ಇದು ಗೊತ್ತು ಗುರಿಯಿಲ್ಲದ ಬಜೆಟ್ – ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ

ಬೆಂಗಳೂರು (ಮಾ.8): 2021/22 ಸಾಲಿನ ಮುಂಗಡಪತ್ರ ಮಂಡಿಸಿದ್ದಾರೆ. ನಾವು ಬಜೆಟ್ ಮಂಡನೆಗೆ ವಿರೋಧಿಸಿದ್ದೆವು. ಬಜೆಟ್ ವೇಳೆ ಬಾಯ್ಕಾಟ್ ಮಾಡಿದ್ದೆವು.ಅನೈತಿಕ ಸರ್ಕಾರದ ಬಜೆಟ್ ಕೇಳಬಾರದೆಂದು ವಾಕ್​ಔಟ್ ಮಾಡಿದ್ದೇವೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದ್ದಾರೆ.

ಸಿಎಂ ಬಿ.ಎಸ್​ ಯಡಿಯೂರಪ್ಪ ಅವರ ಬಜೆಟ್​ ಮಂಡನೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಬಜೆಟ್ ಅಭಿವೃದ್ಧಿಗೆ ಮಾರಕವಾದುದ್ದು. ಇದು ಗೊತ್ತು ಗುರಿಯಿಲ್ಲದ ಬಜೆಟ್. ಬಜೆಟ್ ಯಾವಾಗಲೂ ಪಾರದರ್ಶಕವಾಗಿರಬೇಕು. ಹಿಂದಿನ ಖರ್ಚು, ಮುಂದಿನದರ ಬಗ್ಗೆ ತಿಳಿಸಬೇಕು. ಪ್ರತಿ ಇಲಾಖೆಯ ಖರ್ಚು, ವೆಚ್ಚ ವಿವರಿಸಬೇಕು. ಯಾವ ಇಲಾಖೆಗೆ ಎಷ್ಟು ಖರ್ಚು ಮಾಡಲಾಗಿದೆ.

ಪ್ರತಿಯೊಂದು ಪೈಸೆಗೂ ಲೆಕ್ಕವಿರಬೇಕು. ಇಲ್ಲಿ ಪಾರದರ್ಶಕತೆ ಉಳಿಸಿಕೊಂಡಿಲ್ಲ, ಕಳೆದ ವರ್ಷ 142 ಕೋಟಿ 35 ಲಕ್ಷ ಸರ್ ಪ್ಲಸ್ ಬಜೆಟ್ ಅಂದಿದ್ದರು. ಆಯವ್ಯಯ ಅಂದಾಜು ಬಜೆಟ್ ಮಾಡಿದ್ದರು. ಪರಿಷ್ಕೃತ ಅಂದಾಜು ಪ್ರಕಾರ ರೆವಿನ್ಯೂ 19485 ಕೋಟಿ 48 ಡಿಫಿಶಿಟ್ ತೋರಿಸಿದ್ದಾರೆ. 15,133.60 ಕೋಟಿ ಮೈನಸ್ ಇದೆ. ಈಗ ಸಾಲತಂದು ಮೈನಸ್ ರೆವಿನ್ಯೂ ತುಂಬಬೇಕು. ಇವತ್ತು ಸಾಲ ಮಾಡಿ ರೆವಿನ್ಯೂಗೆ ಕೊಡಬೇಕಿದೆ. ನಮ್ಮ ಕಾಲದಲ್ಲಿ ರೆವಿನ್ಯೂ ಸರ್ಪ್ಲಸ್ ಇರ್ತಿತ್ತು. ನಾವು ರೆವಿನ್ಯೂ ಉಳಿಸಿಕೊಡೇ ಮಂಡಿಸುತ್ತಿದ್ದೆವು.

ಕೇಂದ್ರ ಸರ್ಕಾರ ಸಾಲ ತೆಗೆದುಕೊಳ್ಳೋಕೆ ಹೇಳಿದೆ ಅದಕ್ಕೆ ಸಾಲ ಮಾಡೋಕೆ ಹೊರಟಿದ್ದಾರೆ. ಸಾಲ ಸಿಗುತ್ತೆ ಅಂತ ಸಾಲ ತೆಗೆದುಕೊಳ್ಳುವುದಲ್ಲ, ತೀರಿಸೋಕೆ ಸಾಮರ್ಥ್ಯವಿರುವಷ್ಟು ಸಾಲ ಮಾಡಬೇಕು. ರಾಜ್ಯ ದಿವಾಳಿ ಆಗೋಕೆ ಇದೇ ಸಾಕ್ಷಿ ಎಂದರು.

Hot Topics

ಉಡುಪಿ- ಮಣಿಪಾಲ ಸ್ಮಾಟ್‌ಸಿಟಿಗೆ ಡಿಪಿಆರ್ ಸಿದ್ಧ: ಉಡುಪಿ ಡಿಸಿ

ಉಡುಪಿ- ಮಣಿಪಾಲವನ್ನು ಸ್ಮಾಟ್‌ಸಿಟಿಯನ್ನಾಗಿಸುವ ಬಗ್ಗೆ ಡಿಪಿಆರ್ ಸಿದ್ಧಪಡಿಸಿ ರಾಜ್ಯ ಸರಕಾರಕ್ಕೆ ಕಳುಹಿಸಲಾಗಿದೆ. ಮಂಜೂರಾಗುವ ಹಂತದಲ್ಲಿರುವ ಈ ಯೋಜನೆಗೆ ಗ್ರೀನ್ ಸಿಗ್ನಲ್ ದೊರೆತರೆ ಉಡುಪಿ -ಮಣಿಪಾಲ ಇಡೀ ದೇಶದಲ್ಲಿಯೇ ಮಾದರಿ ನಗರವಾಗಲಿದೆ ಎಂದು ಉಡುಪಿ...

ಉಡುಪಿ: ಬೈಕ್ ಕಳವು ಪ್ರಕರಣದ ಆರೋಪಿಯ ಸೆರೆ

ಉಡುಪಿ, ಎ.15: ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಬೆಳಗಾಂ ಜಿಲ್ಲೆಯ ಹುಕ್ಕೇರಿಯ ಸಾಗರ್ ಸುದೀರ್ ಹರ್ಗಾಪುರೆ(26) ಎಂಬಾತನನ್ನು ಉಡುಪಿ ನಗರ ಪೊಲೀಸರು ಎ.14ರಂದು ನಗರದ ಐರೋಡಿಕರ್ ಜಂಕ್ಷನ್ ಬಳಿ ಬಂಧಿಸಿದ್ದಾರೆ.ಆರೋಪಿಯಿಂದ ಕಳವು ಮಾಡಲಾದ...

ದಕ್ಷಿಣ ಕನ್ನಡ : ವಾಹನ ಸವಾರರನ್ನು ಅಡ್ಡಗಟ್ಟಿ ಲೂಟುತ್ತಿದ್ದ ಆರು ಮಂದಿ ಆರೋಪಿಗಳ ಬಂಧನ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾಹನ ಸವಾರರನ್ನುಅಡ್ಡಗಟ್ಟಿ ಸುಲಿಗೆ ಮಾಡುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಮತ್ತೆ ಆರು ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.ಜಿಲ್ಲೆಯ ಮೂಡಬಿದಿರೆ, ಮೂಲ್ಕಿ, ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ...

Related Articles

ಕಾರು ಲಾರಿ ನಡುವೆ ಭೀಕರ ಅಪಘಾತ : ಹೊತ್ತಿ ಉರಿದ ವಾಹನಗಳು

ಮಡಿಕೇರಿ,(ಏ.15): ಮೈಸೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಟೈರ್ ತುಂಬಿದ್ದ ಲಾರಿ ಮತ್ತು ಮಡಿಕೇರಿಯಿಂದ ಮೈಸೂರಿಗೆ ತೆರಳುತ್ತಿದ್ದ ಮಾರುತಿ ಆಲ್ಟೋ ಕಾರಿನ ಡಿಕ್ಕಿ ಸಂಭವಿಸಿ ಎರಡೂ ವಾಹನಗಳು ಸುಟ್ಟು ಕರಕಲಾಗಿವೆ.ಮೈಸೂರು-ಮಡಿಕೇರಿ ಹೆದ್ದಾರಿಯ ಸುಂಟಿಕೊಪ್ಪ ಸಮೀಪದ ಕೆದಕಲ್‌ನಲ್ಲಿ...

ಕೊರೋನಾ ಅಬ್ಬರಿಸುತ್ತಿರುವ ನಡುವೆ ಕುಂಭಮೇಳದಲ್ಲಿ 10 ಲಕ್ಷಕ್ಕೂ ಅಧಿಕ ಮಂದಿ ಭಾಗಿ

ಹರಿದ್ವಾರ (ಏ.15): ದೇಶದಲ್ಲಿ ಒಂದೆಡೆ ಕೊರೊನಾ ಸೋಂಕು ಹೆಚ್ಚುತ್ತಿದೆ, ಇದರ ನಡುವೆ ಇದೀಗ ಹಿನ್ನೆಲೆಯಲ್ಲಿ ಕುಂಭ ಮೇಳದಲ್ಲಿ ಎಲ್ಲಾ ಕೊರೋನಾ ನಿಯಮಗಳನ್ನು ಗಾಳಿಗೆ ತೂರಿ 10 ಲಕ್ಷಕ್ಕೂ ಅಧಿಕ ಮಂದಿ ಶಾಹಿ ಸ್ನಾನ...

ಸಿಎಂ ಯಡಿಯೂರಪ್ಪ ರವರಿಗೆ ಸುಸ್ತು ತಲೆನೋವು, ಚುನಾವಣೆ ಬಳಿಕ ಚುನಾವಣೆ ಪ್ರಚಾರ

ಬೆಳಗಾವಿ (ಏ.15): ಏಪ್ರಿಲ್ 17 ರಂದು ಬೆಳಗಾವಿ ಲೋಕಸಭೆ ಕ್ಷೇತ್ರದ ಉಪ ಚುನಾವಣೆ ನಡೆಯಲಿದ್ದು, ಬಿಜೆಪಿ ಅಭ್ಯರ್ಥಿ ಪರ ಪ್ರಚಾರಕ್ಕೆ ಆಗಮಿಸಿದ ಸಿಎಂ ಯಡಿಯೂರಪ್ಪ ಬೆಳಗಾವಿಯ ಹೋಟೆಲ್ ನಲ್ಲಿ ವಾಸ್ತವ್ಯ ಹೂಡಿದ್ದಾರೆ.ಅವರಿಗೆ ಜ್ವರ...
Translate »
error: Content is protected !!