ಖಾದರ್‌ ಖಾನ್‌ ಮಗ ಅಬ್ದುಲ್‌ ಖುದ್ದೂಸ್‌ ನಿಧನ

ನವದೆಹಲಿ: ದಿವಂಗತ ನಟ ಖಾದರ್ ಖಾನ್ ಅವರ ಹಿರಿಯ ಮಗ ಅಬ್ದುಲ್ ಖುದ್ದುಸ್ ಕೆನಡಾದಲ್ಲಿ ಬುಧವಾರ ನಿಧನರಾದರು ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ. ಈ ಸುದ್ದಿಯನ್ನು ಅಬ್ದುಲ್ ಕುದ್ದುಸ್ ಅವರ ಸಹೋದರ ಸರ್ಫರಾಜ್ ಅವರು ಧೃಡಪಡಿಸಿದ್ದಾರೆ.
ಅವರು ಕೆನಡಾದ ಆಸ್ಪತ್ರೆಯಲ್ಲಿ ಬುಧವಾರ ಮೂತ್ರಪಿಂಡ ಸಂಬಂಧಿತ ಕಾಯಿಲೆಗಳ ಕಾರಣ ನಿಧನರಾದರು ಎಂದು ಪಿಟಿಐಗೆ ತಿಳಿಸಿದ್ದಾರೆ. ಅಬ್ದುಲ್ ಕುದ್ದುಸ್ ಕೆನಡಾದಲ್ಲಿ ತಿಂಗಳುಗಟ್ಟಲೆ ಡಯಾಲಿಸಿಸ್‌ಗೆ ಒಳಗಾಗಿದ್ದರು ಎಂದು ಅವರ ಸಹೋದರ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಆರೋಗ್ಯ ಸಮಸ್ಯೆಗಳಿಂದಾಗಿ ಕಳೆದ ಕೆಲವು ತಿಂಗಳುಗಳಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಎಂದು ಸರ್ಫರಾಜ್ ಪಿಟಿಐಗೆ ತಿಳಿಸಿದ್ದಾರೆ.
ಸುದ್ದಿ ಸಂಸ್ಥೆ ಪಿಟಿಐಯೊಂದಿಗೆ ಮಾತನಾಡಿದ ಸರ್ಫರಾಜ್, “ನನ್ನ ಸಹೋದರ ಡಯಾಲಿಸಿಸ್‌ʼಗೆ ಒಳಗಾಗಿದ್ದ, ಅವನಿಗೆ ಸ್ವಲ್ಪ ಸಮಯದಿಂದ ಮೂತ್ರಪಿಂಡದ ಸಮಸ್ಯೆ ಇತ್ತು. ಕಳೆದ ಐದು ತಿಂಗಳಿನಿಂದ ಆಸ್ಪತ್ರೆಯಲ್ಲಿದ್ದನು, ನಿನ್ನೆ ನಮ್ಮೆಲ್ಲರನ್ನೂ ಬಿಟ್ಟು ಅಗಲಿದ್ದಾನೆಂದು” ಭಾವುಕರಾಗಿದ್ದಾರೆ.
ತಮ್ಮ ಜೀವನದ ಕೊನೆಯ ಹಂತದಲ್ಲಿ ಕೆನಡಾದಲ್ಲಿ ನೆಲೆಸಿದ ಬಾಲಿವುಡ್‌ ನ ಖ್ಯಾತ ನಟ ಖಾದರ್‌ ಖಾನ್, 2018 ರ ಡಿಸೆಂಬರ್‌ನಲ್ಲಿ ತಮ್ಮ 81 ನೇ ವಯಸ್ಸಿನಲ್ಲಿ ನಿಧನರಾದರು.

Hot Topics

ರಾಜ್ಯದಲ್ಲಿ ಮೇ 10 ರಿಂದ ಮೇ 24ರವರೆಗೆ ಲಾಕ್’ಡೌನ್

ಬೆಂಗಳೂರು: ಕರ್ನಾಟಕದಲ್ಲಿ ಮೇ 10 ರಿಂದ ಮೇ 24 ವರೆಗೆ ಲಾಕ್'ಡೌನ್ ವಿಧಿಸಲಾಗಿದೆ.ಲಾಕ್'ಡೌನ್ ಸಂದರ್ಭದಲ್ಲಿ ಬೆಳಿಗ್ಗೆ 6-10 ಗಂಟೆಯವರೆಗೆ ಅಗತ್ಯ ವಸ್ತುಗಳಿಗೆ ಅವಕಾಶವಿದೆ. ನಂತರ ಯಾರು ಕೂಡ ರಸ್ತೆಗೆ ಇಳಿಯುವಂತಿಲ್ಲವೆಂದು ಹೇಳಿದ್ದಾರೆ.ಸೋಮವಾರದಿಂದ...

ಉಡುಪಿಯಲ್ಲಿ ಇಂದು 1526 ಮಂದಿಗೆ ಕೋರೊನಾ ಪಾಸಿಟಿವ್, ಐದು ಮಂದಿ ಮೃತ್ಯು

ಉಡುಪಿ: ಜಿಲ್ಲೆಯಲ್ಲಿ ಇಂದು ಒಟ್ಟು 1526 ಮಂದಿಗೆ ಕೋರೊನಾ ಪಾಸಿಟಿವ್ ಆಗಿದೆ. ಇಂದಿನ ವರದಿಯಂತೆ ಐದು ಮಂದಿ ಮೃತಪಟ್ಟಿದ್ದಾರೆ.ಜಿಲ್ಲೆಯಲ್ಲಿ ಪ್ರಸ್ತುತ 5063 ಸಕ್ರಿಯ ಪ್ರಕರಣಗಳಿವೆ. 384 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ‌. ಜಿಲ್ಲೆಯಲ್ಲಿ...

ಉಡುಪಿಯಲ್ಲಿ ಸಂಪೂರ್ಣ ಲಾಕ್’ಡೌನ್ ಮಾಡಿ – ಸಂಸದೆ ಶೋಭಾ ಕರಂದ್ಲಾಜೆ

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಜನತಾ ಲಾಕ್‌ಡೌನ್ ನಿಂದ ನಿಯಂತ್ರಣ ಕಷ್ಟ ಅನಿಸುತ್ತೆ. ಕಳೆದ ವರ್ಷದಂತೆ ಸಂಪೂರ್ಣ ಲಾಕ್‌ಡೌನ್‌ ಮಾಡಿ, ಅವಶ್ಯಕ ವಸ್ತುಗಳಿಗೆ ಮಾತ್ರ ಅವಕಾಶ...

Related Articles

ಛೋಟ ರಾಜನ್ ಮೃತಪಟ್ಟಿಲ್ಲ – ಏಮ್ಸ್ ಸ್ಪಷ್ಟನೆ

ನವದೆಹಲಿ: ಭೂಗತ ಪಾತಕಿ ಛೋಟಾ ರಾಜನ್ ಸತ್ತಿಲ್ಲ, ಜೀವಂತವಾಗಿರುವುದಾಗಿ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ಛೋಟಾ ರಾಜನ್ ಅವರು ಶುಕ್ರವಾರ ಕೋವಿಡ್ ಸಾಂಕ್ರಾಮಿಕ ರೋಗದಿಂದ ಮೃತಪಟ್ಟಿರುವ...

ಸಂಸದ ತೇಜಸ್ವಿ ಕರೆದಿದ್ದಕ್ಕೆ ನಾನು ಹೋಗಿದ್ದೆ, ಅವರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ – ಬಿಜೆಪಿ ಶಾಸಕ ಉದಯ್ ಗರುಡಾಚಾರ್

ಬೆಂಗಳೂರು: ಸಂಸದ ತೇಜಸ್ವಿ ಕರೆದಿದ್ದಕ್ಕೆ ನಾನು ಹೋಗಿದ್ದೆ, ಅವರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಹೇಳಿದ್ದಾರೆ.ಕೋವಿಡ್ ಹಾಸಿಗೆ ಬ್ಲಾಕಿಂಗ್ ವಿಚಾರದಲ್ಲಿ ಸಂಸದ ತೇಜಸ್ವಿ ಸೂರ್ಯ...

ರಾಜ್ಯದಲ್ಲಿ ಲಾಕ್’ಡೌನ್: ನೂತನ ಮಾರ್ಗಸೂಚಿಗಳು ಏನೇನು – ಸಂಪೂರ್ಣ ವಿವರ

ಬೆಂಗಳೂರು: ರಾಜ್ಯದಲ್ಲಿ COVID 19 ಪ್ರಸರಣದ ಸರಪಳಿಯನ್ನು ಮುರಿಯಲು ನೂತನ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ.ಮೇ 10-24 ವರೆಗೆ ಸಂಪೂರ್ಣ ಲಾಕ್'ಡೌನ್ ಇರಲಿದ್ದು ಈ ಕೆಳಗಿನ ಮಾರ್ಗಸೂಚಿಗಳು ಕಡ್ಡಾಯವಾಗಿ ಜಾರಿಯಾಗಲಿದೆ.(ಆದೇಶ ಸಂಖ್ಯೆ ಆರ್ಡಿ 158...
Translate »
error: Content is protected !!