ದುಬೈ: ಅನಿವಾಸಿ ಕನ್ನಡಿಗರ ಪರಿಶ್ರಮ; ಉತ್ತರ ಪ್ರದೇಶದ ಪ್ರಸಾದ್ ತಾಯ್ನಾಡಿಗೆ!

ಯುಎಇಯಲ್ಲಿ ಸಂಕಷ್ಟದಲ್ಲಿದ್ದ ಉತ್ತರ ಪ್ರದೇಶದ ಗೋರಕ್ ಪುರದ ನಿವಾಸಿ ಚಂಗೂರ್ ಪ್ರಸಾದ್ ನನ್ನು ಭಾರತೀಯ ರಾಯಭಾರಿ ಕಚೇರಿ ಸಹಕಾರದಿಂದ ಸುರಕ್ಷಿತವಾಗಿ ತಾಯ್ನಾಡಿಗೆ ತಲುಪಿಸುವಲ್ಲಿ ಕನ್ನಡಿಗಾಸ್ ಫೆಡರೇಷನ್ ಮತ್ತು ಏಮ್ ಇಂಡಿಯಾ ಫೌಂಡೇಶನ್ ಯಶಸ್ವಿಯಾಗಿದೆ.

ಈ ಕುರಿತು ಮಾಧ್ಯಮಗಳಿಗೆ ಮಾಹಿತಿ ನೀಡಿದ ಅಂತಾರಾಷ್ಟ್ರೀಯ ಕನ್ನಡಿಗಾಸ್ ಫೆಡರೇಷನ್ ಸಂಚಾಲಕ ಹಿದಾಯತ್ ಅಡ್ಡೂರ್, ‘ದುಬೈನಲ್ಲಿ ಉದ್ಯೋಗ ಸಿಗುವುದಾಗಿ ಏಜೆಂಟ್ ನನ್ನು ನಂಬಿಕೊಂಡು ಬಂದು ಮೋಸ ಹೋದ ಬಡ ಕಾರ್ಮಿಕ, ಅನಕ್ಷರಸ್ಥ ಚಂಗೂರ್ ಪ್ರಸಾದ್ ತಿನ್ನಲು ಆಹಾರವಿಲ್ಲದೆ ದಿಕ್ಕು ತೋಚದೇ ತಿರುಗಾಡುತ್ತಿದ್ದಾಗ ಹಠಾತ್ತಾಗಿ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಿಸಲ್ಪಟ್ಟನು. ಅಲ್ಲಿ ಪರೀಕ್ಷಿಸಿದಾಗ ಬ್ರೈನ್ ಟ್ಯೂಮರ್ ನಿಂದ ಬಳಲುತ್ತಿದ್ದಾನೆಂದು ತಿಳಿದು ಬಂತು.

ಆಸ್ಪತ್ರೆಯಲ್ಲಿ ದಾಖಲಾಗಿರುವ ವಿಷಯ ತಿಳಿದು ಭೇಟಿ ನೀಡಿದ ಏಮ್ ಇಂಡಿಯಾ ಫೌಂಡೇಶನ್ ನ ಶೇಕ್ ಮುಝಫ್ಫರ್, ಚಂಗೂರ್ ಪ್ರಸಾದ್ ಗೆ ಧೈರ್ಯ ತುಂಬಿ, ನನ್ನನ್ನು ಸಂಪರ್ಕಿಸಿದರು. ನಾವು ಚಂಗೂರ್ ಪ್ರಸಾದ್ ನಿಗೆ ಪ್ರಥಮ ಹಂತದಲ್ಲಿ ಬೇಕಾದ ಚಿಕಿತ್ಸೆಯನ್ನು ಶಾರ್ಜಾ ಖಾಸ್ಮಿಯಾ ಆಸ್ಪತ್ರೆಯಲ್ಲಿ ನೀಡಿ, ವೈದ್ಯರ ಸಲಹೆಯಂತೆ ಡಿಸ್ಚಾರ್ಜ್ ಮಾಡಿದೆವು. ಆಸ್ಪತ್ರೆಯಲ್ಲಿ ಇನ್ಶುರೆನ್ಸ್ ಮೂಲಕ ಸ್ವಲ್ಪ ರಿಯಾಯಿತಿ ಸಿಕ್ಕಿದರೂ 1ಲಕ್ಷ₹ ನಾವು ಪಾವತಿಸಿದೆವು. ಚಂಗೂರ್ ಪ್ರಸಾದನನ್ನು ಸುರಕ್ಷಿತವಾಗಿ ಊರಿಗೆ ಕಳುಹಿಸಲು ಸಹಪ್ರಯಾಣಿಕ ಬೇಕಾದ ಕಾರಣ ಆತನ ಮನೆಯವರನ್ನು ಸಂಪರ್ಕಿಸಿ, ಆತನ ಅಳಿಯನನ್ನು ದುಬೈಗೆ ಕರೆಸಿಕೊಂಡೆವು.

ಚಂಗೂರ್ ಪ್ರಸಾದ್ ಆಸ್ಪತ್ರೆಗೆ ದಾಖಲಾಗುವ ಮುನ್ನವೇ ಪಾಸ್ಪೋರ್ಟ್ ಕಳೆದುಕೊಂಡಿದ್ದ ಕಾರಣ, ಭಾರತಕ್ಕೆ ಕಳುಹಿಸಲು ಹೊಸದಾಗಿ ‘ವೈಟ್ ಪಾಸ್ಪೋರ್ಟ್’ ಎಮರ್ಜೆನ್ಸಿ ಸರ್ಟಿಫಿಕೇಟ್ ತಯಾರಾಗುವ ವರೆಗೂ ತಂಗಲು ಉತ್ತಮ ವಾತಾವರಣದ ಆವಶ್ಯಕತೆ ಇದ್ದ ಕಾರಣ, ಫಾರ್ಚೂನ್ ಗ್ರೂಪ್ ಆಫ್ ಹೋಟೇಲ್ಸ್ ನ ಛೇರ್ಮನ್ ಹಾಗೂ ಕೆಎನ್ಆರೈ ಯುಎಇ ಅಧ್ಯಕ್ಷರಾದ ಪ್ರವೀಣ್ ಶೆಟ್ಟಿ ತಕ್ಷಣವೇ ಸ್ಪಂದಿಸಿ, ‘ಎಲ್ಲಾ ಪೇಪರ್ ವರ್ಕ್ ಆಗುವ ವರೆಗೆ ನಮ್ಮ ಹೋಟೆಲ್ ನಲ್ಲಿಯೇ ತಂಗಲು ವ್ಯವಸ್ಥೆ, ಊಟ ತಿಂಡಿಯ ವ್ಯವಸ್ಥೆ ನಾನು ಮಾಡುವೆ’ ಎಂದು ಜವಾಬ್ದಾರಿ ಹೊತ್ತು 12 ದಿನ ನೆರವಾದರು.

ಎಮರ್ಜೆನ್ಸಿ ಸರ್ಟಿಫಿಕೇಟ್ ಮಾಡಲು ಹಲವು ಅಡಚಣೆಗಳು ಬಂದಾಗ ನೆರವಿಗೆ ಬಂದ ದುಬೈನ ಭಾರತೀಯ ರಾಯಭಾರಿ ಕಚೇರಿಯ ಕೌನ್ಸಲ್ ಜಿತೇಂದ್ರ ಸಿಂಗ್ ನೇಗಿ ಎಲ್ಲವನ್ನೂ ಸುಸೂತ್ರವಾಗಿ ನಿವಾರಿಸಿದರು ಮತ್ತು ಸಾಮಾಜಿಕ ಕಾರ್ಯಕರ್ತ ಗಿರೀಶ್ ಪಂಥ್ ಸಹಕರಿಸಿದರು. ಪೊಲೀಸ್ ರಿಪೋರ್ಟ್, ಇಮಿಗ್ರೇಷನ್ ಕೆಲಸವನ್ನು ಮುಝಫ್ಫರ್ ಮತ್ತು ಇಮ್ರಾನ್ ಎರ್ಮಾಳ್ ಪೂರ್ಣಗೊಳಿಸಿದರು. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ದಿನದಿಂದ ಭಾರತದಲ್ಲಿ ಹೆಚ್ಚಿನ ಶಸ್ತ್ರಚಿಕಿತ್ಸೆ ಪಡೆಯುವ ವರೆಗೂ ದೈನಂದಿನವಾಗಿ ಬೇಕಾದ ದುಬಾರಿ ಔಷಧ ಹಾಗೂ ತಾಯ್ನಾಡಿಗೆ ತಲುಪಿಸಲು ಬೇಕಾದ ಎಲ್ಲಾ ವ್ಯವಸ್ಥೆಗೆ ಸುಮಾರು 2.5 ಲಕ್ಷ ರೂಪಾಯಿಗಳನ್ನು ಖರ್ಚು ಮಾಡಿದ ನಮ್ಮ ತಂಡ ಕೊನೆಗೂ ದುಬೈನಿಂದ ಉತ್ತರ ಪ್ರದೇಶದ ಲಕ್ನೋಗೆ ತಲುಪಿ ಅಲ್ಲಿಂದ ಗೋರಕ್’ಪುರದ ಆತನ ಕುಟುಂಬದ ಮನೆಗೆ ತಲುಪಿಸುವಲ್ಲಿ ಯಶಸ್ವಿಯಾಗಿದೆ.

ಪಾಸ್ಪೋರ್ಟ್ ಕಳೆದುಕೊಂಡು, ಹಣವೂ ಇಲ್ಲದೇ, ಭಾರತಕ್ಕೆ ಮರಳುವ ಆಸೆಯನ್ನೇ ಕೈಬಿಟ್ಟು ಆಸ್ಪತ್ರೆಯಲ್ಲಿ ಏಕಾಂಗಿಯಾಗಿ ಮಲಗಿದ್ದ ಚಂಗೂರ್ ಪ್ರಸಾದ್ ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಂಡು ತಾಯ್ನಾಡಿಗೆ ತಲುಪಿ ತನ್ನ ಪತ್ನಿ ಮಕ್ಕಳೊಂದಿಗೆ ನಗುತ್ತಾ ಸಂತಸದಿಂದಿರುವ ಪೋಟೋ ಕಳುಹಿಸಿದ್ದಾನೆ. ಅವನ ಮುಂದಿನ ಚಿಕಿತ್ಸೆ ಕುರಿತು ಉತ್ತರ ಪ್ರದೇಶದ ಆಸ್ಪತ್ರೆಯಲ್ಲೂ ನಾವು ಮಾತುಕತೆ ನಡೆಸುತ್ತಿದ್ದೇವೆ.’ ಎಂದು ಹಿದಾಯತ್ ಅಡ್ಡೂರ್ ಮಾಹಿತಿ ನೀಡಿದರು.

Hot Topics

ರಾಜ್ಯದಲ್ಲಿ ಮೇ 10 ರಿಂದ ಮೇ 24ರವರೆಗೆ ಲಾಕ್’ಡೌನ್

ಬೆಂಗಳೂರು: ಕರ್ನಾಟಕದಲ್ಲಿ ಮೇ 10 ರಿಂದ ಮೇ 24 ವರೆಗೆ ಲಾಕ್'ಡೌನ್ ವಿಧಿಸಲಾಗಿದೆ.ಲಾಕ್'ಡೌನ್ ಸಂದರ್ಭದಲ್ಲಿ ಬೆಳಿಗ್ಗೆ 6-10 ಗಂಟೆಯವರೆಗೆ ಅಗತ್ಯ ವಸ್ತುಗಳಿಗೆ ಅವಕಾಶವಿದೆ. ನಂತರ ಯಾರು ಕೂಡ ರಸ್ತೆಗೆ ಇಳಿಯುವಂತಿಲ್ಲವೆಂದು ಹೇಳಿದ್ದಾರೆ.ಸೋಮವಾರದಿಂದ...

ಉಡುಪಿಯಲ್ಲಿ ಇಂದು 1526 ಮಂದಿಗೆ ಕೋರೊನಾ ಪಾಸಿಟಿವ್, ಐದು ಮಂದಿ ಮೃತ್ಯು

ಉಡುಪಿ: ಜಿಲ್ಲೆಯಲ್ಲಿ ಇಂದು ಒಟ್ಟು 1526 ಮಂದಿಗೆ ಕೋರೊನಾ ಪಾಸಿಟಿವ್ ಆಗಿದೆ. ಇಂದಿನ ವರದಿಯಂತೆ ಐದು ಮಂದಿ ಮೃತಪಟ್ಟಿದ್ದಾರೆ.ಜಿಲ್ಲೆಯಲ್ಲಿ ಪ್ರಸ್ತುತ 5063 ಸಕ್ರಿಯ ಪ್ರಕರಣಗಳಿವೆ. 384 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ‌. ಜಿಲ್ಲೆಯಲ್ಲಿ...

ಉಡುಪಿಯಲ್ಲಿ ಸಂಪೂರ್ಣ ಲಾಕ್’ಡೌನ್ ಮಾಡಿ – ಸಂಸದೆ ಶೋಭಾ ಕರಂದ್ಲಾಜೆ

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಜನತಾ ಲಾಕ್‌ಡೌನ್ ನಿಂದ ನಿಯಂತ್ರಣ ಕಷ್ಟ ಅನಿಸುತ್ತೆ. ಕಳೆದ ವರ್ಷದಂತೆ ಸಂಪೂರ್ಣ ಲಾಕ್‌ಡೌನ್‌ ಮಾಡಿ, ಅವಶ್ಯಕ ವಸ್ತುಗಳಿಗೆ ಮಾತ್ರ ಅವಕಾಶ...

Related Articles

ಛೋಟ ರಾಜನ್ ಮೃತಪಟ್ಟಿಲ್ಲ – ಏಮ್ಸ್ ಸ್ಪಷ್ಟನೆ

ನವದೆಹಲಿ: ಭೂಗತ ಪಾತಕಿ ಛೋಟಾ ರಾಜನ್ ಸತ್ತಿಲ್ಲ, ಜೀವಂತವಾಗಿರುವುದಾಗಿ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ಛೋಟಾ ರಾಜನ್ ಅವರು ಶುಕ್ರವಾರ ಕೋವಿಡ್ ಸಾಂಕ್ರಾಮಿಕ ರೋಗದಿಂದ ಮೃತಪಟ್ಟಿರುವ...

ಸಂಸದ ತೇಜಸ್ವಿ ಕರೆದಿದ್ದಕ್ಕೆ ನಾನು ಹೋಗಿದ್ದೆ, ಅವರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ – ಬಿಜೆಪಿ ಶಾಸಕ ಉದಯ್ ಗರುಡಾಚಾರ್

ಬೆಂಗಳೂರು: ಸಂಸದ ತೇಜಸ್ವಿ ಕರೆದಿದ್ದಕ್ಕೆ ನಾನು ಹೋಗಿದ್ದೆ, ಅವರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಹೇಳಿದ್ದಾರೆ.ಕೋವಿಡ್ ಹಾಸಿಗೆ ಬ್ಲಾಕಿಂಗ್ ವಿಚಾರದಲ್ಲಿ ಸಂಸದ ತೇಜಸ್ವಿ ಸೂರ್ಯ...

ರಾಜ್ಯದಲ್ಲಿ ಲಾಕ್’ಡೌನ್: ನೂತನ ಮಾರ್ಗಸೂಚಿಗಳು ಏನೇನು – ಸಂಪೂರ್ಣ ವಿವರ

ಬೆಂಗಳೂರು: ರಾಜ್ಯದಲ್ಲಿ COVID 19 ಪ್ರಸರಣದ ಸರಪಳಿಯನ್ನು ಮುರಿಯಲು ನೂತನ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ.ಮೇ 10-24 ವರೆಗೆ ಸಂಪೂರ್ಣ ಲಾಕ್'ಡೌನ್ ಇರಲಿದ್ದು ಈ ಕೆಳಗಿನ ಮಾರ್ಗಸೂಚಿಗಳು ಕಡ್ಡಾಯವಾಗಿ ಜಾರಿಯಾಗಲಿದೆ.(ಆದೇಶ ಸಂಖ್ಯೆ ಆರ್ಡಿ 158...
Translate »
error: Content is protected !!