ ಬಳಿ ತಡೆದು, ಕಲ್ಲು ತೂರಾಟ ನಡೆಸಲಾಗಿದೆ. ಇದರಿಂದಾಗಿ ಗಾಜು ಪುಡಿ ಪುಡಿಯಾಗಿದ್ದು, ಬಸ್ ನಲ್ಲಿದ್ದಂತ ಪ್ರಯಾಣಿಕರು ಗಾಯಗೊಂಡಿರುವ ಘಟನೆ ನಡೆದಿದೆ.

ಮುಷ್ಕರದ ನಡುವೆಯೂ ಪ್ರಯಾಣಿಕರ ಸೇವೆಗಾಗಿ ಸಂಚಾರ ಆರಂಭಿಸಿರುವಂತ ಸಾರಿಗೆ ಬಸ್ ಮೇಲೆ ಮುಷ್ಕರ ನಿರತ ಸಾರಿಗೆ ಬಸ್ ನೌಕರರು ಆಕ್ರೋಶದ ಕಿಡಿಯನ್ನು ಕಾರಿದ್ದಾರೆ. ಹುಣಸೂರಿನಿಂದ ಮೈಸೂರಿಗೆ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದಂತ ಕೆ ಎಸ್ ಆರ್ ಟಿ ಸಿ ಬಸ್ ಅನ್ನು, ರಂಗಯ್ಯನಕೊಪ್ಪಲು ಗೇಟ್ ಬಳಿ, ಸಾರಿಗೆ ನೌಕರರೇ ತಡೆದು, ಕಲ್ಲು ತೂರಾಟ ನಡೆಸಿದ್ದಾರೆ.

ಹೀಗೆ ಸಾರಿಗೆ ಬಸ್ ಮೇಲೆ ಕಲ್ಲು ತೂರಾಟ ನಡೆಸಿದಂತ ನೌಕರರನ್ನು ಸಂತೋಷ್ ಭಜಂತ್ರಿ ಹಾಗೂ ಕೃಷ್ಣ ಮೂರ್ತಿ ಎಂಬುದಾಗಿ ತಿಳಇದು ಬಂದಿದೆ. ಬಸ್ ಮೇಲೆ ಕಲ್ಲು ತೂರಾಟ ನಡೆಸಿ, ಸ್ಥಳದಿಂದ ಪರಾರಿಯಾಗುತ್ತಿದ್ದಂತ ಅವರನ್ನು ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ಕಲ್ಲು ತೂರಾಟದಿಂದ ಬಸ್ ಗಾಜು ಪುಡಿ ಪುಡಿಯಾಗಿದ್ದು, ಬಸ್ ನಲ್ಲಿದ್ದಂತ ಗೋಪಾಲಸ್ವಾಮಿ ಎನ್ನುವಂತ ಪ್ರಯಾಣಿಕರೊಬ್ಬರ ತಲೆಗೂ ಪೆಟ್ಟಾಗಿದೆ ಎನ್ನಲಾಗಿದೆ. ಅವರನ್ನು ಆಸ್ಪತ್ರೆಗೆ ದಾಖಲಿಸಿ, ಚಿಕಿತ್ಸೆ ಕೊಡಿಸಲಾಗುತ್ತಿದೆ.

ಆತ್ಮೀಯ ಓದುಗರೇ,ಪಾರದರ್ಶಕ ಸುದ್ದಿಗಳು ನಿಮಗೆ ನಿರಂತರ ತಲುಪಲು ನಿಮ್ಮ ಸಹಾಯ ಅತೀ ಅಗತ್ಯ. ಸತ್ಯ ಎಲ್ಲೆಡೆ ತಲುಪಲು ನಮ್ಮೊಂದಿಗೆ ಕೈ ಜೋಡಿಸಿ. ನಮ್ಮನ್ನು ಬೆಂಬಲಿಸಲು

Hot Topics

ಉಡುಪಿ: ರಾತ್ರಿ 10 ರಿಂದ ಬೆಳಿಗ್ಗೆ 5ರವರೆಗೆ ನೈಟ್ ಕರ್ಫ್ಯೂ!

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳು ದಿನೇ ದಿನೇ ಹೆಚ್ಚಾಗುತ್ತಿರುವ ಹಿನ್ನಲೆ ರಾತ್ರಿ ಕರ್ಫ್ಯೂ ಜಾರಿ ಮಾಡಿ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರು ಆದೇಶ ಹೊರಡಿಸಿದ್ದಾರೆ.ಈ ಬಗ್ಗೆ ಪ್ರಕಟಣೆ ಹೊರಡಿಸಿರುವ ಜಿಲ್ಲಾಧಿಕಾರಿ ಜಿ.ಜಗದೀಶ್...

ಉಡುಪಿ: ಅಪರಿಚಿತರು ಕಳುಹಿಸಿದ ಲಿಂಕ್ ಒತ್ತಿ ಹಣ ಕಳೆದುಕೊಂಡ ಪ್ರೊಫೆಸರ್!

ಉಡುಪಿ : ಅಪರಿಚರಿತರು ಕಳುಹಿಸಿದ ಬ್ಯಾಂಕ್‌ ಸಂಬಂಧಿಸಿದ ಸಂದೇಶಕ್ಕೆ ಸ್ಪಂದಿ️ಸಿದ ಅಸೋಸಿಯೇಟ್‌ ಪ್ರೊಫೆಸರ್‌ 67,000 ರೂ. ಕಳೆದುಕೊಂಡ ಪ್ರಕರಣ ಉಡುಪಿ ಠಾಣೆಯಲ್ಲಿ ದಾಖಲಾಗಿದೆ.ಕೆಎಂಸಿ ಫಾರ್ಮಕಾಲಜಿ ವಿಭಾಗದ ಅಸೋಸಿಯೇಟ್‌ ಪ್ರೊಫೆಸರ್‌ ಎ. ಮೋಹನ್ ಬಾಬು...

ಕೋಟ ಶ್ರೀನಿವಾಸ್ ಪೂಜಾರಿ, ಸುನೀಲ್ ಕುಮಾರ್ ಸಚಿವ ಸಂಪುಟದಲ್ಲಿ ಸ್ಥಾನ – ಇಲ್ಲಿದೆ 29 ಶಾಸಕರ ಹೆಸರು.

ಬೆಂಗಳೂರು: ಸಚಿವ ಸಂಪುಟದಲ್ಲಿ ಕರಾವಳಿ ಕರ್ನಾಟಕದ ಭಾಗದಿಂದ ಸುನೀಲ್ ಕುಮಾರ್, ಕೋಟಾ ಶ್ರೀನಿವಾಸ್ ಪೂಜಾರಿ, ಅಂಗಾರ ಅವರಿಗೆ ಅವಕಾಶ ಲಭ್ಯವಾಗಿದೆ. ಹಾಲಡಿ ಶ್ರೀನಿವಾಸ್ ಶೆಟ್ಟಿಯವರಿಗೆ ಮತ್ತೆ ನಿರಾಸೆಯಾಗಿದೆ. ಈ ಬಾರಿ ಉಪ...

Related Articles

ಕೇರಳದಲ್ಲಿ ಕೊರೋನಾ ಹೆಚ್ಚಳ : ತ್ರಿಪಲ್ ಲಾಕ್ ಡೌನ್ ಘೋಷಣೆ

ತಿರುವನಂತಪುರಂ,(ಆ.04): ಕೊರೊನಾ ಸೋಂಕು ಹೆಚ್ಚಿರುವ ಪ್ರದೇಶಗಳಲ್ಲಿ ಟ್ರಿಪಲ್ ಲಾಕ್ ಡೌನ್ ಮಾಡುವಂತೆ ಕೇರಳ ಸರಕಾರ ಆದೇಶಿಸಿದೆ.1000 ಜನರಲ್ಲಿ 10ಕ್ಕಿಂತ ಹೆಚ್ಚು ಕೋವಿಡ್ -19 ಪ್ರಕರಣಗಳು ಪತ್ತೆಯಾದ ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಟ್ರಿಪಲ್ ಲಾಕ್‌ಡೌನ್...

ಚಿಕ್ಕಮಂಗಳೂರು : ಭದ್ರ ನದಿಯಲ್ಲಿ ನೀರುಪಾಲಾಗಿದ್ದ ವೈದ್ಯ ರುದ್ರೇಶ್ ಶವ ಪತ್ತೆ

ಚಿಕ್ಕಮಗಳೂರು (ಆ.4): ಜಿಲ್ಲೆಯ ಕಳಸ ಬಳಿ ಭದ್ರಾ ನದಿಯಲ್ಲಿ ಇದೇ 1ರಂದು ನೀರುಪಾಲಾಗಿದ್ದ ಬೆಂಗಳೂರಿನ ವೈದ್ಯ ಡಾ.ರುದ್ರೇಶ್‌ (35) ಅವರ ಮೃತದೇಹ ಪತ್ತೆಯಾಗಿದೆ.ರುದ್ರೇಶ್‌ ಅವರು ಕೆಂಗೇರಿಯ ರುದ್ರೇಶ್ ಗೆಳೆಯರ ಜೊತೆ ಪ್ರವಾಸಕ್ಕೆ...

ಕೋಟ ಶ್ರೀನಿವಾಸ್ ಪೂಜಾರಿ, ಸುನೀಲ್ ಕುಮಾರ್ ಸಚಿವ ಸಂಪುಟದಲ್ಲಿ ಸ್ಥಾನ – ಇಲ್ಲಿದೆ 29 ಶಾಸಕರ ಹೆಸರು.

ಬೆಂಗಳೂರು: ಸಚಿವ ಸಂಪುಟದಲ್ಲಿ ಕರಾವಳಿ ಕರ್ನಾಟಕದ ಭಾಗದಿಂದ ಸುನೀಲ್ ಕುಮಾರ್, ಕೋಟಾ ಶ್ರೀನಿವಾಸ್ ಪೂಜಾರಿ, ಅಂಗಾರ ಅವರಿಗೆ ಅವಕಾಶ ಲಭ್ಯವಾಗಿದೆ. ಹಾಲಡಿ ಶ್ರೀನಿವಾಸ್ ಶೆಟ್ಟಿಯವರಿಗೆ ಮತ್ತೆ ನಿರಾಸೆಯಾಗಿದೆ. ಈ ಬಾರಿ ಉಪ...
Translate »
error: Content is protected !!