‘ಪ್ರವಾದಿ ಮುಹಮ್ಮದ್(ಸ) ಮಾನವತೆಯ ಮಾರ್ಗದರ್ಶಕ’ ಸೀರತ್ ಅಭಿಯಾನ: ಜ.ಇ. ಹಿಂದ್ ಮಂಗಳೂರು ವಲಯ ಮಟ್ಟದ ಪ್ರಬಂಧ ಸ್ಪರ್ಧೆಯ ವಿಜೇತರು

ಮಂಗಳೂರು: ಕಳೆದ ವರ್ಷ ಪ್ರವಾದಿ ಜನ್ಮ ತಿಂಗಳ ಸಂದರ್ಭದಲ್ಲಿ ಜಮಾಅತೆ ಇಸ್ಲಾಮೀ ಹಿಂದ್ ಕರ್ನಾಟಕ ರಾಜ್ಯದ ವತಿಯಿಂದ ನಡೆಸಲಾದ ‘ಪ್ರವಾದಿ ಮುಹಮ್ಮದ್(ಸ) ಮಾನವತೆಯ ಮಾರ್ಗದರ್ಶಕ’ ಎಂಬ ರಾಜ್ಯವ್ಯಾಪಿ ಸೀರತ್ ಅಭಿಯಾನದ ಪ್ರಯುಕ್ತ ಜಮಾಅತೆ ಇಸ್ಲಾಮೀ ಹಿಂದ್ ಮಂಗಳೂರು ವಲಯದ ವತಿಯಿಂದ ದ.ಕ., ಉಡುಪಿ ಮತ್ತು ಕೊಡಗು ಜಿಲ್ಲೆಗಳ ಪತ್ರಕರ್ತರು, ವಕೀಲರು ಮತ್ತು ಶಿಕ್ಷಕರಿಗಾಗಿ ವಿವಿಧ ವಿಷಯಗಳಲ್ಲಿ 2020 ಡಿಸೆಂಬರ್ ತಿಂಗಳಲ್ಲಿ ಆಯೋಜಿಸಲಾದ ಪ್ರಬಂಧ ಸ್ಪರ್ಧೆಯಲ್ಲಿ ಈ ಕೆಳಗಿನವರು ವಿಜೇತರಾಗಿದ್ದಾರೆ.

1. ಪತ್ರಕರ್ತರ ವಿಭಾಗ
ವಿಷಯ: “ಸಮಾಜ ಸುಧಾರಣೆಗೆ ಪ್ರವಾದಿ ಮುಹಮ್ಮದ್(ಸ)ರ ಕೊಡುಗೆ”
ಪ್ರಥಮ ಬಹುಮಾನ
ಶ್ರೀಮತಿ ಉಷಾ ಪ್ರೀತಮ್ (ವಿರಾಜಪೇಟೆ, ಕೊಡಗು ಜಿಲ್ಲೆ)

ದ್ವಿತೀಯ ಬಹುಮಾನ
ಶ್ರೀಮತಿ ಶಬೀನಾ ಬಾನು ವೈ.ಕೆ. (ಉಚ್ಚಿಲ, ಮಂಗಳೂರು, ದ.ಕ. ಜಿಲ್ಲೆ)

ತೃತೀಯ ಬಹುಮಾನ
ಶ್ರೀಮತಿ ರಕ್ಷಾ ವೇಣೂರು (ಬೆಳ್ತಂಗಡಿ, ದ.ಕ. ಜಿಲ್ಲೆ)
ಸಮಾಧಾನಕರ ಬಹುಮಾನ
ಶ್ರೀ ಸ್ವಸ್ತಿಕ್ ಕನ್ಯಾಡಿ ಧರ್ಮಸ್ಥಳ, ಬೆಳ್ತಂಗಡಿ, ದ.ಕ. ಜಿಲ್ಲೆ

2. ವಕೀಲರ ವಿಭಾಗ
ವಿಷಯ: “ಪ್ರವಾದಿ ಮುಹಮ್ಮದ್(ಸ)ರ ಸಾಮಾಜಿಕ ನ್ಯಾಯದ ಪರಿಕಲ್ಪನೆ”
ಪ್ರಥಮ ಬಹುಮಾನ
ಶ್ರೀಮತಿ ಸುಹಾನ ಸಫರ್ (ಬೀರಿ, ಮಾಡೂರು, ಮಂಗಳೂರು)
ದ್ವಿತೀಯ ಬಹುಮಾನ
ಶ್ರೀ ಜಯರಾಮ್ ಎಂ.ಆರ್. (ಕುಶಾಲನಗರ, ಕೊಡಗು ಜಿಲ್ಲೆ)
ತೃತೀಯ ಬಹುಮಾನ
ಶ್ರೀಮತಿ ರಶೀದಾ ಸಿ.ಕೆ. (ವಿರಾಜಪೇಟೆ, ಕೊಡಗು ಜಿಲ್ಲೆ)
ಸಮಾಧಾನಕರ ಬಹುಮಾನ
ಶ್ರೀ ಅಬೂತಾಹಿರ್ ಮಡಿಕೇರಿ, ಕೊಡಗು ಜಿಲ್ಲೆ

3. ಶಿಕ್ಷಕರ ವಿಭಾಗ
ವಿಷಯ: “ವ್ಯಕ್ತಿತ್ವ ನಿರ್ಮಾಣಕ್ಕೆ ಪ್ರವಾದಿ ಮುಹಮ್ಮದ್(ಸ)ರ ಕೊಡುಗೆ”
ಪ್ರಥಮ ಬಹುಮಾನ
ಶ್ರೀ ಚಾಲ್ರ್ಸ್ ಡಿಸೋಜ (ಸರಕಾರಿ ಪದವಿ ಪೂರ್ವ ಕಾಲೇಜು
ಐವರ್ನಾಡು, ಸುಳ್ಯ, ದ.ಕ. ಜಿಲ್ಲೆ)
ದ್ವಿತೀಯ ಬಹುಮಾನ
ಶ್ರೀ ಕೆ. ಶಾಂತಿರಾಜ್ ಹೆಗ್ಡೆ (ಸಂತ ಜೋಸೆಫ್ ಅನುದಾನಿತ ಹಿ.ಪ್ರಾ. ಶಾಲೆ
ಸಾಣೂರು, ಕಾರ್ಕಳ, ಉಡುಪಿ ಜಿಲ್ಲೆ)
ತೃತೀಯ ಬಹುಮಾನ
ಶ್ರೀ ರಂಜಿತ್ ಹೆಚ್.ಎಂ. (ಬದ್ರಿಯಾ ಪ್ರೌಢಶಾಲೆ, ಕಲ್ಲುಬಾಣೆ
ವಿರಾಜಪೇಟೆ, ಕೊಡಗು ಜಿಲ್ಲೆ)

ಸಮಾಧಾನಕರ ಬಹುಮಾನ:
ಶ್ರೀಮತಿ ರಮ್ಯಶ್ರೀ ಅನುಗ್ರಹ ವಿಮೆನ್ಸ್ ಕಾಲೇಜು, ಕಲ್ಲಡ್ಕ, ಬಂಟ್ವಾಳ, ದ.ಕ. ಜಿಲ್ಲೆ
ಶ್ರೀಮತಿ ಲೀಲಾವತಿ ಯು.ಬಿ. ಮೌಲಾನಾ ಆಝಾದ್ ಮಾಡೆಲ್ ಸ್ಕೂಲ್, ಕುದ್ರೋಳಿ, ಮಂಗಳೂರು, ದ.ಕ. ಜಿಲ್ಲೆ
ಶ್ರೀಮತಿ ಸುಲೋಚನಾ ಕುಮಾರಿ ಬಿ.ಕೆ. ಸರಕಾರಿ ಪದವಿ ಪೂರ್ವ ಕಾಲೇಜು, ಸಜಿಪಮೂಡ, ಬಂಟ್ವಾಳ, ದ.ಕ. ಜಿಲ್ಲೆ
ಶ್ರೀಮತಿ ಕಾವ್ಯಾ ಜಿ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಲ್ಕಟ್ಟ, ಮಂಗಳಾಂತಿ, ಮಂಗಳೂರು, ದ.ಕ. ಜಿಲ್ಲೆ
ಶ್ರೀಮತಿ ಸುನಿತಾ ವೇಗಸ್ ಸರಕಾರಿ ಪ್ರೌಢಶಾಲೆ, ನ್ಯೂಪಡ್ಪು, ಹರೇಕಳ, ಮಂಗಳೂರು, ದ.ಕ. ಜಿಲ್ಲೆ
ಶ್ರೀಮತಿ ಗೀತಾ ಕೆರೆಮೂಲೆ ಪೈಲೂರು, ಸುಳ್ಯ
ಶ್ರೀ ಭಾರದ್ವಾಜ ಕೆ. ಆನಂದತೀರ್ಥ, ಕೊಡಗು ಜಿಲ್ಲೆ
ಇವರಿಗೆ ತೀರ್ಪುಗಾರರ ಮೆಚ್ಚುಗೆ ಪಡೆದ ಬಹುಮಾನ ಲಭಿಸಿರುತ್ತದೆ.

ವಿಜೇತರಿಗೆ ಪ್ರಥಮ ರೂ. 15 ಸಾವಿರ, ದ್ವಿತೀಯ ರೂ. 10 ಸಾವಿರ, ತೃತೀಯ ರೂ. 5 ಸಾವಿರ ಹಾಗೂ ಸಮಾಧಾನಕರ ತಲಾ ರೂ. 2 ಸಾವಿರ ನಗದು ಬಹುಮಾನ ನೀಡಲಾಗುವುದು.

ದ.ಕ. ಮತ್ತು ಉಡುಪಿ ಜಿಲ್ಲೆಯ ವಿಜೇತರಿಗೆ ಮಾರ್ಚ್ 18ರಂದು ಗುರುವಾರ ಅಪರಾಹ್ನ 3 ಗಂಟೆಗೆ ಕಲ್ಲಡ್ಕ ವಿಟ್ಲ ರಸ್ತೆಯಲ್ಲಿರುವ ಅನುಗ್ರಹ ವಿಮೆನ್ಸ್ ಕಾಲೇಜಿನಲ್ಲಿ ಬಹುಮಾನ ವಿತರಣಾ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಬಂಟ್ವಾಳ ತಾಲೂಕು ತಹಶೀಲ್ದಾರ್ ಶ್ರೀಮತಿ ರಶ್ಮಿ ಎಸ್.ಆರ್., ಬಂಟ್ವಾಳ ತಾಲೂಕು ಸರ್ಕಲ್ ಇನ್ಸ್ ಪೆಕ್ಟರ್ ಶ್ರೀ ಟಿ.ಡಿ. ನಾಗರಾಜ್, ಬಂಟ್ವಾಳ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ಶ್ರೀ ಜ್ಞಾನೇಶ ಎಂ.ಪಿ. ಏ.ಇ.S., ಬಂಟ್ವಾಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾದ ಶ್ರೀ ಹರೀಶ್ ಮಾಂಬಾಡಿ, ಬಂಟ್ವಾಳ ವಕೀಲರ ಸಂಘದ ಅಧ್ಯಕ್ಷ ಶ್ರೀ ದೀಪಕ್ ಕುಮಾರ್ ಜೈನ್, ಅನುಗ್ರಹ ವಿಮೆನ್ಸ್ ಕಾಲೇಜು ಕಲ್ಲಡ್ಕ ಇದರ ಪ್ರಾಂಶುಪಾಲರಾದ ಶ್ರೀಮತಿ ಗೀತಾ ಜಿ. ಭಟ್ ಭಾಗವಹಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಮಂಗಳೂರು ಜಮಾಅತೆ ಇಸ್ಲಾಮೀ ಹಿಂದ್ ನಗರ ಶಾಖೆಯ ಪ್ರಧಾನ ಕಾರ್ಯದರ್ಶಿ ಜನಾಬ್ ಮುಹಮ್ಮದ್ ಇಸ್ಹಾಕ್ ಸಿ.ಎ. ವಹಿಸಲಿದ್ದಾರೆ. ಸಮಾರಂಭದಲ್ಲಿ ಸನ್ಮಾನ್ಯ ಮುಖ್ಯಮಂತ್ರಿಗಳ ಚಿನ್ನದ ಪದಕಕ್ಕೆ ಭಾಜನರಾದ ಬಂಟ್ವಾಳ ತಾಲೂಕು ವೃತ್ತ ನಿರೀಕ್ಷಕ ಶ್ರೀ ಟಿ.ಡಿ. ನಾಗರಾಜ್ ಅವರನ್ನು ಜಮಾಅತೆ ಇಸ್ಲಾಮೀ ಹಿಂದ್ ಬಂಟ್ವಾಳ ತಾಲೂಕು ವತಿಯಿಂದ ಸನ್ಮಾನಿಸಲಾಗುವುದು. ಅಲ್ಲದೆ, ಕೊಡಗು ಜಿಲ್ಲೆಯ ಪ್ರಬಂಧ ಸ್ಪರ್ಧಾ ವಿಜೇತರಿಗೆ ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಮಾರ್ಚ್ 27ರಂದು ಶನಿವಾರ ಬಹುಮಾನ ವಿತರಣಾ ಸಮಾರಂಭವನ್ನು ಜರುಗಿಸಲಾಗುವುದು ಎಂದು ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ವಲಯ ಸಂಚಾಲಕರಾದ ಅಬ್ದುಸ್ಸಲಾಂ ಉಪ್ಪಿನಂಗಡಿ ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಪ್ರಬಂಧ ಸ್ಪರ್ಧಾ ಸಮಿತಿಯ ಸಂಚಾಲಕರಾದ ಅಮೀನ್ ಅಹಸನ್, ಜಮಾಅತೆ ಇಸ್ಲಾಮಿ ಹಿಂದ್ ದ. ಕ. ಜಿಲ್ಲಾ ಸಂಚಾಲಕ ಸಯೀದ್ ಇಸ್ಮಾಯಿಲ್, ಮಂಗಳೂರು ವಲಯ ಕಾರ್ಯದರ್ಶಿ ಇಲ್ಯಾಸ್ ಇಸ್ಮಾಯಿಲ್, ಪ್ರಬಂಧ ಸ್ಪರ್ಧಾ ಸಮಿತಿಯ ಸಂಯೋಜಕ ಮುನವ್ವರ್ ಕಂದಕ್ ಉಪಸ್ಥಿತರಿದ್ದರು.

ಆತ್ಮೀಯ ಓದುಗರೇ, ಪಾರದರ್ಶಕ ಸುದ್ದಿಗಳು ನಿಮಗೆ ನಿರಂತರ ತಲುಪಲು ನಿಮ್ಮ ಸಹಾಯ ಅತೀ ಅಗತ್ಯ. ಸತ್ಯ ಎಲ್ಲೆಡೆ ತಲುಪಲು ನಮ್ಮೊಂದಿಗೆ ಕೈ ಜೋಡಿಸಿ. ನಮ್ಮನ್ನು ಬೆಂಬಲಿಸಲು

Hot Topics

ಕೃಷ್ಣ ಮಠದಲ್ಲಿ ನೀಡಿದ ಹೇಳಿಕೆಗಳನ್ನು ಹಿಂಪಡೆಯುತ್ತೇನೆ : ತೇಜಸ್ವಿ ಸೂರ್ಯ

ಉಡುಪಿ,( ಡಿ.27): ಎರಡು ದಿನಗಳ ಹಿಂದೆ ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ 'ಭಾರತದಲ್ಲಿ ಹಿಂದೂ ಪುನರುತ್ಥಾನ' ಎಂಬ ವಿಷಯದ ಕುರಿತು ಮಾತನಾಡಿದ್ದ ನನ್ನ ಹೇಳಿಕೆಯನ್ನು ವಾಪಸ್ ಪಡೆಯುತ್ತೇನೆ ಎಂದು ಸಂಸದ ತೇಜಸ್ವಿ...

ನಮ್ಮ ನಾಡ ಒಕ್ಕೂಟ ಬೈಂದೂರು ಘಟಕ ಮತ್ತು ಹಳಗೇರಿ ಓವರ್ಸೀಸ್ ಕಮಿಟಿ ವತಿಯಿಂದ ಉಚಿತ ಆಯುಷ್ಮಾನ್ ಕಾರ್ಡ್, ಈ-ಶ್ರಮ್ ಕಾರ್ಡ್ ಮತ್ತು ವಿದ್ಯಾರ್ಥಿವೇತನ ಶಿಬಿರ

ದಿನಾಂಕ 26 (ಡಿ.2021), ಆದಿತ್ಯವಾರ: ಚಿಕಿತ್ಸೆಯ ಸಂಕಷ್ಟದ ಸನ್ನಿವೇಶದಲ್ಲಿ ಆತ್ಮವಿಶ್ವಾಸ ತುಂಬಲು ಹಾಗೂ ಶೈಕ್ಷಣಿಕ ರಂಗದಲ್ಲಿ ಪ್ರೇರಣೆ ನೀಡುವ ಉದ್ದೇಶದಿಂದ ಇಂದು ನಮ್ಮ ನಾಡ ಒಕ್ಕೂಟ(ರಿ) ಬೈಂದೂರು ಘಟಕ ಮತ್ತು ಹಳಗೇರಿ ಓವರ್ಸೀಸ್...

ಮಂಗಳೂರು : ಇಂಜಿನಿಯರಿಂಗ್ ವಿದ್ಯಾರ್ಥಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ

ಮಂಗಳೂರು (ಡಿ.26): ಇಲ್ಲಿನ ಸುರತ್ಕಲ್ ನ ಇಂಜಿನಿಯರಿಂಗ್ ಕಾಲೇಜ್ ನ ವಿದ್ಯಾರ್ಥಿಯೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಇಂದು ಬೆಳಿಗ್ಗೆ ಸಂಭವಿಸಿದೆ. ಸೌರವ್ ಎನ್ನುವ ಬಿಹಾರ ಮೂಲದ ದ್ವಿತೀಯ ವರ್ಷದ ವಿದ್ಯಾರ್ಥಿ ಸೌರವ್...

Related Articles

Translate »
error: Content is protected !!