ಕಳೆದ ಎರಡು ವರ್ಷದಿಂದ 2000 ಸಾವಿರ ನೋಟುಗಳನ್ನು ಮುದ್ರಿಸಿಲ್ಲ – ಕೇಂದ್ರ ಸರಕಾರ

ನವದೆಹಲಿ: ಕಳೆದ ಎರಡು ವರ್ಷಗಳಿಂದ 2 ಸಾವಿರ ಮುಖಬೆಲೆಯ ಕರೆನ್ಸಿ ನೋಟುಗಳು ಮುದ್ರಣವಾಗಿಲ್ಲ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.

ಲೋಕಸಭೆಯಲ್ಲಿಂದು ಈ ಕುರಿತು ಲಿಖಿತ ಉತ್ತರ ನೀಡಿದ ಹಣಕಾಸು ಖಾತೆ ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್, ಸಾರ್ವಜನಿಕರ ವ್ಯವಹಾರಿಕ ಬೇಡಿಕೆ ಅನುಕೂಲತೆಗಾಗಿ ಆರ್ ಬಿಐನೊಂದಿಗೆ ಸಮಾಲೋಚಿಸಿ ಕಳೆದ ಎರಡು ವರ್ಷಗಳಿಂದ ಈ ನಿರ್ಧಿಷ್ಟ ನೋಟುಗಳ ಮುದ್ರಣ ಮಾಡದಿರುವ ನಿರ್ಧಾರ ಕೈಗೊಳ್ಳಲಾಗಿತ್ತು ಎಂದು ತಿಳಿಸಿದರು.

2019-20 ಮತ್ತು 2020-21ರ ವರ್ಷದಲ್ಲಿ 2 ಸಾವಿರ ರೂ. ನೋಟ್ ಗಳನ್ನು ಮುದ್ರಣ ಮಾಡಿಲ್ಲ ಎಂದು ಅವರು ಮಾಹಿತಿ ನೀಡಿದರು.

2016-17ರ ಆರ್ಥಿಕ ವರ್ಷದಲ್ಲಿ 3,542,991 ಮಿಲಿಯನ್ 2 ಸಾವಿರ ರೂ. ನೋಟುಗಳನ್ನು ಮುದ್ರಣ ಮಾಡಲಾಗಿತ್ತು ಎಂದು ಆರ್ ಬಿಐ 2019ರಲ್ಲಿ ಹೇಳಿಕೆ ನೀಡಿತ್ತು. ಆದಾಗ್ಯೂ, 2017-18ರಲ್ಲಿ ಕೇವಲ 111.507 ಮಿಲಿಯನ್ ನೋಟುಗಳನ್ನು ಮಾತ್ರ ಮುದ್ರಣ ಮಾಡಲಾಗಿತ್ತು. 2018-19ರಲ್ಲಿ ಇವುಗಳನ್ನು 46,690 ಮಿಲಿಯನ್ ನೋಟುಗಳಿಗೆ ಇಳಿಕೆ ಮಾಡಲಾಯಿತು. ಕಪ್ಪು ಹಣ ತಡೆಗಟ್ಟುವ ನಿಟ್ಟಿನಲ್ಲಿ ಸರ್ಕಾರ ಈ ಕ್ರಮ ಕೈಗೊಂಡಿದೆ.

ನಕಲಿ ನೋಟುಗಳು ಮತ್ತು ಕಪ್ಪು ಹಣವನ್ನು ತಡೆಗಟ್ಟುವ ನಿಟ್ಟಿನಲ್ಲಿ 500 ರೂ. ಮತ್ತು 1 ಸಾವಿರ ರೂ. ನೋಟುಗಳನ್ನು ಸರ್ಕಾರ ಅಮಾನ್ಯಗೊಳಿಸಿದ ನಂತರ ನವೆಂಬರ್ 2016ರಂದು 2 ಸಾವಿರ ಮುಖಬೆಲೆಯ ನೋಟುಗಳನ್ನು ಪರಿಚಯಿಸಿತ್ತು.

ಆತ್ಮೀಯ ಓದುಗರೇ, ಪಾರದರ್ಶಕ ಸುದ್ದಿಗಳು ನಿಮಗೆ ನಿರಂತರ ತಲುಪಲು ನಿಮ್ಮ ಸಹಾಯ ಅತೀ ಅಗತ್ಯ. ಸತ್ಯ ಎಲ್ಲೆಡೆ ತಲುಪಲು ನಮ್ಮೊಂದಿಗೆ ಕೈ ಜೋಡಿಸಿ. ನಮ್ಮನ್ನು ಬೆಂಬಲಿಸಲು

Hot Topics

ಕೃಷ್ಣ ಮಠದಲ್ಲಿ ನೀಡಿದ ಹೇಳಿಕೆಗಳನ್ನು ಹಿಂಪಡೆಯುತ್ತೇನೆ : ತೇಜಸ್ವಿ ಸೂರ್ಯ

ಉಡುಪಿ,( ಡಿ.27): ಎರಡು ದಿನಗಳ ಹಿಂದೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ 'ಭಾರತದಲ್ಲಿ ಹಿಂದೂ ಪುನರುತ್ಥಾನ' ಎಂಬ ವಿಷಯದ ಕುರಿತು ಮಾತನಾಡಿದ್ದ ನನ್ನ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ ಎಂದು ಸಂಸದ ತೇಜಸ್ವಿ...

ನಮ್ಮ ನಾಡ ಒಕ್ಕೂಟ ಬೈಂದೂರು ಘಟಕ ಮತ್ತು ಹಳಗೇರಿ ಓವರ್ಸೀಸ್ ಕಮಿಟಿ ವತಿಯಿಂದ ಉಚಿತ ಆಯುಷ್ಮಾನ್ ಕಾರ್ಡ್, ಈ-ಶ್ರಮ್ ಕಾರ್ಡ್ ಮತ್ತು ವಿದ್ಯಾರ್ಥಿವೇತನ ಶಿಬಿರ

ದಿನಾಂಕ 26 (ಡಿ.2021), ಆದಿತ್ಯವಾರ: ಚಿಕಿತ್ಸೆಯ ಸಂಕಷ್ಟದ ಸನ್ನಿವೇಶದಲ್ಲಿ ಆತ್ಮವಿಶ್ವಾಸ ತುಂಬಲು ಹಾಗೂ ಶೈಕ್ಷಣಿಕ ರಂಗದಲ್ಲಿ ಪ್ರೇರಣೆ ನೀಡುವ ಉದ್ದೇಶದಿಂದ ಇಂದು ನಮ್ಮ ನಾಡ ಒಕ್ಕೂಟ(ರಿ) ಬೈಂದೂರು ಘಟಕ ಮತ್ತು ಹಳಗೇರಿ ಓವರ್ಸೀಸ್...

ಮಂಗಳೂರು : ಇಂಜಿನಿಯರಿಂಗ್ ವಿದ್ಯಾರ್ಥಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ

ಮಂಗಳೂರು (ಡಿ.26): ಇಲ್ಲಿನ ಸುರತ್ಕಲ್ ನ ಇಂಜಿನಿಯರಿಂಗ್ ಕಾಲೇಜ್ ನ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ. ಸೌರವ್ ಎನ್ನುವ ಬಿಹಾರ ಮೂಲದ ದ್ವಿತೀಯ ವರ್ಷದ ವಿದ್ಯಾರ್ಥಿ ಸೌರವ್...

Related Articles

ರಾಜ್ಯ ಸರ್ಕಾರಗಳಿಗೆ ತೆರಿಗೆ ಹಂಚಿಕೆಯ ಮುಂಗಡ ಕಂತು ಹಂಚಿಕೆ

ನವದೆಹಲಿ,(ಜ.21): ಹಣಕಾಸು ಸಚಿವಾಲಯದ ವೆಚ್ಚ ಇಲಾಖೆ, 17 ರಾಜ್ಯಗಳಿಗೆ 9,781 ಕೋಟಿ ರೂ. ತಿಂಗಳ ಬದಲಾವಣೆ ನಂತರದ ಆದಾಯ ಕೊರತೆ (ಪಿಡಿಆರ್ ಆಡಿ) ಅನುದಾನವನ್ನು ಬಿಡುಗಡೆ ಮಾಡಿದೆ. ಇದು ರಾಜ್ಯಗಳಿಗೆ ಬಿಡುಗಡೆ ಮಾಡಿದ...

ಕವಿ ಚನ್ನವೀರ ಕಣವಿ ಚಿಕಿತ್ಸಾ ವೆಚ್ಚ ಬರಿಸಲಿರುವ ಸರ್ಕಾರ : ಸಿಎಂ ಬಸವರಾಜ್ ಬೊಮ್ಮಾಯಿ

ಬೆಂಗಳೂರು,(ಜ.20): ಅನಾರೋಗ್ಯಕ್ಕೆ ಒಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಹಿರಿಯ ಕವಿ ಚನ್ನವೀರ ಕಣವಿ ಅವರ ಆಸ್ಪತ್ರೆ ವೆಚ್ಚ ವನ್ನು ಸರ್ಕಾರದ ವತಿಯಿಂದ ಭರಿಸಲು ನಿರ್ಧರಿಸಲಾಗಿದೆ. ಜ್ವರದಿಂದ ಬಳಲುತ್ತಿದ್ದ ಕಣವಿ ಅವರು ಜನವರಿ 14 ರಂದು...

ಮಂಡ್ಯ : ಶೆಲ್ ತಯರಿಕ ಕಂಪನಿಯಲ್ಲಿ 39 ಜನರಿಗೆ ಕೋರೊನ

ಮಂಡ್ಯ (ಜ.21): ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಮಂಡ್ಯ ಜಿಲ್ಲೆಯ ಶೆಲ್ ತಯಾರಿಕಾ ಫ್ಯಾಕ್ಟರಿಯಲ್ಲಿ 39 ಸಿಬ್ಬಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಸೋಮನಹಳ್ಳಿ...
Translate »
error: Content is protected !!