ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆ : ಬಿಜೆಪಿ ಜನರ ಕೂಗನ್ನು ಹತ್ತಿಕ್ಕುತ್ತಿದೆ : ಆರ್. ಧ್ರುವನಾರಾಯಣ

ಬಿಜೆಪಿ ಸುಳ್ಳುಗಳನ್ನೇ ಹೇಳಿ ಜನರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ. ಬದಲಾವಣೆ, ಅಭಿವೃದ್ಧಿ ಬಗ್ಗೆ ಮಾತನಾಡುವ ಪ್ರಧಾನಿ ಗಗನಕ್ಕೇರುತ್ತಿರುವ ಬೆಲೆಗಳನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲರಾಗಿದ್ದಾರೆ ಎಂದು ಕೆ.ಪಿ.ಸಿ.ಸಿ. ಕಾರ್ಯಾಧ್ಯಕ್ಷ ಹಾಗೂ ಉಡುಪಿ ಜಿಲ್ಲಾ ಉಸ್ತುವಾರಿ ಶ್ರೀ ಆರ್. ಧ್ರುವನಾರಾಯಣ್ ಹೇಳಿದರು.

ಅವರು ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಜರಗಿದ ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಮಾತನಾಡುತ್ತಿದ್ದರು.

ಬಡ ಮಧ್ಯಮ ವರ್ಗ ಬಳಸುವ ಅಡುಗೆ ಅನಿಲ, ಪೆಟ್ರೋಲ್, ಡೀಸೆಲ್ ದರ ನಿರಂತರ ಏರಿಕೆಯಾಗುತ್ತಿದೆ. ಅಧಿಕಾರಕ್ಕೆ ಬರುವ ಮೊದಲು ನೀಡಿದ ಭರವಸೆ ಮರೆತು ಈಗ ಇನ್ನಷ್ಟು ಹುಸಿ ಭರವಸೆ ನೀಡಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ಜನ ವಿರೋಧಿ ನೀತಿಗಳ ವಿರುದ್ಧ, ಬೆಲೆ ಏರಿಕೆ ವಿರುದ್ಧ ಎಲ್ಲೆಡೆ ಪ್ರತಿಭಟನೆ ನಡೆಯುತ್ತಿದ್ದರೂ ಜನರ ಕೂಗನ್ನು ಹತ್ತಿಕ್ಕುವ ಕೆಲಸ ಸರಕಾರದಿಂದ ನಡೆಯುತ್ತಿದೆ.

ಕರಾವಳಿ ಜಿಲ್ಲೆಗಳ ಜೀವನಾಡಿಯಾಗಿದ್ದ, ಜಿಲ್ಲೆಯ ಅಭಿವೃದ್ಧಿಗೆ ಕೊಡುಗೆ ನೀಡಿದ್ದ ಎಲ್ಲಾ ಬ್ಯಾಂಕುಗಳನ್ನು ಮುಳುಗುವ ಹಂತದಲ್ಲಿದ್ದ ಉತ್ತರದ ಬ್ಯಾಂಕುಗಳೊಂದಿಗೆ ವಿಲೀನಗೊಳಿಸಿ ಕರಾವಳಿ ಜನತೆಗೆ ಬಿಜೆಪಿ ದ್ರೋಹ ಎಸಗಿದೆ ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಅಶೋಕ್ ಕುಮಾರ್ ಕೊಡವೂರು ಅವರು ಮಾತನಾಡುತ್ತಾ, ಜಿಲ್ಲಾ ಕಾಂಗ್ರೆಸ್ ರೈತ ವಿರೋಧಿ ಕಾಯ್ದೆ ಹಾಗೂ ಬೆಲೆ ಏರಿಕೆ ವಿರುದ್ಧ ಹಮ್ಮಿಕೊಂಡಿದ್ದ “ಜನಧ್ವನಿ” ಪಾದಯಾತ್ರೆ ಕಾರ್ಯಕ್ರಮವು ನಿರೀಕ್ಷೆಗೂ ಮೀರಿ ಜನರನ್ನು ತಲುಪುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರು ಕಾರಣ, ಮುಂಬರುವ ಜಿಲ್ಲಾ ಪಂಚಾಯತ್ ಹಾಗೂ ತಾಲೂಕು ಪಂಚಾಯತ್ ಚುನಾವಣೆಗೆ ಪಕ್ಷವು ಈಗಿಂದೀಗಲೇ ತಯಾರಿ ನಡೆಸುತ್ತಿದ್ದು ಗ್ರಾಮೀಣ ಮಟ್ಟದಲ್ಲಿ ಸಮಿತಿಗಳನ್ನು ರಚಿಸುವರೆ ಉಸ್ತುವಾರಿಗಳನ್ನು ನೇಮಿಸಲಾಗಿದೆ. ಬ್ಲಾಕ್ ಅಧ್ಯಕ್ಷರೊಂದಿಗೆ ಹೊಂದಾಣಿಕೆಯಿಂದ ಸಮಿತಿಗಳನ್ನು ರಚಿಸಲಾಗುತ್ತಿದೆ ಎಂದರು.

ಮಾಜಿ ಸಚಿವರಾದ ಶ್ರೀ ವಿನಯ ಕುಮಾರ್ ಸೊರಕೆಯವರು ಮಾತನಾಡುತ್ತಾ ಬಿಜೆಪಿಯ ಜನವಿರೋಧಿ ನೀತಿಗಳ ಆಡಳಿತದಿಂದ ಜನತೆ ರೋಸಿಹೋಗಿದ್ದು ಇದನ್ನು ಕಾಂಗ್ರೆಸ್ ಪಕ್ಷದ ಪರವಾದ ಮತಗಳನ್ನಾಗಿ ಪರಿವರ್ತನೆ ಮಾಡುವ ಕಾರ್ಯ ನಮ್ಮ ಕಾರ್ಯಕರ್ತರಿಂದ ಆಗಬೇಕಿದೆ ಎಂದರು.
ಸಭೆಯಲ್ಲಿ ಮಾಜಿ ವಿಧಾನ ಪರಿಷತ್ ಸಭಾಧ್ಯಕ್ಷರಾದ ಪ್ರತಾಪಚಂದ್ರ ಶೆಟ್ಟಿ, ಮಾಜಿ ಶಾಸಕರಾದ ಗೋಪಾಲ ಪೂಜಾರಿ, ಎಂ.ಎ. ಗಫೂರ್, ಪ್ರಸಾದ್‍ರಾಜ್ ಕಾಂಚನ್, ವೆರೋನಿಕಾ ಕರ್ನೇಲಿಯೋ, ದಿನೇಶ್ ಪುತ್ರನ್, ಹರೀಶ್ ಕಿಣಿ, ಶ್ಯಾಮಲ ಭಂಡಾರಿ, ಕೃಷ್ಣಮೂರ್ತಿ ಕಾರ್ಕಳ, ಮುರಳಿ ಶೆಟ್ಟಿ, ಬಿ. ನರಸಿಂಹ ಮೂರ್ತಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಕುಶಲ್ ಶೆಟ್ಟಿ, ಕೆ.ಅಣ್ಣಯ್ಯ ಶೇರಿಗಾರ್, ಕೀರ್ತಿ ಶೆಟ್ಟಿ, ಹಬೀಬ್ ಅಲಿ, ಜ್ಯೋತಿ ಹೆಬ್ಬಾರ್, ಶಬ್ಬೀರ್ ಅಹ್ಮದ್, ಕಿಶೋರ್ ಎರ್ಮಾಳ್, ಹರೀಶ್ ಶೆಟ್ಟಿ ಪಾಂಗಾಳ, ಇಸ್ಮಾಯಿಲ್ ಆತ್ರಾಡಿ, ದೀಪಕ್ ಕೋಟ್ಯಾನ್, ಸೌರಭ್ ಬಲ್ಲಾಳ್, ಬಾಲಕೃಷ್ಣ ಪೂಜಾರಿ, ರೋಶನಿ ಒಲಿವರ್, ಡಾ. ಸುನೀತಾ ಶೆಟ್ಟಿ, ಲೂಯಿಸ್ ಲೋಬೋ, ಉದ್ಯಾವರ ನಾಗೇಶ್ ಕುಮಾರ್, ಮಹಾಬಲ ಕುಂದರ್, ಪ್ರಶಾಂತ್ ಜತ್ತನ್ನ, ಸತೀಶ್ ಅಮೀನ್ ಪಡುಕೆರೆ, ದಿನಕರ್ ಹೇರೂರು, ಶಂಕರ್ ಕುಂದರ್, ಸದಾಶಿವ ದೇವಾಡಿಗ, ಮದನ್ ಕುಮಾರ್, ಹೆಚ್. ಹರಿಪ್ರಸಾದ್ ಶೆಟ್ಟಿ, ಯತೀಶ್ ಕರ್ಕೇರ, ಕೆಪಿಸಿಸಿ ಸಂಯೋಜಕರುಗಳಾದ ವಿನಯರಾಜ್, ಭರತ್ ಮುಂಡೋಡಿ, ಪುರುಷೋತ್ತಮ ಚಿತ್ರಾಪು, ನವೀನ್ ಡಿಸೋಜಾ, ಅನಿಲ್ ಮೊದಲಾದವರು ಉಪಸ್ಥಿತರಿದ್ದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ನೀರೆ ಕೃಷ್ಣ ಶೆಟ್ಟಿಯವರು ಸ್ವಾಗತಿಸಿದರು, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಶ್ರೀಮತಿ ಗೀತಾ ವಾಗ್ಳೆ, ಧನ್ಯವಾದವಿತ್ತರು, ವಕ್ತಾರ ಭಾಸ್ಕರ್ ರಾವ್ ಕಿದಿಯೂರು ಕಾರ್ಯಕ್ರಮ ನಿರ್ವಹಿಸಿದರು.

Hot Topics

ಮಂಗಳೂರು: ಸಾಕ್ಸ್ ನಲ್ಲಿ ಅರ್ಧ ಕೆ.ಜಿ ಚಿನ್ನ – ಒರ್ವ ವಶಕ್ಕೆ!

ಮಂಗಳೂರು: ದುಬೈನಿಂದ ಆಗಮಿಸಿದ ವ್ಯಕ್ತಿಯೊಬ್ಬ ತನ್ನ ಸಾಕ್ಸ್ ನಲ್ಲಿ ಅಡಗಿಸಿಟ್ಟುಕೊಂಡು ಅರ್ಧ ಕೆ.ಜಿ ಚಿನ್ನ ಸಾಗಾಟ ಮಾಡುತ್ತಿದ್ದು ಇದೀಗ ಕಸ್ಟಮ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.ಬಂಧಿತನನ್ನು ಕಾಸರಗೋಡು ಮೂಲದ ಅಬುಬಕ್ಕರ್ ಮುಹಮ್ಮದ್ ಪೂಲಿಕರ್...

ಮಂಗಳೂರು: ಗರ್ಭಿಣಿ, ಬಾಣಂತಿ ಪೊಲೀಸರಿಗೆ ಕರ್ತವ್ಯದಿಂದ ವಿನಾಯಿತಿ

ಮಂಗಳೂರು: ನಗರದಾದ್ಯಂತ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಗರ್ಭಿಣಿ ಮತ್ತು ಬಾಣಂತಿ ಮಹಿಳಾ ಪೊಲೀಸರಿಗೆ ಕೆಲಸದಿಂದ ವಿನಾಯಿತಿ ನೀಡಲಾಗಿದ್ದು, ಮನೆಯಿಂದ ಕೆಲಸ...

ಉಪ್ಪಿನಂಗಡಿ: ನಾಗರ ಹಾವು ಕಡಿದು ಯುವಕ ಮೃತ್ಯು

ಉಪ್ಪಿನಂಗಡಿ: ಮನೆ ಮತ್ತಿತರ ಜನ ವಾಸ ಪ್ರದೇಶಗಳಿಗೆ ಬಂದ ವಿಷಕಾರಿ ಸರ್ಪಗಳನ್ನು ರಕ್ಷಿಸಿ ಕಾಡಿಗೆ ಬಿಡುತ್ತಿದ್ದ ಯುವಕನೊಬ್ಬ ನಾಗರ ಹಾವಿನ ಕಡಿತಕ್ಕೊಳಗಾಗಿ ಮೃತಪಟ್ಟ ಘಟನೆ ನಡೆದಿದೆ.ಉಪ್ಪಿನಂಗಡಿ ಯ ನೆಕ್ಕಿಲಾಡಿ ನಿವಾಸಿ ಸ್ನೇಕ್ ಮುಸ್ತ...

Related Articles

Translate »
error: Content is protected !!