12 ವರ್ಷದ ನಂತರ ಆತನನ್ನು ನಿರಪರಾಧಿಯೆಂದು ಬಿಟ್ಟರು – ಅಷ್ಟೊತ್ತಿಗೆ ಆತನ ಬದುಕೇ ನಾಶವಾಗಿತ್ತು!

ಲೇಖನ: ತಲ್ಹಾ ಕೆ.ಪಿ (ವಕೀಲರು, ಬೆಂಗಳೂರು)

ದಿನಾಂಕ 13.5.2008 UP’ಯ ಭಾದೋಹಿ’ಯ ಶಾಬಾಜ್ ಅಹ್ಮದ್ ಮತ್ತು ಅವರ ಮನೆಯವರಿಗೆ ಕರಾಳ ದಿನವಾಗಿತ್ತು . ಏಕೆಂದರೆ ಅಂದು ಅವರ ಮೇಲೆ ಜೈಪುರ ಪೊಲೀಸ್ ಸ್ಟೇಷನ್’ನಲ್ಲಿ ದೇಶ ದ್ರೋಹ, ಕೊಲೆ, ಬಾಂಬ್ ಬ್ಲಾಸ್ಟ್’ ನಡಿಸಿದಂತಹ ಅಪರಾಧ ಹೊರೆಸಲಾಗಿತ್ತು. ಅದಲ್ಲದೆ ಆರೋಪಿಯೆಂದು ಪೊಲೀಸರು ಬಂಧಿಸಿದಾಗಲೇ, ಆತನನ್ನು ದೇಶದ ಹಲವಾರು ಭಯೋತ್ಪಾದಕ ಕೃತ್ಯಗಳಲ್ಲಿ ಆತ ಭಾಗಿಯಾಗಿದ್ದನೆಂದು ಮತ್ತು ಅವರಿಂದ ತರಬೇತಿ ಪಡೆದು ಈ ಘೋರ ಕೃತ್ಯ ಮಾಡಿದ್ದಾನೆಂದು ದೇಶದ ಟಿ ವಿ ಮತ್ತು ಪತ್ರಿಕೆಗಳು ವರ್ಣರಂಜಿತವಾಗಿ ಹಲವಾರು ದಿನಗಳವರೆಗೆ ವಿವರಿಸಿತ್ತು. ಅಂದಿನವರೆಗೆ ಮನೆಯವರಿಗೆ ಮತ್ತು ಮಿತ್ರರಿಗೆ ಪ್ರೀತಿಪಾತ್ರನಾಗಿದ್ದವ ಒಂದೇ ದಿನದಲ್ಲಿ ದೇಶದ್ರೋಹಿ ಎಂಬ ಹಣೆಪಟ್ಟಿ ಕಟ್ಟಿಕೊಂಡು ಜೈಪುರ ಜೈಲುಸೇರಿಕೊಂಡಿದ್ದ.

ಈಗ ಆತ ಯಾರಿಗೂ ಬೇಡದ ವ್ಯಕ್ತಿ, ಎಂದರೆ ಹಲವಾರು ಜನರನ್ನು ಕೊಂದ ಬಾಂಬ್ ಬ್ಲಾಸ್ಟ್’ನಲ್ಲಿ ಆತ ಭಾಗಿ ಎನ್ನುವ ಘೋರ ಆರೋಪದ ವಿಚಾರ ಆತನನ್ನು ಅತಿಯಾಗಿ ಕಾಡುತ್ತಿತ್ತು , ನಾನಾ ರೀತಿಯಲ್ಲಿ ಪೊಲೀಸರು ಆತನನ್ನು ನಿರಂತರ ಕೇಳುತ್ತಿರುವ ಪ್ರಶ್ನೆ, ನೀನು ಯಾವ ಭಯೋತ್ಪಾದಕ ಸಂಘಟನೆಗೆ ಸೇರಿದವ? ಈ ಬ್ಲಾಸ್ಟ್ ನಡೆಸಲು ಎಷ್ಟು ಹಣ ಬಂದಿದೆ? …..ಇತ್ಯಾದಿ ಇತ್ಯಾದಿ.ಏನೂ ತಿಳಿಯದಿದ್ದರೂ ನೂರಾರು ಸಲ ಈ ರೀತಿಯ ನಾನಾ ಪ್ರಶ್ನೆಗಳಿಗೆ ಆತ ಸಂಪೂರ್ಣವಾಗಿ ನೊಂದು ಹೋಗಿದ್ದ. ಏಕೆಂದರೆ ಆತನ ಮೇಲೆ ಒಂದಲ್ಲ ಎರಡಲ್ಲ ಸುಮಾರು ಒಂಬತ್ತು FIR’ಗಳು ವಿರುದ್ಧ ದಾಖಲಾಗಿದ್ದವು. ಒಂದರಲ್ಲಿ ಆತ ಜಾಮೀನು ಪಡೆದರೆ ಇನ್ನೊಂದು FIR’ನಲ್ಲಿ ಆತನಿಗೆ ಜೈಲಿನಲ್ಲಿಯೇ ಇರಬೇಕಾಗಿ ಬರುತಿತ್ತು.

ಆತನ ವಕೀಲರು ಕೋರ್ಟಿನಲ್ಲಿ ತಿಳಿಸಿರುವಂತೆ 2008 ರಲ್ಲಿ ಅವನ ಮೇಲೆ ಬಾಂಬ್ ಸ್ಪೋಟಕ್ಕೆ ಸಂಭಂದಿಸಿದ ಸುಮಾರು ಒಂಬತ್ತು FIR’ಗಳನ್ನು ದಾಖಲಿಸಲಾಗಿತ್ತು. ಅದರ ಪೈಕಿ ಸುಮಾರು 8 ರಲ್ಲಿ ಪೊಲೀಸರು ಕೋರ್ಟಿಗೆ ಆರೋಪ ಪಟ್ಟಿ ಸಲ್ಲಿಸಿದರು.ಅದರಲ್ಲಿ ಆತ ನಿರ್ದೋಷಿಯೆಂದು ಸಾಬೀತಾಗಿದೆ. ಈಗ ಮತ್ತೆ 12 ವರ್ಷಗಳ ನಂತರ ಉಳಿದ ಮತ್ತು ಇಷ್ಟರವರೆಗೆ ಆರೋಪಪಟ್ಟಿ ದಾಖಲಿಸದ FIR ಹೆಸರಿನಲ್ಲಿ ಅದೇ ಆರೋಪಗಳಿಗಾಗಿ ಆತನನ್ನು ಮತ್ತೆ ಬಂಧಿಸುವುದು ಸರಿಯಲ್ಲ ಎಂದು ತಿಳಿಸಿದಾಗ ಸುಮಾರು 12 ವರ್ಷಗಳ ನಂತರ ಮಾಡದ ತಪ್ಪಿಗಾಗಿ ಆತ ಈ ಭಯಂಕರ ಯಾತನೆಯನ್ನು ಅನುಭವಿಸಬೇಕಾಗಿ ಬಂತು ಎನ್ನುವುದು ಅತ್ಯಂತ ಬೇಸರದ ಸಂಗತಿ. ಮಾಡದ ತಪ್ಪಿಗೆ ಒಬ್ಬ ವ್ಯಕ್ತಿಗೆ ಸುಮಾರು 12 ವರ್ಷಗಳ ಕಾಲ ಜೈಲಿನಲ್ಲಿರಿಸುವುದು ಮತ್ತು ನಂತರ ಆತನನ್ನು ನಿರಪರಾಧಿ ಎಂದು ಹೇಳಿ ಬಿಟ್ಟುಬಿಡುವುದು ನಿಜಕ್ಕೂ ಆಘಾತಕಾರಿ. ಈ ರೀತಿಯ ಕೇಸ್”ಗಳಲ್ಲಿ ಬಂಧಿತರಾದವರ ಪುನರ್ವಸತಿಗಾಗಿ ಸರಕಾರದ ಬಳಿ ಯಾವುದೇ ಸಮರ್ಪಕವಾದ ಯೋಜನೆ ಇಲ್ಲ ಎನ್ನುವುದು ಅತ್ಯತ ಕಳವಳಕಾರಿ ಸಂಗತಿ. ಇಷ್ಟು ವಷಗಳಿಂದ ಭಯೋತ್ಪಾದಕ ಎಂದು ನಿರಂತರ ಸಮಾಜದಲ್ಲಿ ಗುರುತಿಸಲ್ಪಟ್ಟ, ಈ ವ್ಯಕ್ತಿಯು ಇಂದು ನಿರಪರಾಧಿಯೆಂದಾದಾಗ ಆತನ ಬಳಿ ಯಾರು ಇರುವುದಿಲ್ಲ. ಅದರ ಕುರಿತು ಮಾಧ್ಯಮಗಳಲ್ಲಿ ಯಾವುದೇ ಪ್ರಚಾರವಿರುವುದಿಲ್ಲ. ಟಿ ವಿ’ಯಲ್ಲಿ ಯಾವುದೇ ಪ್ರೈಮ್ ಟೈಮ್ ಟಿಬೇಟ್ ನಡೆಯುವುದಿಲ್ಲ. ಪತ್ರಿಕೆಗಳ ಸಂಪಾದಕರು ಯಾವುದೇ ಲೇಖನಗಳು ಬರೆಯುವುದಿಲ್ಲ. ಎಲ್ಲಿಯ ತನಕವೆಂದರೆ ಆತ ಬಿಡುಗಡೆಯಾದಾಗ ಅದು ಒಂದು ಸುದ್ದಿ ಕೂಡ ಆಗುವುದಿಲ್ಲ ಎನ್ನುವುದು ವಿಪರ್ಯಾಸ. ಈ ರೀತಿ ಯಾತನೆ ಅನುಭವಿಸಿದ ಸಾವಿರಾರು ಅಮಾಯಕ ಯುವಕರ ಪುನರ್ವಸತಿಗಾಗಿ ದೇಶದಲ್ಲಿ ಸಮರ್ಪಕವಾದ ಕಾನೂನು ತರಬೇಕಾಗಿದೆ . ನಮ್ಮ ಶಿಕ್ಷಾ ವಿಧಾನವು ರೆಫಾರ್ಮಟಾರಿ (ಎಂದರೆ ಸುಧಾರಣಾ ಶಿಕ್ಷಾ ವಿಧಾನ ) ಎಂದರೆ ತಪ್ಪು ಮಾಡಿದವನನ್ನು ನಾವು ಸುಧಾರಿಸುತ್ತೇವೆ ಎನ್ನುವ ವಿಚಾರ. ಇಲ್ಲಿ ತಪ್ಪು ಮಾಡದವನನ್ನು ಹಲವು ದಶಕಗಳ ಕಾಲ ಜೈಲಿನಲ್ಲಿಟ್ಟು ವಿಚಾರಣೆ ಮಾಡಿ. ಆತ ಅಮಾಯಕ ಎಂದು ತಿಳಿದಾಗ ಆತನಿಗೆ ಯಾವುದೇ ಪರಿಹಾರ ನೀಡದೆ ಹಾಗೆಯೇ ಬಿಟ್ಟುಬಿಡುವುದು ನಿಜಕ್ಕೂ ನಮ್ಮ ಪ್ರಜಾಪ್ರಭುತದಲ್ಲಿ ನಡೆಯುತ್ತಿರುವ ಅತ್ಯಂತ ಘೋರವಾದ ಅಪರಾಧ. ಇದರ ಕುರಿತು ಸರಕಾರಗಳು ಗಂಭೀರವಾಗಿ ಯೋಚಿಸಿ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕಾದ ಅವಶ್ಯಕತೆ ಖಂಡಿತಾ ಇದೆ.

ಆತ್ಮೀಯ ಓದುಗರೇ, ಪಾರದರ್ಶಕ ಸುದ್ದಿಗಳು ನಿಮಗೆ ನಿರಂತರ ತಲುಪಲು ನಿಮ್ಮ ಸಹಾಯ ಅತೀ ಅಗತ್ಯ. ಸತ್ಯ ಎಲ್ಲೆಡೆ ತಲುಪಲು ನಮ್ಮೊಂದಿಗೆ ಕೈ ಜೋಡಿಸಿ. ನಮ್ಮನ್ನು ಬೆಂಬಲಿಸಲು

Hot Topics

ಉತ್ತಮ ಬರಹಗಾರನಾಗಬೇಕಾದರೆ ಮೊದಲು ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಡಿಸಿಕೊಳ್ಳಬೇಕು – ಡಾ.ವಿನ್ಸೆಂಟ್ ಆಳ್ವ

ಉಡುಪಿ: ಉತ್ತಮ ಬರಹಗಾರನಾಗಬೇಕಾದರೆ ಮೊದಲು ಪುಸ್ತಕಗಳನ್ನು ಓದುವ ಹವ್ಯಾಸವನ್ನು ರೂಡಿಸಿಕೊಂಡಾಗ ಮುಂದೆ ಉತ್ತಮ ಸಾಹಿತ್ಯ ರಚನೆಯಾಗಲು ಸಾಧ್ಯವಿದೆ ಎಂದು ಕಲ್ಯಾಣಪುರ ಮಿಲಾಗ್ರಿಸ್‌ ಕಾಲೇಜಿನ ಪ್ರಾಂಶುಪಾಲರಾದ ಡಾ. ವಿನ್ಸೆಂಟ್‌ ಆಳ್ವಾ ಹೇಳಿದರು. ಅವರು ಭಾನುವಾರ ಕಲ್ಯಾಣಪುರ...

ಕರ್ನಾಟಕ ಸೇರಿದಂತೆ ಐದು ರಾಜ್ಯಗಳಿಗೆ ಪತ್ರ ಬರೆದ ಕೇಂದ್ರ ಸರ್ಕಾರ

ನವದೆಹಲಿ (ಡಿ.5):ಹೆಚ್ಚುತ್ತಿರುವ covid ಸಾಪ್ತಾಹಿಕ ಧನಾತ್ಮಕ ದರಗಳು ಮತ್ತು ಕೆಲವು ಜಿಲ್ಲೆಗಳಲ್ಲಿ ಸಾವುಗಳನ್ನು ತಡೆಯಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಕೇಂದ್ರವು ಐದು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಕ್ಕೆ ಪತ್ರ ಬರೆದಿದೆ.ಕೇಂದ್ರ ಆರೋಗ್ಯ ಕಾರ್ಯದರ್ಶಿ...

ಮಂಗಳೂರು: ಯುವತಿ ನೇಣು ಬಿಗಿದು ಆತ್ಮಹತ್ಯೆ

ಮಂಗಳೂರು: ಯುವತಿಯೊಬ್ಬಳು ತನ್ನ ಮನೆಯಲ್ಲಿ ಫ್ಯಾನಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕಾವೂರಿನ ಆಕಾಶಭವನದಲ್ಲಿ ನಡೆದಿದೆ. ಆಕಾಶಭವನ ಬಳಿಯ ಕಾಪ್ರಿಗುಡ್ಡೆ ನಿವಾಸಿ ಶಿಫಾಲಿ ( 22 ) ಮೃತಪಟ್ಟ ಯುವತಿ ಎಂದು...

Related Articles

ಬಿಜೆಪಿ ತೋಡಿದ ಖೆಡ್ಡಾ ಪ್ರಶಾಂತ್ ಕಿಶೋರ್ ಆದರೆ ಈಗ ಮುಳುವಾಗಿರುವುದು ಬಿಜೆಪಿಗೆ!

2014 ರ ಚುನಾವಣೆ ಎಲ್ಲರಿಗೂ ನೆನಪಿದೆ. ಮೋದಿ 282 ಸ್ಥಾನಗಳೊಂದಿಗೆ ವಿಜಯ ಸಾಧಿಸಿದ್ದರು. ಈ ಸಾಧನೆಯ ಹಿಂದೆ ಒರ್ವ ವ್ಯಕ್ತಿಯ ಕುಟಲೋಪಯಗಳು ಕೂಡ ಅಡಗಿದೆ ಎಂಬುವುದು ವಾಸ್ತವ. ವಿರೋಧ ಪಕ್ಷಗಳ ವೈಫಲ್ಯವನ್ನು ಜನರ...

ಕರಾವಳಿಯ ಆ ಎರಡು ಘಟನೆ – ಒಂದೇ ಮನಸ್ಥಿತಿ!

ಸಂಜೆ ಹೊತ್ತು ಕುಳಿತು ಮೊಬೈಲ್ ಸ್ಕ್ರೋಲ್ ಮಾಡುತ್ತಿರುವಾಗ ಎರಡು ವೀಡಿಯೋ ಗಳು ಗಮನ ಸೆಳೆದವು. ಮೊದಲನೆಯ ವೀಡಿಯೋದಲ್ಲಿ ಒಂದು ಪ್ರದೇಶದಲ್ಲಿ ಇಬ್ಬರು ಹುಡುಗರು, ಇಬ್ಬರು ಹುಡುಗಿಯರು ಕುಳಿತುಕೊಂಡು ಸ್ಮ್ಯಾಕ್ಸ್ ತಿನ್ನುತ್ತಿದ್ದರು. ತಕ್ಷಣ ಅತ್ತ...

ಈ ವಿಷಯದ ಕುರಿತು ನಾವೇಕೆ ಮಾತಾಡಬಾರದು?

ಇಷ್ಟೇ ಆಕೆ ಬರೆದದ್ದು. ಜತೆಗೆ ಸಿಎನ್ ಎನ್ ಸುದ್ದಿಸಂಸ್ಥೆ ಭಾರತದಲ್ಲಿ ನಡೆಯುತ್ತಿರುವ ರೈತ ಹೋರಾಟದ ಕುರಿತು ಮಾಡಿರುವ ವಿಸ್ತ್ರತ ವರದಿಯ ಲಿಂಕ್ ಶೇರ್ ಮಾಡಿದ್ದರು. ನೋಡನೋಡುತ್ತಿದ್ದಂತೆ ಅದು ಲಕ್ಷಾಂತರ ರೀಟ್ವೀಟ್ ಗಳಾದವು. #Rihanna...
Translate »
error: Content is protected !!