ಹೃದಯ, ಮನ,ಪರಿವರ್ತನೆಗೆ ಸಕಾಲ, ರಮಝನ್ ಮಾಸ.

ಕಾಪು : ಪವಿತ್ರ ಕುರ್ ಆನ್ ಅವತ್ತೀರ್ಣಗೊಂಡ ಪವಿತ್ರ ಮಾಸ ರಂಝಾನ್ ಆಗಿದ್ದು , ಈ ಗ್ರಂಥದಲ್ಲಿರುವ ಬೋಧನೆಯನ್ನು ಮನುಷ್ಯನು ತನ್ನ ಜೀವನದಲ್ಲಿ ಅಳವಡಿಸಿಕೊಂಡ್ಡಾಗ ಮಾತ್ರ ತನ್ನ ಜೀವನವನ್ನು ಅರಿ ಷಡ್ ವೈರಿಗಳಿಂದ ಪರಿವರ್ತಿಸಿಕೊಳ್ಳಲು ಸಾಧ್ಯ.
ಮನುಷ್ಯ ಎಷ್ಟೇ ಆರಾಧನೆ ಮಾಡಿದರೂ, ಧರ್ಮ ನಿಷಿದ್ದ ಸಂಪಾದನೆಯಿಂದ ಹೊರ ಬರದಿದ್ದರೆ ಆತನು ನರಕಕ್ಕೆ ಹೋಗುತ್ತಾನೆ. ಎಂದು ಮಲ್ಪೆ ಮಸ್ಜಿದ್ ನ ಧರ್ಮ ಗುರುಗಳಾದ ಮೌಲಾನಾ ಇಮ್ರಾನುಲ್ಲಾ ಖಾನ್ ಮನ್ಸೂರಿ ಅವರು , ಕೊಂಬಗುಡ್ಡೆ ತೌಹೀದ್ ಮಂಝಿಲ್ ನಲ್ಲಿ ಜಮಾ ಅತೆ ಇಸ್ಲಾಮಿ ಕಾಪು ವರ್ತುಲ ಹಮ್ಮಿಕೊಂಡ ರಮಝನ್ ಸ್ವಾಗತ ಕಾರ್ಯಕ್ರಮ ದಲ್ಲಿ ಪ್ರವಚನ ನೀಡುತ್ತಾ ಹೇಳಿದರು.
ಮುಂದುವರಿಯುತ್ತಾ ಅವರು, ಮನುಷ್ಯ ಹೃದಯಶುದ್ಧಿಯೊಂದಿಗೆ ದೇವನ ಭಯದೊಂದಿಗೆ ಆರಾಧನೆ ಮಾಡಿ ತನ್ನ ಜೀವನ ಸಾಗಿಸಿದಾಗ ಮಾತ್ರ ಆತನ ಪ್ರಾರ್ಥನೆಗಳು ಸ್ವೀಕೃತಗೊಳ್ಳುತ್ತವೆ. ದೇವಭಕ್ತಿ ಯನ್ನು ನವೀಕರಿಸಿಕೊಳ್ಳಲು ರಮಝನ್ ಮಾಸ ಸಕಾಲ ಆಗಿದ್ದು, ಅದರ ಪ್ರಯೋಜನವನ್ನು ಪ್ರತಿಯೊಬ್ಬರು ಪಡೆದುಕೊಳ್ಳಬೇಕು ಎಂದರು.

ಸ್ಥಾನೀಯ ಅಧ್ಯಕ್ಷ ಅನ್ವರ್ ಅಲಿ ಯವರು , ಜಮಾ ಅತೆ ಇಸ್ಲಾಮಿ ಹಿಂದ್ ಈ ರಾಷ್ಟ್ರದಲ್ಲಿ ಶಾಂತಿ , ಸೌಹಾರ್ದತೆಯನ್ನು ಕಾಪಾಡಿಕೊಂಡು ಬಾಳಲು ಕರೆ ನೀಡುತ್ತಾ, ಎಲ್ಲಾ ಸಮುದಾಯದವರ ಕಷ್ಟ , ಸುಖದಲ್ಲಿ ಭಾಗಿಯಾಗಿ ಅವರ ಸಮಸ್ಯೆಗಳ ಪರಿಹಾರಕ್ಕಾಗಿ ಹಗಲಿರುಳು ಸೇವೆ ಸಲ್ಲಿಸುತ್ತಾ ದೇವ ಸಂಪ್ರೀತಿಯನ್ನು ಗಳಿಸಲು ಬಯಸುತ್ತದೆ ಎಂದು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಹೇಳುತ್ತಾ, ಬಂದ ಅತಿಥಿಗಳನ್ನು ಸ್ವಾಗತಿಸಿದರು.
ಹಾಫಿಜ್ ಮೆಹರಾಜ್ ರವರ ಕುರ್ ಆನ್ ಪಠಣದೊಂದಿಗೆ ಕಾರ್ಯಕ್ರಮ ಪ್ರಾರಂಭ ಅಯಿತು.
ಮುಹಮ್ಮದ್ ಫಾರೂಕ್ ರವರು ಕಾರ್ಯಕ್ರಮ ನಿರೂಪಿಸಿದರು.ಮುಹಮ್ಮದ್ ಇಕ್ಬಾಲ್ ಸಾಹೇಬ್ ಧನ್ಯವಾದ ನೀಡಿದರು.

Hot Topics

ರಾಜ್ಯದಲ್ಲಿ ಮೇ 10 ರಿಂದ ಮೇ 24ರವರೆಗೆ ಲಾಕ್’ಡೌನ್

ಬೆಂಗಳೂರು: ಕರ್ನಾಟಕದಲ್ಲಿ ಮೇ 10 ರಿಂದ ಮೇ 24 ವರೆಗೆ ಲಾಕ್'ಡೌನ್ ವಿಧಿಸಲಾಗಿದೆ.ಲಾಕ್'ಡೌನ್ ಸಂದರ್ಭದಲ್ಲಿ ಬೆಳಿಗ್ಗೆ 6-10 ಗಂಟೆಯವರೆಗೆ ಅಗತ್ಯ ವಸ್ತುಗಳಿಗೆ ಅವಕಾಶವಿದೆ. ನಂತರ ಯಾರು ಕೂಡ ರಸ್ತೆಗೆ ಇಳಿಯುವಂತಿಲ್ಲವೆಂದು ಹೇಳಿದ್ದಾರೆ.ಸೋಮವಾರದಿಂದ...

ಉಡುಪಿಯಲ್ಲಿ ಇಂದು 1526 ಮಂದಿಗೆ ಕೋರೊನಾ ಪಾಸಿಟಿವ್, ಐದು ಮಂದಿ ಮೃತ್ಯು

ಉಡುಪಿ: ಜಿಲ್ಲೆಯಲ್ಲಿ ಇಂದು ಒಟ್ಟು 1526 ಮಂದಿಗೆ ಕೋರೊನಾ ಪಾಸಿಟಿವ್ ಆಗಿದೆ. ಇಂದಿನ ವರದಿಯಂತೆ ಐದು ಮಂದಿ ಮೃತಪಟ್ಟಿದ್ದಾರೆ.ಜಿಲ್ಲೆಯಲ್ಲಿ ಪ್ರಸ್ತುತ 5063 ಸಕ್ರಿಯ ಪ್ರಕರಣಗಳಿವೆ. 384 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ‌. ಜಿಲ್ಲೆಯಲ್ಲಿ...

ಉಡುಪಿಯಲ್ಲಿ ಸಂಪೂರ್ಣ ಲಾಕ್’ಡೌನ್ ಮಾಡಿ – ಸಂಸದೆ ಶೋಭಾ ಕರಂದ್ಲಾಜೆ

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಜನತಾ ಲಾಕ್‌ಡೌನ್ ನಿಂದ ನಿಯಂತ್ರಣ ಕಷ್ಟ ಅನಿಸುತ್ತೆ. ಕಳೆದ ವರ್ಷದಂತೆ ಸಂಪೂರ್ಣ ಲಾಕ್‌ಡೌನ್‌ ಮಾಡಿ, ಅವಶ್ಯಕ ವಸ್ತುಗಳಿಗೆ ಮಾತ್ರ ಅವಕಾಶ...

Related Articles

ಛೋಟ ರಾಜನ್ ಮೃತಪಟ್ಟಿಲ್ಲ – ಏಮ್ಸ್ ಸ್ಪಷ್ಟನೆ

ನವದೆಹಲಿ: ಭೂಗತ ಪಾತಕಿ ಛೋಟಾ ರಾಜನ್ ಸತ್ತಿಲ್ಲ, ಜೀವಂತವಾಗಿರುವುದಾಗಿ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ಛೋಟಾ ರಾಜನ್ ಅವರು ಶುಕ್ರವಾರ ಕೋವಿಡ್ ಸಾಂಕ್ರಾಮಿಕ ರೋಗದಿಂದ ಮೃತಪಟ್ಟಿರುವ...

ಸಂಸದ ತೇಜಸ್ವಿ ಕರೆದಿದ್ದಕ್ಕೆ ನಾನು ಹೋಗಿದ್ದೆ, ಅವರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ – ಬಿಜೆಪಿ ಶಾಸಕ ಉದಯ್ ಗರುಡಾಚಾರ್

ಬೆಂಗಳೂರು: ಸಂಸದ ತೇಜಸ್ವಿ ಕರೆದಿದ್ದಕ್ಕೆ ನಾನು ಹೋಗಿದ್ದೆ, ಅವರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಹೇಳಿದ್ದಾರೆ.ಕೋವಿಡ್ ಹಾಸಿಗೆ ಬ್ಲಾಕಿಂಗ್ ವಿಚಾರದಲ್ಲಿ ಸಂಸದ ತೇಜಸ್ವಿ ಸೂರ್ಯ...

ರಾಜ್ಯದಲ್ಲಿ ಲಾಕ್’ಡೌನ್: ನೂತನ ಮಾರ್ಗಸೂಚಿಗಳು ಏನೇನು – ಸಂಪೂರ್ಣ ವಿವರ

ಬೆಂಗಳೂರು: ರಾಜ್ಯದಲ್ಲಿ COVID 19 ಪ್ರಸರಣದ ಸರಪಳಿಯನ್ನು ಮುರಿಯಲು ನೂತನ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ.ಮೇ 10-24 ವರೆಗೆ ಸಂಪೂರ್ಣ ಲಾಕ್'ಡೌನ್ ಇರಲಿದ್ದು ಈ ಕೆಳಗಿನ ಮಾರ್ಗಸೂಚಿಗಳು ಕಡ್ಡಾಯವಾಗಿ ಜಾರಿಯಾಗಲಿದೆ.(ಆದೇಶ ಸಂಖ್ಯೆ ಆರ್ಡಿ 158...
Translate »
error: Content is protected !!