ಆಧಾರ್ – ಪಾನ್ ಕಾರ್ಡ್ ಜೋಡಣೆ ಕೊನೆಯ ದಿನಾಂಕ ವಿಸ್ತರಣೆ

ನವದೆಹಲಿ : ದೇಶದ ನಾಗರಿಕ ಗುರುತಿನ ಚೀಟಿಯಾದ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ಜೋಡಣೆಗೆ ಇದ್ದ ಮಾರ್ಚ್ 31ರ ಗಡುವನ್ನು ಈಗ ಆದಾಯ ತೆರಿಗೆ ವಿಸ್ತರಣೆ ಮಾಡಿದೆ.

ಮೂರು ತಿಂಗಳುಗಳ ತನಕ ವಿಸ್ತರಣೆ ಮಾಡಿ ಇಲಾಖೆ ಆದೇಶ ಹೊರಡಿಸಿದೆ. ಕೋವಿಡ್ ಬಿಕ್ಕಟ್ಟಿನ ಕಾರಣದಿಂದ ಜೋಡಣೆಯ ಗಡುವನ್ನು ವಿಸ್ತರಣೆ ಮಾಡಿದ್ದು, ಜೂನ್ 30 ರ ತನಕ ವಿಸ್ತರಿಸಿದೆ. ಜೂನ್ 30 ರೊಳಗೆ ಯಾರು ಆಧಾರ್ ಮತ್ತು ಪಾನ್ ಕಾರ್ಡ್ ಗಳ ಜೋಡಣೆ ಮಾಡುವುದಿಲ್ಲವೋ ಅವರು 1000ರೂ. ದಂಡ ಪಾವತಿಸಬೇಕಾಗುತ್ತದೆ ಮತ್ತು ಅವರ ಪಾನ್ ಕಾರ್ಡ್ ನಿಷ್ಕ್ರೀಯಗೊಳ್ಳಲಿದೆ ಎಂದು ಸರ್ಕಾರ ಹೇಳಿದೆ.

ಆಧಾರ್ ಕಾರ್ಡ್ ಹಾಗೂ ಪಾನ್ ಜೋಡಣೆಯ ಕೊನೆಯ ದಿನಾಂಕವಾಗಿದ್ದ ಬುಧವಾರ(ಮಾ.31)ದಂದು ಕೇಂದ್ರ ಸರ್ಕಾರದ ಆದಾಯ ತೆರಿಗೆ ಇಲಾಖೆಯ ವೆಬ್ ​ಸೈಟ್ ​ನಲ್ಲಿ ಆಧಾರ್ ಹಾಗೂ ಪಾನ್ ಜೋಡಣೆ ಮಾಡುವ ಸಂದರ್ಭದಲ್ಲಿ ತಾಂತ್ರಿಕ ದೋಷ ಬರುತ್ತಿದೆ ಎಂಬ ಹಲವರ ಆರೋಪ ಕೇಳಿ ಬಂದ ಹಿನ್ನಲೆಯಲ್ಲಿ, ಆಧಾರ್ ಹಾಗೂ ಪಾನ್ ಜೋಡಣೆಯ ಗಡುವನ್ನು ಇಲಾಖೆ ವಿಸ್ತರಣೆ ಮಾಡಿದೆ.

ವೆಬ್ ಸೈಟ್ ನಲ್ಲಿ ತಾಂತ್ರಿಕ ದೋಷವಿದೆ ಎಂಬ ದೇಶದ ನಾಗರಿಕರ ಆರೋಪದ ಹಿನ್ನಲೆಯಲ್ಲಿ, ಆಧಾರ್ ಹಾಗೂ ಪಾನ್ ಜೋಡಣೆಯ ಗಡುವನ್ನು ಜೂನ್ 30ಕ್ಕೆ ಇಲಾಖೆ ವಿಸ್ತರಿಸಿರುವುದನ್ನು ತನ್ನ ಅಧಿಕೃತ ಟ್ವಿಟರ್ ಖಾತೆಯ ಮೂಲಕ ತಿಳಿಸಿದೆ.

Hot Topics

ರಾಜ್ಯದಲ್ಲಿ ಮೇ 10 ರಿಂದ ಮೇ 24ರವರೆಗೆ ಲಾಕ್’ಡೌನ್

ಬೆಂಗಳೂರು: ಕರ್ನಾಟಕದಲ್ಲಿ ಮೇ 10 ರಿಂದ ಮೇ 24 ವರೆಗೆ ಲಾಕ್'ಡೌನ್ ವಿಧಿಸಲಾಗಿದೆ.ಲಾಕ್'ಡೌನ್ ಸಂದರ್ಭದಲ್ಲಿ ಬೆಳಿಗ್ಗೆ 6-10 ಗಂಟೆಯವರೆಗೆ ಅಗತ್ಯ ವಸ್ತುಗಳಿಗೆ ಅವಕಾಶವಿದೆ. ನಂತರ ಯಾರು ಕೂಡ ರಸ್ತೆಗೆ ಇಳಿಯುವಂತಿಲ್ಲವೆಂದು ಹೇಳಿದ್ದಾರೆ.ಸೋಮವಾರದಿಂದ...

ಉಡುಪಿಯಲ್ಲಿ ಇಂದು 1526 ಮಂದಿಗೆ ಕೋರೊನಾ ಪಾಸಿಟಿವ್, ಐದು ಮಂದಿ ಮೃತ್ಯು

ಉಡುಪಿ: ಜಿಲ್ಲೆಯಲ್ಲಿ ಇಂದು ಒಟ್ಟು 1526 ಮಂದಿಗೆ ಕೋರೊನಾ ಪಾಸಿಟಿವ್ ಆಗಿದೆ. ಇಂದಿನ ವರದಿಯಂತೆ ಐದು ಮಂದಿ ಮೃತಪಟ್ಟಿದ್ದಾರೆ.ಜಿಲ್ಲೆಯಲ್ಲಿ ಪ್ರಸ್ತುತ 5063 ಸಕ್ರಿಯ ಪ್ರಕರಣಗಳಿವೆ. 384 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ‌. ಜಿಲ್ಲೆಯಲ್ಲಿ...

ಉಡುಪಿಯಲ್ಲಿ ಸಂಪೂರ್ಣ ಲಾಕ್’ಡೌನ್ ಮಾಡಿ – ಸಂಸದೆ ಶೋಭಾ ಕರಂದ್ಲಾಜೆ

ಉಡುಪಿ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಜಿಲ್ಲೆಯಲ್ಲಿ ಜನತಾ ಲಾಕ್‌ಡೌನ್ ನಿಂದ ನಿಯಂತ್ರಣ ಕಷ್ಟ ಅನಿಸುತ್ತೆ. ಕಳೆದ ವರ್ಷದಂತೆ ಸಂಪೂರ್ಣ ಲಾಕ್‌ಡೌನ್‌ ಮಾಡಿ, ಅವಶ್ಯಕ ವಸ್ತುಗಳಿಗೆ ಮಾತ್ರ ಅವಕಾಶ...

Related Articles

ಛೋಟ ರಾಜನ್ ಮೃತಪಟ್ಟಿಲ್ಲ – ಏಮ್ಸ್ ಸ್ಪಷ್ಟನೆ

ನವದೆಹಲಿ: ಭೂಗತ ಪಾತಕಿ ಛೋಟಾ ರಾಜನ್ ಸತ್ತಿಲ್ಲ, ಜೀವಂತವಾಗಿರುವುದಾಗಿ ಆಲ್ ಇಂಡಿಯಾ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ (ಏಮ್ಸ್) ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ಛೋಟಾ ರಾಜನ್ ಅವರು ಶುಕ್ರವಾರ ಕೋವಿಡ್ ಸಾಂಕ್ರಾಮಿಕ ರೋಗದಿಂದ ಮೃತಪಟ್ಟಿರುವ...

ಸಂಸದ ತೇಜಸ್ವಿ ಕರೆದಿದ್ದಕ್ಕೆ ನಾನು ಹೋಗಿದ್ದೆ, ಅವರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ – ಬಿಜೆಪಿ ಶಾಸಕ ಉದಯ್ ಗರುಡಾಚಾರ್

ಬೆಂಗಳೂರು: ಸಂಸದ ತೇಜಸ್ವಿ ಕರೆದಿದ್ದಕ್ಕೆ ನಾನು ಹೋಗಿದ್ದೆ, ಅವರಿಗೆ ಯಾರೋ ತಪ್ಪು ಮಾಹಿತಿ ನೀಡಿದ್ದಾರೆ ಎಂದು ಬಿಜೆಪಿ ಶಾಸಕ ಉದಯ್ ಗರುಡಾಚಾರ್ ಹೇಳಿದ್ದಾರೆ.ಕೋವಿಡ್ ಹಾಸಿಗೆ ಬ್ಲಾಕಿಂಗ್ ವಿಚಾರದಲ್ಲಿ ಸಂಸದ ತೇಜಸ್ವಿ ಸೂರ್ಯ...

ರಾಜ್ಯದಲ್ಲಿ ಲಾಕ್’ಡೌನ್: ನೂತನ ಮಾರ್ಗಸೂಚಿಗಳು ಏನೇನು – ಸಂಪೂರ್ಣ ವಿವರ

ಬೆಂಗಳೂರು: ರಾಜ್ಯದಲ್ಲಿ COVID 19 ಪ್ರಸರಣದ ಸರಪಳಿಯನ್ನು ಮುರಿಯಲು ನೂತನ ಮಾರ್ಗಸೂಚಿಗಳನ್ನು ರೂಪಿಸಲಾಗಿದೆ.ಮೇ 10-24 ವರೆಗೆ ಸಂಪೂರ್ಣ ಲಾಕ್'ಡೌನ್ ಇರಲಿದ್ದು ಈ ಕೆಳಗಿನ ಮಾರ್ಗಸೂಚಿಗಳು ಕಡ್ಡಾಯವಾಗಿ ಜಾರಿಯಾಗಲಿದೆ.(ಆದೇಶ ಸಂಖ್ಯೆ ಆರ್ಡಿ 158...
Translate »
error: Content is protected !!