ಯುವರಾಜ್ ಸಿಂಗ್ ದಾಖಲೆ ಸರಿಗಟ್ಟಿದ ಕೈರನ್ ಪೋಲಾರ್ಡ್ – ಆರು ಬಾಲ್ ಆರು ಸಿಕ್ಸ್!

ಆ್ಯಂಟಿಗಾ: ಅದು ವೆಸ್ಟ್ ಇಂಡೀಸ್ ಮತ್ತು ಶ್ರೀಲಂಕಾ ವಿರುದ್ಧದ ಟಿ20 ಪಂದ್ಯ. ವಿಂಡೀಸ್ ಬ್ಯಾಟಿಂಗ್ ವೇಳೆ ನಾಲ್ಕನೇ ಓವರ್ ಎಸೆಯಲು ಬಂದ ಅಖಿಲ ಧನಂಜಯ ಹ್ಯಾಟ್ರಿಕ್ ವಿಕೆಟ್ ಪಡೆದು ಮಿಂಚಿದ್ದರು. ಲೂಯಿಸ್, ಗೇಲ್, ಪೂರನ್ ನಂತಹ ಟಿ20 ಸ್ಪೆಷಲಿಸ್ಟ್ ಗಳು ವಿಕೆಟ್ ಕಳೆದುಕೊಂಡಿದ್ದರು. ಲಂಕಾ ಗೆದ್ದೇ ಬಿಟ್ಟಿತು ಎನ್ನುವ ಪರಿಸ್ಥಿತಿ. ಸ್ಪಿನ್ನರ್ ಅಖಿಲ ಧನಂಜಯ ಸಂತೋಷದ ಅಲೆಯಲ್ಲಿ ತೇಲುತಿದ್ದರು. ಆಗಲೇ ಕ್ರೀಡಾಂಗಣಕ್ಕೆ ಎಂಟ್ರಿಯಾಗಿದ್ದು ವಿಂಡಿಸ್ ನಾಯಕ, ಟಿ20 ದೈತ್ಯ ಕೈರನ್ ಪೊಲಾರ್ಡ್. ಧನಂಜಯರ ಮುಂದಿನ ಓವರ್ ನ ಎಲ್ಲಾ ಆರು ಎಸೆತಗಳನ್ನು ಪೊಲಾರ್ಡ್ ಮೈದಾನದ ಮೂಲೆ ಮೂಲೆಗೆ ಅಟ್ಟಿದ್ದರು! ವಿಶ್ವದಾಖಲೆಯ ಕ್ಷಣಕ್ಕೆ ಸಾಕ್ಷಿಯಾಗಿತ್ತು ಆ್ಯಂಟಿಗಾ!

ಹೌದು. 2007ರಲ್ಲಿ ಭಾರತದ ಯುವರಾಜ್ ಸಿಂಗ್ ನಿರ್ಮಿಸಿದ್ದ ದಾಖಲೆಯನ್ನು ಪೊಲಾರ್ಡ್ ಸರಿಗಟ್ಟಿದ್ದಾರೆ. ಓವರ್ ನ ಆರು ಎಸೆತಗಳನ್ನು ಸಿಕ್ಸರ್ ಬಾರಿಸಿ ಮೆರೆದಾಡಿದ್ದಾರೆ.

ಮೊದಲು ಬ್ಯಾಟಿಂಗ್ ಮಾಡಿದ್ದ ಲಂಕಾ 20 ಓವರ್ ಗಳಲ್ಲಿ ಗಳಿಸಿದ್ದು ಕೇವಲ 131 ರನ್. ಸುಲಭ ಗುರಿ ಬೆನ್ನಟ್ಟಿದ ವಿಂಡೀಸ್ ಸ್ಪೋಟಕ ಆರಂಭ ಪಡೆಯಿತಾದರೂ ಸತತ ವಿಕೆಟ್ ಕಳೆದುಕೊಂಡಿತು. ಅಖಿಲ ಧನಂಜಯ ಹ್ಯಾಟ್ರಿಕ್ ಸಾಧನೆ ಮಾಡಿದರು. ಆದರೆ ಈ ಸಾಧನೆಯ ಖುಷಿಯನ್ನು ಪೊಲಾರ್ಡ್ ಕೆಲವೇ ನಿಮಿಷದಲ್ಲಿ ಮಣ್ಣುಪಾಲು ಮಾಡಿದ್ದರು.

ಪಂದ್ಯದ ಆರನೇ ಓವರ್ ಎಸೆಯಲು ಬಂದ ಅಖಿಲ ಧನಂಜಯರ ಬೌಲಿಂಗ್ ನಲ್ಲಿ ಪೊಲಾರ್ಡ್ ಆರು ಸಿಕ್ಸರ್ ಬಾರಿಸಿದರು. ಈ ಮೂಲಕ ಯುವಿ ದಾಖಲೆಯನ್ನು ಸರಿ ಗಟ್ಟಿದರು. ಪೊಲಾರ್ಡ್ ಕೇವಲ 11 ಎಸೆತದಲ್ಲಿ 38 ರನ್ ಬಾರಿಸಿ ಔಟಾದರು. ವಿಂಡೀಸ್ 13.1 ಓವರ್ ನಲ್ಲಿ 134 ರನ್ ಗುರಿ ತಲುಪಿ ವಿಜಯ ಸಾಧಿಸಿತು.

Hot Topics

ಮಂಗಳೂರು: ಸಾಕ್ಸ್ ನಲ್ಲಿ ಅರ್ಧ ಕೆ.ಜಿ ಚಿನ್ನ – ಒರ್ವ ವಶಕ್ಕೆ!

ಮಂಗಳೂರು: ದುಬೈನಿಂದ ಆಗಮಿಸಿದ ವ್ಯಕ್ತಿಯೊಬ್ಬ ತನ್ನ ಸಾಕ್ಸ್ ನಲ್ಲಿ ಅಡಗಿಸಿಟ್ಟುಕೊಂಡು ಅರ್ಧ ಕೆ.ಜಿ ಚಿನ್ನ ಸಾಗಾಟ ಮಾಡುತ್ತಿದ್ದು ಇದೀಗ ಕಸ್ಟಮ್ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ.ಬಂಧಿತನನ್ನು ಕಾಸರಗೋಡು ಮೂಲದ ಅಬುಬಕ್ಕರ್ ಮುಹಮ್ಮದ್ ಪೂಲಿಕರ್...

ಮಂಗಳೂರು: ಗರ್ಭಿಣಿ, ಬಾಣಂತಿ ಪೊಲೀಸರಿಗೆ ಕರ್ತವ್ಯದಿಂದ ವಿನಾಯಿತಿ

ಮಂಗಳೂರು: ನಗರದಾದ್ಯಂತ ಕೊರೋನಾ ಪಾಸಿಟಿವ್ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಎಲ್ಲಾ ಗರ್ಭಿಣಿ ಮತ್ತು ಬಾಣಂತಿ ಮಹಿಳಾ ಪೊಲೀಸರಿಗೆ ಕೆಲಸದಿಂದ ವಿನಾಯಿತಿ ನೀಡಲಾಗಿದ್ದು, ಮನೆಯಿಂದ ಕೆಲಸ...

ಉಪ್ಪಿನಂಗಡಿ: ನಾಗರ ಹಾವು ಕಡಿದು ಯುವಕ ಮೃತ್ಯು

ಉಪ್ಪಿನಂಗಡಿ: ಮನೆ ಮತ್ತಿತರ ಜನ ವಾಸ ಪ್ರದೇಶಗಳಿಗೆ ಬಂದ ವಿಷಕಾರಿ ಸರ್ಪಗಳನ್ನು ರಕ್ಷಿಸಿ ಕಾಡಿಗೆ ಬಿಡುತ್ತಿದ್ದ ಯುವಕನೊಬ್ಬ ನಾಗರ ಹಾವಿನ ಕಡಿತಕ್ಕೊಳಗಾಗಿ ಮೃತಪಟ್ಟ ಘಟನೆ ನಡೆದಿದೆ.ಉಪ್ಪಿನಂಗಡಿ ಯ ನೆಕ್ಕಿಲಾಡಿ ನಿವಾಸಿ ಸ್ನೇಕ್ ಮುಸ್ತ...

Related Articles

ನ್ಯೂಝಿಲೆಂಡ್ ನಂತರ ಇದೀಗ ಹಾಂಕಾಂಗ್’ನಲ್ಲಿ ಭಾರತದ ವಿಮಾನಗಳಿಗೆ ನಿಷೇಧ

ನವದೆಹಲಿ: ಭಾರತ ಕೋರೊನಾ ಸೋಂಕಿನಲ್ಲಿ ಇದೀಗ ವಿಶ್ವದಲ್ಲಿ ಎರಡನೇ ಸ್ಥಾನದಲ್ಲಿದೆ. ಈ ಹಿನ್ನಲೆಯಲ್ಲಿ ನ್ಯೂಝಿಲೆಂಡ್ ನಂತರ ಹಾಂಕಾಂಗ್ ಭಾರತದ ವಿಮಾನಗಳನ್ನು ನಿರ್ಬಂಧಿಸಿದೆ.ಕೋವಿಡ್ 19 ಸೋಂಕು ತಡೆಯುವ ಹಿನ್ನೆಲೆಯಲ್ಲಿ ಮೇ 3ರವರೆಗೆ ಭಾರತಕ್ಕೆ...

ಕನ್ನಡ ನಿಘಂಟು ತಜ್ಞ ಖ್ಯಾತಿಯ ಪ್ರೊ. ಜಿ ವೆಂಕಟಸುಬ್ಬಯ್ಯ ನಿಧನ

ಬೆಂಗಳೂರು: ಕನ್ನಡದ ನಿಘಂಟು ತಜ್ಞರೆಂದೇ ಖ್ಯಾತಿ ಪಡೆದಿದ್ದ ಖ್ಯಾತ ಭಾಷಾ ತಜ್ಞ, ಶತಾಯುಷಿ ಪ್ರೊ.ಜಿ ವೆಂಕಟಸುಬ್ಬಯ್ಯ (108) ಅವರು ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ವೆಂಕಟಸುಬ್ಬಯ್ಯ ಅವರು, ಭಾನುವಾರ ತಡರಾತ್ರಿ 1.15ಕ್ಕೆ ಇಹಲೋಕ...

ತಮಿಳುನಾಡು: ನೈಟ್ ಕರ್ಫ್ಯೂ, ಸಂಡೆ ಲಾಕ್’ಡೌನ್!

ಚೆನ್ನೈ: ಕೋವಿಡ್-19 ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ತಮಿಳುನಾಡು ಸರ್ಕಾರ ರಾತ್ರಿ 10 ಗಂಟೆಯಿಂದ ಬೆಳಗ್ಗೆ 4 ಗಂಟೆಯವರೆಗೆ ಭಾಗಶ: ಲಾಕ್ ಡೌನ್ ಹಾಗೂ ಭಾನುವಾರ ಸಂಪೂರ್ಣ ಲಾಕ್ ಡೌನ್ ನ್ನು ಜಾರಿಗೊಳಿಸಿದೆ. ...
Translate »
error: Content is protected !!