ಮಹಿಳೆಯ ಮೇಲೆ ಅತ್ಯಾಚಾರ ಎಸಗಿ ಬೆಂಕಿ ಹಚ್ಚಿದ ಅಪ್ಪ – ಮಗ !

ಲಕ್ನೋ: ಮನೆಗೆ ಹೋಗುತ್ತಿದ್ದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ನಂತರ ಅಪ್ಪ-ಮಗ ಆಕೆಗೆ ಬೆಂಕಿ ಹಚ್ಚಿರುವ ಘಟನೆ ಉತ್ತರ ಪ್ರದೇಶದ ಮಿಶ್ರಿತ್ ಪ್ರದೇಶದಲ್ಲಿ ನಡೆದಿದೆ. ಸದ್ಯ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದು, ಮಹಿಳೆಯನ್ನು ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಈ ಕುರಿತಂತೆ ಮಾತನಾಡಿದ ಸೀತಾಪುರ ಪೊಲೀಸ್ ವರಿಷ್ಠಾಧಿಕಾರಿ ಆರ್ ಪಿ ಸಿಂಗ್, ನೈಮಿಶರಣ್ಯದ ಮಿಶ್ರಿಖ್ ಪ್ರದೇಶದಲ್ಲಿ 30 ವರ್ಷದ ಮಹಿಳೆ ಮೇಲೆ ವ್ಯಕ್ತಿಗಳಿಬ್ಬರು ಅತ್ಯಾಚಾರ ನಡೆಸಿ ಬೆಂಕಿ ಹಚ್ಚಿದ್ದಾರೆ ಎಂದು 112 ತುರ್ತು ಸೇವೆ ಮಾಹಿತಿ ನೀಡಿದೆ. ಮಹಿಳೆ ಸಿಧೌಲಿ ಪ್ರದೇಶದಲ್ಲಿರುವ ತಾಯಿ ಮನೆಯಿಂದ ಹಿಂದಿರುಗಿ ಹೋಗುತ್ತಿದ್ದ ವೇಳೆ ಆರೋಪಿಯೊಬ್ಬನ ಬಳಿ ಲಿಫ್ಟ್ ಪಡೆದಿದ್ದಾಳೆ.

ಈ ವೇಳೆ ಘಟನೆ ಸಂಭವಿಸಿದ್ದು, ಸದ್ಯ ಮಹಿಳೆಯನ್ನು ಚಿಕಿತ್ಸೆಗೆ ಜಿಲ್ಲೆಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಘಟನೆ ವೇಳೆ ಮಹಿಳೆಯ ದೇಹ ಶೇ.30ರಷ್ಟು ಹ ಬೆಂಕಿಗಾಹುತಿಯಾಗಿದ್ದು, ಪ್ರಾಣಾಪಾಯದಿಂದ ಮಹಿಳೆ ಪಾರಾಗಿದ್ದಾಳೆ ಎಂದು ಹೇಳಿದ್ದಾರೆ. ಸದ್ಯ ಪ್ರಕರಣ ಸಂಬಂಧಿಸಿದಂತೆ ಇದೀಗ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಹೇಳಿದರು.

Hot Topics

ಉಡುಪಿ: ವೀರಾಂಜನೇಯ ದೇವಸ್ಥಾನದ ಹುಂಡಿ ಕಳವಿಗೆ ವಿಫಲ ಯತ್ನ

ಉಡುಪಿ: ಇಲ್ಲಿನ ಅಂಬಾಗಿಲು ರಸ್ತೆಯ ತಾಂಗದಗಡಿ ವೀರಾಂಜನೇಯ ದೇವಸ್ಥಾನದ ಹುಂಡಿ ಕಳವಿಗೆ ವಿಫಲ ಯತ್ನ ನಡೆಸಿದ ಘಟನೆ ನಡೆದಿದೆ.ಕಳವಿಗೆ ಯತ್ನಿಸಿದ ಕಳ್ಳರು ಸ್ಥಳದಲ್ಲಿಯೇ ಕಾರನ್ನು ಬಿಟ್ಟು ಓಡಿ ಹೋಗಿದ್ದಾರೆ. ಮಂಗಳೂರು ನೊಂದಾವಣಿಯ ಕಾರು...

ಉಡುಪಿ- ಮಣಿಪಾಲ ಸ್ಮಾಟ್‌ಸಿಟಿಗೆ ಡಿಪಿಆರ್ ಸಿದ್ಧ: ಉಡುಪಿ ಡಿಸಿ

ಉಡುಪಿ- ಮಣಿಪಾಲವನ್ನು ಸ್ಮಾಟ್‌ಸಿಟಿಯನ್ನಾಗಿಸುವ ಬಗ್ಗೆ ಡಿಪಿಆರ್ ಸಿದ್ಧಪಡಿಸಿ ರಾಜ್ಯ ಸರಕಾರಕ್ಕೆ ಕಳುಹಿಸಲಾಗಿದೆ. ಮಂಜೂರಾಗುವ ಹಂತದಲ್ಲಿರುವ ಈ ಯೋಜನೆಗೆ ಗ್ರೀನ್ ಸಿಗ್ನಲ್ ದೊರೆತರೆ ಉಡುಪಿ -ಮಣಿಪಾಲ ಇಡೀ ದೇಶದಲ್ಲಿಯೇ ಮಾದರಿ ನಗರವಾಗಲಿದೆ ಎಂದು ಉಡುಪಿ...

ಉಡುಪಿ: ಬೈಕ್ ಕಳವು ಪ್ರಕರಣದ ಆರೋಪಿಯ ಸೆರೆ

ಉಡುಪಿ, ಎ.15: ಬೈಕ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಬೆಳಗಾಂ ಜಿಲ್ಲೆಯ ಹುಕ್ಕೇರಿಯ ಸಾಗರ್ ಸುದೀರ್ ಹರ್ಗಾಪುರೆ(26) ಎಂಬಾತನನ್ನು ಉಡುಪಿ ನಗರ ಪೊಲೀಸರು ಎ.14ರಂದು ನಗರದ ಐರೋಡಿಕರ್ ಜಂಕ್ಷನ್ ಬಳಿ ಬಂಧಿಸಿದ್ದಾರೆ.ಆರೋಪಿಯಿಂದ ಕಳವು ಮಾಡಲಾದ...

Related Articles

ಟಿ-20 : ಬಾಬರ್ ಅಝಾಮ್ ಚೇಸಿಂಗ್ ದಾಖಲೆ!

ಸೆಂಚುರಿಯನ್ : ದಕ್ಷಿಣ ಆಫ್ರಿಕಾ ಎದುರಿನ 3ನೇ ಟಿ20 ಪಂದ್ಯದಲ್ಲಿ ಪಾಕಿಸ್ಥಾನದ ನಾಯಕ ಬಾಬರ್‌ ಆಜಂ ಅವರಿಂದ ಅಮೋಘ ದಾಖಲೆಯೊಂದು ನಿರ್ಮಾಣಗೊಂಡಿದೆ. ಅವರು ಚೇಸಿಂಗ್‌ ವೇಳೆ ಅತ್ಯಧಿಕ ರನ್‌ ಬಾರಿಸಿದ ನಾಯಕನಾಗಿ ಮೂಡಿಬಂದಿದ್ದಾರೆ.ಈ...

ಕೋವಿಡ್-19: ಇಂದು ಮುಖ್ಯಮಂತ್ರಿ ಯಡಿಯೂರಪ್ಪ ತುರ್ತು ಸಭೆ

ಬೆಂಗಳೂರು: ಕರ್ನಾಟಕ ರಾಜಧಾನಿ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಕೋವಿಡ್-19 ಸಕ್ರಿಯ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಶುಕ್ರವಾರ ತಮ್ಮ ನಿವಾಸದಲ್ಲಿ ತುರ್ತು ಸಭೆ ಕರೆದಿದ್ದಾರೆ.ಇಂದು ಬೆಳಗ್ಗೆ 9.30ಕ್ಕೆ...

ಕೊರೋನಾ ಸೋಂಕು ಹೆಚ್ಚಳ : ನೀಟ್ ಪಿಜಿ ಪರೀಕ್ಷೆ ಮುಂದೂಡಿಕೆ

ನವದೆಹಲಿ,(ಏ.15): ದೇಶದಲ್ಲಿ ಕೊರೊನಾ ಸೋಂಕು ದಿನೇ ದಿನೇ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನೀಟ್ ಪಿಜಿ ಪರೀಕ್ಷೆಯನ್ನು ಮುಂದೂಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ತಿಳಿಸಿದ್ದಾರೆ.ದೇಶದಲ್ಲಿ ಕೊರೊನಾ ಸೋಂಕು ಹೆಚ್ಚುತ್ತಲೇ ಇದೆ. ಈ...
Translate »
error: Content is protected !!